ಶ್ರೀಗುರು ಸಪ್ತವಿಧದೀಕ್ಷೆಯನಿತ್ತು ಶಿಷ್ಯನ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶ್ರೀಗುರು ಸಪ್ತವಿಧದೀಕ್ಷೆಯನಿತ್ತು ಶಿಷ್ಯನ ಶಿರದರಮನೆಯ ಚಿತ್ಕಲೆಯನೆ ಇಷ್ಟಲಿಂಗವಾಗಿ ನೋ[ಮಾ ?]ಡಿ
ಆಂಗದಲ್ಲಿ ಸಂಗಗೊಳಿಸಿದ ಬಳಿಕ ಆದೆ ಪ್ರಾಣಲಿಂಗವೆಂದರಿದು ಸಾವಧಾನದಿಂದರ್ಚಿಸಬೇಕು. ಆದನಾವಾಗಳೂ ತನುವಿಂದಗಲದಿರಬೇಕು. ಇದು ಶರಣರ ಮಚ್ಚು ಪರಾತನರ ನಚ್ಚು ! ಇದನರಿಯದೆ ದುರ್ಲಕ್ಷ್ಯದಿಂದ ಲಿಂಗವನಗಲಿದ ಭಂಗಿತರ ಕೂಡಲಚೆನ್ನಸಂಗಯ್ಯನ ಶರಣರೆಂತು ಮೆಚ್ಚುವರು ?