ಶುದ್ಧ ಶಿವತತ್ವ ವೇದ್ಯವಾಗಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶುದ್ಧ ಶಿವತತ್ವ ವೇದ್ಯವಾಗಿ ಶಬ್ದಮುಗ್ಧನಾದೆನಾಗಿ ಮೂರ್ತಿ ಅಮೂರ್ತಿ ತತ್ತ್ವಾತತ್ವಂಗಳನರಿಯೆ. ಮದ ಮೋಹಂಗಳ ಮರೆದೆ. ಅದೇನುಕಾರಣವೆಂದರೆ: ಮಂದೆ ಅರಿವುದಕ್ಕೆ ಕುರುಹಿಲ್ಲವಾಗಿ. ಅರುಹು ಕುರುಹುನೊಳಕೊಂಡು ತೆರಹಿಲ್ಲದ ಪರಿಪೂರ್ಣನಿಗೆ ಮಾಯವೆಲ್ಲಿಯದು? ದೇಹಮದೆಲ್ಲಿಯದು? ದೇಹಿಯದೆಲ್ಲಿಯವನು? ಮಾಯ ದೇಹ ದೇಹಿಯಿಲ್ಲವಾಗಿ ಸ್ವಯವೆಲ್ಲಿಯದು ಪರವೆಲ್ಲಿಯದು? ಪರವಸ್ತು
ತಾನಾದ ಶರಣಂಗೆ ಮುಂದಿನ್ನೇನು ಹೇಳಲಿಲ್ಲ ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.