ಶ್ರೀಗುರು ಶಿಷ್ಯಂಗೆ ಅನುಗ್ರಹ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶ್ರೀಗುರು ಶಿಷ್ಯಂಗೆ ಅನುಗ್ರಹ ಮಾಡಿದ ಕ್ರಮವೆಂತೆಂದಡೆ: `ಲಿಂಗ
ಜಂಗಮ
ಪಾದೋದಕ
ಪ್ರಸಾದ_ ಇಂತು ಚತುರ್ವಿಧ ಲಂಪಟನಾಗೈ ಮಗನೆ' ಎಂದು ಅಂಗದ ಮೇಲೆ ಲಿಂಗಸಾಹಿತ್ಯವ ಮಾಡಿ
`ಹುಸಿ ಕಳವು ವೇಶ್ಯಾಗಮನ ಪಾರದ್ವಾರ ಪರದ್ರವ್ಯ ಪರನಿಂದೆ ಪರದೋಷ: ಇಂತೀ ಸಪ್ತಗುಣ ವಿರಹಿತನಾಗಿ
ಅನ್ಯಭವಿನಾಸ್ತಿಯಾಗಿ ಮಜ್ಜನಕ್ಕೆರೆವುದು ಶಿವಪಥ ಕಂಡಾ ಮಗನೆ' ಎಂದು ಹೇಳಿಕೊಟ್ಟ ಉಪದೇಶವನೆ ಕೇಳಿ ನಡೆಯ ಬಲ್ಲಡೆ ಆತನೆ ಶಿಷ್ಯ ಆತನೆ ನಿತ್ಯಮುಕ್ತನು. ಆ ಗುರುಶಿಷ್ಯರಿಬ್ಬರು ನಿಮ್ಮೊಳಗೆರಕವು_ಅದಂತಿರಲಿ
ಅದು ಉಪಮಿಸಬಾರದ ಘನವು
ಅದಕ್ಕೆ ಶರಣಾರ್ಥಿ. ಇನಿತಲ್ಲದೆ ಕೊಡುವ ಕೊಂಬ ಗುರುಶಿಷ್ಯರಿಬ್ಬರಿಗೂ ಯಮದಂಡನೆ ಕಾಣಾ
ಕೂಡಲಚೆನ್ನಸಂಗಮದೇವಾ