ಶ್ರೀಗುರು ತನ್ನ ಸಾಕಾರವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶ್ರೀಗುರು ತನ್ನ ಸಾಕಾರವ ಬಿಟ್ಟು ನಿರಾಕಾರವಾದಡೆ ಸಂದೇಹಿಸಲಿಲ್ಲ. ಸಾಕಾರವಿಡಿದು ಉಪದೇಶವ ಕೊಟ್ಟು
ಎನ್ನ ಕಾಯವ ಸಮರ್ಪಿಸಿಕೊಂಡು ಶುದ್ಧನ ಮಾಡಿದನಯ್ಯಾ ಶ್ರೀಗುರು. ಪ್ರಾಣದಲಡಗಿ ಸಿದ್ಧನ ಮಾಡಿದನಯ್ಯಾ ಶ್ರೀಗುರು. ಇಂತು ಅವಿರಳ ಗುರುತತ್ವ_ಸಂಗನಬಸವಣ್ಣನು ಕೂಡಲಚೆನ್ನಸಂಗಾ ನಿನ್ನೊಳಗೆ ಪರಿಪೂರ್ಣ ಕಾಣಾ