ಶ್ರೀಗುರು ಕರುಣಿಸಿ ಕರಸ್ಥಲಕ್ಕೆ ಕೊಟ್ಟ ಇಷ್ಟಲಿಂಗವನು ಶುದ್ಧಸಾವಧಾನದಿಂದೆ ಧರಿಸಿಕೊಂಡು
ಆ ಲಿಂಗವೆ ಪತಿ ತಾನೆ ಸತಿ ಎಂಬ ಭಾವದಿಂದೆ ಆಚರಿಸುವ ಕಾಲದಲ್ಲಿ ಆ ಲಿಂಗವು ಮೋಸದಿಂದೋಸರಿಸಿ ಹೋದಡೆ ಅರಸಿ ನೋಡಿಕೊಂಡು
ಸಿಕ್ಕಿದಲ್ಲಿ ಸೂಕ್ಷ್ಮ ವಿಚಾರವ ತಿಳಿದು ಮುನ್ನಿನಂತೆ ಧರಿಸಿಕೊಂಬುವುದು. ಮತ್ತಾ ಲಿಂಗವು ವೃತ್ತ ಕಟಿ ವರ್ತುಳ ಗೋಮುಖ ನಾಳ ಗೋಳಕ ಎಂಬ ಷಟ್‍ಸ್ಥಾನಂಗಳಲ್ಲಿ ಭಿನ್ನವಾದಡೆಯೂ ಕಣ್ಣಿಗೆ ಕಾಣಿಸಿಕೊಳ್ಳದೆ ಹೋದಡೆಯೂ ಲಿಂಗಕ್ಕೆ ತನ್ನ ಪ್ರಾಣವನು ತ್ಯಾಗಮಾಡಬೇಕಲ್ಲದೆ
ಅಲ್ಲಿ ಹಿಂದು ಮುಂದು ನೋಡಲಾಗದು. ಇದಕ್ಕೆ ಶಿವನ ವಾಕ್ಯವೆ ಸಾಕ್ಷಿ : ``ಗುರುಣಾ ದತ್ತಲಿಂಗಂ ತು ಸಾವಧಾನೇನ ಧಾರಯೇತ್