ಶ್ರೀ ನಿಂಬರಗಿ ಮಹಾರಾಜರವರ ಬೋಧ ಸುಧೆಯು
ನಿಂಬರಗಿ ಮಹಾರಾಜರವರ ಬೋಧ-ಸುಧೆಯು ( ಪದ್ಯರೂಪ ) ೧೯೫೨ ]
- ಗೀತಮಾತುಗಳ ಜ್ಯೋತಿ'
ಅನುವಾದಕರು ಮ, ಶ್ರೀ, ದೇಶಪಾಂಡೆ ಎಂ ಎ.. ಅ ಥಣಿ [ ಬೆಲೆ ೧ ರೂ. ನಿಂಬರಗಿ ಮಹಾರಾಜರವರ ಬೋಧ-ಸುಧೆಯು ( ಪದ್ಯರೂಪ )
- ಗೀತಮಾತುಗಳ ಜ್ಯೋತಿ '
೧೯೫ ೨ ] ಅನುವಾದಕರು ಮು ಶ್ರೀ ದೇಶಪಾಂಡೆ ಎಂ ಎ. ಅ ಥಣಿ [ ಬೆಲೆ ೧ ರೂ. ಪ್ರಾ ಥ೯ ನೆ ದೇವ ! ಹಿರಿಗುರುರಾಯ ! ತಿಳಿಯದೆ ನಿನ ಮಾಯ! ಸೆಳೆಯದಿರಲೆನ್ನ ಮನ ಜಗದ ವೈಭವವು ಭಾವ ಬಲಿಯಲಿ ! ಧ್ಯಾನದಲಿ ಬೆರೆಯಲೆನ್ನ ಮನ ! ದೇವರಲಿ ತನ್ನ ದಿವ್ಯ ವೈಭವವ ಅಲಸಿಕೆಯು ಅಳಿಯ ! ಸರಲತೆಯು ಮೊಳೆಯ ಮೈಯು ಸವೆಯಲಿ ನಿನ್ನ ಸೇವೆಯಲ್ಲಿ. 11011 ಮತಿಯು ಹೊಳೆಯಲ್ಲಿ ನಾಥ, ತೊಳೆಗನ್ನಯ ಮಾತು. ಕೃತಿಯು ಬೆಳಗಲಿ ನಿನ್ನ ಬೆಳಕಿನಲ್ಲಿ ನಾಮವ ಮನವು ನಿತ್ಯ ನೆನೆಯುತಲಿರಲಿ, ಅನ್ಯ ವಿಷಯಂಗಳನು ಬಯಸದಿರಲಿ, ನಾಮದ ಸುಧೆಯ ಮನದಣಿಯೆ ಸವಿಯುತಲಿ ಆನಂದ ಸಾಗರದಿ, ಮುಳುಗುತಿರಲಿ ! ತನ್ನ ಕರುಣವೆ ಅನ್ನ, ನಿನ್ನ ಕರುಣವೆ ನೀರು. ನಿನ್ನ ಕರುಣವೆಯುಸಿರು ಎನಗಾಗಲಿ. || 9 || || a || ನಿನ್ನ ಒಲವಿನ ಸೆಲೆಯು, ತೊರೆದು ಸುಧೆಯನು ಸುರಿದು ಸಂತತೆನ್ನನು ಪೊರೆದು ಬೆಳೆಸುತಿರಲಿ. ನಿನ್ನ ಮಿತಮಾತುಗಳು, ಮಿಂಚ -ಮಾತುಗಳಯ್ಯ ಸಂಚರಿಸಿ ಬೆಳಕು ಬಲ ನೀಡುತಿರಲಿ. ನಿನ್ನ ಹಿರಿನುಡಿಗಳವು, ಸಿಡಿಲಿನ ಕುಡಿಯಯ್ಯ ಗುಡುಗಿ ಎದೆಯಿಂ ದೈನ್ಯ || 9 || ದೂಡುತಿರಲಿ ! ಶ್ರೀ ನಿಂಬರಗಿ ಮಹಾರಾಜರವರ ಸಮಾಧಿ ನಿ ೦ ಬ ರ ಗಿ ( ನಿಂಬರಗಿ ಮಹಾರಾಜರವರ ಅಂಕಿತ ) ವಂದನೆಗಳು
- ಬೋಧ
ಶ್ರೀ ಮಹಾರಾಜರವರ ಕೃಪೆಯಿಂದ ( ಬೋಧ ಸುಧೆ ' ಯ ಈ ಪದ್ಯಾನುವಾದವು ಇದೀಗ ಬೆಳಕನ್ನು ಕಾಣಲಿದೆ. ಅದಕ್ಕಾಗಿ ಅವರ ಸಿರಿಚರಣ ಗಳಿಗೆ ನಾನು ನನ್ನ ಅನನ್ಯ ವಂದನೆಗಳನ್ನು ಸಲ್ಲಿಸುವೆ. ಶ್ರೀ ಗುರುದೇವ ರಾನಡೆ ಶಾಮರಾಯರು ಆಗಾಗ ಸಲಹೆಯನ್ನಿತ್ತರು. ಸುಧೆ' ಯ ಮರಾಠಿ ಪ್ರಸ್ತಾವನೆಯಲ್ಲಿಯ ಕೆಲಭಾಗವನ್ನೂ : ನಿತ್ಯ ನೇಮಾವಲಿ' ಯ ಪ್ರಸ್ತಾವನೆಯಲ್ಲಿಯ ಕೆಲಭಾಗವನ್ನು ಕನ್ನಡಿಸಿ ಇದರಲ್ಲಿ ಉಪಯೋಗಿಸಲು ಅನುಮತಿಯನ್ನು ಇತ್ತರು. ಅದಕ್ಕಾಗಿಯೂ ಅವರ ಕೃಪಾಶೀರ್ವಾದಗಳಿಗಾಗಿಯೂ ಅವರಿಗೆ ನನ್ನ ಹಾರ್ದಿಕ ವಂದನೆಗಳು, ನನ್ನ ಹಿರಿಗೆಳೆಯರಾದ ಶ್ರೀಮಾನ್ ಸಂಗೋರಾಮ ಕೃಷ್ಣರಾಯರು ಇದನ್ನು ಪ್ರಸಿದ್ಧಿಸಿದರು. ಮತ್ತು ನನ್ನ ತರುಣ ಗೆಳೆಯರಾದ ಶ್ರೀಮಾನ್ ದೇಶಪಾಂಡೆ ದಾದಾಸಾಹೇಬರವರು ತಮ್ಮ ಶ್ರೀ ಗಣಪತಿ ಸಂಸ್ಥಾನ ಮುದ್ರಣಾಲಯದಲ್ಲಿ ಇದನ್ನು ಅಂದವಾಗಿ ಮುದ್ರಿಸಿದರು. ಅದಕ್ಕಾಗಿ ಅವರೀರ್ವರಿಗೂ ನಾನು ತುಂಬಾ ಉಪಕೃತನು. ಶಾ ೦ ತಿ ಕು೦ ಜ ವಿಕ್ರಮಪುರ ಅಥಣಿ. ದಿ. ೧೫-೧೨-೧೯೫೨ ತಮ್ಮ ನ ಶ್ರೀ. ದೇಶಪಾಂಡೆ ಅನುಕ್ರಮಣಿಕೆ ಪ್ರಸ್ತಾವನೆ ( ಬಿಂದು ೧ ) ಅಥ -- ( ಬಿಂದು ೨ ) ನಡತೆಯ ಮೂಲ ತತ್ವವು ೧ ಉತ್ತಮ ನರದೇಹ. ೨ ಜೀವಿಯ ನಾಲ್ಕು ಸ್ಥಿತಿಗತಿ ಗಳು. ೩ ನಡತೆಯ ಬಲವೂ ದೇವರ ಬಲವೂ ೪ ಬೀಜದಂತೆ ಬೆಳೆ ೫ ಧ್ವನಿಯಂತೆ ಪ್ರತಿಧ್ವನಿ, ೬ ಹೆಜ್ಜೆ ಹೆಜ್ಜೆಗೆ ನಡತೆಯ ಪರೀಕ್ಷಣ ೮ ನೀನೇ ಶಿವನು ಇರುವಿ ( ಬಿಂದು ೩ ) ದುರ್ಗುಣ, ತ್ಯಾಗ ೭ ನುಡಿಯಂತೆ ನಡೆ, ೧೪ ೯ ಹೆಣ್ಣು ಹೊನ್ನು ಮಣ್ಣು, ೧೦ ಪರಸ್ತ್ರೀ ಸಂಗದಿಂದ ಅಘೋರ ನರಕ ಪ್ರಾಪ್ತಿ. ೧೧ ಸಿಟ್ಟು ಹೊಲೆಯ, ೧೨ ಬಡಿ. ವಾರದ ಪರಿಣಾಮ. ೧೩ ಕುದಿಯುವವನಿಗೆ ಕೂಳಿಲ್ಲ. ದಂಭ. ೧೫ ಕಪಟವು ಕೆಟ್ಟದು. ೧೬ ಮೋಹದ ಪಾಶವು. ೧೭ ಅನ್ಯಾಯದ ಅನಾಹುತ ೧೮ ಪಾಪಕ್ಕೆ ತಕ್ಕ ಶಿಕ್ಷೆ ೧೯ ಶಿಕ್ಷೆಯ ಮೂರು ಬಗೆಗಳು, ೨೦ ಕದ್ದು ಕೆಲಸ ಬೇಡ. ಆಲಸ್ಯವು ಮುಖ್ಯ ಶತ್ರು. ೨೨ ಚಿಂತೆಯ ಜೆಳೆ. ಣದ ಚಿಂತೆ. ( ಬಿಂದು ೪ ) ಸದ್ಗುಣ-ಸಂಪಾದನ ೨೪ ವಿವೇಕ. ೨೫ ಚಲೋ ಬುದ್ಧಿಯು, ನಿಗ್ರಹ. ೨೭ ಪ್ರಥಮ ಕಾಮನನ್ನೇ ಕೊಲ್ಲಬೇಕು. ಹಾಕಬಾರದು. ೨೯ ಕೈಕೆಳಗೆ ಮಾಡಬಾರದು. 05 ೨೩ ನಿರ್ಗು- ೨೬ ಇಂದ್ರಿಯ ೨೮ ಜಡ ೩೦ ತಾಳ್ಮೆ. ಪುಟ 07-212 319 2-8 ೧೦-೧೯ ೨೦-೩೬ ii ೩೧ ಮನಸ್ಸನ್ನು ನೋಯಿಸಬಾರದು. ೩೨ ಸತ್ಯ-ಅಸತ್ಯ. ಹಿರಿಯರ ಸೇವೆ. ೩೪ ತನ್ನಂತೆ ಪರರನ್ನು ನೋಡೋಣ. ಪರೋಪಕಾರ ದಯೆಯ ಸ್ವರೂಪ. ೩೭. ದೇವರು ಕೊಟ್ಟಿದ್ದರಲ್ಲಿ ಸಮಾಧಾನ. ೩೮ ದೇವರು ಕೊಟ್ಟ ಉದ್ಯೋಗ ೩೯ ಉದ್ಯೋಗ ಮಾಡುವ ಬಗ್ಗೆ. ೪೦ ತೂಕದಿಂದ ನಡೆಯೋಣ, ೪೧ ಪ್ರಪಂಚದಲ್ಲಿ ಪರಮಾರ್ಥ. ೪೨ ಪರಮಾರ್ಥದಲ್ಲಿ ಮುಳು ಗಿರಬೇಕು. ೪೩ ಹೊರಕಾಳಗದಿಂದ ದುಃಖಪ್ರಾಪ್ತಿಯ ಒಳಕಾಳಗದಿಂದಲೇ ಸುಖಪ್ರಾಪ್ತಿ, ೪೫ ಸ್ವರಾಜ್ಯ ಸಾಧನೆ. ( ಬಿಂದು ೫ ) ಪರಮಾರ್ಥ-ಮಾರ್ಗ ೪೬ ಸಂಸಾರದಲ್ಲಿ ಸುಖವಿಲ್ಲ. ೪೭ ಮನಸ್ಸಿಗೆ ಬೋಧೆ. ೪೮ ಸದ್ಗುರ ತುಗಳ ಪ್ರಾಪ್ತಿ, ೪೯ ಕೈಯಿಂದ ಕೆಲಸ ಮನಸ್ಸಿನಿಂದ ಧ್ಯಾನ. ೫೦ ಸಂಸಾರದಲ್ಲಿ ಉದಾಸ, ಪರಮಾರ್ಥದಲ್ಲಿ ಉಲ್ಲಾಸ. ೫೧ ಮರವನ್ನು ಬಿಟ್ಟು ಅರವಿನಲ್ಲಿ ಇರೋಣ. ೫೨ ಸತ್ಸಂಗದ ವ್ಯಾಖ್ಯೆ, ೫೩ ಹಗಲು ರಾತ್ರಿ ಕೂಡಿಯೇ ಆತ್ಮ ಧ್ಯಾನ. ೫೪ ದೇಹಸ್ವಭಾವ ಬಿಟ್ಟು ಸಾಧನೆ ಮಾಡಬೇಕು. ೫೫ ಕಲ್ಪನೆಯ ತ್ಯಾಗ. ೫೬ ಆತ್ಮನು ಮನುಷ್ಯನನ್ನು ಪರೀಕ್ಷಿಸುತ್ತಾನೆ. ಕಡಕ್ಕೆ ಕಡ ಬಿತ್ತಿದ್ದಕ್ಕೆ ಬೆಳೆ, ೫೮ ಆತ್ಮನ ಸೇವೆ ಇದೇ ಮುಖ್ಯ ಧರ್ಮ. ೫೯ ಎಲ್ಲ ಕೆಲಸಕ್ಕೆ ಆತ್ಮನನ್ನೇ ಮುಂದೆ ಮಾಡಬೇಕು. ೬೦ ಆತ್ಮನ ಅನುಭಾವ. ( ಬಿಂದು ೬) ಇತಿ ( ಅನುಬಂಧ ೧ ) ಶ್ರೀಯವರ ಪದಗಳು ೫೭ ೩೭-೪೬ ೪೭ ೪೮-೫೮ Se 66 ಪ್ರಸ್ತಾವ ನೆ - ಅಲ್ಪ - ಚರಿತ್ರೆ (0) On the Tree of Sachchidanand grow innumerable fruits such as Rama, Krishna, Christ and others; one or two come down, now and then, to this earth and they work wonderful changes in society." -Shri Ramakrishna.
- ಸಚ್ಚಿದಾನಂದನೆಂಬ ಮಹಾ-ವೃಕ್ಷದಲ್ಲಿ ರಾಮ, ಕೃಷ್ಣ,
ಕ್ರಿಸ್ತಾದಿ ಅಗಣಿತ ಹಣ್ಣುಗಳು ಬೆಳೆಯುವವು. ಅವುಗಳಲ್ಲಿಯ ಒಂದೆರಡು ಆಗಾಗ ಪೃಥ್ವಿಯ ಮೇಲೆ ಅವತರಿಸಿ ಸಮಾಜದಲ್ಲಿ ಅದ್ಭುತವಾದ ಬದಲನ್ನು ಒದಗಿಸುವವು.” ಎಂದು ಶ್ರೀರಾಮಕೃಷ್ಣ ಪರಮಹಂಸರು ಉಸುರಿರುವರು. ಅಹುದು, ಇಂಥ ಮಹಾಪುರುಷರಿಂದಲೆ ದುಷ್ಟರ ದಂಡನ, ಶಿಷ್ಟರ ಪರಿಪಾಲನ, ಅಧರ್ಮದ ಖಂಡನ, ಸ್ವಧರ್ಮದ ಮಂಡನ ; ವ್ಯಕ್ತಿಯ ಹಾಗೂ ಸಮಾಜದ ಉದ್ಧಾರವು. ಭಕುತರ
- ಅಘಖಂಡನವು ದುಃಖಭಂಜನವು ' ಇವರ ಕೆಲಸ. ಈ ಮಹಿಮರು
ರಸರಾಜನಾದ ಲವಣವಿದ್ದಂತೆ. ಇವರು ಸಮಾಜವನ್ನು ಕೊಳೆಯಗೊಡುವ ದಿಲ್ಲ-ಅಳಿಯಗೊಡುವದಿಲ್ಲ. ಇವರಿಂದಲೆ ವ್ಯಕ್ತಿ-ಜೀವನದಲ್ಲಿಯ ಸಮಾಜ, ಜೀವನದಲ್ಲಿಯೂ ನವರಸ, ಹೊಸರುಚಿ, ನಿತ್ಯನೂತನ ಆನಂದ. ಆದರೆ ಇವರದು ಮರೆಯಾಗಿರುವ ಸ್ವಭಾವ, ದೇವನಂತೆ ದೇವ ಮಾನವರು, ದೇವನಿರುವದು ತಿಲದ ಮರೆಯ ತೈಲದಂತೆ, ನೆಲದ ಮರೆಯ ನಿಧಾನದಂತೆ' ಮರೆಯಲ್ಲಿ, ಯಾರಿಗೂ ತಿಳಿಯದಂತೆ, ಎಲ್ಲಿಯ ಹೊಳೆಯ 9 ಪ್ರಸ್ತಾವನೆ ಪರಿವೆಯಿಲ್ಲ. ದಂತೆ. ಆತನಿಂದಲೇ ಎಲ್ಲ ವಸ್ತುಗಳ ಅಸ್ತಿತ್ವ, ಎಲ್ಲರಿಗೆ ಜೀವನ, ಸುಖ- ಶಾಂತಿಗಳು, ಇದ್ದರೂ ಯಾರಿಗೂ ಆತನ ಅರಿವಿಲ್ಲ, ಇದೊಂದು ಸೋಜಿಗದ ಸಂಗತಿಯಲ್ಲವೇ ? ದೇವಮಾನವರದೂ ಇದೇ ರೀತಿ. ಅವರು ಬೆಳೆಯುವದು ಎಲೆಯ ಮರೆಯ ಹಣ್ಣಿನಂತೆ. ಅವರನ್ನಾರೂ ಮನ್ನಿಸದಿದ್ದರೂ ಅವರ ಪಾವನ ಜೀವನ-ಕರುಣೆಗಳಿಂದಲೆ ಜಗತ್ತಿನ ಪಾಲನ-ಪೋಷಣ <
- ಆದರೆ ಮರೆಯಲ್ಲಿರುವದು ದೇವರ ಕಲೆಯಿದ್ದರೆ, ಆತನನ್ನು ಹೊರ
ದೆಗೆದು ಮೆರೆಯಿಸುವದರಲ್ಲಿ ಮಾನವನ ಕೌಶಲವು ಇರುವದು ಇರಬೇಕು. ಜನಸಾಮಾನ್ಯರ ಕಣ್ಣಿಗೆ ಮರೆಯಾಗಿದ್ದ ದೈವೀಪ್ರಭೆಯನ್ನು ಕಂಡುಹಿಡಿದು, ಅದನ್ನವರಿಗೆ ಕಾಣಿಸಿ, ಅವರನ್ನುದ್ಧರಿಸುವದು ಮಾನವ ಜೀವನದ ಪರಮ ಕರ್ತವ್ಯವಿದ್ದ ತೆ, “ ಮರೆಯಲ್ಲಿ ಮೆರೆಯುವ' ಇಂಥ ಮಹಾತ್ಮರನ್ನು ಗುರುತಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಿ, ಅವರ ಮಹಿಮೆಯನ್ನು ಎಲ್ಲರಿಗೆ ತಿಳಿಸಿ, ಅವರ ಕಲ್ಯಾಣಕರ ಪ್ರಭಾವದಲ್ಲಿ ಎಲ್ಲರನ್ನು ನಿಲಿಸಿ, ತಮ್ಮ ಹಾಗೂ ಅವರ ಉದ್ಧಾರವನ್ನು ಸಾಧಿಸಲೆಳೆಸುವದರಲ್ಲಿಯೂ, ಮಾನವನ ಹಿರಿದಾದ ಕೌಶಲವು ಮೈದಾಳಬೇಕು. ಅದಾದಾಗಲೆ ಜಗತ್ತಿನಲ್ಲಿ ನವಜೀವನದ ತೆರೆಗಳು ಹಿಂದೆ ಜನಿಸಿದವು, ಮುಂದೆ ಜನಿಸುವವು. ಅದಕ್ಕೆ ಪಾವನತೆಯನ್ನೂ ಶಾಂತಿಸುಖವನ್ನೂ ದಯಪಾಲಿಸುವವು ಇಂಥ ದೇವಮಾನವರಲ್ಲಿಯೂ “ ಅತಿಶ್ರೇಷ್ಠರಾದ ಪುರುಷ- ತಮರು ಬಾಳಿದುದು ತೀರ ಅಜ್ಞಾತ ತರಾಗಿ, ಅವರು ಬಾಳಿಹೋದುದು ಯಾರಿಗೂ ತಿಳಿಯದಂತೆ. ಇವರನ್ನು ಸರಿಹೋಲಿಸಿದರೆ ಬುದ್ಧ, ಕ್ರಿಸ್ತಾದಿ ಮಹಾಪುರುಷರು ಕೂಡ ಎರಡನೆಯ ತರಗತಿಗಿಳಿಯುವರು. ಗೂಢಜೀವನದಲ್ಲಿ ಮೊಳೆತಬೆಳೆದ ದಿವ್ಯ ವಿಚಾರಗಳು ಬುದ್ಧ-ಕ್ರಿಸ್ತರಲ್ಲಿ ಮೈದಾಳಿದವು. ಅವರು ನಮಗೆ ಖ್ಯಾತರಾದರು. ? ಇವರ
- Cf. The art of God is to hide things; while the art
of man is to find them out.
- ಶ್ರೀ: ವಿವೇಕಾನಂದ-On Freedom
-Bacon. ಅಲ್ಪ-ಚರಿತ್ರ ಈ ಮಾದರಿಯ ಶ್ರೇಷ್ಠತಮ ಮಹಿಮರಲ್ಲಿ ನಮ್ಮ ಚರಿತ್ರ ನಾಯಕ ರಾದ ಶ್ರೀನಿಂಬರಗಿ ಮಹಾರಾಜರವರು ಒಬ್ಬರು. * ದೇವರು ರಾಮ ಆಗಿ ಬಂದ ; ಕೃಷ್ಣ ಆಗಿ ಬಂದ; ನಿಂಬರಗಿ ಮಹಾರಾಜ ಆಗಿ ಬಂದ ಎಂದು ಉಮದಿಯ ಸುವಿಖ್ಯಾತರಾದ ಶ್ರೀಭಾವುಸಾಹೇಬ ಮಹಾರಾಜ ರವರು ಅವರನ್ನು ಕುರಿತು ಹೇಳುತ್ತಿದ್ದರು. ಇಂಥ ಹಿರಿಮೆ ಅವರದು. ಆದರೆ ಶ್ರೀನಿಂಬರಗಿ ಮಹಾರಾಜರವರು ತಮ್ಮ ಹಿರಿಮೆಯನ್ನು ಅತಿಯಾಗಿ ಗುಪ್ತವಾಗಿ ಇರಿಸಿದ್ದರಿಂದ ಅವರ ಯೋಗ್ಯತೆಯು ಅವರ ಜೀವದ ಗೆಳೆಯ ರಿಗೂ ಕೂಡ ತಿಳಿದಿರಲಿಲ್ಲ. ಶ್ರೀ ಸಮರ್ಥ ರಾಮದಾಸರು ಉಸುರಿದ ಮೇರೆಗೆ - ವಿಪುಲ ಧನವಿದ್ದರೂ ಅದು ಗುಪ್ತವಾಗಿ ಇದ್ದ ಮೂಲಕ ಬರಿ ಬಾಹ್ಯ ಆಕಾರದ ಅರಿವು ಇದ್ದವರಿಗೆ ಅದು ತಿಳಿಯುವದೆಂತು? ? ಶ್ರೀ ಮಹಾರಾಜರವರು ತಮ್ಮ ತಪೋಬಲದಿಂದ ಅಂದು ಜೀರ್ಣವಾದ ಅತ್ಮಜ್ಞಾನವನ್ನು ಮರಳಿ ಉದ್ಧರಿಸಿ, ಅದರಲ್ಲಿ ನವಚೈತನ್ಯವನ್ನು ತುಂಬಿ ದರು. ಅವರು ಅಜ್ಞಾತವಾಗಿ ನೆಟ್ಟ ಆತ್ಮಜ್ಞಾನವೃಕ್ಷವು ಬೆಳೆದು ಮುಂದದಕ್ಕೆ ಹೂ-ಹಣ್ಣುಗಳು ಬಂದಂತೆ, ಅವರ ನಿಜವಾದ ಹಿರಿಮೆಯು ಜಗತ್ತಿಗೆ ತಿಳಿಯಬಹುದು. ಅಲ್ಲಿಯವರೆಗೆ ಅವರ ಅಲ್ಪ ಪರಿಚಯವಾದರೂ ಕನ್ನಡಿಗರಿಗೆ ಆಗಲಿ, ಭಾವಿಕ ಕನ್ನಡಿಗರ ಬಗೆಯಾದರೂ ಅವರೆಡೆಗೆ ಹೊರಳಲಿ ! ಅದರಲ್ಲಿ ಅವರ ಬಗೆಗೆ ಪ್ರೀತ್ಯಾದರಗಳು ಮೊಳೆಯಲಿ, ಬೆಳೆಯಲಿ ! ಅವರು ಉನ್ನತ ಜೀವನವನ್ನು ಬಾಳಲೆಳಸಲಿ ! ಬಯಸಿ ಮುಂದಿನ ಅಲ್ಪ ಪ್ರಯತ್ನವನ್ನು ಮಾಡಲಾಗಿದೆ (9) ಎಂದು ಶ್ರೀನಿಂಬರಗಿ ಮಹಾರಾಜರವರು ಸುಮಾರು ಸನ್ ೧೭೮೭ ರಲ್ಲಿ ಜನಿಸಿದರು. ಅವರು ಜನ್ಮವೆತ್ತುದು ವೀರಶೈವ ಜ್ಞಾತಿಯಲ್ಲಿಯ ನೀಲವಾಣಿ ಯೆಂಬ ಉಪಜಾತಿಯಲ್ಲಿ, ಮಿಸಲಕರ ಎಂಬುದು ಅವರ ಕುಲನಾಮವು. ಅವರ ಜನ್ಮನಾಮವು ರಾಶಿಯ ಮೇಲಿಂದ ಇಡಲಾದುದು ನಾರಾಯಣ ಇಲ್ಲವೆ ನಾಗಪ್ಪ ಎಂಬುದಿತ್ತು. ಅವರ ಶಿಷ್ಯರು ಮಾತ್ರ ಅವರನ್ನು ನಾರಾಯಣರಾವ ಇಲ್ಲವೆ ಭಾವುಸಾಹೇಬ ಮಹಾರಾಜ ಎಂದು ಕರೆಯು ತಿದ್ದರು, ಅವರನ್ನು ಜನರು ಗುರುಲಿಂಗಜಂಗಮ ಮಹಾರಾಜ ಎಂದೂ ಪ್ರಸ್ತಾವನೆ ಸಂಬೋಧಿಸುವದುಂಟು. ಅವರ ಮನೆತನದ ಮೂಲಪುರುಷನು ಮೊದಲು ಧಾರವಾಡ ಜಿಲ್ಲೆಯಲ್ಲಿಯ ಕುಪೇನೂರ ಎಂಬ ಗ್ರಾಮದಲ್ಲಿ ಇರುತ್ತಿದನು. ಆ ಗ್ರಾಮದ ಗೌಡಕಿಯು ಅವರ ಮನೆತನದಲ್ಲಿ ನಡೆಯುತ್ತ ಬಂದಿತ್ತು. ಮುಂದೆ ಆ ಮನೆತನದಲ್ಲಿಯ ಸಿದ್ದಪ್ಪ ಎಂಬ ಹೆಸರಿನ ಪುರುಷನು, ಕೆಲ ಕಾರಣಗಳ ಮೂಲಕ ಕುಪೆನೂರನ್ನು ಬಿಟ್ಟು ಗದಗ-ಬೆಟಗೇರಿಯಲ್ಲಿ ಕೆಲಕಾಲ ವಾಸಿಸಿ, ತರುವಾಯ ಅಲ್ಲಿಂದಲೂ ಹೊರಟು ಪಂಢರಪುರದ ನೆರೆಯಲ್ಲಿದ್ದ ಮಂಗಳ ವೀಡು ( ಮಂಗಳವೇಡೆ ) ಎಂಬ ಗ್ರಾಮದಲ್ಲಿ ಬಂದು ನೆಲೆಸಿದ. ಈ ಸಿದ್ದಪ್ಪನಿಂದ ಏಳನೆಯ ಪೀಳಿಗೆಯವರಾದ ಲಕ್ಷ್ಮಣಪ್ಪನವರು ಶ್ರೀ ಮಹಾರಾಜರ ಮುತ್ತಜ್ಜರು ಇವರು ಮಂಗಳವೀಡಿನಿಂದ ನಿಂಬರಗಿಗೆ ಬಂದು ಅಲ್ಲಿಯೇ ನಿರಂತರವಾಗಿ ನಿಂತುಬಿಟ್ಟರು. ಲಕ್ಷ್ಮಣಪ್ಪನವರಿಗೆ ಡೋಂಗರೆಪ್ಪ, ನಾಗಪ್ಪ ಹಾಗೂ ಧೋಂಡಪ್ಪ ಎಂಬ ಮೂವರು ಮಕ್ಕಳು. ಇವರಲ್ಲಿ ಇಬ್ಬರ ವಂಶಜರು ನಿಂಬರಗಿಯಲ್ಲಿ ಇನ್ನೂವರೆಗೆ ವಾಸಿಸಿರುವರು. ಇವರಲ್ಲಿಯ ಮೇಲ್ಕಾಣಿಸಿದ ನಾಗಪ್ಪನವರ ಮಕ್ಕಳಾದ ಭೀಮಣ್ಣನವರು ಶ್ರೀ ನಿಂಬರಗಿ ಮಹಾರಾಜರವರ ತಂದೆಯವರು ಶ್ರೀ ನಿಂಬರಗಿ ಮಹಾ ರಾಜರವರು ಹುಟ್ಟಿದುದು ಸೊನ್ನಲಾಪುರದಲ್ಲಿಯ ( ಸೊಲ್ಲಾಪುರ ) ತಮ್ಮ ತಾಯಿಯ ಮನೆಯಲ್ಲಿ. ಆದರೆ ಅವರು ಇಡೀ ಆಯುಷ್ಯವನ್ನು ಕಳೆದುದು ನಿಂಬರಗಿಯಲ್ಲಿ. ಶ್ರೀ ನಿಂಬರಗಿ ಮಹಾರಾಜರವರ ನಿಲುವು ಎತ್ತರವಾದುದೂ, ಶರೀರವು ಭವ್ಯವಾದುದೂ, ಪ್ರಕೃತಿಯು ತುಂಬ ಸಶಕ್ತವಾದುದೂ ಇತ್ತು. ಅವರ ವರ್ಣವು ಗೌರ, ಕಿವಿಗಳು ಅಗಲಾದವುಗಳು, ಬುದ್ಧಿಯು ಅತಿ ತೀಕ್ಷ ವಾದುದು. ಕೆಳಗೆ ಕಾಣಿಸಿದ ಡೊಳ್ಳಿನ ಪದದಲ್ಲಿಯ ಬಣ್ಣನೆಯು ಅವರ ಹೋಲಿಕೆಯನ್ನು ಬಹು ಅಂಶದಿಂದ ಅರಹುವದು, | ಪದ || ಹಾದಿಯ ಕೂಡಿ ಹೋಗು ಅಣ್ಣ ! ನಮ್ಮ ದೇವರ ಕಂಡರೆ ಬರಹೇಳೋ | ನಿಮ್ಮ ದೇವರು ಖನ ಗುರತಾ ನಮಗ ಹೇಳಲಿ ಬೇಕಲ್ಲಾ ಅಲ್ಪ-ಚರಿತ್ರೆ ಕೆಂಗರಗಣ್ಣು ಘುಂಗುರ ಮೀಶಿ ನುಂಗುವಂಥ ಬಹಳವತಾರಾ | ನುಂಗುವಂಥ ಬಹಳವತಾರಾ ನಮ್ಮ- ನಿಂಗನ ಕಂಡರೆ ಬರಹೇಳೋ || ೧ || ಬಟ್ಟಲ ಮಾರಿ ಭಗರೀ ಗಡ್ಡಾ ನೆಟ್ಟನ ಮೂಗಿನ ಚೆಲವಾನೋ | ನೆಟ್ಟನ ಮೂಗಿನ ಚೆಲುವ ಚೆನ್ನಿಗ ನಮ್ಮ ದಿಟ್ಟನ ಕಂಡರೆ ಬರಹೇಳೋ ಉದ್ದಾನವನ್ನು ಉರಿಮುಖದವನು ತಿದ್ದಿದ ಹೊನ್ನ ಮೀಶವನು | ತಿದ್ದಿದ ಹೊನ್ನ ಮೀಶವನೋ ನಮ್ಮ ರುದ್ರನ ಕಂಡರೆ ಬರಹೇಳೊ ಕರಿಯ ಕಂಬಳಿ ವರವಿನ ಚಿತ್ರ ನಮ್ಮ ಗುರುವಿನ ಕಂಡರೆ ಬರಹೇಳೋ | ಗುರುವಿನ ಕಂಡರೆ ಬರಹೇಳೊ ನಮ್ಮ || 2 11 ಸ್ವಾಮಿನ ಕಂಡರೆ ಬರಹೇಳೋ || ೪ || ಚಿಕ್ಕಂದಿನಲ್ಲಿ ಅವರಿಗೆ ಆಟದ ನಾದವು ಬಹಳ. ಅದಕ್ಕಾಗಿ ಅವರು ತಂದೆಯವರಿಂದ ಹಲವು ಸಲ ಬೈಸಿಕೊಳ್ಳಬೇಕಾಗುತ್ತಿತ್ತು. ಇದೇ ಮೇರೆಗೆ ತಂದೆಯವರು ಅವರಿಗೆ ಒಮ್ಮೆ ಬೈದಾಗ ಅವರು ತಂದೆಯವರಿಗೆ ಅಂದದ್ದು : “ ನಾನು ಆಡುತ್ತಿರುವ ಆಟವು ಎಲ್ಲ ಜನರ ಆಟದಂತೆ ಇಲ್ಲ. ನಾನು ಬೇರೊಂದು ಬಗೆಯ ಆಟವನ್ನು ಆಡಿತೋರಿಸುವವನಿರುವೆ ?. ನಿಜವಾಗಿ ಮಹಾರಾಷ್ಟ್ರದ ಒಬ್ಬ ಸಂತಕವಿಯ " ಆಟಗಾರ' ಎಂಬ ಅಭಂಗದಲ್ಲಿ ಬಣ್ಣಿಸಲಾದ ಶುಕ, ನಾರದ, ಹನುಮ, ಹಾಗೂ ಗೋಪಾಲ ಈ ಹಿರಿ ಆಟಗಾರ ' ರಂತೆ, ಅವರು ಪರಮಾರ್ಥದ ಆಟವನ್ನು ಬಲು ಸೊಗಸಾಗಿ ಆಡಿ ತೋರಿಸಿದರು. ಪ್ರಸ್ತಾವನೆ ಸುಮಾರು ಇಪ್ಪತ್ತು, ಇಪ್ಪತ್ತೈದು ವರುಷದವರಿರುವಾಗ ಅವರೊಮ್ಮೆ ಹೋಳಿಯ ಹುಣ್ಣಿಮೆಯ ಹಬ್ಬದಲ್ಲಿ ಬಹುಕಾಲ ಆಟವಾಡಿದ ಮೂಲಕ, ಅವರಿಗೆ ಮನೆಗೆ ಬರಲು ತುಂಬ ತಡವಾಯಿತು. ಅದಕ್ಕಾಗಿ ತಂದೆಯವರು ಅವರಿಗೆ ಬಹಳ ಬೈದರು. ಅದರಿಂದ ಅತಿಯಾಗಿ ನೊಂದುಕೊಂಡು, ಅವರು ಯಾರಿಗೂ ತಿಳಿಸದೆಯೆ ಪಂಢರಪುರಕ್ಕೆ ತೆರಳಿದರು. ಅಲ್ಲಿ ಅವರು ಮೂರುದಿನ ಉಪವಾಸ ಮಾಡಿದರು. ಮೂರನೆಯ ದಿನ, ' ನೀನು ಸಿದ್ಧ- ಗಿರಿಗೆ ಹೋಗು. ಅಂದರೆ ಅಲ್ಲಿ ನಿನ್ನ ಬಯಕೆಯು ಕೈಗೂಡುವದು' ಎಂದು ಅವರಿಗೆ ದೃಷ್ಟಾಂ ಂತವಾಯಿತು. ತರುವಾಯ ಅವರು ನಿಂಬರಗಿಗೆ ಮರಳಿ ಬಂದರು. ಸಿದ್ಧಗಿರಿಯು ಕೊಲ್ಲಾಪುರದ ಹತ್ತಿರ ಇರುವದು. ಅಲ್ಲಿಗೆ ಅವರು ತಮ್ಮ ಮಗಳ ಜಡಿಯನ್ನು ಬಿಡಿಸಲು ಹೋದರು, ದೇವದರುಶನವಾದ ಮೇಲೆ ಗುಡಿಯ ನೆರೆಯಲ್ಲಿದ್ದ ಗವಿಯೊಂದರ ಬಳಿ ನಡೆದಿರಲು, ಆ ಗವಿ ಯಲ್ಲಿದ್ದ ಒಬ್ಬ ವೃದ್ಧ ಸತ್ಪುರುಷರು, ಅವರನ್ನು ತಮ್ಮೆಡೆ ಬರಲು ಕೈಯಿಂದ ಸನ್ನೆ ಮಾಡಿದರು. ಆದರೆ ಆ ಸಾಧುಗಳು ತಮ್ಮನ್ನೆ ಯೆ ಕರೆಯುವರೊ, ನ್ಯರನ್ನು ಕರೆಯುವರೊ, ಎಂಬುದನ್ನು ಅರಿಯದೆ ಅವರು ಸಾಧುಗಳೆಡೆಗೆ ಹೋಗಲಿಲ್ಲ. ಆಗ ಆ ಸಾಧುಗಳು ಅವರಿಗೆ ತಮ್ಮೆಡೆ ಬರಲು ಎರಡೂ ಗಳಿಂದ ಸೂಚಿಸಿದರು. ಅದನ್ನು ಕಂಡು ಮಹಾರಾಜರವರು ಸುಮಾರಾಗಿ ಜಿಗಿದೆಯೆ ಅವರೆಡೆಗೆ ಸಾರಿದರು. ಅದೇ ಕಾಲಕ್ಕೆ ಆ ಸಾಧುಪುರುಷರು ಅವರನ್ನು ಆ ಗವಿಯಲ್ಲಿ ಅನುಗ್ರಹಿಸಿದರು ಮತ್ತು " ನಾನು ಹೇಳಿದ ಮೇರೆಗೆ ಸಾಧನವನ್ನು ಮಾಡಿದರೆ ನಿನ್ನ ಕೀರ್ತಿಯು ದಿಗಂತದಲ್ಲಿ ಹಬ್ಬ ಬಹುದು. ನೀನು ಬಂಗಾರದ ಪಲ್ಲಕ್ಕಿಯಲ್ಲಿ ಮೆರೆಯಬಹುದು,' ಎಂದು ಅವರನ್ನು ಆಶೀರ್ವದಿಸಿದರು, ಮೇಲ್ಕಾಣಿ ಸಿದ ಸಾಧುಪುರುಷರು ಶ್ರೀ ಮುಪ್ಪಿನ ಮುನಿಗಳು ಇರಬಹುದೆಂದು, ಸಿದ್ಧಗಿರಿ ಹಾಗು ಶಿರಸಂಗಿಯಲ್ಲಿಯ ಶ್ರೀಕಾಡಸಿದ್ಧರ ಮಠಗಳಲ್ಲಿರುವ ಕಾಗದಪತ್ರಗಳಿಂದ ಕಂಡುಬರುವದು. ಈ ಗ್ರಂಥದ ಕೊನೆಯಲ್ಲಿ ಮುದ್ರಿಸಲಾದ ಶ್ರೀನಿಂಬರಗಿ ಮಹಾರಾಜ ರವರ ಪದಗಳಲ್ಲಿಯ ಕ್ರಮಾಂಕ (೧) ರಲ್ಲಿರುವ ' ಮುಪ್ಪಿನ ಮುನಿಯ ಪಿಡಿದು ವಚನ' ಎಂಬಲ್ಲಿಯ ಉಲ್ಲೇಖವು ಅವರ ಗುರುಗಳದೇ ಇರುವ ಸಂಭವವಿದೆ. ಅಲ್ಪ-ಚರಿತ್ರೆ ಗುರುಗಳಿಂದ ಅನುಗ್ರಹವನ್ನು ಪಡೆದು ನಿಂಬರಗಿಗೆ ಬಂದ ಮೇಲೆ ಸುಮಾರು ಆರು ವರುಷಗಳ ವರೆಗೆ ಅವರಿಂದ ವಿಶೇಷ ಸಾಧನವಾಗಲಿಲ್ಲ. ಆರು ವರುಷಗಳ ತರುವಾಯ ಅವರಿಗೆ ಪರಮಾರ್ಥದ ನೆನಪನ್ನು ಮಾಡಿ ಆಗ ಕೊಡಲು ಆ ವೃದ್ಧ ಸತ್ಪುರುಷರು ನಿಂಬರಗಿಗೆ ಅವರೆಡೆ ಬಂದರು. ಮಹಾರಾಜರವರು ಅವರಿಗೆ ಭೋಜನವನ್ನು ನೀಡಿ ನಾಲ್ಕಾಣೆ ದಕ್ಷಿಣೆ ಯನ್ನು ಕೊಟ್ಟರು. ಆದರೆ ಮುನಿಗಳು ಅವರಿಗೆ ಎರಡು ರೂಪಾಯಿ ದಕ್ಷಿಣೆಯನ್ನು ಬೇಡಿದರು. ಇಷ್ಟು ದಕ್ಷಿಣೆಯನ್ನು ಕೊಡಲು ಮಹಾರಾಜ ರವರು ಅಂದು ಶಕ್ತರಿರಲಿಲ್ಲ, ಆದರೂ ಬೇರೆಯವರಿಂದ ಎರಡು ರೂಪಾಯಿ ಕೈಗಡ ತಂದು, ಅವನ್ನು ಅವರು ಮುನಿಗಳಿಗೆ ಕೊಟ್ಟರು ಆಗ ಅವೆರಡನ್ನು ಮರಳಿ ಕೊಟ್ಟು ಆ ವೃದ್ಧ ಮುನಿಗಳ೦ದರು : * ಇವುಗಳಲ್ಲಿಯ ಒಂದು ರೂಪಾಯಿಯನ್ನು ನಿನ್ನ ಪ್ರಪಂಚಕ್ಕಾಗಿಯೂ, ಇನ್ನೊಂದನ್ನು ಪರಮಾರ್ಥ ಕ್ಯಾಗಿಯೂ ಬಳಸು '. ಆಗ ಮಹಾರಾಜರವರು ೧ ನಾಮವನ್ನು ನೆನೆದರೆ ಪ್ರಪಂಚವೂ ಸುಖದಿಂದ ಸಾಗುವದೇನು ? ” ಎಂದು ಕೇಳಿದರು, ಅದಕ್ಕೆ
- ದೇವರ ದಯೆಗೆ ಅಸಾಧ್ಯವಾದುದಾವುದಯ್ಯಾ !' ಎಂದು ಉತ್ತರವಿತ್ತು
ಮುನಿಗಳು ಅಲ್ಲಿಂದ ತೆರಳಿದರು ಮುಂದೆ ಮಹಾರಾಜರವರು ಮನಸ್ಸು ಕೊಟ್ಟು ಸಾಧನವನ್ನು ಮಾಡತೊಡಗಿದರು, ಮತ್ತು ತಮ್ಮ ವಯಸ್ಸಿನ ೩೬ ರಿಂದ ೬೭ ವರುಷಗಳ ವರೆಗೆ ಅಂದರೆ ೩೬ ವರುಷ ಅವರು ಪ್ರಪಂಚದಲ್ಲಿದ್ದು ಅವಿಶ್ರಾಂತವಾಗಿ ಸಾಧನವನ್ನು ನಡೆಯಿಸಿದರು. ಈ ಮೇರೆಗೆ ಪರಮಾರ್ಥ ದಲ್ಲಿಯ ಅತ್ಯುನ್ನತ ಪದವಿಯನ್ನು ಪಡೆದ ಮೇಲೆ, ಮುಂದಿನ ೨೮ ವರುಷ ಗಳನ್ನು ಅವರು ತಮ್ಮ ಪ್ರತಿನಿತ್ಯದ ಸಾಧನದಲ್ಲಿ ಖಂಡಬೀಳಗೊಡದೆ, ಜನರಿಗೆ ಪರಮಾರ್ಥವನ್ನು ಬೋಧಿಸಿ, ಅವರನ್ನುದ್ಧರಿಸುವದರಲ್ಲಿ ಕಳೆದರು, ಮೊದಲು ಮಹಾರಾಜರು ನೀಳಾರಿಯ ( ನೀಲಗಾರರ ) ಅಂದರೆ ನೀಲವನ್ನು ತಯಾರಿಸಿ ನೂಲಿಗೆ ಬಣ್ಣ ಕೊಡುವ ತಮ್ಮ ಮನೆತನದ ಉದ್ಯ- ಮವನ್ನು ಮಾಡುತ್ತಿದ್ದರು, ಆದರೆ ಕುರಿಗಳನ್ನು ಕಾಯುವ ಉದ್ಯಮವು ಪರಮಾರ್ಥ ಸಾಧನೆಗೆ ಹೆಚ್ಚು ಅನುಕೂಲವೆಂದು ಬಗೆದು ಪರಮಾರ್ಥ ಕ್ಕಾಗಿ ಮುಂದವರು ಕುರುಬರಾದರು. ತಮ್ಮ ಆಡುಕುರಿಗಳ ಹಿಂಡನ್ನೂ, ದನಕಾಯುವ ನಾಲ್ಕಾರು ಹುಡುಗರನ್ನೂ, ಸಂಗಡ ಕರಕೊಂಡು ಅವರು ' ಪ್ರಸ್ತಾವನೆ ನಿಂಬರಿಗಿಯ ನೆರೆಯಲ್ಲಿ ಐದಾರು ಮೈಲು ಅಂತರದಲ್ಲಿದ್ದ, ಸಾತಲಗಾವ, ಜಿಗಜಿವಣಿ, ಕಾತ್ರಾಳ, ಸೋನಗಿ, ಉಮದಿ, ಜಿರಂಕಲಗಿ, ಬರ್ಡೋಲ, ಕಡಲಸಂಗ, ಧುಮಕನಾಳ, ಇತ್ಯಾದಿ ಪ್ರದೇಶದಲ್ಲಿಯ ಯಾವದಾದ ರೊಂದು ಕೊಳ್ಳಗಳಿದ್ದ ಅಡವಿಗೆ ಹೋಗಿ, ಅಲ್ಲಿ ತಮ್ಮ ಆಡುಕುರಿಗಳನ್ನು ಮೇಯಲು ಬಿಟ್ಟು, ಅವನ್ನು ಕಾಯಲು ದನಗಾಯಿ ಹುಡುಗರಿಗೆ ಹೇಳಿ, ಅವರು ನಿವಾಂತಸ್ಥಲವೊಂದರಲ್ಲಿ ಸಾಯಂಕಾಲದ ವರೆಗೆ ಸಾಧನಮಾಡುತ್ತ ಕುಳಿತುಕೊಳ್ಳುತ್ತಿದ್ದರು. ತಮ್ಮ ಈ ಸಾಧನಬಲದಿಂದ ಮಹಾರಾಜರವರು ಜೇಥೆ ಪಡಲೀ ದೃಷ್ಟಿ ರಘ ಮಾರಾಯಾಚಿ' ( ರಘೋತ್ತಮನ ದೃಷ್ಟಿಯು ಬಿದ್ದ ಸ್ಥಲದಂತೆ ) ಎಂದು ಶ್ರೀರಾಮದಾಸರು ಬಣ್ಣಿಸಿದ ಮೇರೆಗೆ ಆ ಇಡೀ ಪ್ರದೇಶವನ್ನೆಯೆ ಪಾವನಗೊಳಿಸಿದರು. ಈ ಬಗೆಯಾಗಿ ಪರಮಾರ್ಥವನ್ನು ಪೂರ್ತಿಯಾಗಿ ಪಡೆದು ಅವರು ಸಂಸಾರದಿಂದ ಮುಕ್ತ ರಾದರು, " ನೀಳಾರೆ' ಇದ್ದ ಮಹಾರಾಜರವರು ಮುಂದೆ 1 ನೀರಾಳೆ ? ( ಮುಕ್ತರು) ಆದ ಬಗೆಯನ್ನು ಒಂದು ಮರಾಠಿ ಆರ್ಯೆಯಲ್ಲಿ ಈ ರೀತಿ ಬಣ್ಣಿಸಲಾಗಿದೆ. ಅದರ ಆಶಯವು ಕೆಳಗಿನಂತೆ : * ಪಾರ್ಥಿವ ನೀಳವು ಯಾರಿಗೆ " ನೀಳಾರೆ ” ಎಂಬ ಸಾರ್ಥನಾಮವನ್ನು ದಯಪಾಲಿಸಿತೋ ಅವರನ್ನು ಪರತಮ ನೀಳವು, ಭವಭಯದಿಂದ ನೀರಾಳೆ ' ( ಮುಕ್ತ ) ಮಾಡಿತ್ತು. ಶ್ರೀನಿಂಬರಗಿ ಮಹಾರಾಜರವರು ತಮ್ಮ ಇಡೀ ಜೀವನದಲ್ಲಿ ಪ್ರಪಂಚ-ಪರಮಾರ್ಥಗಳೆರಡನ್ನು ಶಾಂತಿಯಿಂದಲೂ ದಕ್ಷತೆಯಿಂದಲೂ ನಡೆಯಿಸಿದರು. ಒಳ್ಳೆಯ ನಡತೆಯ ಬಲದಿಂದ ಅವರ ಸಂಸಾರವು ನಿರ್ವಿಘ್ನವಾಗಿ ಸುಖದಿಂದ ಕೊನೆಗೊಂಡಿತು. ಅವರ ಜೀವಮಾನದಲ್ಲಿ ಅವರ ಮಕ್ಕಳು ಮೊಮ್ಮಕ್ಕಳು-ಇವರಲ್ಲಿ ಯಾರಿಗೂ ಅಪಮೃತ್ಯುವು ದುರ್ಮರಣವು-ಬರಲಿಲ್ಲ. ಇಷ್ಟೇ ಅಲ್ಲದೆ ಯಾರಿಗೂ ವಿಶೇಷವಾದ ಬೇನೆಯೂ ಒದಗಲಿಲ್ಲ ತಮ್ಮ ನಡತೆಯೆ ತಮ್ಮ ಬಲವು ಎಂಬ ತತ್ವವನ್ನು
- ಪಾರ್ಥಿವ ನೀರ ಜಯಾತೆ | " ನೀಳಾರೆ' ಸಾರ್ಥನಾಮ ತ್ಯಾ ದೇಈ ||
ಪರತಮ ನೀಳ ತಯಾತ | ( ನೀರಾನೆ ' ಭವಭಯಾ ತುನೀ ನೇ ಈ || ಅಲ್ಪ-ಚರಿತ್ರ ಅರಿತು, ಅವರು ತಮ್ಮ ನಡತೆಯನ್ನು ಈ ಗ್ರಂಥದಲ್ಲಿಯ ತಮ್ಮ ವಚನಗಳಿಗೆ ಅನುಗುಣವಾಗಿ ಇರಿಸಿದ್ದರು. ಪರಮಾರ್ಥದಲ್ಲಿ ಉಲ್ಲಸಿತರಾಗಿಯೂ ಪ್ರಪಂಚದಲ್ಲಿ ಉದಾಸೀನರಾಗಿಯೂ ಇದ್ದರೂ, ಅವರು ತಮ್ಮ ಪ್ರಪಂಚ ವನ್ನು ಉಪೇಕ್ಷಿಸದೆ, ಅದನ್ನು ದಕ್ಷತೆಯಿಂದಲೂ, ವಿವೇಕದಿಂದಲೂ ನಡೆಯಿಸಿದರು, ಪ್ರಪಂಚವನ್ನು ಸಾಗಿಸುತ್ತಿರುವಾಗ ಅವರು ಯಾವ ದುರ್ಗುಣವನ್ನು ಮುಟ್ಟದೆ, ಪ್ರತಿಯೊಂದು ಸದ್ಗುಣವನ್ನು ಆಚರಣೆಯಲ್ಲಿ ಇಳಿಸಿದರು. ಮುಂದೆ ತಮ್ಮ ಮಕ್ಕಳು ದೊಡ್ಡವರಾದ ಮೇಲೆ ಪ್ರಪಂಚ ವನ್ನು ಅವರಿಗೆ ಒಪ್ಪಿಸಿ, ಅವರು ಆತ್ಮಚಿಂತನೆಯಲ್ಲಿ ಮಗ್ನರಾದರು. (+) ಶ್ರೀನಿಂಬರಗಿ ಮಹಾರಾಜರವರ ಜೀವನದಲ್ಲಿ ಬಾಹ್ಯ ದೃಷ್ಟಿಯಿಂದ ಮಹತ್ವದ ಸಂಗತಿಗಳು ಜರಗದಿದ್ದರೂ, ಪರಮಾರ್ಥದ ದೃಷ್ಟಿಯಿಂದ ಉದ್ಯೋಧಕವಾದ ಅನೇಕ ಸಂಗತಿಗಳು ಒದಗಿದವು. ಅವುಗಳಲ್ಲಿಯ ಕೆಲವನ್ನು ಕೆಳಗೆ ಕಾಣ ಸಿರುವೆವು. d n. ಒಂದು ದಿನ ಮಹಾರಾಜರವರು ನಿಂಬರಗಿ ಊರ ನೆರೆಯಲ್ಲಿದ್ದ ಒಂದು ಬಾವಿಗೆ ಜಳಕಕ್ಕಾಗಿ ಹೋಗಿದ್ದರು. ಬಾವಿಯಲ್ಲಿ ಇಳಿಯುವ ದಾರಿಯು ಬಲು ಇಕ್ಕಟ್ಟಿನದೂ ಬಿಕ್ಕಟ್ಟಿ ನದೂ ಇದ್ದಿತು. ದಾರಿಯ ಎರಡೂ ಬದಿಗಳಲ್ಲಿ ಘಡಗಳ್ಳಿಯು ಬೆಳೆದಿದ್ದಿತು. ಜಳಕ ಮಾಡಿ ಅರ್ಧದಾರಿ ಏರಿ ಬರುವಷ್ಟರಲ್ಲಿ, ಒಂದು ದೊಡ್ಡ ನಾಗರ ಹಾವು, ಹೆಡೆಯನ್ನು ತೆಗೆದು ಪೂತ್ಕರಿಸುತ್ತ ಕೆಳಗೆ ಬರುತ್ತಿರುವದನ್ನು ಅವರು ಕಂಡರು, ಮರಳಿ ಹೋಗ ಬೇಕೆಂದರೆ ಕೆಳಗೆ ಆಳವಾದ ನೀರು; ಬದಿಗೆ ಸಾಗಬೇಕೆಂದರೆ ಅಲ್ಲಿ ದಟ್ಟವಾಗಿ ಬೆಳೆದ ಘಡಗಳ್ಳಿ ; ಮೇಲೆ ಅಂತೂ ತಮ್ಮೆಡೆಗೆ ಸಾಗಿಬರುವ ಹೆಬ್ಬಾವು ; ಇಂಥ ಸಂಕಟದಲ್ಲಿ ಮಹಾಜರವರು ಕಂಗಳನ್ನು ಮುಚ್ಚಿ ಭಗವಂತನ ಧ್ಯಾನವನ್ನು ಮಾಡಿದರು. ಕೆಲಕಾಲದ ನಂತರ ಕಂಗಳನ್ನು ತೆರೆದು ನೋಡಲು, ಹಾವು ಹೋಗಿ ಬಿಟ್ಟಿತ್ತು. ಆಗ ಪರಮಾತ್ಮನ ನಾಮದ ಅಗಾಧ ಮಹಿಮೆಯನ್ನು ಬಣ್ಣಿಸಲು * ಓ೦ ನಾವು ಕಾಯ್ದುದು' ಎಂಬ ಪದವನ್ನು ರಚಿಸಿದರು. ( ಪದ ಕ್ರ. ೨ } 2 no ಪ್ರಸ್ತಾವನೆ ಕನಕನೆಂಬ ಹೆಸರಿನ ಬೇಡರ ಸಾಧುವೊಬ್ಬನಿದ್ದನು. ಸಾಧುತ್ವದ ಅಹಂಕಾರವು ಅವನ ತಲೆಗೆ ಏರಿತ್ತು. ಮಹಾರಾಜರವರನ್ನು ದ್ವೇಷಿಸು ತಿರುವ ನಿಂಬರಗಿಯ ಗೌಡತಿಯ, ಅಲ್ಲಿಯ ಕೆಲ ಗೊರವರೂ, ಅವರಿಗೆ ತಾಪಕೊಡಲು ಕನಕನನ್ನು ಹುರಿಗೊಳಿಸಿದರು. ಕನಕನು ಮಹಾರಾಜ ರವರೆಡೆಗೆ ಹೋಗಿ ಈ ರೀತಿ ನುಡಿದನು : “ ನೀನು ಸಾಧುವೆಂದು ಮೆರೆಯುವಿ, ಬ್ರಾಹ್ಮಣರಿಂದಲೂ ವಂದಿಸಿಕೊಳ್ಳುವಿ. ಇಂದು ನಿಜವಾದ ಸಾಧು ಯಾರೆಂಬುದನ್ನು ಪರೀಕ್ಷಿಸೋಣ. ನಾವಿಬ್ಬರೂ ಈ ಗುಡಿಯಲ್ಲಿಯ ಕೋಣೆಯಲ್ಲಿ ಸೆರೆಗೊಳ್ಳುವಾ, ಕೋಣೆಯ ಬಾಗಿಲನ್ನು ತೆರೆಯದೆ ಯಾರು ಹೊರಬರುವರು ನೋಡುವಾ ! ಹಾಗೆ ಹೊರಬಂದವನೇ ನಿಜವಾದ ಸಾಧು ! ” ಅದಕ್ಕೆ ಮಹಾರಾಜರವರು, “ ನಾನೇನು ಸಾಧು ಅಲ್ಲ, ನನಗೆ ಇಂಥ ಚಮತ್ಕಾರಗಳನ್ನು ಮಾಡಲು ಬರುವದಿಲ್ಲ. ಆದುದರಿಂದ ನನಗೆ ಈ ಗೊಂದಲದಲ್ಲಿ ಬೀಳುವ ಮನಸ್ಸಿಲ್ಲ.' ಎಂದು ಉತ್ತರವಿತ್ತರು. ಆದರೆ ಕನಕನು ತನ್ನ ಹಟವನ್ನು ಬಿಡಲೊಲ್ಲ. ಅದನ್ನು ಕಂಡು ಮಹಾರಾಜರು ಮರಳಿ ಮೇಲಿನಂತೆಯೆ ಹೇಳಿದರು. ಅದರಿಂದ ತುಂಬ ಉಬ್ಬಿದವನಾಗಿ ಕನಕನು ಸೆರೆಗೊಳ್ಳುವ ಬಗೆಗೆ ಬಹಳೇ ಹಟತೊಟ್ಟನು. ಇಷ್ಟಾದ ಮೇಲೆ ಮಹಾರಾಜರು : * ಆಗಲಿ ! ನಡೆ ! ನಾವು ಕೋಣೆಯಲ್ಲಿ ಬಂಧಿಸಿ ಕೊಳ್ಳುವಾ ! ಯಾರು ಹೊರಬರುವರೆಂಬುದನ್ನು ನೋಡುವಾ ! ” ಎಂದರು, ಮಸಲತ್ತು ತನ್ನ ಮೈಮೇಲೆಯೆ ಹೊರಳಿದುದನ್ನು ಕಂಡು ಕನಕನು,
- ಇಂದು ಬೇಡ | ನಾಳೆ ನೋಡುವಾ !” ಎಂದನು. ಅದಕ್ಕೆ ಮಹಾರಾಜರು,
- ಎಲೈ ! ನಾಳೆ ಎಂಬವನ ಮನೆ ಹಾಳು ! ನಾಳಿನ ಭರವಸವೇನು ? ?
ಎಂದು ಇತ್ತ ಉತ್ತರದಿಂದ ಕನಕನು ಸಿಟ್ಟಿಗೆದ್ದನು. ಅಪಶಬ್ದಗಳಿಂದ ಮಹಾರಾಜರವರನ್ನು ತುಂಬ ಅಪಮಾನಗೊಳಿಸಿ, ಅವನು ತನ್ನ ನಿವಾಸಕ್ಕೆ ತೆರಳಿದನು. ಕನಕನು ಹೋದ ಮೇಲೆ ಮಹಾರಾಜರು • ದೇವರೇ ! ನಾನು ಯಾವ ಅಪರಾಧವನ್ನೂ ಮಾಡದಿರಲು ಇವನು ನನ್ನನ್ನು ನೋಯಿಸಿ ನುಡಿದುದೇಕೆ ? ನೀನು ನಿನ್ನ ಭಕ್ತರಕ್ಷಕನೆಂಬ ಬಿರುದನ್ನು ಪಾಲಿಸು ಮತ್ತು ಯೋಗ್ಯವಾದ ನ್ಯಾಯವನ್ನು ನೀಡಯ್ಯಾ ! ” ಎಂಬ ಆಶಯದ
- ನೋಯಿಸಿ ನುಡಿದನ್ಯಾಕೆ ' ಈ ಪದವನ್ನು ರಚಿಸಿ ಭಗವಂತನನ್ನು
ಪ್ರಾರ್ಥಿಸಿದರು. ( ಪದ ಕ್ರ. ೩). ಈ ಅಲ್ಪ-ಚರಿತ್ರ ಆಗ ದೇವರು ತಮ್ಮ ದೂರನ್ನು ಕೇಳಿದನೆಂಬುದು ಅವರ ಪ್ರತ್ಯಯಕ್ಕೆ ಬಂದಿತು, ಮರುದಿನ ಕನಕನು ತನ್ನ ಊರಿಗೆ ಹೋಗುವವನಿದ್ದನು. ಆದರೆ ಆ ದಿನ ರಾತ್ರಿಯಲ್ಲಿ ಅವನಿಗೆ ಮಾರಿಕಾ ಬೇನೆಯ ಉಪದ್ರವವಾಗಿ, ಸುಮಾರು ಮಧ್ಯರಾತ್ರಿಯಲ್ಲಿ ಅವನು ಬದುಕುವನೋ ಸಾಯುವನೋ ತಿಳಿಯದಂತೆ ಅವನ ಸ್ಥಿತಿಯಾಯಿತು. ಶ್ರೀಮಹಾರಾಜರವರನ್ನು ಕಾಡಿದ್ದ ರಿಂದಲೇ ತನಗೆ ಈ ಶಿಕ್ಷೆಯನ್ನು ಅನುಭವಿಸಬೇಕಾಯಿತೆಂಬುದು ಕನಕನಿಗೂ ಆತನ ಸಂಗಡಿಗರಿಗೂ ಹೊಳೆಯದಿರಲಿಲ್ಲ. ಆದ್ದರಿಂದ ಆತನನ್ನು ಕ್ಷಮಿಸ ಬೇಕೆಂದು ಬಿನ್ನವಿಸಲು ಅವನ ಶಿಷ್ಯರು ಮಹಾರಾಜರೆಡೆಗೆ ಬಂದರು. ಆಗ ಅವನನ್ನು ಅವನ ವಾಹನದ ಮೇಲೆ (!) ಕುಳ್ಳಿರಿಸಿ, ದಕ್ಷಿಣ ದಿಕ್ಕಿನಲ್ಲಿ ನಿಂಬರಗಿಯ ಸೀಮೆಯಾಚೆಗೆ ಒಯ್ದರೆ ಅವನು ಬದುಕಬಹುದು ಎಂದು ಮಹಾರಾಜರವರು ಹೇಳಿದರು. ಅದರಂತೆ ಮಾಡಲು ಕನಕನು ಬದುಕಿದನು 2. ಶ್ರೀಮಹಾರಾಜರವರು ನಿಂಬರಗಿಯ ಭೀಮರಾಯನ ಗುಡಿ- ಯಲ್ಲಿಯ ಬಿಳೇನಸಿದ್ಧನ ಓವರಿಯಲ್ಲಿ ಕುಳಿತು ಶ್ರೀರಾಮದಾಸ ಸ್ವಾಮಿಗಳ ದಾಸಬೋಧ ಗ್ರಂಥವನ್ನು ಓದಿಸಿ ನಿರೂಪಣವನ್ನು ಹೇಳುತ್ತಿದ್ದರು. ನೆರೆಯ ಓವರಿಯಲ್ಲಿ ಭೀಮಾಬಾಯಿ ಎಂಬ ಹೆಸರಿನ ಅವರ ಶಿಷ್ಯಯೊಬ್ಬಳು ಇರುತ್ತಿದ್ದಳು. ಒಮ್ಮೆ ಅವಳ ಬಂಗಾರದ ಬಳೆಗಳು ಕಳವಾದವು. ಆಗ ಫೌಜದಾರನಾಗಿದ್ದ ತನ್ನ ಅಣ್ಣ ಗುಂಡೋಪಂತನನ್ನು ಕರೆಯಿಸಿ, ಅವನಿಗೆ ಕಳವನ್ನು ಹುಡುಕಲು ಹೇಳಿದಳು ಅವನು “ ನಿನ್ನದು ಯಾರಮೇಲೆ ಯಾದರೂ ಸಂಶಯವಿದೆಯೇ ?' ಎಂದು ಕೇಳಲು, ಅವಳು “ ನನ್ನ ದು ಯಾರ ಮೇಲೆಯೂ ಸಂಶಯವಿಲ್ಲ. ಆದರೆ ಈ ಮುದುಕನು ನನ್ನ ಕೋಣೆಯ ನೆರೆಯಲ್ಲಿಯ ಓವರಿಯಲ್ಲಿ ದಿನಾಲು ಪುರಾಣ ಹೇಳಲು ಬರುತ್ತಿರುವನು, ಆತನು ನನ್ನ ಬಳೆಗಳನ್ನು ಕದ್ದಿರಬಹುದು' ಎಂದು ಉತ್ತರವನ್ನು ಕೊಟ್ಟಳು. ಫೌಜದಾರನು ಈ ಸಂಗತಿಯನ್ನು ನನ್ನತನ ದಿಂದ ಮಹಾರಾಜರವರಿಗೆ ತಿಳಿಸಿ ಅವರಿಗೆ ಚಾವಡಿಗೆ ಕರೆಯಿಸಿದನು. ಮತ್ತು ಅವರನ್ನು ಅಲ್ಲಿಯೇ ಕುಳ್ಳಿರಿಸಿದನು. ಅಂತರಂಗದ ಕುರುಹನ್ನರಿತು ಮಹಾರಾಜರು ನಗಹತ್ತಿದರು. ಕೆಲಕಾಲ ಕಳೆದಮೇಲೆ ಅವರನ್ನು ಸಂಗಡ ಕರೆದುಕೊಂಡು, ಪೌಜದಾರನು ರುಡತಿಗಾಗಿ ಅವರ ಮನೆಗೆ ಹೋದನು. 03 ಪ್ರಸ್ತಾವನ ಮಹಾರಾಜರವರ ಮಕ್ಕಳಾದ ಭೀಮಣ್ಣನವರೇ ಆಗ ಮನೆಯ ವ್ಯವಹಾರ ವನ್ನೆಲ್ಲ ನಡೆಯಿಸುತ್ತಿದ್ದ ಮೂಲಕ, ಅವರು ಮನೆಯಲ್ಲಿದ್ದರು. ಝಡತಿ ಗಾಗಿ ಅವರು ನಡುಮನೆಯ ಕೋಣೆಯಲ್ಲಿ ಹೋದಾಗ ಫೌಜದಾರರಿಗೆ ಕಳವಿನ ಬಳೆಗಳಂತೂ ದೊರೆಯಲೆ ಇಲ್ಲ. ಇಷ್ಟೇ ಅಲ್ಲದೆ ಬೆಳ್ಳಿಬಂಗಾರಗಳ ಅನೇಕ ಆಭರಣಗಳು, ರೂಪಾಯಿಗಳ ಹಾಗೂ ಬೇರೆ ನಾಣ್ಯಗಳ ರಾಶಿಗಳು ನೆಲದ ಮೇಲೆ ಬಿದ್ದಿರುವದನ್ನು ಅವರು ಕಂಡರು. ಮನೆಯಲ್ಲಿ ಇಷ್ಟ ಸಂಪಳ್ಳವರು ಕುದ ಬಳೆಗಳನ್ನು ಕದಿಯರು. ಅವರ ಬಗೆಗೆ ಸಂದೇಹ ಪಡ. ನಲ್ಲಿ ತನ್ನಿ೦ದ ತಪ್ಪಾಯಿತೆಂದು ತುಂಬ ಅನುತಾಪಪಟ್ಟು ಅವನು ತನ್ನನ್ನು ಕ್ಷಮಿಸಲು ಮಹಾರಾಜರವರನ್ನು ಬಿನ್ನಯಿಸಿದನು ಮಾತಿಗಾಗಿ ಕೋಪವನ್ನೂ ಉದ್ವೇಗವನ್ನೂ ಒಂದಿನಿತೂ ತೋರಗೊಡದೆ ಮಹಾರಾಜರವರು - ನಿಮ್ಮ ಮೂಲಕವೇ ನನ್ನ ಮಗನ ಸಿರಿವಂತಿಕೆಯು ನನ್ನ ಕಣ್ಣಿಗೆ ಬಿದ್ದಿತು ಅದಕ್ಕಾಗಿ ನಾನೇ ನಿಮಗೆ ತುಂಬ ಉಪಕೃತನು ? ಎಂದು ನುಡಿದು, ಮರಳಿ ಫೌಜದಾರನಿಗೆಯೆ ಧನ್ಯವಾದಗಳನ್ನು ಸಲ್ಲಿಸಿದರು. ಪ್ರಪಂಚದ ಭಾರವನ್ನೆಲ್ಲ ಮಗನ ಮೇಲೆ ಹಾಕಿ ಕೇವಲ ಪರಮಾರ್ಥದಲ್ಲಿಯೆ ಮುಳುಗಿದ ಮೂಲಕ, ಮಹಾರಾಜರವರಿಗೆ ಮಗನ ಸಂಪತ್ತು ಎಷ್ಟಿದೆ ಎಂಬುದು ನಿಜವಾಗಿಯೇ ಗೊತ್ತಿರಲಿಲ್ಲ. ಆದ ೪, ಒಮ್ಮೆ ಎಂದಿನಂತೆ ಮಹಾರಾಜರವರು ಭೀಮರಾಯನ ಗುಡಿ ಯಲ್ಲಿಯ ಪಲ್ಲಕ್ಕಿಯ ಓವರಿಯಲ್ಲಿ ಕುಳಿತು, ತಮ್ಮ ಶಿಷ್ಯರಿಗೆ ಪ್ರವಚನ ವನ್ನು ಹೇಳುತ್ತಿದ್ದರು ಪ್ರವಚನವು ಮುಗಿದ ಮೇಲೆ ಶಿಷ್ಯರು ನಿತ್ಯದ ಪದ್ಧತಿಯಂತೆ, ತೆಂಗಿನ ಮೇಲೆ ಕರ್ಪುರವನ್ನು ಹಚ್ಚಿ ಅವರಿಗೆ ಆರತಿಯನ್ನು ಬೆಳಗುತ್ತಿದ್ದರು ಅದನ್ನು ಕಂಡು ಈ ಮೊದಲು ಎರಡನೆಯ ಸಂಗತಿಯಲ್ಲಿ ಉಲ್ಲೇಖಿಸಲಾದ ಗೌಡತಿಯು ತುಂಬ ಕೋಪಗೊಂಡು ಮಹಾರಾಜರವ ರನ್ನು ಕುರಿತು, "ಎಲೈ ಮುದಭಾರಿಗೇ ! ಪ್ರತ್ಯಕ್ಷ ಭೀಮರಾಯನೆದುರು, ಆತನನ್ನು ಬಿಟ್ಟು ಜನರು ನಿನ್ನೆ ದುರು ತಂಗನ್ನಿಡುವರು ಮತ್ತು ನಿನಗೆ ಆರತಿಯನ್ನು ಬೆಳಗುವರು. ಇದರ ಬಗೆಗೆ ನಿನಗೆ ನಾಚಿಕೆ ಬರುವದಿಲ್ಲವೇ! ಎಂದು ನಡಿದು, ಕರ್ಪುರ ಸಹಿತವಾಗಿ ಆ ತೆಂಗನ್ನು ಕಾಲಿನಿಂದ ? ' ಅಲ್ಪ-ಚರಿತ್ರೆ ಒದೆದಳು, ಇದನ್ನು ಕಂಡು ಮಹಾರಾಜರವರು ಅತಿಯಾಗಿ ವ್ಯಥೆಗೊಂಡರು. ಅವರು ಗೌಡತಿಯನ್ನು ಕುರಿತು ಅಂದದ್ದು : * ಈ ವರೆಗೆ ನೀನು ನನ್ನ ಶರೀರದ ಅಪಮಾನವನ್ನು ಮಾಡಿದೆ. ಅದನ್ನು ನಾನು ಸಹಿಸಿದೆ. ಇಂದು ನೀನು ದೇವರ ಅಪಮಾನವನ್ನು ಮಾಡಿರುವಿ, ಇರಲಿ ! ನನಗೆ ಮುದಿಭಾರಿಗೆ ಅನ್ನು ವಿಯಾ ! ಏ ಹುರಟ ಭಾರಿಗೆ ! ಇನ್ನು ಈ ಮುದಭಾರಿಗೆಯ ಕೈ ನೋಡು ! ” ಇದಾದ ತರುವಾಯ ಕೆಲ ದಿನಗಳಲ್ಲಿಯೆ, ಅವಳು ಮತ್ತು ಅವಳ ಸೋದರಳಿಯ ಮಲಕಪ್ಪ, ಇವರ ನಡುವೆ ಗೌಡಕಿಯ ಬಗೆಗೆ ನಡೆದ ವ್ಯಾಜ್ಯದ ಪರಿಣಾಮವು ಅವಳಿಗೆ ಪ್ರತಿಕೂಲವಾಗಿ, ಅವಳ ಗೌಡಕಿಯು ಅಳಿದು, ಅದು ಸೋದರಳಿಯ ಮಲಕಪ್ಪನಿಗೆ ದೊರೆಯಿತು. ಬರಬರುತ್ತ ಗೌಡತಿಗೆ ತುಂಬ ದುಃಖದ ಸ್ಥಿತಿಯು ಪ್ರಾಪ್ತವಾದುದು ಆ ಊರಿನವರಿಗೆ ತಿಳಿದ ವಿಷಯವೇ ಇದೆ. ಮುಂದೆ ಸನ್ ೧೯೨೨ ರಲ್ಲಿ ಸ ಪ್ರದಾಯದಲ್ಲಿಯ ಕೆಲ ಹಿರಿಯರು ನಿಂಬರಗಿಗೆ ಯಾತ್ರೆಗಾಗಿ ಹೋದಕಾಲಕ್ಕೆ ಅವರು ಗೌಡತಿಯನ್ನು ಕಂಡಾಗ ಅವಳು " ಇನ್ನೂ ಆ ಮುದುಕನು (ಮಹಾರಾಜ ರವರು ) ನನ್ನನ್ನು ಎಷ್ಟು ಕಾಡುತ್ತಿರುವ ನೋಡಿ !' ಎಂದು ಅವರಿಗೆ ತನ್ನ ದುರವಸ್ಥೆಯನ್ನು ಅರುಹಿದಳು. (8) ಶ್ರೀ ನಿಂಬರಗಿ ಮಹಾರಾಜರವರು ತಮ್ಮ ಕಾಲವನ್ನೆಲ್ಲ ಆತ್ಮಚಿಂತನೆ ಯಲ್ಲಿಯೂ ಶಿಷ್ಯರಿಗೆ ಪರಮಾರ್ಥವನ್ನು ಬೋಧಿಸುವದರಲ್ಲಿಯೂ ಕಳೆಯು ತಿದ್ದರು. ಅವರು ತಮ್ಮ ಪರಮಾರ್ಥವನ್ನು ತುಂಬ ಗುಪ್ತವಾಗಿ ಇರಿಸಿದ್ದರು ತಮ್ಮ ತೀರ ಸಮೀಪದ ಆಪ್ತಸ್ನೇಹಿತರಿಗೂ ತಿಳಿಯದಂತೆ, ಅವರು ತಮ್ಮ ಸಾಧನವನ್ನು ಗುಪ್ತ ರೀತಿಯಿಂದ ಸಾಗಿಸುತ್ತಿದ್ದರು. ಈ ಎಲೆಯ ಮರೆಯಲ್ಲಿಯೆ ಕಾಯಿಯು ಬೆಳೆದು ಹಣ್ಣಾಗಬಲ್ಲದು. ಇಲ್ಲದಿದ್ದರೆ ಹಕ್ಕಿಗಳು ಅದನ್ನು ಕುಕ್ಕಬಹುದು ಅಥವಾ ಜನರು ಕಸಕಿರುವಾಗಲೇ ಅದನ್ನು ಹರಿಯಬಹುದು, ಮೇಲಾಗಿ ಪ್ರಕಟವಾಗಿ ನೇಮವನ್ನು ಮಾಡಿದರೆ ದಂಭ ಅಹಂಕಾರಗಳು ಸೇರುವ ಭಯವು ಬಹಳ, ಅದಕ್ಕಾಗಿ ಗುಪ್ತ ಸಾಧನವೆ ಮೇಲು' ಎಂಬುದ ಅವರ ಹೇಳಿಕೆ, CY ಪ್ರಸ್ತಾವನ ಆತ್ಮಜ್ಞಾನವನ್ನು ಪಡೆಯಲು ಅವರೆಡೆ ಬಂದ ಜಿಜ್ಞಾಸುಗಳಲ್ಲಿ ನಿಜವಾದ ಪಾತ್ರತೆಯು ಕಂಡುಬಂದ ಹೊರತು, ಅವರು ಯಾರನ್ನೂ ಅನು ಗ್ರಹಿಸುತ್ತಿರಲಿಲ್ಲ. ಒಮ್ಮೆ ಅನುಗ್ರಹವು ಕೊಡಲಾಯಿತೆಂದರೆ, ಶಿಷ್ಯರ ಎಲ್ಲ ಹೊಣೆಯನ್ನು ತಾನು ಹೊರಬೇಕಾಗುವದು ಎಂಬುದನ್ನು ಅವರು ಚನ್ನಾಗಿ ಅರಿತಿದ್ದರು. ಅವರ ಕೃಪಾಪ್ರಸಾದದಿಂದ ಶಿಷ್ಯರನೇಕರು ಮಹಾಸಂಕಟ ಗಳಿಂದಲೂ, ದುರ್ಧರ ಬೇನೆಯೊಳಗಿಂದಲೂ ಮುಕ್ತರಾದರು. ರಾಜರವರು ತಮ್ಮ ಮಾರ್ಗವನ್ನು ಗುಪ್ತವಾಗಿ ಇರಿಸಿದ್ದರಿಂದ ಅವರ ಶಿಷ್ಯ ಸಮುದಾಯವು ಪರಿಮಿತವಾದುದು ಇತ್ತು. ಆದುದರಿಂದ ಅವರಲ್ಲಿಯ ಅನೇಕರು ಪರಮಾರ್ಥದ ಉಚ್ಚ ಪದವಿಯನ್ನು ಪಡೆದಿದ್ದರು, ಮಹಾ- ಈ ರೀತಿ * ಪ್ರಪಂಚ ಪರಮಾರ್ಥಗಳಲ್ಲಿ ವಿರೋಧವಿಲ್ಲ. ಪರಮಾತ್ಮನ ಭಕ್ತಿಯಿಂದ ಅಭ್ಯುದಯ ನಿಶ್ರೇಯಸಗಳೆರಡೂ ದೊರೆಯುವವು ಅ೦ದರೆ ಭಕ್ತಿಯಿಂದ ಪ್ರಪಂಚವು ಸುಖಮಯವಾಗುವದಲ್ಲದೆ, ಆತ್ಮಪ್ರಾಪ್ತಿಯ ಆಗುವದು' ಎಂಬುದನ್ನು ತಮ್ಮ ಉದಾಹರಣೆಯಿಂದ ಎಲ್ಲರಿಗೆ ತೋರಿಸಿ, ಸನ್ ೧೨೫ ಚೈತ್ರ ಶುದ್ಧ ೧೨ ಉಪರಾಂತಿಕ ೧೩ ದಿನ ರಾತ್ರಿ ಸುಮಾರು ೧೨ ಗಂಟೆಗೆ, ತಮ್ಮ ವಯಸ್ಸಿನ ೯೫ ನೆಯ ವರುಷ ಅವರು ನಿಂಬರಗಿ ಯಲ್ಲಿ ದೇಹಬಿಟ್ಟರು. ( 8 ) ಶ್ರೀ ಮಹಾರಾಜರವರ ಸಮಾಧಿಯು ಮೊದಲು ಹಳ್ಳದ ಆಚೆಯ ಬದಿಯಲ್ಲಿ, ಗೊರವರ ಒಡೆತನದ ಭೂಮಿಯಲ್ಲಿ ಮಾಡಲಾಗಿತ್ತು. ಮಲಕಪ್ಪನ ಕಡೆಗೆ ಗೌಡಕಿಯ ಕೆಲಸವು ಇರುವ ವರೆಗೆ ಅಂದರೆ ಸನ್ ೧೯೦೦ ಇಸವಿಯ ವರೆಗೆ ಸುಮಾರು ೧೬ ವರುಷ ಅಲ್ಲಿ ಭಕ್ತಿಯು ವ್ಯವಸ್ಥಿತವಾಗಿ ಸಾಗಿತ್ತು. ಮುಂದೆ ಮಲಕಪ್ಪನು ತೀರಿಕೊಂಡ ಮೇಲೆ, ಗೊರವರೊಡನೆ ಒಳಸಂಚು ಮಾಡಿ, ಹಿಂದೆ ಕಾಣಿಸಿದ ಗೌಡತಿಯು, ಮಹಾರಾಜರವರ ಸಮಾಧಿಯ ಮೇಲೆ ಒಡ್ಡನ್ನು ಹಾಕಿಸಿ, ಅದನ್ನು ಮುಚ್ಚಿಸಿಬಿಟ್ಟಳು. ಅವಳು ಯಾರಿಗೂ ಅಲ್ಲಿ ಉತ್ಸವವನ್ನು ಮಾಡತೊಡ ಲೊಲ್ಲಳು. ಭಕ್ತಿಯಲ್ಲಿ ಇದೊಂದು ದೊಡ್ಡ ವಿಘ್ನವೇ ಉಂಟಾಯಿತು, ಅಲ್ಪ-ಚರಿತ್ರೆ 08 ಇದಾದ ಎರಡು ವರುಷಗಳ ತರುವಾಯ, ಶ್ರೀ ಮಹಾರಾಜರವರ ಶಿಷ್ಯರಾದ ಉಮದಿಯ ಶ್ರೀಭಾವುಸಾಹೇಬ ಮಹಾರಾಜರವರು ಸನ್ ೧೯೦೩ ರರಲ್ಲಿ, ನಿಂಬರಗಿಯಿಂದ ೯-೧೦ ಮೈಲು ಅಂತರದಲ್ಲಿದ್ದ ಇಂಚಗಿರಿ ಎಂಬ ಗ್ರಾಮದಲ್ಲಿ ಮಹಾರಾಜರವರ ಹೆಸರಿನಿಂದ ಪಾದುಕೆಗಳನ್ನು ಸ್ಥಾಪಿಸಿ, ಅಲ್ಲಿ ಉತ್ಸವವನ್ನು ಪ್ರಾರಂಭಿಸಿದರು. ಆಮೇಲೆ ನಿಂಬರಗಿಯಲ್ಲಿಯೂ ಸನ್ ೧೯೧೦ ರಲ್ಲಿ ಶ್ರೀ ನಿಂಬರಗಿ ಮಹಾರಾಜರವರ ಶಿಷ್ಯವೃಂದದವರು ಅವರ ಅಸ್ಥಿಗಳನ್ನು, ಮೂಲಸ್ಥಲದಿಂದ ಅವರ ಮೊಮ್ಮಗನಿಂದ ತೆಗೆಯಿಸಿ, ಅವನ್ನು ಹಳ್ಳದ ಈಚೆಯಲ್ಲಿಯ ಈಗಿನ ಸ್ಥಲದಲ್ಲಿ ಇರಿಸಿ, ಅಲ್ಲಿ ಅವರ ಸಮಾಧಿಯನ್ನು ಸ್ಥಾಪಿಸಿದರು. ಈ ಸಮಾಧಿಯ ಮೇಲೆ ಸನ್ ೧೯೨೬-೨೭ ರಲ್ಲಿ ಚಿಕ್ಕದಾದ ಸುಂದರ ಗುಡಿಯೊಂದು ಕಟ್ಟಲಾಯಿತು. ಸನ್ ೧೯೦೯ ರ ಚೈತ್ರಮಾಸದಲ್ಲಿ ಶ್ರೀ ಮಹಾರಾಜರವರ ಸಮಾಧಿಯ ಮೇಲೆ ಲಿಂಗಸ್ಥಾಪನೆ ಯಾಯಿತು. ಮುಂದೆ ಸನ್ ೧೯೩೬ ರರಲ್ಲಿ ಗುಡಿಯೆದುರಿನ ಕಟ್ಟೆಯ ಮೇಲೆ ಮೂರು ಅಂದವಾದ ಕಮಾನುಗಳನ್ನು ಕಟ್ಟಲಾಯಿತು. ಮತ್ತು ಸನ್ ೧೯೪೬ ರರಲ್ಲಿ ಅದರೆದುರು ಒಂದು ಪ್ರಶಸ್ತವಾದ ಸಭಾಮಂಡಪವು ರಚಿಸಲಾಯಿತ್ತು ಈ ಅಂದವಾದ ಹಾಗೂ ರಮಣೀಯವಾದ ಸ್ಥಾನವು ಭಕ್ತಿಯ ಬೆಳವಣಿಗೆಗೆ ಅತ್ಯಂತ ಯೋಗ್ಯವೂ ಉಪಯುಕ್ತವೂ ಆಗಿರುವದು, ಅಲ್ಲಿ ಚೈತ್ರ ಶುದ್ಧ ೯ (ನವಮಿ) ಯಿಂದ ೧೩ (ತ್ರಯೋದಶಿ) ಯ ವರೆಗೆ ಪ್ರತಿವರುಷ ಶ್ರೀ ಮಹಾರಾಜರವರ ಪುಣ್ಯ ತಿಥಿಯ ಮೂಲಕ ಸಪ್ತಾಹವೂ ಉತ್ಸವವೂ ಜರಗುತ್ತಿರುವದು. ಶಿಷ್ಯವರರು ೧, ಶ್ರೀರಘುನಾಥಪ್ರಿಯರು ಇಲ್ಲವೆ ಸಾಧುಬುವಾ ಅವರು ಶ್ರೀ ರಘುನಾಥಪ್ರಿಯರು ಶ್ರೀ ನಿಂಬರಗಿ ಮಹಾರಾಜರವರ ಶಿಷ್ಯರಲ್ಲಿ ಅಗ್ರೇಸರರು, ಅವರಿಗೆ ಸಾಧುಬುವಾ ಎಂದೂ ಕರೆಯುವದುಂಟು, ಅವರು ಪ್ರಸ್ತಾವನೆ ಜನಿಸಿದುದು ಆಂಧ್ರಪ್ರಾಂತದಲ್ಲಿಯ ಒಂದು ಸಿರಿವಂತ ಮನೆತನದಲ್ಲಿ. ಆದರೆ ಬಾಲ್ಯದಲ್ಲಿಯೇ ಅವರು ಬೈರಾಗಿಗಳಾಗಿ ಮನೆಯಿಂದ ಹೊರ- ಬಿದ್ದರು. ಅವರು ಇಡೀ ಭರತಖಂಡದಲ್ಲಿ ಯಾತ್ರೆಯನ್ನು ಮಾಡುತ್ತಿರು ವಾಗ ಈ ತೀರ್ಥ ಪಠ್ಯಟನದಲ್ಲಿ ಅವರೊಮ್ಮೆ ನಿಂಬರಗಿಯ ಹತ್ತಿರದಲ್ಲಿದ್ದ ಸೋನಗಿ ಎಂಬ ಹಳ್ಳಿಯಲ್ಲಿ ಬಂದು ಅಲ್ಲಿಯ ಒಂದು ಗುಡಿಯಲ್ಲಿ ವಾಸಿಸಿ ದರು. ಅವರು ಬರಿ ಲಂಗೋಟಿಯನ್ನು ಉಟ್ಟು ಕೊಂಡು ಅದರ ಮೇಲೊಂದು ಕ್ಯಾವಿಯ ಕಪನಿಯನ್ನು ಹಾಕಿಕೊಳ್ಳುತ್ತಿದ್ದರು. ಸೋನಗಿಯಲ್ಲಿರುವಾಗ ಸಿದ್ಧಿಯ ಬಲದಿಂದ ಅವರು ಜನರ ರೋಗಗಳನ್ನು ನೆಟ್ಟಗೆ ಮಾಡುತ್ತಿದ್ದರು, ಮತ್ತು ವಿಪುಲವಾದ ಅನ್ನ ಸಂತರಣವನ್ನೂ ಮಾಡುತ್ತಿದ್ದರು. ಅವರಿಗೆ ವಾಚಾಸಿದ್ಧಿಯ ಇದ್ದಿತಂತೆ. ಅದರ ಮೂಲಕ ಅವರು ಸುತ್ತುಮುತ್ತಲಿನ ಪ್ರದೇಶದಲ್ಲಿ ಒಳ್ಳೆಯ ಪ್ರಸಿದ್ಧಿಯನ್ನು ಪಡೆದಿದ್ದರು. ಸಗುಣ ಭಕ್ತಿಯೂ, ವ್ರತಾನುಷ್ಠಾನಗಳೂ, ಅನ್ನ ಸಂತರಣವೂ ಇದೇ ಪರಮಾರ್ಥವೆಂಬುದು ವರ ಭಾವನೆ. ಶ್ರೀ ನಿಂಬರಗಿ ಮಹಾರಾಜರವರ ಮಕ್ಕಳಾದ ಭೀಮಣ್ಣ ವರೂ, ಜಿಗಜಿವಣಿಯ ಕರಣಿಕರಾದ ಬಾಪೂದಾದಾ ಅವರೂ, ನಿಂಬರಗಿಯ ಲಕ್ಷ್ಮೀಬಾಯಿ ಅಕ್ಕಾ ಹಾಗೂ ಆತ್ಮಾರಾಮಬುವಾ ಜೈನ ಇತ್ಯಾದಿ ಅವರ ಶಿಷ್ಯರು ಒಮ್ಮೆ ಶ್ರೀ ಮಹಾರಾಜರಿಗೆ ಮೇಲ್ಕಾಣಿಸಿದ ಸಾಧುಬುವಾ ಅವರನ್ನು ಕಾಣಲು ಒತ್ತಾಯಪಡಿಸಿದರು ಆದುದರಿಂದ ಮಹಾರಾಜ ರವರು ಅವರಿಂದ ಕೂಡಿ ಸಾಧುಬುವಾ ಅವರನ್ನು ಕಾಣಲು ಸೋನಗಿಗೆ ಹೋದರು. ಮಹಾರಾಜರವರ ಯೋಗ್ಯತೆಯನ್ನರಿಯದ ಸಾಧುಬುವಾ ಅವರು ಅವರಿಗೆ ಸರಿಯಾದ ಮಯ್ಯಾದೆಯನ್ನು ತೋರಿಸಲಿಲ್ಲ. * ತಾವು ಅನ್ನಸಂತರಣವನ್ನೂ ಅನುಷ್ಠಾನ ಇತ್ಯಾದಿಗಳನ್ನೂ ಏತಕ್ಕಾಗಿ ಮಾಡು ವಿರಿ ? ” ಎಂದು ಮಹಾರಾಜರವರು ಕೇಳಿದ್ದಕ್ಕೆ ಸಾಧುಬುವಾ ಅವರು
- ಇದು ಪುಣ್ಯ ಮಾರವು. ಅದಕ್ಕಾಗಿ ನಾನು ಅವನ್ನು ಮಾಡುವೆನು, ”
ಎಂದು ಉತ್ತರವಿತ್ತರು. ತರುವಾಯ ಮಹಾರಾಜರು ಕೇಳಿದರು, ಪುಣ್ಯವಾರವೆಂಬುದು ಏತರಿಂದ ತಿಳಿಯತಕ್ಕದ್ದು ? ಪುಣ್ಯವು ನಿಮ್ಮ ಕಂಗಳಿಗೆ ಕಾಣುವದೇನು ? ನಿಮ್ಮ ಪುಣ್ಯವು ಅದೆಷ್ಟು ಕೂಡಿರುವದು ? ” ಸಾಧುಬುವಾ ಅವರಿಗೆ ಈ ಪ್ರಶ್ನೆಗಳಿಗೆ ಉತ್ತರಕೊಡಲು ಬರಲಿಲ್ಲ. ಆದರೆ "
- ಇದು ಕೊಂಡರು.
02 ಅವು ಅವರ ಅಂತಃಕರಣವನ್ನು ತಟ್ಟದಿರಲಿಲ್ಲ. ಆದ್ದರಿಂದ ನಿಂಬರಗಿ ಮಹಾರಾಜರವರ ವಿಷಯವಾಗಿ ಅವರ ಸಂಗಡಿಗರಿಂದ ಹೆಚ್ಚಿನ ಸಂಗತಿ ಗಳನ್ನು ಅರಿತುಕೊಳ್ಳಬೇಕೆಂದು ಬಯಸಿ, ಅವರನ್ನು ಒಂದು ದಿನ ಅಲ್ಲಿಯೇ ಬಿಟ್ಟು ಹೋಗಲು ಸಾಧುಬುವಾ ಅವರು ಮಹಾರಾಜರವರನ್ನು ಬಿನ್ನವಿಸಿ ಅವರ ಬಿನ್ನಹವನ್ನು ಮನ್ನಿಸಿ ಮಹಾರಾಜರವರು ತಮ್ಮ ಸಂಗಡಿಗರಿಗೆ ಇರಲು ಹೇಳಿ ಒಬ್ಬರೇ ನಿಂಬರಗಿಗೆ ತಿರುಗಿ ಹೋದರು. ಈ ನಾಲ್ವರಿಂದ ದೊರೆತ ಮಾಹಿತಿಯನ್ನು ಕೇಳಿ, ಶ್ರೀ ನಿಂಬರಗಿ ಮಹಾರಾಜ ರವರ ಬಗೆಗೆಯೂ ಅವರ ಪರಮಾರ್ಥಸಾಧನದ ಬಗೆಗೆಯೂ, ಸಾಧುಬುವಾ ಅವರಲ್ಲಿ ಉತ್ಕಟವಾದ ಕುತೂಹಲವು ಉಂಟಾಯಿತು. ಮತ್ತು ಮಹಾ- ರಾಜರವರ ಜೀವನಕ್ರಮವನ್ನು ಪ್ರತ್ಯಕ್ಷವಾಗಿ ಕಾಣಲು ಅವರು ನಿಶ್ಚಯಿಸಿ ದರು. ಮಹಾರಾಜರವರು ಕುರಿಯ ಹಿಂಡನ್ನು ತೆಗೆದುಕೊಂಡು ಅಡವಿಗೆ ಹೋಗುವರು ಹಾಗೂ ಅಲ್ಲಿ ಸಾಧನವನ್ನು ಮಾಡುವರೆಂಬ ಸಂಗತಿಯು ಅವರಿಗೆ ಈ ಮೊದಲೇ ತಿಳಿದೆಯೆ ಇದ್ದಿತು. ಒಂದು ದಿನ ನಸುಕಿನಲ್ಲಿ ಮಹಾರಾಜರವರು ಅಂದು ಸಾಧನಕ್ಕೆ ತೆರಳಿದ ಪ್ರದೇಶದಲ್ಲಿ ಸಾಧುಬುವಾ ಅವರು ಹೋದರು ಮಹಾರಾಜರವರು ಪ್ರತಿನಿತ್ಯದಂತೆ ಬೆಳಿಗ್ಗೆ ಸಾಧನಕ್ಕಾಗಿ ಕುಳಿತ ಮೇಲೆ ಸಾಧುಬುವಾ ಅವರು ಆ ಸ್ಥಳದ ಸಮೀಪದಲ್ಲಿದ್ದ ಬೇವಿನ ಮರವೊಂದನ್ನು ಹತ್ತಿ ಅಲ್ಲಿಯೇ ಕುಳಿತುಕೊಂಡರು. ಮಹಾರಾಜರವರು ಸಾಯಂಕಾಲದ ವರೆಗೆ ಏಳಲಿಲ್ಲ. ಆದ್ದರಿಂದ ಸಾಧುಬುವಾ ಅವರಿಗೂ ಅಲ್ಲಿಯವರೆಗೆ ಮರದ ಮೇಲೆಯೇ ಕುಳಿತು ಇರಬೇಕಾಯಿತು. ಸಾಯಂಕಾಲ ದಲ್ಲಿ ಮಹಾರಾಜರವರು ಎದ್ದು ಮನೆಗೆ ಹೋಗಲು ಹೊರಟಾಗ ಮರದಿಂದ ಕೆಳಗಿಳಿದು, ಸಾಧುಬುವಾ ಅವರು ಅವರನ್ನು ನಮಸ್ಕರಿಸಿದರು. ' ನೀವು ಈವರೆಗೆ ಎಲ್ಲಿದ್ದೀರಿ ? ' ಎಂದು ಮಹಾರಾಜರವರು ಕೇಳಲು, ಈ ಮರದ ಮೇಲೆ ಕುಳಿತಿದ್ದೆ ” ಎಂದವರು ಉತ್ತರವಿತ್ತರು. ( ಈವರೆಗೆ ಊಟವಿಲ್ಲ ದೆಯೆ ಇದ್ದಿರಾ, ಎಂದು ಮಹಾರಾಜರವರು ಕೇಳಲಾಗಿ, ' ನಾನುಬೇವಿನ ಎಲೆಗಳನ್ನು ತಿಂದೆ. ಅವನ್ನು ತಿಂದು ಇರುವ ರೂಢಿಯು ನನಗುಂಟು > ಎಂದು ಸಾಧುಬುವಾ ಅವರು ಉತ್ತರಕೊಟ್ಟರು. ಅದಕ್ಕೆ « ಬೇವಿನ ಎಲೆಯನ್ನು ತಿನ್ನಲು ದೇವರು ದೊರೆಯುವಂತಿದ್ದರೆ, ಅವನು ಮೊದಲು 3 nes ಪ್ರಸ್ತಾವನೆ ಒ೦ಟಿಗೆ ದೊರೆಯಬಹುದಾಗಿತ್ತು. ಎಂದು ಮಹಾರಾಜರವರು ನಕ್ಕು ನುಡಿದರು, ಇದನ್ನು ಕೇಳಿ ಈ ಮೊದಲೇ ಮೃದುವಾದ ಸಾಧುಬುವಾ ಅವರ ಅಂತಃಕರಣವು ಹೆಚ್ಚಾಗಿಯೇ ಕರಗಿತು. ಮತ್ತು ಅವರು ಮಹಾರಾಜರವರ ಪಾದಗಳಿಗೆ ಎರಗಿ, “ ನನ್ನನ್ನು ಉದ್ದರಿಸಬೇಕು' ಎಂದು ಸದ್ಗದಿತರಾಗಿ ಅವರನ್ನು ಪ್ರಾರ್ಥಿಸಿದರು. ಮಹಾರಾಜರವರು ಅವರ ಯೋಗ್ಯತೆಯನ್ನು ಅರಿತು ಅವರನ್ನು ಅನುಗ್ರಹಿಸಿದರು. ಕೆಲದಿನ ನಿಂಬರಗಿಯಲ್ಲಿ ನಿಂತು ತರುವಾಯ ಗುರುವಾಜ್ಞೆಯ ಮೇರೆಗೆ ಅವರು ಉಮದಿಗೆ ಹೋದರು. ಅಲ್ಲಿ ಅವರು ಬಾಳವ್ವಾ ಬಗಲಿ ಇವರ ಮನೆಯಲ್ಲಿಯಾಗಲಿ ಇಲ್ಲವೆ ಶ್ರೀ ಹನು ಮಂತ ದೇವರ ಗುಡಿಯ ಓವರಿಯಲ್ಲಿಯಾಗಲಿ ಇರಹತ್ತಿದರು. ಈ ರೀತಿ ಅಲ್ಲಿ ಅವರು ಹನ್ನೆರಡು ವರುಷ ಸಾಧನಮಾಡಿದರು. ದೇಹವನ್ನು ದುಡಿಸಿ, ಕಡುತರ ಸಾಧನವನ್ನು ಮಾಡಿ ಅವರು ಪರಮಾರ್ಥದಲ್ಲಿ ಒಳ್ಳೆಯ ಮೇಲಿನ ಸ್ಥಾನವನ್ನು ಪಡೆದರು. ತರುವಾಯ ಗುರುಗಳು ಆಜ್ಞಾಪಿಸಿದ ಮೂಲಕ ಅವರು ಪರಮಾರ್ಥದ ಪ್ರಸಾರವನ್ನು ಮಾಡಿದರು. ಆವರ ಗುರುಭಕ್ತಿಯು ಉತ್ಕಟವಾದುದಿತ್ತು. ಮಹಾರಾಜರವರನ್ನು ಕಾಣಲು ನಿಂಬರಗಿಗೆ ಹೋದಾಗ ಊರ ಅಗಸೆಯ ಹತ್ತಿರ ಬಂದ ಕೂಡಲೆ ಅವರು ' ರಾಜಾಧಿರಾಜ ಸದ್ದು ರುನಾಥ ಮಹಾರಾಜ ಕಿ ಜಯ” ಎಂದು ದೊಡ್ಡ ಧ್ವನಿಯಿಂದ ಗರ್ಜಿಸುತ್ತಿದ್ದರು. ಅದೇ ಮೇರೆಗೆ ಮಹಾರಾಜರವರ ಮನೆಯ ಬಳಿಯಲ್ಲಿ ಹೋದೊಡನೆಯೆ ಮರಳಿ ಅದೇ ಬಗೆಯಾಗಿ ಜಯಜಯಕಾರವನ್ನು ಮಾಡಿ ಮನೆಯಲ್ಲಿಯ ಒಳಗಿನ ಕಟ್ಟೆಯ ಮೇಲೆ ಬಹಳ ಕರ್ಪುರವನ್ನು ಹಚ್ಚು ತ್ತಿದ್ದರು ಆಗ ಮಹಾರಾಜರವರು “ ಅಯ್ಯ ! ಇಷ್ಟು ಅಬ್ಬರವನ್ನು ಮಾಡಬಾರದು ! ಜಯಜಯಕಾರವನ್ನು ಕೆಳದನಿಯಲ್ಲಿ ಮಾಡಬೇಕು, ಸ್ವಲ್ಪ ಕರ್ಪುರವನ್ನು ಹಚ್ಚಬೇಕಯ್ಯ ! ನಿನ್ನ ಕರ್ಪುರದ ಉರಿಯಿಂದ ನನ್ನ ಬಡವನ ಮನೆಯ ಸುಡಬಹುದು, ಬಹಳ ಕರ್ಪುರ ಹಚ್ಚಿ ದೇವರು ದೊರೆಯುತ್ತಿದ್ದರೆ ಸಿರಿವಂತರು ಮಣಗಟ್ಟಲೆ ಕರ್ಪುರವನ್ನು ಹಚ್ಚಬಹು ದಲ್ಲಾ ! ' ಎಂದು ಅವರಿಗೆ ಹೇಳುತ್ತಿದ್ದರು. ಪರಮಾರ್ಥಪ್ರಸಾರದ ಪ್ರವಾಸದಲ್ಲಿ ಸಾಧುಬುವಾ ಅವರು, ವಿಟಿ, ವಿಜಾಪೂರ, ತಿಕೋಟೆ, ಜಮಖಂಡಿ, ಚಿಮ್ಮಡ ಇತ್ಯಾದಿ ಊರುಗಳಿಗೆ ಶಿಷ್ಯವರರು ಹೋಗುತ್ತಿದ್ದರು. ಈ ಬಗೆಯಾಗಿ ಅವರೊಮ್ಮೆ ಚಿಮ್ಮಡ ಗ್ರಾಮಕ್ಕೆ ಹೋದಾಗ ಅಲ್ಲಿ ಅಜರಿಗೆ ಜಡ್ಡಾಯಿತು. ಅವರ ಪ್ರಕೃತಿಯು ಚಿಂತಾಜನಕ ವಾದಾಗ ಅಲ್ಲಿಯ ಅವರ ಶಿಷ್ಯರು, “ ತಾವು ಇನ್ನು ಕೆಲದಿನ ಇರಬೇಕು. ಭಕ್ತರನ್ನು ಬಿಟ್ಟು ಹೋಗಬಾರದು. ತಾವು ಹೋದೊಡನೆ ಭಕ್ತಿಯ ಆಧಾರವೇ ಅಲ್ಲದಂತಾಗಬಹುದು ” ಏಂದು ಆಗ್ರಹದಿಂದ ಅವರನ್ನು ಪ್ರಾರ್ಥಿಸಿದರು, ಶಿಷ್ಯರ ಬಯಕೆಯ ಮೇರೆಗೆ ಅವರು ಮುಂದೆ ಇನ್ನೊ೦ದು ವರುಷ ಇದ್ದರು. ಮರುವರುಷ ಮರಳಿ ಚಿಮ್ಮಡಕ್ಕೆ ತೆರಳಿದಾಗ ಅಲ್ಲಿಯೆ ಅವರು ದೇಹವನ್ನು ಬಿಟ್ಟರು. ಚಿಮ್ಮಡದಲ್ಲಿ ಅವರ ಶಿಷ್ಯರಾದ ರಾಮಭಾವು ಮಹಾರಾಜ ಎರಗಟ್ಟಕರ ಅವರು ಬಾವಿಯಲ್ಲಿ ಅವರ ಹೆಸರಿನಿಂದ ಗುಡಿ ಯೊಂದನ್ನು ಕಟ್ಟಿಸಿರುವರು, ೨, ಶ್ರೀಭಾವುಸಾಹೇಬ ಮಹಾರಾಜರವರು ಶ್ರೀಸಾಧು ಮಹಾರಾಜರವರು ಸುಮಾರು ಹನ್ನೆರಡು ವರುಷ ಉಮದಿಯಲ್ಲಿದ್ದರೆಂಬುದನ್ನು ಹಿಂದೆ ಹೇಳಲಾಗಿದೆಯಷ್ಟೆ! ಅಲ್ಲಿ ದೇಶಪಾಂಡೆ ಯವರ ದೊಡ್ಡ ಮನೆತನವಿರುವದು. ಅದರಲ್ಲಿಯ ನಾನಾಸಾಹೇಬ ಹಾಗೂ ದಾಜಿಬಾ ಎಂಬ ಬಂಧುಗಳು ಶ್ರೀನಿಂಬರಗಿ ಮಹಾರಾಜರವರಿಂದ ಅನುಗ್ರಹವನ್ನು ಪಡೆದಿದ್ದರು. ಅವರ ಗುರುನಿಷ್ಠೆ ಯು ಅಪ್ರತಿಮವಾದು ದಿತ್ತು. ನಾನಾಸಾಹೇಬರವರು ಗಂಭೀರ ಸ್ವಭಾದವರೂ, ದೂರದೃಷ್ಟಿ ಯುಳ್ಳವರೂ ಹಾಗೂ ದಾಜಿಬಾ ಅವರು ಸರಲ ಸ್ವಭಾವದರೂ ಇದ್ದರು. ಅವರ ತಮ್ಮಂದಿರಾದ ಭಾವುಸಾಹೇಬರವರು ತಮ್ಮ ಅಣ್ಣಂದಿರ ನಿರ್ಗುಣ ಉಪಾಸನೆಯನ್ನು ನಂಬುತ್ತಿರಲಿಲ್ಲ. ಅವರು ಸಗುಣೋಪಾಸಕರಿದ್ದು ಉಮದಿಯ ಹನುಮಂತ ದೇವರನ್ನು ಪ್ರತಿನಿತ್ಯ ತಪ್ಪದೆ ಪೂಜೆಸುತ್ತಿದ್ದರು. ಶ್ರೀ ಸಾಧುಬುವಾ ಅವರು ಹನುಮಂತ ದೇವರ ಗುಡಿಯಲ್ಲಿಯ ಓವರಿಯಲ್ಲಿ ರುವಾಗ ಅವರು ಭಾವುರಾಯರನ್ನು ಅವರ ಸಗುಣೋಪಾಸನೆಗಾಗಿ ಅಭಿನಂದಿಸುತ್ತಿದ್ದರು. * ಭಾವುರಾಯಾ ! ಎಂಥ ಪುಣ್ಯವಂತನಯ್ಯ ನೀನು ! ಎಂಥ ಶ್ರೇಷ್ಠ ಭಕ್ತಿಯಯ್ಯ ನಿನ್ನದು ! ” ಎಂದು ಹೊಗಳಿ ಸಾಧುಬುವಾ ಅವರು ಅವರನ್ನು ನಮಸ್ಕರಿಸುತ್ತಲು ಇದ್ದರು. ಇದರ 30 ಪ್ರಸ್ತಾವನ ಮೂಲಕ ಭಾವುಸಾಹೇಬರವರ ಮನಸ್ಸು ಸಹಜವಾಗಿ ಅವರೆಡೆಗೆ ಸೆಳೆಯ ಲಾಯಿತು. * ಮತ್ತು * ಬಿದ್ದೂ ಗೆಲ್ಲಬೇಕು' ಎಂಬ ವಚನದಂತೆ ಅವರು ಭಾವುಸಾಹೇಬರವರ ಮನಸ್ಸನ್ನು ನಿಜವಾದ ಪರಮಾರ್ಥದೆಡೆಗೆ ತಿರುಗಿಸಿ, ಅವರನ್ನು ಶ್ರೀ ನಿಂಬರಗಿ ಮಹಾರಾಜರೆಡೆಗೆ ಒಯ್ದರು. ಮಹಾರಾಜರವರು ಸಾಧುಬುವಾ ಅವರ ಮುಖಾಂತರವಾಗಿಯೆ ಅವರನ್ನು ಅನುಗ್ರಹಿಸಿದರು. ಇದನ್ನು ಕುರಿತು ಮುಂದೆ ಭಾವುಸಾಹೇಬರವರು “ ಸಾಧುಬುವಾ ಅವರು ನನ್ನ ಪಾದಗಳಿಗೆರಗಿ ನನ್ನನ್ನು ನಿಜವಾದ ಪರಮಾರ್ಥ ಮಾರ್ಗಕ್ಕೆ ಹಚ್ಚಿ ದರು, ” ಎಂದು ಕಂಬನಿಗಳನ್ನು ಸುರಿಸುತ್ತ ಹೇಳುತ್ತಿದ್ದರು. ಭಾವುಸಾಹೇಬ ರವರಿಗೆ ವಯಸ್ಸಿನ ನಲವತ್ತೆರಡು ವರುಷಗಳ ವರೆಗೆ ಸದ್ಗುರುಗಳ ಕೃಪೆಯೂ ಸಾನ್ನಿಧ್ಯವೂ ಲಭಿಸಿತು. ಈ ಸಮಯದಲ್ಲಿ ಆಸ್ತೇಷ್ಟರ ನಿಂದೆಯನ್ನು ಲೆಕ್ಕಿಸದೆ, ದೇಹವನ್ನು ಸವೆಯಿಸಿ, ಅವರು ಒಳ್ಳೆಯ ಕಡುತರವಾದ ಸಾಧನವನ್ನು ಮಾಡಿದರು, ಅವರು ಅತ್ಯಂತ ನಿಸ್ಪೃಹರೂ, ನೇಮವಂತರೂ ಸುನೋನಿಗ್ರಹಿಗಳೂ ಇದ್ದರು. ಅವರ ಗುರುಭಕ್ತಿಯು ನಿಸ್ಸಿಮವಾದು ತು. ಪರಮಾರ್ಥದಲ್ಲಿಯ ಅತ್ಯುಚ್ಚ ಪದವಿಯನ್ನು ಪಡೆದು ಅವರು ಸದ್ಗುರುಗಳ ಆಜ್ಞೆಯ ಮೇರೆಗೆ ಪರಮಾರ್ಥಪ್ರಸಾರವನ್ನು ನೆರವೇರಿಸಿ ದರು. ಇಸ್ವಿ ಸನ್ ೧೯೦೩ ರಲ್ಲಿ ಅವರು ಇಂಚಗಿರಿಯಲ್ಲಿ ತಮ್ಮ ಗುರುಗಳ ಹೆಸರಿನಿಂದ ಗುಡಿಯನ್ನು ಕಟ್ಟಿಸಿದರೆಂಬುದನ್ನು ಈ ಮೊದಲು ಅರುಹ ಲಾಗಿದೆಯಷ್ಟೆ ! ೩ ಶ್ರೀರಾಮಭಾವು ಮಹಾರಾಜ ಎರಗಟ್ಟಿ ಅವರು, ಇವರು ಎರಗಟ್ಟಿಯ ನಿವಾಸಿಗಳು. ಅವರು ಮೊದಲು ಏಟೆ ಮಾಯಣಿ ಇಲ್ಲಿಯ ಕೋರ್ಟಿನಲ್ಲಿ ಕೆಲಸಮಾಡಿದರು. ಮುಂದೆ ಅವರು ಜತ್ತಿಯಲ್ಲಿ ಕೆಲಸ ಹಿಡಿದರು. ಉಮದಿ ಗ್ರಾಮವು ಜತ್ತಿ ತಾಲೂಕಿನಲ್ಲಿದೆ. ರಾಮಭಾವು ಅವರು ತಮ್ಮ ಕೆಲಸಕ್ಕಾಗಿ ಉಮದಿಗೆ ಮೇಲಿಂದ ಮೇಲೆ ಹೋಗುತ್ತಿದ್ದರು. ಆಗ ಅವರು ಅಲ್ಲಿಯ ದೇಶಪಾಂಡೆಯವರ ಮನೆಯಲ್ಲಿ ಉಳಿದ,ಕೊಳ್ಳುತ್ತಿದ್ದರು. ಮೂವರು ದೇಶಪಾಂಡೆ ಬಂಧುಗಳು ಶ್ರೀ ನಿಂಬರಗಿ ಮಹಾರಾಜರವರ ಸಂಪ್ರದಾಯದವರು. ಅವರ ಮೂಲಕ ರಾಮಭಾವು ಶಿಷ್ಯವರು UG ಅವರಿಗೆ ಸಾಧುಬುವಾ ಅವರ ಸಂದರ್ಶನವು ಒದಗಿ ಬಂದು ಅವರ ಮನಸ್ಸಿ- ನಲ್ಲಿ ಪರಮಾರ್ಥದ ಬಗೆಗೆ ಜಿಜ್ಞಾಸೆಯು ಉದ್ಭವಿಸಿತು. ಮುಂದೆ ಸಾಧು- ಬುವಾ ಅವರು ಅವರನ್ನು ಶ್ರೀನಿಂಬರಗಿ ಮಹಾರಾಜರೆಡೆಗೆ ಕರೆದೊಯ್ದರು. ಮಹಾರಾಜರವರು ಅವರನ್ನು ಸಾಧುಬುವಾ ಅವರ ಮುಖಾಂತರ ಅನುಗ್ರಹಿ ಸಿದರು. ಅನುಗ್ರಹವಾದ ತರುವಾಯ ಎಷ್ಟೋ ವರುಷ ಅವರು ನಿಷ್ಠೆಯಿಂದ ಸಾಧನೆ ಮಾಡಿದರು, ಪ್ರತಿವರುಷ ಪೌಷಮಾಸದಲ್ಲಿ ಅವರು ನಿಂಬರಗಿಗೆ ಗುರುಗಳ ದರ್ಶನಕ್ಕಾಗಿ ಹೋಗುವ ಪರಂಪರೆಯನ್ನು ಬೆಳೆಸಿದರು. ಮತ್ತು ಅದನ್ನವರು ಶ್ರೀಮಹಾರಾಜರವರು ಇರುವ ವರೆಗೆ ನಡೆಯಿಸಿದರು. ಸಾಧುಬುವಾ ಅವರು ಚಿಮ್ಮಡದಲ್ಲಿ ಕಾಲವಾದ ಮೇಲೆ ರಾಮಭಾವು ಮಹಾರಾಜರವರು ಚಿಮ್ಮಡದಲ್ಲಿ ವಾಸಿಸಿದರು, ಮತ್ತು ಅಲ್ಲಿ ಅವರು ಶ್ರೀ ಸಾಧುಮಹಾರಾಜರವರ ಗುಡಿಯನ್ನು ಕಟ್ಟಿ ಗುರುಗಳ ಆಜ್ಞೆಯಿಂದ ಹಲವು ವರುಷ ಪರಮಾರ್ಥ ಪ್ರಸಾರವನ್ನು ಮಾಡಿದರು. ೪. ಸಾವಳಸಂಗದ ಭಾವುಕಾಕಾ ಅವರು. ಇವರು ಸಾವಳಸಂಗ ಊರವರು, ಭವ್ಯ ಶರೀರವುಳ್ಳವರು, ಆಜಾನು ಭಾಹುಗಳು. ಅವರ ಧ್ವನಿಯು ದೊಡ್ಡದೂ ಮಧುರವಾದದೂ ಇತ್ತು. ಅವರು ಪದಗಳನ್ನು ಬಲು ಸರಸವಾಗಿ ಹೇಳುತ್ತಿದ್ದರು. "
- ಸಗುಣ ರೂಪ
ನಯನಿ, ನಯನಿ, ಆಧೀ ದಾವಾ ” ಎಂಬ ಮರಾಠಿ ಪದವೂ ಕಾಲು ಕರ್ಮವ ಕಾಲಿಲೆ ಒಡೆದವ ಕತ್ತಲೆಗಂಜುವನೇ ? ” ಎಂಬ ಕನ್ನಡ ಪದವೂ ಅವರ ಪ್ರೀತಿಯ ಪದಗಳು, ಅವನ್ನವರು ನಿಂಬರಗಿಯಲ್ಲಿಯ ಭೀಮರಾಯನ ಗುಡಿಯಲ್ಲಿ ಹಾಡತೊಡಗಿದರೆಂದರೆ ಅಲ್ಲಿಂದ ಎರಡು ಫರ್ಲಾಂಗು ಅಂತರ ದಲ್ಲಿದ್ದ ನಿಂಬರಗಿ ಗ್ರಾಮದಲ್ಲಿ ಅದು ಸಹಜವಾಗಿ ಕೇಳಬರುತ್ತಿತ್ತು. ಅವರ ಗುರುಭಕ್ತಿಯು ದೃಢವಾದುದಿದ್ದು ಪಾರಮಾರ್ಥಿಕ ಯೋಗ್ಯತೆಯ ದೊಡ್ಡ ದಿತ್ತು. ಅವರ ಸಮಾಧಿಯು ತಿಕೋಟೆಯಲ್ಲುಂಟು ಉಮದಿ ವಿರಕ್ತಪ್ಪನವರು, ಇವರು ಶ್ರೀ ಮಹಾರಾಜರವರ ಒಳ್ಳೆಯ ಶಿಷ್ಯರಲ್ಲಿ ಒಬ್ಬರು. ಶ್ರೀ ಮಹಾರಾಜರವರ ಪುಣ್ಯತಿಥಿಯ ಉತ್ಸವವು ಚೈತ್ರಮಾಸದಲ್ಲಿ ನಿಂಬರಗಿ ೨೨ ಪ್ರಸ್ತಾವನ ಯಲ್ಲಿ ಜರಗುತ್ತಿರುವವರೆಗೆ ಅವರು ಅದಕ್ಕೆ ಬರಲು ಎಂದೂ ತಪ್ಪುತ್ತಿರಲಿಲ್ಲ. ಅವರು ಇಂಚಗಿರಿಯ ಬಳಿಯಲ್ಲಿದ್ದ ಕನ್ನೂರ ಗ್ರಾಮದಲ್ಲಿ ಕಾಲವಾದರು, ಅಲ್ಲಿಯೇ ಅವರ ಸಮಾಧಿಯಿದೆ. ಅವರ ಶಿಷ್ಯರು ಅಲ್ಲಿ ಒಂದು ಮಠವನ್ನು ಸ್ಥಾಪಿಸಿರುವರು. ೬ ಜಿಗಜಿವಣಿ ಬಾಪೂದಾದಾ ಅವರು. ಇವರು ಜಿಗಜಿವಣಿಯ ಕರಣಿಕರು, ಶ್ರೀನಿಂಬರಗಿ ಮಹಾರಾಜರವರು ಅವರನ್ನು ಅನುಗ್ರಹಿಸಿದ ತರುವಾಯ, ಅವರು ತಮ್ಮ ಕುಟುಂಬದವರೊಡನೆ ನಿಂಬರಗಿಯಲ್ಲಿ ಶ್ರೀಮಹಾರಾಜರವರ ಬಳಿಯಲ್ಲಿ 'ದಾಸಬೋಧ' ವನ್ನು ಓದುತ್ತಿದ್ದರು. ಶ್ರೀಮಹಾರಾಜರವರೇ ಅದರ ಅರ್ಥವನ್ನು ಹೇಳುತ್ತಿದ್ದರು. ಇವರ ತಮ್ಮಂದಿರ ಮಕ್ಕಳಾದ ಶ್ರೀಅಂಬುರಾವಬಾಬಾ ಅವರು, ಚಿಕ್ಕಂ ದಿನಲ್ಲಿ ಶಿಕ್ಷಣಕ್ಕಾಗಿ ಅವರ ಹತ್ತಿರ ಇದ್ದಾಗ ಶ್ರೀಬಾಬಾ ಅವರು ಶ್ರೀ ನಿಂಬರಗಿ ಮಹಾರಾಜರವರನ್ನು ಕಂಡಿದ್ದರು, ಆ ಸಮಯದಲ್ಲಿ ಾಲೆಯಿಂದ ಮನೆಗೆ ಬರುವಾಗ ಅವರಿಗೆ ಒಮ್ಮೊಮ್ಮೆ ಕಂಬಳಿಯ ೦ಟಿನಲ್ಲಿ ಕಟ್ಟಿದ ಸಕ್ಕರೆಯ ಪ್ರಸಾದವೂ ಶ್ರೀಮಹಾರಾಜರವರಿಂದ ದೊರೆಯುತ್ತಿತ್ತು. ಆದುದರಿಂದ ಶ್ರೀಬಾಬಾ ಅವರು ಅವರಿಗೆ “ ಸಕ್ರೀ ಮುತ್ಯಾ' ಎ೦ದು ಕರೆಯುತ್ತಿದ್ದರು. ಮುಂದೆ ಅವರಿಗೆ ಶ್ರೀಉಮದೀಕರ ಮಹಾರಾಜರವರು ಸಾವಳಸಂಗಕಾಕಾ ಅವರಿಂದ ಅನುಗ್ರಹವನ್ನು ಕೊಡಿಸಿ ದರು. ಮತ್ತು ಅವರ ನೆರವಿನಿಂದಲೆ ಮುಂದೆ ಶ್ರೀಇಂಚಗಿರಿಯಲ್ಲಿ ಮಠವನ್ನು ಸ್ಥಾಪಿಸಿ ಪರಮಾರ್ಥವನ್ನು ಬೆಳೆಯಿಸಿದರು, ೭. ಮಾಶಾಳ ಮಲಕಪ್ಪನವರು, ಇವರು ಉಮದಿಯವರು, ಶ್ರೀಮಹಾರಾಜರವರ ಭಾವಿಕರಾದ ಏಕನಿಷ್ಠ ಶಿಷ್ಯರು. ಅವರು ಎಷ್ಟೋ ವರುಷ ಉಮದಿಯ ಶ್ರೀ ಭಾವುಸಾಹೇಬ ಮಹಾರಾಜರೊಡನೆ, ಮನೆಯಲ್ಲಿಯೂ ಗುಡ್ಡದಲ್ಲಿಯೇ ಸಾಧನವನ್ನು ಮಾಡಿದರು. ಅವರೊಡನೆ ಮಲಕಪ್ಪನವರು ಪ್ರತಿವರುಷ ಚಿಮ್ಮಡಕ್ಕೆ ಹೋಗುವ ಪರಿಪಾಠವನ್ನು ಇಟ್ಟು ಕೊಂಡಿದ್ದರು. ಶಿಷ್ಯವರರು ೮ ಆವಟೆ ಗುರುಲಿಂಗಪ್ಪನವರು, 22 ಇವರೂ ಉಮದಿಯ ನಿವಾಸಿಗಳು, ಶ್ರೀ ಮಹಾರಾಜರ ನಿಷ್ಠೆಯುಳ್ಳ ದಕ್ಷತೆಯುಳ್ಳ ಶಿಷ್ಯರವರ , ನಿಂಬರಗಿಯಲ್ಲಿಯ ಚೈತ್ರ ಹಾಗೂ ಮಾರ್ಗ- ಶೀರ್ಷ ತಿಂಗಳಲ್ಲಿಯ ಉತ್ಸವದಲ್ಲಿ ಇವರು ಕೋಠಿಯ ವ್ಯವಸ್ಥೆಯನ್ನು ಒಳ್ಳೆಯ ರೀತಿಯಿಂದ ನೆರವೇರಿಸುತ್ತಿದ್ದರು, ೯, ಸಾತಲಗಾವಿಯ ಪಾಟೀಲ ದಾಜೀಬಾ ಆವರು ಇವರು ಶ್ರೀಮಹಾರಾಜರವರ ಕಟ್ಟುಳ್ಳ ಹಟವುಳ್ಳ ಶಿಷ್ಯರು, ಶ್ರೀ ಮಹಾರಾಜರವರು ಪ್ರತಿನಿತ್ಯ ಭೀಮರಾಯನ ದೇವಾಲಯದಲ್ಲಿ ಪುರಾಣ ವನ್ನು ( ಪೋಥಿಯನ್ನು ) ಹೇಳುತ್ತಿದ್ದರೆಂಬುದನ್ನು ಹಿಂದೆ ಕಾಣಿಸಿದೆ ಯಷ್ಟೆ. ಗುಡಿಯಲ್ಲಿಯ ನಗಾರಖಾನೆಯಲ್ಲಿ ಒಂದು ದಿನ ಬೆಳಿಗ್ಗೆ ಪುರಾಣವು ನಡೆದಿರಲು, ಶೋತೃವೃಂದದಲ್ಲಿ ಪಾಟೀಲ ದಾಜಿಬಾ ಅವರು ಕುಳಿತಿದ್ದರು. ಆಗ ಕೆಲ ಪ್ರಸಂಗವನ್ನು ಕುರಿತು ಶ್ರೀ ಮಹಾರಾಜರವರು, ' ಪರಮಾತ್ಮನ ಧ್ಯಾನ ಮಾಡಲಾಗಿ ಅವನು ಭಕ್ತರ ಯೋಗಕ್ಷೇಮವನ್ನು ಎಲ್ಲ ಬಗೆಯಾಗಿ ನಡೆಸುವನು ' ಎಂದು ಹೇಳಿದರು ಇದನ್ನು ಕೇಳಿದಕೂಡಲೇ ಈ ಮಾತಿನ ಸತ್ಯತೆಯನ್ನು ನೋಡಲು ದಾಜಿಬಾ ಅವರು ನಿಶ್ಚಯಿಸಿದರು. ಮತ್ತು ಅವರು ಮಹಾರಾಜರಿಗೆ ಅಂದರು, “ ಪರಮಾತ್ಮನ ಧ್ಯಾನ ಮಾಡಲಾಗಿ ಅವನು ಭಕ್ತರ ಯೋಗಕ್ಷೇಮನ್ನು ನಡೆಸುತ್ತಿದ್ದರೆ, ನಾವಿಬ್ಬರು ಇಲ್ಲಿಯೆ ಧ್ಯಾನಕ್ಕೆ ಕುಳಿತುಕೊಳ್ಳುವಾ! ದೇವರು ನಮ್ಮ ಹೊಟ್ಟೆಗೆ ಅನ್ನ ನೀಡು ವನೋ ಹೇಗೆಂಬುದನ್ನು ನೋಡುವಾ' ಶ್ರೀ ಮಹಾರಾಜರು - ಅಲ್ಲಯ್ಯ ! ಹೀಗೆ ಹಟಹಿಡಿದು ದೇವರನ್ನು ಪರೀಕ್ಷಿಸಬಾರದು' ಎಂದು ಹೇಳಿ ಅವರನ್ನು ಸಮಾಧಾನಗೊಳಿಸಲು ಎಷ್ಟು ಯತ್ನಿಸಿದರೂ ಅವರು ಕೇಳಿ- ಇರು, ಆಗ ' ಆಗಲಿ ! ನಾವಿಬ್ಬರೂ ಇಲ್ಲಿಯೆ ಧ್ಯಾನಕ್ಕೆ ಕುಳಿತುಕೊಳ್ಳುವಾ! ಮತ್ತು ಏನಾಗುವದೆಂಬುದನ್ನು ನೋಡುವಾ ' ಎಂದು ಹೇಳಿ ಪುರಾಣ ಮುಗಿದ ಮೇಲೆ ಆತನೊಡನೆ ಅಲ್ಲಿಯೇ ನೇಮಕ್ಕೆ ಕುಳಿತರು. ಮೂರು ಪ್ರಹರಗಳಾದವು. ಆಗ ದಾಜಿಬಾ ಅವರು * ಮಹಾರಾಜರೇ ! ನಿಮ್ಮ gv " ಪ್ರಸ್ತಾವನೆ ದೇವರು ಎಲ್ಲಿರುವ ? ಆತನು ಇನ್ನೂವರೆಗೆ ನಮ್ಮ ಹೊಟ್ಟೆಗೆ ಏಕೆ ಕೊಡಲೊಲ್ಲನು ? ಎಂದು ಅನ್ನ ಹತ್ತಿದರು, ಶ್ರೀ ಮಹಾರಾಜರವರು ಅವರಿಗೆ ತಾಳ್ಮೆಯಿಂದ ಹಾಗೆಯೆ ನಾಮಸ್ಮರಣವನ್ನು ನಡೆಯಿಸಲು ಹೇಳಿ ದರು. ಮತ್ತೆ ಎರಡೂವರೆ ಗಂಟೆಗಳಾದವು. ದಾಜೀಬಾ ಅವರು ತುಂಬ ತಾಳ್ಮೆಗೆಟ್ಟರು. ಆದರೆ ಮಹಾರಾಜರವರು ಅಲ್ಲಿಯೇ ಕುಳಿತಿರುವ ಮೂಲಕ ಅವರಿಗೆ ಅಲ್ಲಿಂದ ಎದ್ದು ಹೋಗಲು ಬರುವಂತಿರಲಿಲ್ಲ. ಇಷ್ಟರಲ್ಲಿ ಸೋಲ್ಲಾಪುರದಿಂದ ಕೆಲ ವರ್ತಕರು ಮಹಾರಾಜರವರ ದರ್ಶನಕ್ಕಾಗಿ ನಿಂಬರಗಿಗೆ ಬಂದಿದ್ದರು ಅವರು ಮಹಾರಾಜರವರ ಮನೆಗೆ ಹೋದರು. ಆದರೆ ಮಹಾರಾಜರವರು ಅಂದು ಊಟಕ್ಕೆ ಮನೆಗೆ ಬಂದೇ ಇಲ್ಲ; ಅವರು ದೇವಾಲಯದಲ್ಲಿಯೆ ಇರುವರೆಂಬುದು ತಿಳಿದ ಮೂಲಕ ಅವರು ನೀರಿಗಾಗಿ ಕೊಡವೊಂದನ್ನು ತೆಗೆದುಕೊಂಡರು. ದಾರಿಯಲ್ಲಿ ಹಳ್ಳದ ನೀರನ್ನು ತುಂಬಿಕೊಂಡು ಅವರು ಗುಡಿಗೆ ಹೋದರು. ಮತ್ತು ನಗಾರಖಾನೆಗೆ ಹೋಗಿ, ತಮ್ಮೊಡನೆ ತಂದಿರುವ ಪೇಢ ಬರ್ಫಿ-ಮಾವಿನಹಣ್ಣು - ಹೂವಿನ ಕಾರ ಇತ್ಯಾದಿ ಪದಾರ್ಥಗಳನ್ನೂ ನೀರನ್ನೂ ಮಹಾರಾಜರವರೆದುರು ಟ್ಟು ಅವರನ್ನು ನಮಸ್ಕರಿಸಿದರು. ಆಗ ಶ್ರೀಮಹಾರಾಜರವರು ನಕ್ಕು ನನ್ನೆದುರು ಏಕೆ ಇಡುವಿರಿ ? ಇಲ್ಲಿ ಕುಳಿತ ದಾಜಿಬಾ ಅವರೆದುರು ಇಡಿರಿ | ಎಂದರು. ಈ ರೀತಿ ದಾಜೀಬಾ ಅವರಿಗೆ ಮಹಾರಾಜರವರ ವಚನದ ಸತ್ಯತೆಯು ಹೊಳೆದು ಅವರಿಗೆ ತುಂಬ ಆನಂದವಾಯಿತು. ೧೦. ಶಾಪೇಟ ನರಸಪ್ಪನವರು, ಇವರು ನಿಂಬರಗಿ ಮಹಾರಾಜರ ಕೊನೆಯ ಶಿಷ್ಯರು. ಆದ್ದರಿಂದ ಇವರಿಗೆ ಮಹಾರಾಜರವರು ' ಕಡೆಹುಟ್ಟ ಮಗ' ಎಂದು ಕರೆಯುತ್ತಿದ್ದರು. ಇವರು ಮಾಲಗಾರರು. ಊರು ವಿಜಾಪುರ. ೮೫ ವರುಷದವರಾಗುವ 'ವರೆಗೆ ಇವರು ಮೋಪಗಾರಿಕೆಯನ್ನು ಮಾಡಿದರು. ಅದರಲ್ಲಿಯೇ ಸವಡು ಮಾಡಿಕೊಂಡು ಅವರು ಗುರುಗಳ ಸಮಾಧಿಯ ದರ್ಶನಕ್ಕಾಗಿ ನಿಂಬರಗಿಗೆ ಹೋಗುತ್ತಿದ್ದರು. ಮುಂದೆ ಆ ಕೆಲಸವು ಅವರಿಂದ ಆಗದಂತಾಯಿತು. ಮನೆಯಲ್ಲಿ ಹೆಂಡಿರೂ ಮಕ್ಕಳೂ ಇರಲಿಲ್ಲ. ಆದುದರಿಂದ ಅವರು ಭಿಕ್ಷಾವೃತ್ತಿ 95 ಯನ್ನು ಹಿಡಿದರು. ಒಂದು ಒಂದು ಗಿರದ ಭಕ್ತರಿಯನ್ನಷ್ಟೆ ಅವರು ಸ್ವೀಕರಿಸುತ್ತಿದ್ದರು. ಮತ್ತು ಯಾರಾದರೂ ಹಣವನ್ನು ಕೊಡಬಂದರೆ ಒಂದು ಕಾಸಿನಕ್ಕಿಂತ ಹೆಚ್ಚಿನ ಹಣವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ. ಈ ರೀತಿ ಹನ್ನೊಂದು ರೂಪಾಯಿ ಕೂಡಿದವೆಂದರೆ ಅವರು ವಿಜಾಪುರದಿಂದ ನಿಂಬರಗಿಗೆ ನಡೆಯುತ್ತ ಹೋಗಿ, ಅಲ್ಲಿ ಮೆಹಾರಾಜರ ಸಮಾಧಿಗೆ ನೈವೇದ್ಯ ವನ್ನು ಮಾಡಿ, ಅಲ್ಲಿಯ ಪರಮಾರ್ಥ ಪ್ರಿಯರಿಗೆ ಪ್ರಸಾದವನ್ನು ನೀಡುತ್ತಿ ದ್ದರು. ಅವರ ಈ ಕ್ರಮವು ಅನೇಕ ವರುಷಗಳ ವರೆಗೆ ಸಾಗಿತ್ತು. ಆವರು ತಮ್ಮ ೧೦೫ ವರುಷಗಳ ದೀರ್ಘ ಜೀವನದಲ್ಲಿ ತಮ್ಮ ಗುರುಗಳ ಭಕ್ತಿಯನ್ನು ಏಕನಿಷ್ಠೆಯಿಂದ ಮಾಡಿದರು. ಮತ್ತು ಪರಮಾರ್ಥವನ್ನು ಸಾಧಿಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿದರು. * ವಿಠಲಾ ! ಶಿವ! ಶಿವಾ! ಗುರುಲಿಂಗ ಜಂಗಮ ಮಹಾರಾಜ ಕೆ ಜಯ ! ಅಗಾಧ ಹೋ ! ಸದ್ಗುರು ಮಹಿಮಾ ಅಗಾಧ ಹೋ ! > ಎಂಬ ಜಯಘೋಷವನ್ನು ಅವರು ಮೇಲಿಂದ ಮೇಲೆ ದೊಡ್ಡ ಧ್ವನಿಯಿಂದ ಮಾಡುತ್ತಿದ್ದರು. ಅವರ ವಯಸ್ಸಿನ ೯೮ನೆಯ ವರುಷ ತೆಗೆದ ಅವರ ಛಾಯಾಚಿತ್ರವು ಈ ಗ್ರಂಥದಲ್ಲಿ ಕೊಡಲಾಗಿದೆ. ಅವರ ಸಮಾಧಿಯು ನಿಂಬಾಳದ ಹತ್ತಿರ ಇದ್ದ ಮಸಳಿ ಗ್ರಾಮದಲ್ಲಿದೆ. ಅವರ ಮಗಳನ್ನು ಮಸಳಿಯಲ್ಲಿ ಕೊಟ್ಟ ಮೂಲಕ ಅಲ್ಲಿ ಹೋಗುವಾಗ ಅವರು ನಿಂಬಾಳಕ್ಕೆ ಮೇಲಿಂದ ಮೇಲೆ ಬರುತ್ತಿದ್ದರು. ೧೧. ದೇಸಾಯಿ ಪಂಢರೀನಾಥರವರು. ಇವರು ಜಿಗಜಿವಣಿಯ ರಹವಾಸಿಗಳು. ಇವರು ಸ್ಕೂಲ ಕಾಯರೂ, ಶಕ್ತಿವಂತರೂ ಇದ್ದುದಲ್ಲದೆ ಒಳ್ಳೆಯ ಭಕ್ತಿಯುತರೂ ಕರ್ತೃತ್ವಶಾಲಿಗಳಾದ ಶಿಷ್ಯರಿದ್ದರು. ಶ್ರೀ ಭೀಮರಾಯನ ಹಾಗೂ ಶ್ರೀ ಸದ್ಗುರುಗಳ ದರ್ಶನಕ್ಕಾಗಿ ಅವರು ಪ್ರತಿ ರವಿವಾರ ನಿಂಬರಗಿಗೆ ಹೋಗುತ್ತಿದ್ದರು. ನಿಂಬರಗಿಯ ಗೌಡಕಿಯನ್ನು ಕುರಿತು, ಅಲ್ಲಿಯ ಗೌಡತಿಯ ಅವಳ ಸೋದರಳಿಯನಾದ ಮಲಕಪ್ಪನೂ ಇವರ ನಡುವೆ ನಡೆದ ವ್ಯಾಜ್ಯದಲ್ಲಿ ಮಲಕಪ್ಪನ ಪರವಾಗಿ ಇವರೇ ಮುಂದಾಳಾಗಿದ್ದರು. ಅವರು ಕೊನೆಯ ಬೇನೆಯಿಂದ ಬಳಲುತ್ತಿರು ವಾಗ ಚಿಮ್ಮಡಕ್ಕೆ ಹೊರಟ ಉಮದಿಯ ಮಹಾರಾಜರು ಆ ವಾರ್ತೆಯನ್ನು 36 ಪ್ರಸ್ತಾವನೆ ಕೇಳಿ ವಿಜಾಪುರದಿಂದ ಮರಳಿ ಬಂದು ಅವರನ್ನು ಕಾಣಲು ಜಿಗವಣಿಗೆ ಹೋದರು ಆ ವರುಷ ಅವರು ಚಿಮ್ಮಡಕ್ಕೆ ಹೋಗಲಿಲ್ಲ ೧. ನಿಂಬಾಳದ ನಾಡಗೌಡ ಭಾವೂರಾಯರ ತಾಯಿಯವರು. ಮಹಾರಾಜರವರ ಭಾವಿಕ ಶಿಷ್ಯರು. ಅವರ ಪ್ರತೀತಿಯೂ ಮೇರಗತಿಯದಿತ್ತು. ೧೩ ಕಕಮರಿ ಲಾಯಪ್ಪನವರು ೧೪. ಹವಾಳದ ಜಾಡರ ಬಸಪ್ಪನವರು ೧೫ ಮಾದರ ಸೀರಪ್ಪನವರು ೧೬, ನಿಂಬರಗಿಯ ಮೋಹದೀನ ಸಾಹೇಬರವರು ೧೭. ಕುರುಬರ ಅಂಬೋಜಿಯವರು ಇವರೆಲ್ಲ ಶ್ರೀ ಮಹಾರಾಜರವರ ಪ್ರೀತಿಯ ಭಕ್ತರೂ ಏಕನಿಷ್ಠ ಸೇವಕರೂ ಇದ್ದರು. ಮಹಾರಾಜರವರ ಶಿಷ್ಯವೃಂದದಲ್ಲಿ ಯಾವ ಜಾತಿ ಯವರಿಗೂ ಧರ್ಮದವರಿಗೂ ಪ್ರತಿಬಂಧವಿರಲಿಲ್ಲ. ಮಾದರ ಸೀರಪ್ಪರವರು ತಮ್ಮ ಏಳು ಮಂದಿ ಮಕ್ಕಳೊಂದಿಗೆ ನಿಂಬರಗಿಯಲ್ಲಿ ಮಹಾರಾಜರವರ ಪ್ರಣ್ಯತಿಥಿಯ ಉತ್ಸವದ ಕಾಲಕ್ಕೆ ಕೊಂಬು, ಹಲಿಗೆ, ಸನಯಿ, ಇತ್ಯಾದಿ ವಾದ್ಯಗಳನ್ನು ಬಾರಿಸುವ ಕೆಲಸವನ್ನು ತಪ್ಪದೆ ಮಾಡುತ್ತಿದ್ದರು. ಅವರ ವಂಶಜರೂ ಇಂಚಗಿರಿ, ಉಮದಿ ಹಾಗೂ ನಿಂಬರಗಿಯಲ್ಲಿ ಉತ್ಸವದ ಕಾಲಕ್ಕೆ ಈ ಸೇವೆಯನ್ನು ಸಲ್ಲಿಸುವ ಹಿರಿಯರ ವ್ರತವನ್ನು ನಡೆಯಿಸಿರುವರು. ೧೮ ಅದ್ಯ ರಘುನಾಥಾಚಾರ್ಯರವರು. ಇವರು ಜನಿಸಿದುದು ಅಗರಖೇಡ ಗ್ರಾಮದಲ್ಲಿಯ ಸುಪ್ರಸಿದ್ಧವಾದ “ ಆದ್ರ' ರ ಮನೆತನದಲ್ಲಿ. ಅವರು ಉಮದಿಯ ನಾನಾಸಾಹೇಬ ದೇಶಪಾಂಡೆ ಅವರ ಅಳಿಯರು. ಅವರು ಶ್ರೀ ನಿಂಬರಗಿ ಮಹಾರಾಜರವರವರ ಪಟ್ಟ ಶಿಷ್ಯರಲ್ಲಿ ಒಬ್ಬರು. ನಿಂಬರಗಿಯಲ್ಲಿ ಭೀಮರಾಯನ ಗುಡಿಯಲ್ಲಿಯ ಶಿಷ್ಯ ನರರು 52 ಭೀಮಬಾಯಿಯವರ ಓವರಿಯ ಹತ್ತಿರದ ಓವರಿಯಲ್ಲಿ ಅವರು ತಮ್ಮ ತಂಗಿ ಯೊಡನೆ ಇರುತ್ತಿದ್ದರು. ಶ್ರೀ ಮಹಾರಾಜರವರು ಸಮಾಧಿಸ್ಥರಾದ ಮೇಲೆ ಅವರ ಸಮಾಧಿಯ ಪೂಜೆಯನ್ನು ಅವರು ಆವರಣ ನಡೆಯಿಸಿದರು. ಅಗರಖೇಡದಲ್ಲಿಯ ತಮ್ಮ ಮನೆಯನೂ, ಹೊಲವನ್ನೂ ಎಲ್ಲವನ್ನು ಕೊಡುವೆ, ನಿಂಬರಗಿ ಮಹಾರಾಜರವರ ಸಮಾಧಿಯಿದ್ದ ಅಲ್ಪ ಸ್ಥಲವನ್ನು ಎನಗೆ ಕೊಡಿರೆಂದು ಅವರು ಆ ಭೂಮಿಯ ಒಡೆಯರಾದ ಗೊರವರಿಗೆ ಬಿನ್ನವಿಸುತ್ತಿದ್ದರು. ಆದರೆ ಆ ಸ್ಥಲವನ್ನು ಗೊರವರು ಅವರಿಗೆ ಕೊಡಲಿಲ್ಲ. ಅವರ ನಿಮವಾದ ಭಕ್ತಿಭಾವವನ್ನು ಕಂಡು “ ನಿನಗೆ ಮಹಾರಾಜರೆದುರು ನಂದಿಯನ್ನಾಗಿ ಮಾಡಿ ಕುಳ್ಳಿರಿಸುವೆ ನೆಂದು ಶ್ರೀ ಉಮದಿಯ ಮಹಾರಾಜ ರವರು ಒಮ್ಮೆ ಅಂದಿದ್ದರು. e ಇವರೇ ಮೊದಲು ಶ್ರೀ ನಿಂಬರಗಿ ಮಹಾರಾಜರವರ ವಚನಗಳ ರಚನೆ ಯನ್ನು ಮಾಡಿ, ಅದನ್ನು ಗ್ರಂಥದ ರೂಪದಿಂದ ದೇವನಾಗರೀ ಲಿಪಿಯಲ್ಲಿ ಬರೆದಿಟ್ಟರು. ಅದೇ ಮೇರೆಗೆ ಸಂತರು ಮರಾಠಿ, ಕನ್ನಡ ಹಾಗೂ ಹಿಂದೀ ಭಾಷೆಗಳಲ್ಲಿ ರಚಿಸಿದ ಅಸಂಖ್ಯ ಪದಗಳನ್ನು ಅವರು ಬರೆದಿಟ್ಟಿರುವರು. ಪದ ಸಂಗ್ರಹದಲ್ಲಿಯ ಎಷ್ಟೋ ಪದಗಳು ಉಪಲಬ್ಧವಿದ್ದು ಅವು ಸಾಧಕರಿಗೆ ತುಂಬ ಉಪಯುಕ್ತವಾದವುಗಳಿವೆ. ಅವರು ಬರೆದ ಮಹಾರಾಜರವರ ವಚನದ ಗ್ರಂಥವು - ಬೋಧ ಸುಧೆ' ಯ ಮೂಲ ತಳಹದಿಯು. ಈ ಗ್ರಂಥ ರಚನೆಯೆ ಅವರ ಪರಮಾರ್ಥದಲ್ಲಿಯ ಮುಖ್ಯ ಕೆಲಸವು, ಮಹಾರಾಜರವರ ವಚನಗಳನ್ನು ಸಂಗ್ರಹಿಸಿ, ಅವನ್ನು ಜನರಿಗೆ ಒದಗಿಸಿಕೊಟ್ಟು, ಅವರು ಸಾಧಕರ ಮೇಲೆ ದೊಡ್ಡ ಉಪಕಾರವನ್ನು ಮಾಡಿರುವರು. ಅವರ ಹಸ್ತಾ ಕ್ಷರವು ಬಲು ಅಂದವಾದುದು. ಪರಮಾರ್ಥವನ್ನು ಪ್ರೀತಿಸುವ ಸಾಧಕನು ಇಲ್ಲವೆ ಒಜ್ಞಾಸುವು ಪದಗಳನ್ನಾಗಲಿ, ವಚನಗಳನ್ನಾಗಲಿ ಬೇಡಿದರೆ, ಕೂಡಲೆ ಅವನ್ನವರು ಬರೆದು ಕೊಡುತ್ತಿದ್ದರು. ಈ ರೀತಿ ತಮ್ಮ ಗ್ರಂಥದ ಕೈಬರಹದ ಪ್ರತಿಗಳನ್ನು ಅವರು ಸಾಧಕರನೇಕರಿಗೆ ಕೊಟ್ಟಿರುವರು. ೧೯. ಕಾವ್ಯ ಬಾಬಾಚಾರ್ಯರವರು ಇವರು ನಿಷ್ಠೆಯುಳ್ಳ ಶಿಷ್ಯರಲ್ಲಿ ಒಬ್ಬರು. ಅವರು ಕನ್ನಡ ಭಾಷೆಯಲ್ಲಿ ನಿಷ್ಣಾತರಿದ್ದು, ಸಂಸ್ಕೃತ, ಹಿಂದಿ ಹಾಗೂ ಮರಾಠಿ ಭಾಷೆಗಳು ಅವರಿಗೆ ಪ್ರಸ್ತಾವನೆ ಬರುತ್ತಿದ್ದವು. ರಘುನಾಥಾಚಾರ್ಯರು ಬರೆದ ಶ್ರೀ ನಿಂಬರಗಿ ಮಹಾರಾಜ ರವರ ಗ್ರಂಥದಲ್ಲಿ ಮರಾಠಿ, ಕನ್ನಡ ಹಾಗೂ ಹಿಂದಿ ಸತ್ಪುರುಷರ ವಚನ ಗಳನ್ನು ಬೆರಸಿ ಅವರು ಮಹಾರಾಜರ ವಚನ' ಎಂಬ ಗ್ರಂಥವನ್ನು ಇ ಸನ್ ೧೯೦೮ ರಲ್ಲಿ ದೇವನಾಗರಿ ಲಿಪಿಯಲ್ಲಿ ಮುದ್ರಿಸಿ ವಿಜಯಪುರದಲ್ಲಿ ಪ್ರಸಿದ್ಧಿಸಿದರು. ಈ ಗ್ರಂಥದ ಕೊನೆಯಲ್ಲಿ ಶ್ರೀ ಮಹಾರಾಜರವರು ರಚಿಸಿದ ಪದಗಳನ್ನು ಕೊಡಲಾಗಿದೆ. ಈ ಗ್ರಂಥದ ಪ್ರಕಾಶನದಿಂದ ಶ್ರೀ ಮಹಾರಾಜ ರವರ ವಚನಗಳಲ್ಲಿಯ ಉಪದೇಶಾಮೃತವು ಜನರಿಗೆ ಸುಲಭಸಾಧ್ಯವಾಯಿತು. ಬಾಬಾರ್ಚಯ್ರರವರು ಈ ತಮ್ಮ ಕಾರ್ಯದಿಂದ ಪರಮಾರ್ಥ ಪ್ರೇಮಿ ಗಳನ್ನು ವಿಶೇಷವಾಗಿ ಶ್ರೀ ನಿಂಬರಗಿ ಮಹಾರಾಜರವರ ಸಂಪ್ರದಾಯದಲ್ಲಿಯ ಸಾಧಕರನ್ನು ಚಿರಋಣಿಯಾಗಿ ಮಾಡಿರುವರು. ಹಿರಿಗುರುವಿನ ವರಶಿಷ್ಯ ರು ಪರಮಾರ್ಥದನುಭಾವ ನರರಿಂಗೆ ನೀಡಲು ಸುರಲೋಕದಿಂ ವರನಾವು ತಂದು | ಹಿರಿಗುರು ತಾನಾಗಿ ಉದ್ಧರಿಸಿದ ಶಿಷ್ಯ- ವರರ ಮಹಿಮೆಯನ್ನು ಕೇಳಿರಿಂದು ಸಿದ್ಧಿಯ ಬಲದಿ ಪ್ರಸಿದ್ಧಿಯ ಪಡೆದಾಂಧ ಸಾಧುಪುರುಷ ರಘುನಾಥಪ್ರಿಯಾ । ಬುದ್ದಿಯು ಹೊಳೆಯಲು ಸಿದ್ಧ ಗುರುವಿನಿಂ ಪ್ರ. ಸಿದ್ಧ ಪುರುಷನಾದ ಪ್ರಾಣಪ್ರಿಯಾ ಗುರುತಮ ನೇಮದಿ ಪರತನು ಅನುಭಾವ ಭಾಗ್ಯವಂತ ' ಭಾವು ' ಹೊಂದಿರುವ ಮರೆಯಲ್ಲಿ ಮೆರೆಯುವ ಹಿರಿಗುರು-ಮಹಿಮೆಯ ಧರೆಯಲ್ಲಿ ಮೆರೆಸಲು ಮುಂದಾದವ 11011 11 & 11 ಶಿಷ್ಯನರರು ಸಾಧುಮುಖದಿ ವರಸಾಧನವನ್ನು ಪಡೆದು ಸಾಧಿಸಿದನು - ದಾಸ' ಪರಮಾರ್ಥವ ಬೋಧಿಸಿ ಭಕುತರ ದುಗುಡವ ಬಿಡಿಸುತ ಸಾದರ ವೈಭವ ಗಳಿಸಿರುವ ಮೇಲು ನಾಮವ ನಿತ್ಯ ಬೆರಳಿನಿಂದೆಣಿಸುತ ಕಾಲಕಾಲಕ್ಕೆ ತಾನು ನೆನೆಯುವನು | ಕಾಲಕರ್ಮ೦ಗಳ ಕಾಲೀಲಿ ಒಡೆಯುವ ಸಾವಳಸಂಗದ ( ಕಕ್ಕ' ತಾನು ಬಯಸುವ ಭಕುತಿಯಿಂ ಬಯಸದ ಭಕುತಿಯು ಬಲಿತ - ಬಾಪು' ಭಾವು ಅವೇನು ? | ಗುರುಗ್ರ೦ಥ ಓದುತ ಗುರುಸೇವೆ ಮಾಡುತ 118 11 11 38 11 ಗುರುವಿನ ಬಳಿಯಲ್ಲಿ ನೆಲೆಸುವನು || 2. || ಹರಿಭಕ್ತಕುಲಜನಾದರು ತಾ ರಘುನಾಥಾರ್ಯ ? ಹರಗುರುವಿಗೆ ಶರಣು ಬಂದಿರುವ 1 ಪರನಿಂದೆಯನು ಜಡಿದು, ಗುರುಬೋಧದಿಂ ನಡೆದು ಹಿರಿವಚನವ ಜಗಕೆ ಸಲ್ಲಿಸಿಹ ಆರ್ಯ' ನ ವಚನದಿ ಆರ್ಯಾದಿಗಳ ಬೆರಸಿ ಆರ್ಯಗ್ರಂಥವ ತಾನು ಪ್ರಕಟಿಸುವ | ಹಿರಿಗುರುವರ್ಯರ ಬೋಧ ( ಬಾಬಾಚಾರ್ಯ' ಸರ್ವಜನರ ಕೈಯೊಳಿರಿಸಿರುವ ಒಲವಿನ ಛಲದಿಂದ ಕಾಡುತ ಗುರುಗಳ ಬಲದ ಮಹಿಮೆಯನ್ನೆ ನೋಡುತಿಹ | ನಿಲಿಸುತ ಮನೆಯನ್ನು ನಲಿಸುತ ಮನವನು ಗುರುಕಾಜವನು - ದಾಳಿ ಮಾಡುತಿಹ || 2 || 11 11 || || ಶಿಷ್ಯವರರು ಚಂಡಿಯು ಗುರುಗಳ ಕಂಡಂತೆ ಕಾಡಲು ಗೌಡತಿಯನ್ನು ತೌಡುಗೋಳಿಸುತಿಹ | ಪುಂಡ - ಪಂಢರಿನಾಥ' ಗುರುವಿನ ವರಶಿಷ್ಯ. ಮಂಡಲವಲಿ ಸ್ಥಾನಗಳಿಸಿರುವ ಗುರುವಿನ ಕಡೆಹುಟ್ಟ ಕಿರಿಮಗನಾದರೂ ವರಶಿಷ್ಯ ತಾನಾಗಿ ಬೆಳೆದಿಹನು | 1100 11 ಹರಿ ! ವಿಠಲಾ ! ಶಿವಾ ! ಗುರುವೆ ! ಜಯ ! ಎನ್ನುತ ಚರಿಪ : ನರಸಪ್ಪ' ನದೇಂ ಧನ್ಯನು || ೧೧ || ಇಂತು ಮನೋಹರ ಸಂತರ ಮಹಿಮೆಯ ಸಂತಸದಿಂದಲಿ ಪಾಡುವದು | ಸಂತರ ಪಾವನ ಜೀವನದಲಿ ನಿಂದು ಅಂತರಂಗ ಶುಚಿ ಮಾಡುವಮ || 09 || - a - ಶ್ರೀ ಭಾವೂಸಾಹೇಬ ಮಹಾರಾಜರವರು (0) ಶ್ರೀ ಸಾಧುಮಹಾರಾಜರವರು ಸುಮಾರು ಹನ್ನೆರಡು ವರುಷ ಉಮದಿ ಯಲ್ಲಿದ್ದರೆಂಬುದನ್ನು ಹಿಂದೆ ಹೇಳಲಾಗಿದೆಯಷ್ಟೇ! ಅಲ್ಲಿ ದೇಶಪಾಂಡೆಯವರ ದೊಡ್ಡ ಮನೆತನವಿರುವದು. ಅದರಲ್ಲಿ ನಾನಾಸಾಹೇಬ ಹಾಗೂ ದಾಜೀಬಾ ಎಂಬ ಬಂಧುಗಳು ಶ್ರೀ ನಿಂಬರಗಿ ಮಹಾರಾಜರವರಿಂದ ಅನುಗ್ರಹ ಪಡೆ ದಿದ್ದರು. ಅವರ ಗುರುನಿಷ್ಠೆಯು ಅಪ್ರತಿಮವಾದುದಿತ್ತು. ನಾನಾಸಾಹೇಬ ರವರು ಗಂಭೀರ ಸ್ವಭಾವದವರೂ ದೂರದೃಷ್ಟಿಯುಳ್ಳವರೂ ಇದ್ದರು. ಹಾಗು ಶ್ರೀ ಭಾವೂಸಾಹೇಬ ಮಹಾರಾಜರನರು 20 ದಾಟಿಬಾ ಅವರು ಸರಲ ಸ್ವಭಾವದವರಿದ್ದರು. ಇವರ ತಮ್ಮಂದಿರೇ ( ಮರೆಯಲ್ಲಿ ಮೆರೆಯುವ ಹಿರಿಗುರುಗಳನ್ನು ಧರೆಯಲ್ಲಿ ಮೆರೆಸಲು ಮುಂದಾದ ' ಶ್ರೀ ಭಾವೂಸಾಹೇಬ ಮಹಾರಾಜರವರ.. ಮೊದಮೊದಲು ಭಾವೂಸಾಹೇಬರವರು ತಮ್ಮ ಅಣ್ಣಂದಿರ ನಿರ್ಗುಣ ಉಪಾಸನೆಯನ್ನು ನಂಬುತ್ತಿರಲಿಲ್ಲ. ಅವರು ಸಗುಣೋಪಾಸಕರಿದ್ದು ಉಮದಿಯ ಶ್ರೀಹನುಮಂತ ದೇವರನ್ನು ಪ್ರತಿನಿತ್ಯ ತಪ್ಪದೆ ಪೂಜಿಸುತ್ತಿದ್ದರು. ಶ್ರೀ ಸಾಧುಬುವಾ ಅವರು ಆ ಹನುಮಂತ ದೇವರ ಗುಡಿಯಲ್ಲಿಯ ಓವರಿ ಯಲ್ಲಿರುವಾಗ ಭಾವೂರಾಯರನ್ನು ಅವರ ಸಗುಣೋಪಾಸನೆಗಾಗಿ ಆಭಿನಂದಿಸು ತಿದ್ದರು. “ ಭಾವೂರಾಯಾ | ಎಂಥ ಪುಣ್ಯವಂತನಯ್ಯಾ ನೀನು ! ಎಂಥ ಶ್ರೇಷ್ಠ ಭಕ್ತಿಯಯ್ಯಾ ನಿನ್ನದು ! ” ಎಂದು ಹೊಗಳಿ, ಸಾಧುಬುವಾ ಅವರು ಭಾವುರಾಯರನ್ನು ವಂದಿಸುತ್ತಲು ಇದ್ದರು. ಇದರ ಮೂಲಕ ಭಾವುರಾಯರ ಮನಸ್ಸು ಅವರೆಡೆಗೆ ಸಹಜವಾಗಿಯೆ ಸೆಳೆಯಲಾಯಿತು. ಮತ್ತು ಬಿದ್ದು ಗೆಲ್ಲಬೇಕು. ಎಂಬ ವಚನದಂತೆ, ಅವರು ಭಾವೂಸಾಹೇಬರ ಮನಸ್ಸನ್ನು ನಿಜವಾದ ಪರಮಾರ್ಥದೆಡೆಗೆ ತಿರುಗಿಸಿ, ಅವರನ್ನು ಶ್ರೀ ನಿಂಬರಗಿ ಮಹಾ ರಾಜರೆಡೆಗೆ ಒಯ್ದರು. ಶ್ರೀ ಮಹಾರಾಜರವರು ಸಾಧುಬುವಾ ಅವರ ಮುಖಾಂತರವಾಗಿಯೇ ಅವರನ್ನು ಅನುಗ್ರಹಿಸಿದರು. ಇದನ್ನು ಕುರಿತು ಮುಂದೆ ಭಾವೂಸಾಹೇಬರವರು “ ಸಾಧುಬುವಾ ಅವರು ನನ್ನ ಪಾದಗಳಿಗೆರಗಿ ನನ್ನನ್ನು ನಿಜವಾದ ಪರಮಾರ್ಥ ಮಾರ್ಗಕ್ಕೆ ಹಚ್ಚಿದರು ” ಎಂದು ಕೃತಜ್ಞ ತೆಯ ಕಂಬನಿಗಳನ್ನು ಸುರಿಸುತ್ತ ಹೇಳುತ್ತಿದ್ದರು. ( ಅನುಗ್ರಹವನ್ನು ಪಡೆದ ಮೇಲೆ ಭಾವುಸಾಹೇಬರವರು ಉಮದಿ ಯಲ್ಲಿಯೇ ನಿಂತು ಕಡುತರವಾದ ಸಾಧನವನ್ನು ಮಾಡಿದರು. ಪ್ರಪಂಚ. ಪರಮಾರ್ಥಗಳೆರಡನ್ನೂ ಚೆನ್ನಾಗಿ ಸಾಗಿಸಿದರು. ಆದರೆ ಪರಮಾರ್ಥವೇ ನಿಜವಾದ ಸ್ವಾರ್ಥವೆಂದು ಬಗೆದು ಪ್ರಪಂಚದಲ್ಲಿ ಪರಮಾರ್ಥ ಪ್ರೀತಿಯನ್ನು ಅಳಿಯಗೊಡಲಿಲ್ಲ. ಅದನ್ನು ಬೆಳೆಸುತ್ತಲೆ ಇದ್ದರು, ಸಾಧನವು ಬೆಳೆದಂತೆ, ಅನುಭವವು ಬೆಳೆಯಿತು, ವಿವೇಕ ವೈರಾಗ್ಯಗಳೂ ಬೆಳೆದವು. ಅದರ ಮೂಲಕ ಅವರಿಗೆ ಕೊಡಲಾದ ಜತ್ತ ಸಂಸ್ಥಾನದಲ್ಲಿಯ ಮಾಮಲೇದಾರರ ಅಧಿಕಾರ ಪ್ರಸ್ತಾವನೆ ವನ್ನೂ ಅವರು ಧಿಕ್ಕರಿಸಿದರು-ನಿರಾಕರಿಸಿದರು. ಅದರ ಮೂಲಕವೆ ಅವರು ಜನ ನಿಂದೆಯನ್ನು ಧೈರ್ಯದಿಂದ ಎದುರಿಸಿದರು, ಸ್ವಜನರ ತಾಪವನ್ನು ಅಲ್ಲಗಳೆ ದರು. ಬ್ರಹ್ಮನನ್ನು ಅರಿತವನೇ ಬ್ರಾಹ್ಮಣನೆಂಬುದನ್ನು ಅರಿಯದೆ ಆತ್ಮಜ್ಞಾನ ಪಾರಂಗತರಾದ ತಮ್ಮ ಗುರುಗಳನ್ನು ಅಬ್ರಾಹ್ಮಣನೆಂದು ಹಳಿವವರ ಅಜ್ಞಾನ ವನ್ನು ಕಂಡು ಕನಿಕರಪಟ್ಟರು. ಅನವರತ ಸಾಧನದಿಂದ ಅವರಲ್ಲಿ ಅಲೌಕಿಕ ಸಾಮರ್ಥ್ಯವು ಬೆಳೆಯಹತ್ತಿತು. ಒಮ್ಮೆ ಸದ್ಗುರುಗಳ ಸನ್ನಿಧಿಯಲ್ಲಿ ಸಾಧನಕ್ಕೆ ಕುಳಿತಿರುವಾಗ ಒಂದು ಗುಂಗಾಡು ತೊಡೆಗೆ ಕಚ್ಚಿ ರಕ್ತವು ಸುರಿದರೂ ಅವರು ಆಸನದಿಂದ ಎಳ್ಳಷ್ಟೂ ಕದಲಲಿಲ್ಲ. ಅಡವಿಯಲ್ಲಿ ಸಾಧನವನ್ನು ಮಾಡುವಾಗ ಹಾವು ಚೇಳುಗಳು ಹತ್ತಿರ ಸುಳಿದರೂ, ಮೈಮೇಲೆ ಏರಿದರೂ, ಅವರಿಗೆ ಅಂಜಿಕೆಯಂಬುದು ಗೊತ್ತಿರಲಿಲ್ಲ. ಮಳೆ-ಗಾಳಿ, ಚಳಿ ಬಿಸಿಲು ಅವರನ್ನು ಸಾಧನದಿಂದ ಚಲಿಸುತ್ತಿರಲಿಲ್ಲ. ಭಕ್ತಿಯು ಭರದಿಂದ ಬೆಳೆಯ ಬೇಕೆಂದು ಅವರು ನಿದ್ರೆಯನ್ನು ಗೆದ್ದು ಹದಿನೆಂಟು ವರುಷ ನಿಂತು ಸಾಧನ ಮಾಡಿದರು. ಮತ್ತು ತಮ್ಮ ಹಾಗೂ ಅನ್ಯರ ಜೀವನವನ್ನು ಸಾವನ ಗೋಳಿಸಿದರು. ಶ್ರೀ ಭಾವೂಸಾಹೇಬರವರ ಗುರುಭಕ್ತಿಯು ನಿಸ್ಸಿಮನಾದುದು. ಪ್ರಸಂಗ ಬಂದಾಗ ಸದ್ಗುರುಗಳ ಪಾದರಕ್ಷೆಗಳನ್ನು ಎತ್ತುವ ಕೆಲಸವನ್ನು ಸಹ ಅವರು ಒಳ್ಳೆಯ ಪ್ರೀತಿಯಿಂದ ಮಾಡುತ್ತಿದ್ದರು. ಅವರಿಗೆ ಸದ್ಗು ರುಗಳ ಸೇವೆಯೂ, ಕೃಪೆಯ ವಯಸ್ಸಿನ ನಾಲ್ವತ್ತೆರಡು ವರುಷ ಲಭಿಸಿತು. ಸದ್ಗುರುಗಳ ಕೃಪೆಯಿಂದ ಅವರಿಗೆ ಪರಮಾರ್ಥದಲ್ಲಿಯ ಅತ್ಯುಚ್ಚ ಪದವಿಯು ದೊರೆಯಿತು. ಶ್ರೀ ನಿಂಬರಗಿ ಮಹಾರಾಜರವರು ದೇಹವನ್ನಿಡುವ ಸಮಯ ದಲ್ಲಿ ಅವರಿಗೆ ಪರಮಾರ್ಥವನ್ನು ಬೆಳೆಸಲು ಆಜ್ಞಾಪಿಸಿದರು. ಸದ್ಗುರುಗಳ ನಿರ್ಯಾಣದಿಂದ ಅತ್ಯಂತ ವಿಹ್ವಲರಾಗಿ ಭಾವುಸಾಹೇಬರು ದ್ವಿಗುಣಿತ ಜೋರಿನಿಂದ ಸಾಧನವನ್ನು ಮಾಡಿದರು. ಮತ್ತು ಅದೈತ ಬೋಧವನ್ನು ಪಡೆದರು, ತರುವಾಯ ಭಕ್ತಿಯನ್ನು ಬೆಳೆಸಲು, ಅವರು ಕರ್ನಾಟಕದಲ್ಲಿ ಅಲ್ಲಲ್ಲಿ ಸಂಚರಿಸಿದರು ಅನೇಕರನ್ನು ಅನುಗ್ರಹಿಸಿದರು, ಉದ್ಧರಿಸಿದರು. ಕಿರಿಯರಿರಲಿ ಈ ಭಾವೂಸಾಹೇಬ ಮಹಾರಾಜರವರು 22 ಹಿರಿಯರಿರಲಿ, ಬಡವರಿರಲಿ, ಬಲ್ಲಿದರಿರಲಿ, ಅವರವರ ಭಾವವನ್ನು ಕಂಡು ಭಾವೂರಾಯರು ಅವರ ಮನೆಗೆ ಹೋಗುತ್ತಿದ್ದರು ಪರಮಾರ್ಥದಲ್ಲಿ ಮೇಲು- ಕೀಳುತನವನ್ನು, ವಿದ್ಯಾ, ಧನ, ವರ್ಣ-ವ್ಯತ್ಯಾಸಗಳನ್ನು ಅವರು ಲೆಕ್ಕಿಸು ತಿರಲಿಲ್ಲ. ಅವರವರ ಭಾವದಂತೆ ಅವರವರ ಕೂಡ ನಡೆದುಕೊಳ್ಳುತ್ತಿದ್ದರು. ನಿಂದಕರನ್ನು ವಂದಿಸುತ್ತಿದ್ದರು, ವಿವಾದಕ್ಕೆ ಎಡೆಗೊಡುತ್ತಿರಲಿಲ್ಲ. ಅನನ್ಯರಿಗೆ ಅನುಭವ-ಜ್ಞಾನವನ್ನು ಅರಸುತ್ತಿದ್ದರು. ಯಾರ ಮೇಲೆಯೂ ತಮ್ಮ ಭಾರವನ್ನು ಬೀಳಗೊಡುತ್ತಿರಲಿಲ್ಲ. ಶಿಷ್ಯರಿಗೆ ಏನನ್ನೂ ಬೇಡುತ್ತಿರಲಿಲ್ಲ. ಬಾಹ್ಯ ಆಡಂಬರಕ್ಕೆ ಅವರಲ್ಲಿ ಆಸ್ಪದವಿರಲಿಲ್ಲ. ಭಗವಂತನ ನಾಮ ಔಷಧ ದಿಂದ ಅವರು ಅನೇಕರ ಬಾಧೆಯನ್ನೂ, ವ್ಯಾಧಿಯನ್ನೂ, ಸಂಕಟಗಳನ್ನೂ ನಿವಾರಿಸುತ್ತಿದ್ದರು. ಅವರ ತ್ರಿಕಾಲ ಸಾಧನವೂ ಪುರಾಣ, ಭಜನವೂ ಎಂದೂ ತಪ್ಪುತ್ತಿದ್ದಿಲ್ಲ. ಮೇಲಿಂದ ಮೇಲೆ ಅವರು ಅನುಭಾವ ಆನಂದದಲ್ಲಿ ಮುಳುಗುತ್ತಿದ್ದರು. ಅವರೆಡೆಗೆ ಬಂದವರಲ್ಲಿ ಬರಿ ಪುರಾಣ ಭಜನಗಳನ್ನಷ್ಟೆ ಕೇಳುತ್ತಿದ್ದವ ರಿಗೆ ನಾಮಧಾರಕರ ಸಾಧಕಸ್ಥಿತಿಯೂ ಅವರಿಗೆ ದೊರೆವ ಆತ್ಮಾನುಭವವೂ ಆತ್ಮಾನಂದವೂ ತಿಳಿಯುತ್ತಿರಲಿಲ್ಲ. ಯಾಕಂದರೆ ಕೇವಲ ಶಬ್ದ ಜ್ಞಾನದಲ್ಲಿ ನಿರತರಾದವರಿಗೆ ನಿಃಶಬ್ದ - ಜ್ಞಾನದ ಅಂದಚಂದಗಳು ತಿಳಿಯುವದೆಂತು ? ಶ್ರೀ ಭಾವೂಸಾಹೇಬ ಮಹಾರಾಜರವರು ಪುಣ್ಯಮಾರ್ಗದಿಂದ ನಡೆಯುತ್ತಿದ್ದ ಮೂಲಕ, ಅವರು ಪ್ರತ್ಯಕ್ಷ ಮಾಡದಿದ್ದರೂ, ಅನೇಕ ಚಮತ್ಕಾರಗಳು ತಾವಾಗಿಯೇ ಆಗುತ್ತಿದ್ದವು. ಆತ್ಮಜ್ಞಾನಕ್ಕೆ ಸಿದ್ಧಿಯ ಮೈಲಿಗೆ ಇರಬಾರದು. ಆದುದರಿಂದ ಅವರು ಸಿದ್ಧಿಯನ್ನೆಂದೂ ಮಾಡುತ್ತಿರಲಿಲ್ಲ. ಆದರೂ ಭಗವಂತನು ಭಕ್ತರ ಇಚ್ಛಿತವನ್ನು ತಾನಾಗಿಯೆ ಪೂರೈಸುತ್ತಿದ್ದನು. ಸಾಧ್ಯವು ಕೈಗೂಡಿದರೂ ಭಾವೂಸಾಹೇಬರು ಶಿಷ್ಯರಿಗೆ ಉತ್ಸಾಹ ಬರಬೇಕೆಂದು ಸಾಧನವನ್ನು ಬಿಡಲಿಲ್ಲ. ಈ ರೀತಿ ಸದ್ಗುರುಗಳ ಆಜ್ಞೆಯ ಮೇರೆಗೆ ಅವರು ಪರಮಾರ್ಥ- ಪ್ರಸಾರವನ್ನು ಕೊನೆಯವರೆಗೆ ಎಡೆಬಿಡದೆ ನಡಿಸಿ, ಸನ್ ೧೯೧೪ ರಲ್ಲಿ ಮಹಾಸಮಾಧಿಯನ್ನು ಪಡೆದರು. 5 4 ಪ್ರಸ್ತಾವನೆ ( 3 ) ಯಾವ ಮಹಾಪುರುಷನ ಯೋಗ್ಯತೆಯೇ ಆಗಲಿ, ಅದು ಅವನ ಬಳಿ ಬಹಳ ದಿನ ಸಂತತವಾಗಿ ನಿಲ್ಲದೆ ತಿಳಿಯುವದಿಲ್ಲ. ಅದೇ ಮೇರೆಗೆ ಶ್ರೀ ಭಾವೂಸಾಹೇಬ ಮಹಾರಾಜರವರ ಯೋಗ್ಯತೆಯು ಕೆಲಮಟ್ಟಿಗಾದರೂ ತಿಳಿಯಬೇಕಾದರೆ ಅವರ ಬಳಿ ಬಹುದಿನ ನಿಂತು, ಅವರ ಪ್ರತಿಯೊಂದು ಕ್ರಿಯೆಯನ್ನು ಅವಲೋಕಿಸಲು ಬೇಕು. ಅವರ ಪೂರ್ಣ ಯೋಗ್ಯತೆಯನ್ನು ಆರಿಯಲು ಅವರಂತೆಯೆ ಆಗಲು ಬೇಕು. ತುಕಾರಾಮರು ಅನ್ನುವ ಮೇರೆಗೆ ಇಂಥವರ ( ಮಹಿಮೆಯನ್ನರಿಯಲು ನಾವು ಮಹಿಮರಾಗಲು ಬೇಕು' ಅದು ಶಕ್ಯವಿಲ್ಲದ್ದರಿಂದ ಸಹವಾಸದಿಂದ ದೊರೆತ ಅದರ ಅಲ್ಪ ಪರಿಚಯದಿಂದಲೆ ನಾವು ಸಮಾಧಾನವನ್ನು ಪಡೆಯಬೇಕು. ಈ ರೀತಿ ನಿಕಟ ಸಹವಾಸದಲ್ಲಿ ನಿಂತು ಸೂಕ್ಷ್ಮರೀತಿಯಿಂದ ಅವರ ನಡತೆಯನ್ನು ಪರೀಕ್ಷಿಸಿದವರಿಗೆ, ಅವರ ನಿಸ್ಪೃಹತೆ, ಅವರ ತಾರುಣ್ಯ, ಅವರ ನಿಯಮಿತತನ, ಅವರ ದೃಢವಾದ ಮನೋನಿಗ್ರಹ, ಹಿರಿಕಿರಿಯರಲ್ಲಿಯ ಸಮತೆ, ಶಿಷ್ಯರಲ್ಲಿ ಅಪಾರವಾದ ಪ್ರೀತಿ, ಗುರುಗಳ ಹಾಗೂ ಆತ್ಮಜ್ಞಾನದ ಮೇಲಿನ ನಿಃಸೀಮವಾದ ಭಕ್ತಿ, ಅಲೌಕ ವಾದ ಶಾಂತಿ, ಹಾಗೂ ಉಪಾಧಿಯಿಂದ ಅಲಿಪ್ತರಾಗಿರುವ ಕೌಶಲ, ಇತ್ಯಾದಿ ಅನೇಕ ಗುಣಗಳು ಕಂಡುಬರದಿರವು. ಇಷ್ಟೇಕೆ ! ಶ್ರೀ ದಾಸಬೋಧದಲ್ಲಿಯ ನಿಃಸ್ಪೃಹ ನಡತೆ (೧೧-೧೦)-ನಿಃಸ್ಪೃಹ ಲಕ್ಷಣ ( ೧೪- ೧)-ನಿಸ್ಪೃಹ ವ್ಯಾಪ ಲಕ್ಷಣ (೧೫-೨ ) ಈ ಸಮಾಸಗಳಲ್ಲಿ ಬಣ್ಣಿಸಲಾದ ಪ್ರತಿಯೊಂದು ಗುಣವನ್ನು ಅವರು ತಮ್ಮ ಆಚರಣೆಯಲ್ಲಿ ಇಳಿಸಿದ್ದರೆನ್ನಲು ಅಡ್ಡಿಯಿಲ್ಲ. ಸಾಧುಗಳ ಗುಣಕರ್ಮಗಳ ಬಗೆಗೆ ಜನಸಾಮಾನ್ಯರ ಕಲ್ಪನೆಗಳು ವಿಚಿತ್ರವಾದವುಗಳಿವೆ ಪ್ರತ್ಯಯದ ಬ್ರಹ್ಮಜ್ಞಾನವನ್ನು ಯಾರೂ ಲಕ್ಷಿಸುವ ದಿಲ್ಲ. ಬಗೆಬಗೆಯ ಚಮತ್ಕಾರಗಳನ್ನು ಮಾಡುವವನು, ಅಸಂಬದ್ಧ ಮಾತಾಡುವವನು ಸಾಧು ; ವಾರ್ಧಕ್ಯದಲ್ಲಿಯೂ ತೇಜಃಪುಂಜವಾದ ದೇಹ ವುಳ್ಳವನು, ವಿಪುಲ ಶಿಷ್ಯ ಸಮೂಹವುಳ್ಳವನು ಸಾಧು ; ವಿದ್ವಾಂಸರೂ, ಶ್ರೀಮಂತರೂ ಆದ ಶಿಷ್ಯರುಳ್ಳವನು ಅಥವಾ ಉಪನಿಷತ್ತುಗಳನ್ನೂ, ಭಾಷ್ಯ ಗಳನ್ನೂ ಚೆನ್ನಾಗಿ ವಿವರಿಸಬಲ್ಲವನೇ ಸಾಧು; ಈ ಬಗೆಯ ಕಲ್ಪನೆಗಳ ಈ ಭಾವೂಸಾಹೇಬ ಮಹಾರಾಜರವರು " 22 " ಹೇರಳತೆಯಿಂದ ಜನಸಾಮಾನ್ಯರ ತಲೆಯು ತುಂಬಿದೆ. ಆತ್ಮಜ್ಞಾನವು ಅಳಿದ ಮೂಲಕ ಎಲ್ಲೆಲ್ಲಿಯೂ ಅಜ್ಞಾನದ ಕತ್ತಲೆಯ ಕವಿದಿರುವದು. ಈ ಕತ್ತಲೆ ಯನ್ನು ಕಳೆಯುವ ದಿವ್ಯ ಕೆಲಸವನ್ನು ಶ್ರೀ ಭಾವೂಸಾಹೇಬ ಮಹಾರಾಜ ರವರು ಮಾಡಿರುವರು. “ ಶಬ್ದ ಜ್ಞಾನದಿಂದ ಮರುಳಾಗ ಬೇಡಿರಯ್ಯ ಎಂದವರು ಆಗಾಗ ಎಚ್ಚರ ಕೊಡುತ್ತಿದ್ದರು. “ ಅಯ್ಯಾ ! ನಾನೊಬ್ಬ ಕುರುಬ, ನಾನು ವ್ಯಾಕರಣ. ಕೋಶಗಳನ್ನು ಪಠಿಸಿಲ್ಲ. ನನ್ನ ಸ್ವಾಮಿಯು ಮಾತ್ರ ತನ್ನ ಕರುಣದಿಂದ ಒಡಗೂಡಿ, ನನ್ನ ಹೃದಯದಲ್ಲಿ ನೆಲೆಸಿರುವ ಎಂಬುದು ಅವರ ನಿತ್ಯದ ಹೇಳಿಕೆ. ಶ್ರೀಮಹಾರಾಜರವರಿಗೆ ಸಂಸ್ಕೃತ ಬರುವದಿಲ್ಲ, ಅವರು ಉಪನಿಷತ್ತು ಗಳನ್ನೂ- ಭಾಷ್ಯಗಳನ್ನೂ ಓದಿಕೊಂಡಿಲ್ಲ. ಅಂದಮೇಲೆ ಅವರು ಸಾಧುಗಳಾ ಗುವದೆಂತು ? ಎಂಬುದು ಅನೇಕರ ಆಕ್ಷೇಪ, ಈ ಅಜ್ಞರಿಗೆ ವಿದ್ವತ್ತು ಹಾಗು ಆತ್ಮಜ್ಞಾನ ಇವುಗಳಲ್ಲಿಯ ಭೇದವೇ ತಿಳಿಯುವದಿಲ್ಲ. ವೇದಗಳು ಕಂಠರವರಿಂದ ಉಸುರಿರುವದೇನಂದರೆ :- ದ್ವೇ ವಿದ್ಯೆ ಇಹ ವೇದಿತವೆ | ಯತ್ಪರಾ ಚ ಅಪರಾ ಚೇತಿ । ಅಪರಾ ಚ ಯದ್ ಖಲ್ವಿದೋ ಯಜುರ್ವೇದೊಥರ್ವವೇದ: ಸಾಮವೇದ: 1 ಪರಾ ಯಯಾ ತದಕ್ಷರೆಮಧಿಗಮ್ಯತೆ || ವಿದ್ವತ್ವವೂ, ಆತ್ಮಜ್ಞಾನವೂ, ಪರಾವಿದ್ಯೆಯೂ ಅಪರಾವಿದ್ಯೆಯೂ ಶಬ್ದಜ್ಞಾನವೂ, ನಿಃಶಬ್ದ ಜ್ಞಾನವೂ ಇವುಗಳಲ್ಲಿ ಭೂಮ್ಯಾಕಾಶದಷ್ಟು ಅಂತರ ವಿದೆ. ವೇದಶಾಸ್ತ್ರವನ್ನು ಪಠಿಸುವದರಿಂದ ಆತ್ಮಜ್ಞಾನ ಆಗಿಯೇ ತೀರುವ ದೆಂದಲ್ಲ. ಅದು ಇಲ್ಲದಿದ್ದರೂ ಆತ್ಮಜ್ಞಾನವು ಆಗಬಲ್ಲದು. ಸ್ಥಾಣುರಯಂ ಭಾರಹರೋ- ವೇದಾ ನಧೀತ್ಯ ನ ವಿಜಾನಾತಿ ಯೋರ್ಥ೦ || ಅನುಭೂತಿಂ ವಿನಾ ನ ವೃಥಾ ಬ್ರಹ್ಮಣಿ ಮೋದತೇ ಪ್ರತಿಬಿಂಬಿತ-ಶಾಖಾಗ್ರ- ಫಲಾಸ್ವಾದನಮೋದವತ್ || 1 ಪ್ರಸ್ತಾವನೆ ಇತ್ಯಾದಿ ವೇದವಾಕ್ಯಗಳು ಕೂಡ ಬರಿ ವಿದ್ವತ್ವ ಹಾಗೂ ಆತ್ಮಜ್ಞಾನ ಇವುಗಳಲ್ಲಿಯ ಭೇದವನ್ನು ಕಾಣಿಸುವವು. ಪ್ರತ್ಯಕ್ಷವಾದ ಅನುಭವವನ್ನು ಪಡೆಯದೆ ಬರಿ ವೇದಾಂತ ಗ್ರಂಥಗಳನ್ನೋದಿ ತಾವು ಬ್ರಹ್ಮ ಆದೆವೆಂದು ಭಾವಿಸುವುದು ಆತ್ಮವಂಚನೆಯೆ ಸರಿ ! ಶ್ರೀ ಭಾವೂಸಾಹೇಬ ಮಹಾರಾಜರವರು ಇಂಥ ಘನತೆಯನ್ನು ಪಡೆದುದು ಕೇವಲ ಆತ್ಮಜ್ಞಾನಪಾರಂಗತತೆಯಿಂದಲೇ ! ಎಲ್ಲ ಉಪನಿಷತ್ತು ಗಳ ಸಾರವನ್ನು ಅವರು ಅನುಭವಿಸಿದ್ದರು. ಅವರು ಉಪನಿಷತ್ತುಗಳ ತಂದೆಯನ್ನು ತಮ್ಮ ಕಂಠದಲ್ಲಿ ಧರಿಸಿದ್ದರು. ಶ್ರೀ ತುಕಾರಾಮರವರು ಉಸುರಿದ್ದೇನಂದರೆ- ವೇದ ಆಮ್ಲಾವರೀ ರುಸೋನಿಯಾ ಗೇಲಾ | ಆಮ್ಲ ತ್ಯಾಚ್ಯಾ ಬಾಲಾ ಧರಿಲೆ ಕಂಠಿ || ( ವೇದಗಳು ನಮ್ಮ ಮೇಲೆ ಮುನಿದು ತೆರಳಿದರೆ, ನಾವು ಅವರ ಅಪ್ಪನನ್ನು ಕಂಠದಲ್ಲಿ ಧರಿಸಿರುವೆವು. ) ಆತ್ಮಜ್ಞಾನಕ್ಕೆ ಶಬ್ದಜ್ಞಾನವು ನೆರವಾಗುವದು, ಆದರೆ ಅದು ಅದಕ್ಕೆ ಅಪರಿಹಾರ್ಯವಾದುದಲ್ಲ. ಈ ತತ್ವವನ್ನು ಸದೈವ ಅಪ್ಪಿದವರಲ್ಲಿಯೆ ನಿಃಶಬ್ದ ಜ್ಞಾನದ ಪ್ರೀತಿಯು ಬಲಿತು, ಅವರಿಗೆ ಬುದ್ಧಿಯ ಆಚೆಗಿನ ಪರಮಾತ್ಮನನ್ನು ಪಡೆಯುವ ದಾರಿಯು ದೊರೆಯುವದು. ಪರಮಾತ್ಮನ ನಾಮವನ್ನು ನೆನೆದೊಡನೆ ಆತನ ರೂಪವು ಸಹಜವಾಗಿಯೇ ಪ್ರಕಟವಾಗುವದು. ಹಗ- ಲಿರುಳು ನಾಮವನ್ನು ನೆನೆದರೆ, ಭಗವಂತನು ಭಕ್ತನಿಂದ ಅಗಲಲರಿಯನು. ವನಾಂತರಕ್ಕೆ ತೆರಳಬೇಡಿರಿ. ಕುಳಿತಲ್ಲಿಯೆ ನಿಮಗೆ ಶ್ರಮದ ಫಲವು ಲಭಿಸುವದು :- ನಿಶ್ಚಿಂತರಾಗಿ ಕುಳಿತು ಚಿತ್ರವ ವಿಮಲಗೊಳಿಸಿರಿ ! (ಅ೦ದರೆ) ಅಂತಪಾರವಿಲ್ಲದ ಸುಖವು ದೊರೆಯುವದಯ್ಯ ! || ೧ || ಅಂತರಂಗದಲ್ಲಿ ಗೋಪಾಲನು ನೆಲೆಸುವ ಕುಳಿತಲ್ಲಿಯೇ ಆಯಾಸದ ಫಲವು ಲಭಿಸುವದಯ್ಯ || ೨ || ಈ ಭಾವೂಸಾಹೇಬ ಮಹಾರಾಜರವರು ರಾಮ-ಕೃಷ್ಣ-ಹರಿ - ಮುಕುಂದ-ಮುರಾರಿ ಎಂಬ ಮಂತ್ರವ ಕಾಲಕಾಲಕೆ ನೆನೆಯಿರಯ್ಯ ತುಕಾ ಅನ್ನುವ :
- -
ಭಾವವು ಏಕವಿಧವಾದೊಡನೆ ನಾನು ಇಂಥ ದಿವ್ಯ ದರ್ಶನಗಳನ್ನು ದಯಪಾಲಿ. 1| 2 || ಸುವೆನಯ್ಯ || ೪ || 22 ಶ್ರೀ ಭಾವೂಸಾಹೇಬ ಮಹಾರಾಜರವರ ಈ ಉಪದೇಶವು ಹೃತ್ಪಟದ ಮೇಲೆ ಕೊರದಿಡುವಂತಹದಿಲ್ಲವೇ ? ಶ್ರೀ (a) ಭಾವೂಸಾಹೇಬ ಮಹಾರಾಜರವರ ಶಿಷ್ಯವೃಂದವು ಬಲು ದೊಡ್ಡದು. ಅವರ ಕೆಲ ಪ್ರಮುಖ ಶಿಷ್ಯರ ಹೆಸರುಗಳನ್ನು 'ನಿತ್ಯ ನೇಮಾ ವಲಿ' ಯಲ್ಲಿಯ ಒಂದು ಮರಾಠಿ ಪದದಲ್ಲಿ ಕಾಣಬಹುದು. ಇಲ್ಲಿ ಅವರ ಹಿರಿ ಶಿಷ್ಯತ್ರಯರ ಅಲ್ಪ ಪರಿಚಯವನ್ನಷ್ಟೇ ಮಾಡಿಕೊಡಲಾಗಿದೆ. ೧. ಶ್ರೀ ಅ೦ಬುರಾವ ಬಾಬಾ ಅವರು :- - ಶ್ರೀ ಬಾಬಾ ಅವರು ಶ್ರೀ ಮಹಾರಾಜರವರ ಪಟ್ಟ ಶಿಷ್ಯರು. ಶ್ರೀ ಸಮರ್ಥ ರಾಮದಾಸ ಸ್ವಾಮಿ ಗಳಿಗೆ ( ಕಲ್ಯಾಣ' ರಿದ್ದಂತೆ, ಶ್ರೀ ಮಹಾರಾಜರವರಿಗೆ ( ಬಾಬಾ ” ಅವರು. ಅಷ್ಟು ನಿಷ್ಠೆ, ಅಷ್ಟು ಅನನ್ಯತೆ, ಅಷ್ಟು ಉಜ್ವಲ ಸಾಧನ-ಅನುಭಾವಗಳು, ಶ್ರೀ ಬಾಬಾ ಅವರವು. ಶ್ರೀ ಬಾಬಾ ಅವರು ಜನಿಸಿದುದು, ಜಿಗಿಜಿನ್ನಿಯಲ್ಲಿ, ಬೆಳೆದುದು ನಿಂಬರಗಿಯಲ್ಲಿ, ಬಾಳಿದುದು ಇಂಚಗಿರಿಯಲ್ಲಿ. ಬಾಲ್ಯದಲ್ಲಿ ಅವರಿಗೆ ನಿಂಬರಗಿ ಮಹಾರಾಜರವರ ದರ್ಶನ ಪ್ರಸಾದಗಳು ಲಭಿಸಿದವು. ಯೌವನದಲ್ಲಿ ಪತ್ನಿಯ ವಿಯೋಗವಾದಾಗ ಶ್ರೀ ದತ್ತರ ದೃಷ್ಟಾಂತವಾಗಿ, ಶ್ರೀ ಮಹಾರಾಜರವರ ಅನುಗ್ರಹದ ಭಾಗ್ಯವು ದೊರೆಯಿತು. ಬಡತನವು `ನಿರಂತರವಾಗಿ ಅವರನ್ನು ಬೆಂಬಳಿಸಿದರೂ, ಸದ್ಗುರುಗಳ ಅನುಗ್ರಹವೂ, ಅದರಿಂದ ನಡೆದ ಅವಿರತ ಸಾಧನವೂ, ಪಡೆದ ಅಮೃತ ಅನುಭಾವವೂ, ಅವರನ್ನು ಸದೈವ ಆನಂದದಲ್ಲಿ ಇರಿಸುತ್ತಿದ್ದವು. ಶ್ರೀ ಮಹಾರಾಜರವರು ಬಾಬಾ ಅವರಿಗೆ ಸಾಕ್ಷಾತ್ ದೇವರಾಗಿದ್ದರು. ಅವರ ಆಜ್ಞೆ ಇವರಿಗೆ ವೇದ ; ಪ್ರಸ್ತಾವನೆ ಅವರ ಸೇವೆ ಇವರ ಧರ್ಮ-ಕರ್ಮ. ಆದ್ದರಿಂದಲೇ ಶ್ರೀ ಬಾಬಾ ಅವರು ಗುರುವಿನಲ್ಲಿ ಬೆರೆತರು. ಅವರ ಹಿರಿತನದಲ್ಲಿ ಮೆರೆದರು. ” ಅವರ ಅವಿಶ್ರಾಂತ ಸಾಧನದ ಮೂಲಕವೂ ಅಲೌಕಿಕ ಅನುಭಾವದ ಮೂಲಕವೂ, ನಿಃಸೀನ ಭಕ್ತಿ-ಸೇವೆಗಳ ಮೂಲಕವೂ, ಶ್ರೀ ಮಹಾರಾಜರವರು ಅವರಿದ್ದ ಇಂಚಗಿರಿ ಯಲ್ಲಿ ತಮ್ಮ ಮಠವನ್ನು ಸ್ಥಾಪಿಸಿದರು, ಅವರ ಹತ್ತಿರವೆ ನೆಲೆಸಿದರು. ಅವರ ನಿರಲಸವಾದ ಸೇವೆಯಿಂದ ಸಂತುಷ್ಟರಾದ ಮಹಾರಾಜರವರು - * ಧನ್ಯ ಧನ್ಯನಯ್ಯ ಅಂಬುರಾಯಾ ! ನಿನ್ನ ಸೇವೆಯಿಂದ ಧನ್ಯನಾದೆ' ಎಂದು ಅವರಿಗೆ ತಮ್ಮ ಮೆಚ್ಚುಗೆಯನ್ನು ಸಲ್ಲಿಸಿದರು. ಇಂಥ ಶಿಷ್ಯವರರಿಗೆಯೆ ಶ್ರೀ ಮಹಾರಾಜರವರು ಪರಮಾರ್ಥ-ಪ್ರಸಾರವನ್ನು ಮಾಡಲು ಆಜ್ಞಾಪಿಸಿ ದುದು ತೀರ ಸಹಜವಾದುದು. ಮಹಾರಾಜರವರು ಸಮಾಧಿಸ್ಥರಾದ ಮೇಲೆ, ಶ್ರೀ ಬಾಬಾ ಅವರು ಸುಮಾರು ೨೦ ವರುಷ - ನಾರಾಯಣ' ನ ಭಕ್ತಿಯನ್ನು ಬೆಳೆಸಿದರು. ಕೊನೆಗೆ ಆತನನ್ನು ನೆನೆಯುತ್ತಲೆ ದೇಹವನ್ನು ಇಟ್ಟರು. ೨. ಶ್ರೀ ಶಿವಲಿಂಗವ್ವಕ್ಕನವರು :- ಶ್ರೀ ಮಹಾರಾಜರವರ ಶಿಷ್ಯರಲ್ಲಿ ಅವರ ಶಿಷ್ಯರನೇಕರಲ್ಲಿಯೂ ಕೂಡ ಅಕ್ಕನವರು ಅಗ್ರೇಸ ರರು, ಸಾಧನದ ಉತ್ಕಟತೆಯಲ್ಲಾಗಲಿ, ಅನುಭಾವದ ಉಜ್ವಲತೆಯಲ್ಲಾ ಗಲಿ, ಇವರನ್ನು ಸರಿಗಟ್ಟುವವರು ತೀರ ವಿರಲ. ಮೀರುವ ಮಾತಂತೂ ಹಾಗಿರಲಿ, ಶ್ರೀ ಬಸವಣ್ಣನವರಿಗೆ ಮಹಾದೇವಿಯಕ್ಕನವರೂ, ಶ್ರೀ ಸಮರ್ಥ ರಿಗೆ ವೇಣು ಅಕ್ಕನವರು ಇದ್ದಂತೆ, ಶ್ರೀ ಮಹಾರಾಜರವರಿಗೆ ಶಿವಲಿಂಗವ್ವಕ್ಕೆ ನವರು. ಅಕ್ಕನವರ ಯೋಗ್ಯತೆಯು ಮೇಲ್ಕಾಣಿಸಿದ ಮಹಾ ಮಹಿಳೆಯರಿಗಿಂತ ಯಳ್ಳಷ್ಟು ಕಡಿಮೆಯಿರಲಿಲ್ಲ. ಅಕ್ಕನವರು ಜತ್ತಿಯವರು, ಬಾಲ್ಯದಲ್ಲಿಯೇ ವೈಧವ್ಯದ ಪೆಟ್ಟು ತಗಲಿದ ಮೂಲಕ ಅತೀವ ವಿಮಲರಾದಾಗ ಅವರಿಗೆ ಸುದೈವದಿಂದ ಶ್ರೀ ಮಹಾರಾಜರವರ ದರ್ಶನ-ಅನುಗ್ರಹಗಳು ಲಭಿಸಿದವು. ಮುಂದೆ ಅಕ್ಕನವರು ಕಠೋರ ಸಾಧನ ಮಾಡಿ, ಅದ್ಭುತವಾದ ಅನುಭಾವ ವನ್ನು ಪಡೆದರು. ಸಾಧನಕ್ಕಾಗಿ ಒಮ್ಮೆ ದೃಢಾಸನದಲ್ಲಿ ಕುಳಿತರೆಂದರೆ ಅವರು ಆರು ಗಂಟೆಗಳ ವರೆಗೆ ಆಸನದಿಂದ ಕದಲುತ್ತಿರಲಿಲ್ಲ. ಮುಂದೆ ಮುಂದೆ ಅಂತೂ ಅವರ ಸಾಧನವು ಹಗಲು-ಇರಳು ಕೂಡಿಯೆ ನಡೆಯಿತು. ಶ್ರೀ ಭಾವೂಸಾಹೇಬ ಮಹಾರಾಜರವರು 95 ಸುಮಾರಾಗಿ ೨೪ ಗಂಟೆ ಅವರು ಸಾಧನದಲ್ಲಿಯೇ ಕಳೆಯುತ್ತಿದ್ದರು. ಅವರ ಬೆನ್ನು ನೆಲವನ್ನು ಮುಟ್ಟುತ್ತಿರಲಿಲ್ಲ. ಇಂಥ ಕಡುತರ ಸಾಧನಬಲದಿಂದಲೂ ಶ್ರೀ ಮಹಾರಾಜರವರ ಅನುಪಮ ಕರುಣದ ಬಲದಿಂದಲೂ ಅಕ್ಕನವರಿಗೆ ಪರಮಾರ್ಥದ ಮೇಲಿನ ಮಟ್ಟವನ್ನು ಮುಟ್ಟುವದು ಸಾಧ್ಯವಾಯಿತು. ಮೇರೆಗೆ ತಮ್ಮ ಜೀವನವನ್ನು ಸಾರ್ಥಕಗೊಳಿಸಿ, ಅವರು ಆಧುನಿಕ ಕಾಲದ ಮಹಿಳೆಯರಿಗೆ ಒಳ್ಳೆಯ ಆದರ್ಶವನ್ನು ಹಿಂದಿರಿಸಲು ಸಮರ್ಥರಾದರು. ಅಕ್ಕನವರಲ್ಲಿ ಕವಿತ್ವಶಕ್ತಿಯೂ ಅಪ್ರತಿಮವಾದುದಿತ್ತು. ಆದುದರಿಂದ ಅವರು ತಮ್ಮ ಉಜ್ವಲ ಭಾವ-ಅನುಭಾವಗಳನ್ನು ಪದಗಳಲ್ಲಿಯೂ ಆರತಿ ಗಳಲ್ಲಿಯೂ ಓಲೆಗಳಲ್ಲಿಯೂ ಅಂದವಾಗಿ ಚಿತ್ರಿಸಿರುವರು. ಅವು ಸಾಧಕ ಬಂಧು-ಭಗಿನಿಯರಿಗೆ ಸ್ಫೂರ್ತಿಯ ಸೆಲೆಗಳಾಗಿವೆ. ಅವುಗಳಲ್ಲಿ ಕೆಲ ಪದಗಳು
- ನಿತ್ಯ-ನೇಮಾವಲಿ” ಯಲ್ಲಿ ಪ್ರಕಟಿಸಲಾಗಿವೆ. ಆದರೆ ಅಕ್ಕನವರ ಸಾಹಿತ್ಯದ
ಬಹುಭಾಗವು ಇನ್ನೂ ಬೆಳಕನ್ನು ಕಾಣಬೇಕು. ಅವು ಪ್ರಸಿದ್ಧವಾದವೆಂದರೆ ಅವರ ಯೋಗ್ಯತೆಯು ಜನರಿಗೆ ಕೆಲಮಟ್ಟಿಗಾದರೂ ತಿಳಿಯಬಹುದು ಯಾಕಂದರೆ ಅನುಭಾವಿಯ ನಿಜವಾದ ಹಿರಿಮೆಯನ್ನು ಅನುಭಾವಿಯೆ ಬಲ್ಲ. ಸಾಮಾನ್ಯರಿಗೆ ಅದು ತಿಳಯುವದು ಸಾಧ್ಯವಿಲ್ಲ. ಅಕ್ಕನವರು ಒಮ್ಮೊಮ್ಮೆ ತಮ್ಮ ಅಂಗೈಯಲ್ಲಿ ಕರ್ಪುರವನ್ನು ಉರಿದು ಶ್ರೀ ಮಹಾರಾಜರವರ ಪ್ರತಿಮೆಗೆ ಬೆಳಗುವದನ್ನು ಕಂಡವರು ಅನೇಕರು ಇದ್ದಾರೆ. ಅಂಥ ಸಾಮರ್ಥ್ಯವು ಅಕ್ಕನವರದು ೩. ಶ್ರೀ ಗಿರಿಮಲ್ಲಪ್ಪನವರು :- ಶ್ರೀ ಮಹಾರಾಜರವರ ಶಿಷ್ಯ ಪರಂಪರೆ ಯನ್ನು ಎಪುಲವಾಗಿ ಬೆಳೆಸಿದ ಶಿಷ್ಯರಲ್ಲಿ ಶ್ರೀ ಗಿರಿಮಲ್ಲಪ್ಪನವರು ಹಿರಿಯ ರೆನ್ನಲು ಅಡ್ಡಿಯಿಲ್ಲ ಇವರ ಕೀರ್ತನ ನಿರೂಪಣಗಳು ಒಳ್ಳೆಯ ಆಕರ್ಷಕ ವಾದವುಗಳು. ಅದರ ಮೂಲಕ ಅವರು ಅನೇಕರಲ್ಲಿ ಪರಮಾರ್ಥ ಪ್ರೀತಿಯನ್ನು ಬೆಳೆಸಿದರು. ಇವರು ಜಂಬುಕಂಡಿಯವರು. ವರ್ತಕರು. ಜೀವನದಲ್ಲಿಯ ಬಗೆಬಗೆಯ ಅನುಭವಗಳನ್ನು ಕಂಡುಂಡು, ಕಷ್ಟ-ನಷ್ಟಗಳನ್ನೂ-ಏರಿಳಿತ ಗಳನ್ನೂ ಅನುಭವಿಸಿ, ಪ್ರಾಯ ಮೀರಿದ ಮೇಲೆ ಇವರು ಶ್ರೀ ಮಹಾರಾಜರವರ ಅನುಗ್ರಹಕ್ಕೆ ಪಾತ್ರರಾದರು. ಉತ್ಸಾಹದಿಂದ ಅವಿಶ್ರಾಂತವಾಗಿ ಸಾಧನ Wo ಪ್ರಸ್ತಾವನೆ ಮಾಡಿದರು. ಒಳ್ಳೆಯ ಪ್ರತೀತಿಯನ್ನು ಪಡೆದರು. ಶ್ರೀ ಮಹಾರಾಜರವರು ಇವರಿಗೆ ಅನ್ಯರನ್ನು ಅನುಗ್ರಹಿಸಲು ಕನಸಿನಲ್ಲಿ ಆಜ್ಞಾಪಿಸಿದರಂತೆ. ಆಮೇಲೆ ಅವರು ತಮ್ಮ ಶಿಷ್ಯ ಸಮುದಾಯವನ್ನು ತುಂಬ ಬೆಳೆಸಿದರು. ಶ್ರೀ ಗಿರಿಮಲ್ಲಪ್ಪನವರು ಬಲು ಉದಾರರು. ಇಂಚಗಿರಿಯಲ್ಲಿಯ ಶ್ರೀ ಮಹಾರಾಜರೀರ್ವರ ಸುಂದರವಾದ ಸಮಾಧಿಗಳೂ, ಅವುಗಳ ನಡುವಿನ ಭವ್ಯವಾದ ಸಭಾಮಂಟಪವೂ ಇವರ ಔದಾರ್ಯದ ಫಲವೇ ಸರಿ ! ಅದಕ್ಕಾಗಿ ಅವರು ಸುಮಾರು ೨೫ ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಿದರು. ಅಗ ಅವರ ಸಾಂಪತ್ತಿಕ ಸ್ಥಿತಿಯು ಸರಿಯಾಗಿರದಿದ್ದರೂ ಅವರು ತಮ್ಮ ನಿಶ್ಚಯ ವನ್ನು ಕೊನೆಗಾಣಿಸಿಯೇ ಬಿಟ್ಟರು. ಇಂಥ ನಿಷ್ಠೆ ಔದಾರ್ಯಗಳು ಅವರವು. ವಾದುದು. ಆತ್ಮ-ಜ್ಞಾನ (0) ಕಾಡಸಿದ್ದರಿಂದ ಶ್ರೀ ನಿಂಬರಗಿ ಮಹಾರಾಜರವರೂ, ಮತ್ತು ಅವರಿಂದ ಶ್ರೀ ಭಾವೂಸಾಹೇಬ ಮಹಾರಾಜರವರೂ ಪಡೆದ ಆತ್ಮಜ್ಞಾನವು ಸನಾತನ ಹಿಂದಿನ ಮಹಾಮುನಿಗಳಾದ ಶ್ರೀವ್ಯಾಸ - ಶುಕ-ನಾರದರೂ, ಮೀನ- ಗೋರಕ್ಷಕರೂ, ಇತ್ತೀಚಿನ ಸತ್ಪುರುಷರಾದ ನಿವೃತ್ತಿ-ಜ್ಞಾನದೇವರೂ ನಾಮದೇವ - ತುಕಾರಾಮ - ಕಬೀರ -ರೈದಾಸಾದಿ ಸಂತರೂ, ಪುರಂದರ- ಕನಕಾದಿ ದಾಸರೂ, ಪ್ರಭುದೇವ-ಅಖಂಡೇಶ್ವರಾದಿ ಶರಣರೂ, ಈ ಆತ್ಮ ಜ್ಞಾನವನ್ನೆಯೆ ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದರು. ಇನ್ನು ಈ ಆತ್ಮಜ್ಞಾನವೆಂದರೇನೆಂಬುದನ್ನು ಅರಿತುಕೊಳ್ಳುವಾ ! ಆತ್ಮಜ್ಞಾನವೆಂದರೆ ತನ್ನನ್ನು ತಾನು ಕಾಣುವದು. ಶ್ರೀಸಮರ್ಥ ರಾಮದಾಸ ಸ್ವಾಮಿಗಳು :- ಪಹಾವೇ ಆಪಣಾಸಿ ಆಪಣ | ಯಾ ನಾವ ಜ್ಞಾನ || ಶ್ರೀ ಭಾವೂಸಾಹೇಬ ಮಹಾರಾಜರವರು ೪೧
- ತನ್ನನ್ನು ತಾನು ಕಾಣುವದೇ ಜ್ಞಾನ' ಎಂದು ಹೇಳಿರುವರು.
ಶ್ರೀಮದ್ ಭಗವದ್ಗೀತೆಯಲ್ಲಿಯೂ ರಾಜಯೋಗದ ಫಲವು ಆತ್ಮದರ್ಶನವು. ಎಂದು ಹೇಳಲಾಗಿದೆ. ಅದರಲ್ಲಿ ಮತ್ತೂ ಹೇಳಿದ್ದೇನಂದರೆ - " ಯತೋಪರಮತೆ ಚಿತ್ರಂ ನಿರುದ್ಧಂ ಯೋಗಸೇವಯಾ । ಯತ್ರ ಚೈನಾತ್ಮನಾತ್ಮಾನಂ ಪಶ್ಯನ್ನಾತ್ಮನಿ ತುಷ್ಯತಿ || ೧ || ಸುಖಮಾತ್ಯಂತಿಕಂ ಯತ್ತತ್- ಬುದ್ಧಿ ಗ್ರಾಹ್ಯ ಮತೀಂದ್ರಿಯಮ್ | ವೇತ್ತಿ ಯತ್ರ ನ ಚೈವಾಯಂ ಸ್ಮಿತಶ್ಚಲತಿ ತತ್ವತಃ || ೨ || ಭ. ಗೀ, ಅಧ್ಯಾಯ ೩ ಆತ್ಮದರ್ಶನವಾದ ಮೇಲೆ ಅತೀಂದ್ರಿಯವಾದರೂ, ಬುದ್ಧಿ ಗ್ರಾಹ್ಯವಾದ ಸುಖವು ಉಂಟಾಗುವದು, ಮತ್ತು ಆ ಸುಖವನ್ನು ಅನುಭವಿಸುತ್ತಿರಲು, ಆಸನದಿಂದ ಅಲ್ಲಾಡಬಾರದೆಂದೆನಿಸುವದು. -ಎಂಬುದು ಮೇಲಿನ ಗೀತಾ. ವಚನದ ಸಾರವು. ಉಪನಿಷತ್ತಿನಲ್ಲಿಯೂ ಪರಂಜ್ಯೋತಿರುಪ ಸಂಪದ್ಯ- ಸೈನ ರೂಪೇಣ ಅಭಿನಿಷ್ಪ ದ್ಯತೆ- ಸೋಽಯಮಾತ್ಮಾ || ಎಂಬ ವಚನವುಂಟು. ಪತಂಜಲಿಯು ಯೋಗದ ಫಲವನ್ನು ತದಾ ದೃಷ್ಟು : ಸ್ವರೂಪೇಽವಸ್ಥಾನಮ್ | - ಎಂದೇ ಹೇಳಿರುವನು. ಶ್ರುತಿ-ಸ್ಕೃತಿ- ಪುರಾಣಗಳು ಸಾರುವ ಆತ್ಮ, ಜ್ಞಾನವು ಸದ್ಗುರುಗಳೆಗೆ ಶರಣು ಹೋದರೇನೇ ಅನುಭವಿಸಲು ಬರುವದು.
- ಸತ್ವದ ಬೆಳದಿಂಗಳು' : ಕಣ್ಣಿನಲ್ಲಿಯ ಕಣ್ಣು ' - ಗ್ರಂಥ ಓದಹೋಗಲು
6 85 ಪ್ರಸ್ತಾ ನನ ಮಾತೃಕೆಗಳಲ್ಲಿದೆ' : ಕಣ್ಣಿನಿಂದಲಿ ನೋಡಿ ಕೈವಲ್ಯವ : ಸೂರ್ಯನಿಲ್ಲದ ಸುಪ್ರಕಾಶ' ( ಚಂದ್ರನಿಲ್ಲದ ಬೆಳದಿಂಗಳು' ಇತ್ಯಾದಿ ವಾಕ್ಯಗಳ ಬೋಧವು ಗುರುಕೃಪೆಯ ಹೊರತು ಸಾಧ್ಯವಿಲ್ಲ. ಎಲ್ಲ ಸಾಧುಸಂತರು ಆತ್ಮಜ್ಞಾನ ವನ್ನು ಪಡೆಯಲು ರಾಜಯೋಗ-ಭಕ್ತಿಯೋಗಗಳ ಮಧುರ-ಮೀಲನವನ್ನು ಮಾಡಿರುವರು. ಆತ್ಮಜ್ಞಾನವು ಆದಮೇಲೆ ದೇವ-ಭಕ್ತರಲ್ಲಿಯ ಭೇದವು ಅಳಿಯುವದು. ಎಲ್ಲ ಭೂತಮಾತ್ರದಲ್ಲಿ ಭಗವಂತನು ಕಾಣತೊಡಗು ವನು. ಮೊದಲು ಆತ್ಮದರ್ಶನವಾಗಿ ತರುವಾಯ ಅಭೇದ-ಬುದ್ಧಿಯು ಜನಿಸುವ ಬಗೆಯನ್ನು ಶ್ರೀ ಜ್ಞಾನೇಶ್ವರರು ಕೆಳಗಿನ ಓವಿಗಳಲ್ಲಿ ಚೆನ್ನಾಗಿ ನಿರೂಪಿಸಿರುವರು- ನುಸರೇ ಮುಖ ಜೈಸೇ ದರ್ಪಣೀ ದೇಖಿಜಿತಸೇ ದರ್ಶನಮಿಸೇ || ವಾಯಾಚಿ ದೇಖಣೇ ಐಸ್-ಗವಲಾಗೇ || ೧ || ಜ್ಞಾನದೇವ ಚಕ್ರಪಾಣೀ ಐಸೇ- ದೋ ಡೊಳಸ್ ಆರನೇ ಪರಸ್ಪರೇ ಪಾಹತಾ ತೈಸೇ ಮುಕಲೇ ಭೇದಾ || ೨ || ( ಚಾಂಗದೇವ ಪಾಸಷ್ಟಿ ) ( ಬರಿ ಮುಖವು ತನ್ನನ್ನು ಕಾಣಲು ಕನ್ನಡಿಯಲ್ಲಿ ನೋಡುತ್ತಿರಲು, ನೋಡುವದೇ ವ್ಯರ್ಥವಾದುದೆಂದು ಎನಿಸತೊಡಗುವದು. ಅದೇಮೇರೆಗೆ ಜ್ಞಾನದೇವ ಚಕ್ರಪಾಣಿಗಳೆಂಬ ಕಣ್ಣುಳ್ಳ ಕನ್ನಡಿಗಳು ಪರಸ್ಪರರ ಬಿಂಬವನ್ನು ಪರಸ್ಪರರಲ್ಲಿ ನೋಡುತ್ತಿರಲು, ಭೇದಭಾವನೆಯನ್ನೆ ಬಿಟ್ಟರು. ಮರೆತು ಮೇಲ್ಕಾಣಿಸಿದ ಅನುಭಾವವನ್ನು ಪಡೆದ ಸಾಧುಗಳು ಅದೆಂಥ ಧನ್ಯರು ! ಮೇಲಿನ ಎರಡು ಓವಿಗಳಲ್ಲಿ ಜ್ಞಾನದೇವರು ಎಲ್ಲ ವೇದ-ಶಾಸ್ತ್ರ- ಪುರಾಣಗಳ ಸಾರವನ್ನು ಸ್ವಲ್ಪದರಲ್ಲಿ ಹೇಳಿರುವರು, ಇದರ ಅನುಭಾವಕ್ಕಾಗಿ ಈ ಭಾವೂಸಾಹೇಬ ಮಹಾರಾಜರನರು ೪೩ ಮೊದಲು ಗುರುಕೃಪೆ, ತರುವಾಯ ಶ್ರವಣ-ಮನನ ಹಾಗು ಅಭ್ಯಾಸ ಈ ಸಾಧನವು ಅತ್ಯವಶ್ಯ. ಅನಂತರ ವಿವೇಕ-ವೈರಾಗ್ಯಗಳು ಜನಿಸಿ, ಸಾಧಕನು ಆತ್ಮದರ್ಶನವನ್ನು ಪಡೆಯಲು ಅರ್ಹನಾಗುವನು. ಆತ್ಮದರ್ಶನವಾದ ಮೇಲೆ ಹೃದಯಗ್ರಂಥಿಯು ಬಿಚ್ಚಿ, ಸಂದೇಹಗಳೆಲ್ಲ ಮಾಯವಾಗಿ, ನೈಷ್ಕರ್ತ್ಯ- ಸಿದ್ದಿಯು ದೊರೆಯುವದು. ಮತ್ತು ದೇವಭಕ್ತರಲ್ಲಿಯ ಭೇದ-ಬುದ್ಧಿಯು ಅಳಿಯುವದು. ಸಾಧಕರು ದೈತದಿಂದ ಅದೈತವನ್ನೂ, ಆಕಾರದಿಂದ ನಿರಾಕಾರವನ್ನೂ, ಸ್ವರೂಪಸ್ಥಿತಿಯಿಂದ ಬ್ರಹ್ಮಸ್ಥಿತಿಯನ್ನೂ ಸಹಜವಾಗಿ ಪಡೆಯುವರು. (9) ಶ್ರೀ ಭಾವೂಸಾಹೇಬ ಮಹಾರಾಜರವರು ತಮ್ಮ ಪಂಥದಲ್ಲಿ ಪ್ರಚುರ ಗೊಳಿಸಿದ ಭಜನ-ಸಂಗ್ರಹದಲ್ಲಿಯೂ ಆತ್ಮಜ್ಞಾನ- ಪಥದ ವಿಚಾರವು ಕೆಲ ಮಟ್ಟಿಗೆ ಒಡಮೂಡಿರುವದು. ಅದರ ಸ್ವರೂಪವನ್ನು ಅರಿಯ ಬಯಸುವವರ ಅವರ - ನಿತ್ಯ-ನೇಮಾವಲಿ' ಎಂಬ ಪ್ರಕಟನೆಯಲ್ಲಿ ಅದನ್ನು ಕಾಣ. ಬಹುದು. ಆದರೂ ಅದರಲ್ಲಿಯ ಮುಖ್ಯ ಸ್ಥಲಗಳನ್ನು ಕಾಣಿಸಿಕೊಟ್ಟರೆ ಓದುಗರಿಗೆ ತುಂಬ ಲಾಭವಾಗಬಹುದೆಂದು ಬಗೆದು ಅವನ್ನು ಕೆಳಗೆ ಸಂಗ್ರಹ ನಾಗಿ ನಿರ್ದೆಶಿಸಿರುವೆವು. • ನೇಮಾವಲಿ ' ಯ ಪುಟಗಳನ್ನು ಕಂಸದಲ್ಲಿ ಕೊಡಲಾಗಿದೆ. C ಸದ್ಗುರುಗಳ ಉಪದೇಶದ ಮೇರೆಗೆ ಅನುಭವವು ಬರತೊಡಗಿತೆಂದರೆ, ಗುರುಚರಣಗಳ ಬಳಿಯಲ್ಲಿ ನಿಲ್ಲುವ ಅಭಿಲಾಷೆಯು ಬೆಳೆಯುವದು (ಪು. ೧೭) ಅಲಕ್ಷದಲ್ಲಿ ಲಕ್ಷವಿಡಲು, ನಿಜವಸ್ತುವು ಪ್ರತ್ಯಕ್ಷವಾಗುವದು. ಸಂತರಿಗೆ ಪ್ರಮಾಣಭೂತವಾದ ಆತ್ಮಜ್ಯೋತಿಯು ಹೊಳೆಯುವದು. ಮಾತ್ರ ಪ್ರತಿ ಕ್ಷಣವನ್ನು ಚೆನ್ನಾಗಿ ವಿನಿಯೋಗಿಸಿ, ಕಾಲವನ್ನು ಸಾರ್ಥಕಗೊಳಿಸಬೇಕು. (೧೭-೧೯) ಅಹಂಕಾರದ ಕುದುರೆಯನ್ನೇರಿ, ಅದನ್ನು ಅಂಕೆಯಲ್ಲಿ ಇರಿಸಿದರೆ, ಅನಾಹತದ ವಿಜಯ ದುಂದುಭಿಗಳು ಮೊಳಗುವವು ಮತ್ತು ಸರ್ವತ್ರ ತದೀಕ್ಷಣ ರೂಪದ ಏಕಾಂತಭಕ್ತಿಯು ಉದ್ಭವಿಸುವದು. (೨೦-೨೧) ' ಪ್ರಸ್ತಾವನೆ ಗುರುಗಳ ಉಪಕಾರವನ್ನು ಮರಳಿಸುವದು ಅವರ ಋಣವನ್ನು ತೀರಿಸು ವದು- ಎಂದೂ ಶಕ್ಯವಿಲ್ಲ. (೨೨-೨೩ ) ತ್ರಿವೇಣಿಯ ಸಂಗಮದಲ್ಲಿ ಪ್ರತಿನಿತ್ಯ ಸ್ನಾನವನ್ನು ಮಾಡಿ, ಆತ್ಮಾರಾಮನ ದರ್ಶನವನ್ನು ಪಡೆದರೆ
- ಕರ್ಮಣಿ ಅಕರ್ಮವೂ ' ( ಅಕರ್ಮಣಿ ಕರ್ಮವೂ' ಸಹಜವಾಗಿ ಸಾಧ್ಯ
ವಾಗುವದು. (೨೩-೨೪) ದೇಹವೇ ನಿಜವಾದ ಪಂಢರಿಯು ; ಆತ್ಮನೇ ನಿಜವಾದ ವಿಠಲನು. (೨೫) ನಿಗುಣ್ಯವನ್ನು ಪಡೆಯಲು ಮೊದಲು ಸತ್ವದ ಸಾಮರ್ಥ್ಯವು ಹುಟ್ಟಬೇಕು. ( ಸನಾನ್ಯತಮಂ ಹನ್ಯಾತ್ | ಸತ್ವಂ ಸನ ಚೈವ ಹಿ| (೨೯) ತನ್ನನ್ನು ತಾನು ಯಾರಾದರೂ ಉದ್ಧರಿಸ ಬದುದು. ಆದರೆ ಅನ್ಯರನ್ನು ಉದ್ಧರಿಸಿದವನೇ ನಿಜವಾದ ಸಾಧುವು. ( ೨೯-೩೦ ) ಗಂಗಾಜಲದಂತೆ ತನ್ನ ಮನಸ್ಸು ವಿಮಲವಾಯಿತೆಂದರೆ ಭಗವಂತನು ಬಳಿಯಲ್ಲಿಯೆ ನಿಲ್ಲುವನು. ಇಂಥ ಪುರುಷರಿಗೆ ಶ್ರುತಿಸಮ್ಮತ ವಾದ ಅಂಗುಷ್ಟ ಪ್ರಮಾಣದ ರೂಪವು ಕಾಣುವದು. ಅನುಭಾವಿಗಷ್ಟೇ ಇದರ ಕುರುಹು ತಿಳಿಯುವದು. ಮಿಕ್ಕವರು ಏನನ್ನೂ ಅರಿಯದೆ ಮಂಕು ಬಡಿದವರಂತೆ ಬರಿ ಮಿಕಿ ಮಿಕಿ ನೋಡತೊಡಗುವರು. (೯೧) ಆತ್ಮರೂಪವು ಜ್ಞಾನಚಕ್ಷುವಿಗೆ ಕಾಣುವ ನೋಟವು. ಚರ್ಮ-ಚಕ್ಷುವು ಅದನ್ನು ಕಾಣಲರಿ ಯದು. ಸತ್ಸಂಗದಿಂದ ಪ್ರಾರಬ್ದ ರೇಷೆಯು ಮೂಡುವದು. ಮತ್ತು ಶ್ರೀಹರಿಯ ಗುಣ, ನಾನು ಘೋಷವನ್ನು ಮಾಡುತ್ತಲಿದ್ದರೆ, ಪಾತಕಗಳೆಲ್ಲ ಸುಟ್ಟು ಹೋಗುವವು. (೩೨) ದೇಹಭಾವವು ಮಾಯವಾಗದೆ, ವಸ್ತುವು ದೊರೆಯುವದಿಲ್ಲ. (೩೨) ಸಾಧಕರು ಕಲ್ಪನೆಯ ಅಡವಿಯನ್ನು ಸೇರದೆ - ತಾವು ತಮ್ಮನ್ನೆಯೆ ಕಂಡುಕೊಂಡು ಸ್ವಾನಂದದಲ್ಲಿ ಮುಳುಗಬೇಕು. (೩೨) ಎಲ್ಲ ಪ್ರಾಣಿಗಳ ಮೇಲೆ ದಯೆದೋರುವದೇ ಆತ್ಮಜ್ಞಾನದ ಪ್ರಥಮ ಸಾಧನವು. ( ೩೩ ) ಅಂತರಂಗದಲ್ಲಿ ಸಾಗರದ ಶಾಂತಿಯು ಜನಿಸಿದ್ದ ಸಾಧುಗಳು ಪೃಥಿವಿಯ ಮೇಲೆ ಜಡ-ಮೂಢ ಪಿಶಾಚಿಗಳಂತೆ ಅಲೆದಾಡುವರು. ಅವರು ಜನರಿಗೆ ಮೂರ್ಖರಂತೆ ಕಾಣುವರು. ಆದರೆ ಅವರು ಮುಳುಗಿರುವದು ಬ್ರಹ್ಮಾನಂದದಲ್ಲಿ, ಅವರ ವರ್ಮವು ಯೋಗಿಗಳಲ್ಲದವರಿಗೆ ತಿಳಿಯುವದಿಲ್ಲ. (೩೪-೩೫) ಲವಣವು ಸಾಗರದಲ್ಲಿ ಬೆರೆತು ತದಾಕಾರವಾಗುವಂತೆ, ಸಾಧು ಗಳು ಬ್ರಹ್ಮನಲ್ಲಿ ಬೆರೆತ ಮೂಲಕ ಅವರ ನಾಮ ರೂಪಗಳು ಲಯವಾಗುವವು. ಈ ಭಾವೂಸಾಹೇಬ ನುಹಾರಾಜರವರು (೩೩) ಸಾಧನವು ಮುಂದುವರಿದ ಮೇರೆಗೆ ಸದ್ಭಕ್ತಿಯು ಹುಟ್ಟಿ, ಅದರಿಂದ ಸಾಕ್ಷಾತ್ಕಾರವಾಗುವದು. (೩೭) ಅಡಿಗಡಿಗೆ ಶ್ರೀಮುಖವನ್ನು ಕಂಡ ಮೇಲೆ ಮುಂದೆ ದೇವರ ಪಾದಗಳ ಸಾಕ್ಷಾತ್ ದರ್ಶನವಾಗುವದು. (೩೮) ಶ್ರೀವಿಠಲನು ಹೇಳುವದೇನಂದರೆ, "ಎಲೈ ತುಕಾರಾಮನೇ ನಿನ್ನ ಅಭಂಗ ಗಳನ್ನು ಪ್ರೀತಿಯಿಂದ ಪಠಿಸುವವರ ಆಪತ್ತನ್ನು ನಾನು ಸ್ವತಃ ಅಲ್ಲಗಳೆ ಯುವೆ.' (೩೯) ಯಾವ ಗುರುಗಳ ಹತ್ತಿರ ನಿರಂತರವಾಗಿ ದೇವನಿರುವನೋ ಅವರ ಅಡಿಗಳನ್ನು ದೃಢವಾಗಿ ಸಿಡಿದರೆ, ತಮಗೆ ದೇವರು ದೊರೆಯುವನು. (೪೦) ಎಡಕ್ಕೆ ಬಲಕ್ಕೆ, ಕೆಳಗೆ ಮೇಲೆ, ಒಳಗೆ ಹೊರಗೆ, ಸರ್ವತ್ರ ದೇವರ ದರ್ಶನವಾಗುವದು (೪೦) ಅದಾದ ಕೂಡಲೆ, ಆನಂದದಿಂದ ಮೂರೂ ಲೋಕಗಳು ತುಂಬಿ ತುಳಕುವವು. (ಪು. ೧೦) ದೇಹದಲ್ಲಿಯ ದೇವರನ್ನು ಕಂಡು ನಿರ್ಗುಣದ ಜ್ಯೋತಿಯಿಂದ ಆತನನ್ನು ಬೆಳಗಬೇಕು. ಚಂದ್ರ ಸೂರ್ಯರು ಅಲ್ಲಿ ದೀಪದ ಕೆಲಸವನ್ನು ಮಾಡುತ್ತಾರೆ. ಪಾಂಡುರಂಗನ ಆರತಿಯ ಕಾಲಕ್ಕೆ ಮಹಾದ್ವಾರದಲ್ಲಿ ಸಿಂಹಶಂಖನಾದವು ಭೇರಿಯ ಗರ್ಜನೆಯೂ ಆಗತೊಡಗುವದು. ( ಪು. ೩) ಅಂತರಂಗದಲ್ಲಿ ಆರತಿಯು ನಡೆದಿರಲು, ಆ ಬೆಳಕಿನಲ್ಲಿ ರವಿಶಶಿಗಳು ಮಾಯವಾಗುವವು. ಮತ್ತು ಅನಾಹತದ ವಾದ್ಯಗಳು ನಿನದಿಸುವವು. ಆನಂದ ಸಾಗರದಲ್ಲಿ ಮುಳುಗಿದ ಮೇಲೆ ಪ್ರಾಪ್ತವಾದ ಅವಸ್ಥೆಯನ್ನು ಮಾತಿನಿಂದ ಬಣ್ಣಿಸುವದು ಸಾಧ್ಯವಿಲ್ಲ. ಇಲ್ಲವೆ ಮನಸ್ಸಿನಿಂದ ಅರಿಯಲೂ ಬರುವದಿಲ್ಲ. ( ಪು. ೫). - ಬೋಧ- ಸಾರ ಶ್ರೀ ಮಹಾರಾಜರವರ ಬೋಧ-ಸುಧೆ ' ಯು ನೀತಿಶಾಸ್ತ್ರವನ್ನೂ ಅನುಭಾವಶಾಸ್ತ್ರವನ್ನೂ ಕುರಿತು ಬರೆಯಲಾದ ಗ್ರಂಥವು. ಅದು ಗಾತ್ರದಲ್ಲಿ ಚಿಕ್ಕದಾದರೂ, ಗುಣದಲ್ಲಿ ಮೇರಗತಿಯದು. ಅದರಲ್ಲಿ (೧) ನಡತೆಯ ಮೂಲ ತತ್ವಗಳು, (೨) ದುರ್ಗುಣ ತ್ಯಾಗ, (೩) ಸದ್ಗುಣ-ಸಂಪಾದನ ಹಾಗೂ (೪) ಪರಮಾರ್ಥ-ಮಾರ್ಗ ಎಂಬ ನಾಲ್ಕು ವಿಭಾಗಗಳಿರುವವು. 86 ಪ್ರಸ್ತಾವನೆ ಮೊದಲನೆಯ ಭಾಗದಲ್ಲಿ, ಮನುಜನ ನಡತೆಯ ಬಲವು ದೇವರ ಬಲಕ್ಕಿಂತ ಮಿಗಿಲಾದುದು ಎಂಬ ಮೂಲ ತತ್ವವನ್ನು ಹೇಳಿ (ಕ್ರ. ೩) ಬೀಜದಂತೆ ಬೆಳೆಯು ಬರುವದರಿಂದ, ತಮ್ಮ ಒಳಿತು ಕೆಡಕು ನಡತೆಯ ಮೇರೆಗೆ ತಮಗೆ ಒಳಿತು ಕೆಡಕು ಫಲವು ದೊರೆಯುವದು ಎಂಬ ಸರಲ ಸಿದ್ಧಾಂತವನ್ನು ಉಸುರಲಾಗಿದೆ. (ಕ್ರ. ೪) ಈ ರೀತಿ ತಮ್ಮ ನಡತೆಯ ತಮ್ಮ ಸುಖದುಃಖಗಳಿಗೆ ಕಾರಣವಿರುವ ಮೂಲಕ, ತಾವು ಹೆಜ್ಜೆ ಹೆಜ್ಜೆಗೆ ತನ್ನ ನಡತೆಯನ್ನು ಪರೀಕ್ಷಿಸುತ್ತಿರಬೇಕೆಂದು ಸೂಚಿಸಲಾಗಿದೆ. (ಕ್ರ. ೫) ಮುಂದೆ ಒಳ್ಳೆಯ ನಡತೆಯನ್ನೂ ಕೆಡಕು ನಡತೆಯನ್ನೂ ಅರಿಯಲು, ಹಿಂದಿನ ಸಂತರ ನುಡಿಯನ್ನು ಪ್ರಮಾಣವೆಂದು ಭಾವಿಸಬೇಕು ಮತ್ತು ಅವರ ನಡತೆ ಯನ್ನು ಅನುಕರಿಸಬೇಕು ಎಂದು ಹೇಳಲಾಗಿದೆ. (ಕ್ರ. ೭). ನಡತೆಯನ್ನು ಚೆನ್ನಾಗಿರಿಸಲು, ಮೊದಲು ದುರ್ಗುಣಗಳನ್ನು ಬಿಡಲು, ಬೇಕು. ಆದುದರಿಂದ ಎರಡನೆಯ ಭಾಗದಲ್ಲಿ, ಸ್ವಾಭಾವಿಕವಾಗಿಯೆ ದುರ್ಗುಣಗಳಾವವು, ಅವನ್ನು ಬಿಡುವದೆಂತು, ದುರಾಚರಣದ ಕೆಟ್ಟ ಪರಿಣಾಮಗಳಾವವು, ಎಂಬುದನ್ನು ವಿವರಿಸಲಾಗಿದೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಷಡ್ರಿಸುಗಳಾದ ಪ್ರಧಾನ ದುರ್ಗುಣ ಗಳನ್ನೂ, ತರುವಾಯ ಕಪಟ, ಅನ್ಯಾಯ, ಅಲಸಿಕೆ, ಇತ್ಯಾದಿಗಳನ್ನೂ ವಿವರಿಸಿ, ಅವೆಲ್ಲವುಗಳನ್ನು ತ್ಯಜಿಸಲು ಉಪದೇಶಿಸಲಾಗಿದೆ. ಕೆಟ್ಟ ರೀತಿ ಯಿಂದ ನಡೆದರೆ, ಪಾಪದ ಪ್ರಮಾಣದಿಂದ ಶಿಕ್ಷೆಯಾಗುವದು ತಪ್ಪದು- ಎಂದು ಎಚ್ಚರಿಸಲಾಗಿ ಮುಂದೆ ಆಧಿಭೌತಿಕ, ಆಧ್ಯಾತ್ಮಿಕ ಹಾಗೂ ಆಧಿದೈವಿಕ ಎಂಬ ಶಿಕ್ಷೆಯ ಮೂರು ಬಗೆಗಳನ್ನೂ ಅರುಹಲಾಗಿದೆ. ಅಲಸಿಕೆಯು ಮುಖ್ಯ ಶತ್ರುವು. ಅವನು ಪ್ರಪಂಚ-ಪರಮಾತ್ಮಗಳೆರಡನ್ನೂ ಹಾಳುಮಾಡುವ ಆತನಿಗೆ ತನ್ನಲ್ಲಿ ಎಡೆಯನ್ನು ಕೊಡಬಾರದು ಎಂದೂ ಸೂಚಿಸಲಾಗಿದೆ. ಕೊನೆಗೆ, 1 ಚಿಂತೆಯು ಬಲು ಕೆಟ್ಟದು. ಅದರ ಬೆಳೆಯು ಬಲು ಹುಲಸಾಗಿ ಬೆಳೆಯುವದು. ಆದುದರಿಂದ, ( ಎಲ್ಲವೂ ಈಶ್ವರಾಧೀನವಿದೆ. ಸುಮ್ಮನೆ ಚಿಂತೆಯನ್ನು ಮಾಡಿ ಫಲವೇನು ? ' ಎಂದು ಮನಸ್ಸಿಗೆ ಬೋಧಿಸಿ, ಕೇವಲ ಪರಮಾತ್ಮನ ಚಿಂತೆಯನ್ನೆಯೆ ಮಾಡಬೇಕು. ಅವನೇ ಎಲ್ಲವನ್ನು ಕೊಡಲು
- ಭಾವೂಸಾಹೇಬ ಮಹಾರಾಜರವರು
ಸಮರ್ಥನು ಎಂದು ಒಳ್ಳೆಯ ಕಳಕಳಿಯ ಬೋಧೆಯನ್ನರುಹಿ, ಓದುಗರನ್ನು ಸದ್ಗುಣ-ಸಂಪಾದನದ ದಾರಿಯ ಮೇಲೆ ತಂದಿರಿಸಲಾಗಿದೆ. ದುರ್ಗುಣ- ತ್ಯಾಗವು ನಡತೆಯ ಅಭಾವಾತ್ಮಕ (Negative) ಮಗ. ಲಾದರೆ, ಸದ್ಗುಣ-ಸಂಪಾದನವು ಅದರ ಭಾವಾತ್ಮಕ ( Positive) ಮಗ್ಗಲು, ಆದುದರಿಂದ, ಮುಂದಿನ ಮೂರನೆಯ ಭಾಗದಲ್ಲಿ ಮುಖ್ಯ ಸದ್ಗುಣಗಳಾ ವವು, ಅವುಗಳ ಮಹತ್ವವೇನು, ಮತ್ತು ಅವನ್ನು ನಡತೆಯಲ್ಲಿ ಇಳಿಸುವ ದೆಂತು ಎಂಬುದನ್ನು ವಿವರಿಸಲಾಗಿದೆ. ವಿವೇಕ, ಸದ್ಭುದ್ಧಿ, ಇಂದ್ರಿಯ ನಿಗ್ರಹ, ಅಪರಿಗ್ರಹ, ಸಹಿಷ್ಣುತೆ, ಅಹಿಂಸೆ, ಸತ್ಯ, ಎಲ್ಲ ಭೂತಗಳಲ್ಲಿ ಆತ್ಮಭಾವ, ಪರೋಪಕಾರ, ದಯೆ, ಸಮಾಧಾನ, ಕರ್ತವ್ಯನಿಷ್ಠೆ, ಇತ್ಯಾದಿ ಎಲ್ಲ ಮಹತ್ವದ ' ಸದ್ಗುಣಗಳನ್ನು ಆಚರಣೆಯಲ್ಲಿ ತರಬೇಕು ಎಂದು ಹೇಳಲಾಗಿದೆ. ಪ್ರಪಂಚದಲ್ಲಿ ಕೂಲಿಯವನಂತೆ ನಡೆಯಬೇಕು. ಆದರೆ ಲಕ್ಷವನ್ನೆಲ್ಲ ಪರಮಾರ್ಥದೆಡೆಗೆ ಹೊರಳಿಸಬೇಕು. ಮಕ್ಕಳು ದೊಡ್ಡವರಾದ ಮೇಲೆ, ಪ್ರಪಂಚವನ್ನು ಅವರಿಗೆ ಒಪ್ಪಿಸಿ ಮರಳಿ ಅದರೆಡೆಗೆ ಕಣ್ಣೆತ್ತಿ ನೋಡಬಾರದು. ತಾವು ಪರಮಾರ್ಥದಲ್ಲಿ ಮುಳುಗಿರಬೇಕು. ಅರಿಷಡ್ವರ್ಗ ದೊಡನೆ ಹೋರಾಡಿ, ಸದ್ಗುಣಗಳನ್ನು ಸಂಗ್ರಹಿಸಿ, ಪರಮಾತ್ಮನ ಪ್ರೀತಿ ಯನ್ನು ಪಡೆದು, “ ಸ್ವರಾಜ್ಯವನ್ನು' ಅಂದರೆ ಆತ್ಮನ ಅಳಿಯದ ಆನಂದವನ್ನು ದೊರಕಿಸಬೇಕು ಎಂಬ ಜೀವನದ ಧೈಯವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಪರಮಾರ್ಥ-ಮಾರ್ಗವೆಂಬ ನಾಲ್ಕನೆಯ ಭಾಗದಲ್ಲಿ, ಪರಮಾರ್ಥವನ್ನು ನಡೆಯಿಸುವ ರೀತಿಯನ್ನು ಅರುಹಲಾಗಿದೆ. 'ಸಂಸಾರವು ಕ್ಷಣಭಂಗುರವೂ ದುಃಖಮಯವೂ ಇದ್ದುದರಿಂದ, ಅದರಿಂದ ಬಿಡುಗಡೆಯಾಗಲು, ದುರ್ಗುಣ- ತ್ಯಾಗವನ್ನೂ ಸದ್ಗುಣ- ಸಂಪಾದನವನ್ನೂ ಮಾಡಿ, ಗುಪ್ತ ರೂಪದಲ್ಲಿ, ಅಂದರೆ ಪರಮಾತ್ಮನಲ್ಲಿ, ಐಕ್ಯ ಹೊಂದಿದ ಸದ್ಗುರುಗಳಿಗೆ ಶರಣು ಹೋಗಬೇಕು. ಮತ್ತು ಅವರಿಂದ ಅನುಗ್ರಹವನ್ನು ಪಡೆದು, ಸದೈವ ಪರಮಾತ್ಮನ ಧ್ಯಾನದಲ್ಲಿ ತೊಡಗಿರಬೇಕು. - ಕರ ಸೇ ಕಾಮ ಕರೋ ಹರಿ ಸ ಧ್ಯಾನ ಧರೋ !' ಕೈಯಿಂದ ಕೆಲಸವನ್ನೂ ಮನಸ್ಸಿನಿಂದ ಧ್ಯಾನವನ್ನೂ ಮಾಡುತ್ತಿರಬೇಕು. ಸಂಸಾರದಲ್ಲಿ ಉದಾಸೀನರಾಗಿಯೂ, ಪರಮಾರ್ಥದಲ್ಲಿ ಉಲ್ಲಸಿತರಾಗಿಯೂ ಇರಬೇಕು. ನಾಮಸ್ಮರಣೆಯನ್ನು ಅಖಂಡವಾಗಿ ನಡೆಯಿಸಿತೆಂದರೆ ಸ್ವರೂಪದಲ್ಲಿ ಸ್ಥಿರತೆ ಪ್ರಸ್ತಾವನೆ ಯುಂಟಾಗಿ, ಸ್ವಸ್ಥತೆಯು ಲಭಿಸುವದು. ಪರಮಾರ್ಥದ ಬೆಳವಣಿಗೆಗಾಗಿ ಸತ್ಸಂಗವು ಅತ್ಯವಶ್ಯವು. ಸತ್ಪುರುಷರ ಸಂಗತಿಯಂತೆ, ನಾಮದ ಹಾಗೂ ಸದ್ವಸ್ತುವಿನ ಸಂಗತಿಯೂ ಸತ್ಸಂಗತಿಯೇ. ಸಂಕಟಗಳು ಬಂದಾಗಲೂ ಪರಮಾತ್ಮನಲ್ಲಿಯ ಶ್ರದ್ಧೆಯನ್ನು ಅಳಿಯಗೊಡದೆ, ಭಕ್ತಿಯನ್ನು ಅಂತಃ ಕರಣಪೂರ್ವಕವಾಗಿ ಮಾಡುತ್ತಿರಬೇಕು. ಸಂಕಟಗಳನ್ನು ಒಡ್ಡಿ ಪರಮಾತ್ಮನು ನಮ್ಮನ್ನು ಪರೀಕ್ಷಿಸುವ, ಆದ್ದರಿಂದ ಅದರಲ್ಲಿ ಕೊನೆಗೆ ನಮ್ಮ ಕಲ್ಯಾಣವಿದೆ, ಎಂಬುದನ್ನು ದೃಢವಾಗಿ ನಂಬಬೇಕು. ಪರಮಾರ್ಥದಲ್ಲಿ ಅಲ್ಪ ಪ್ರಚೀತಿಯು ಬಂದರೂ ಕೂಡ, ಅದರಿಂದ ಜೀವನವು ಸಾರ್ಥಕವಾಗುವದು, ಎಂದು ಆಶ್ವಾಸನ ಕೊಟ್ಟು ಗ್ರಂಥವು ಕೊನೆಗೊಂಡಿದೆ. ಮೇಲ್ಕಾಣಿಸಿದ ವಿವರಣೆಯಿಂದ ಈ ಪುಸ್ತಕವು ಆಧುನಿಕ ನೀತಿ, ಮೀಮಾಂಸೆಯ, ಹಾಗು ಪರಮಾರ್ಥ-ಮೀಮಾಂಸೆಯ ದೃಷ್ಟಿಯಿಂದಲೇ ರಚಿಸಲಾಗಿದೆ ಎಂಬುದು ಸಹಜವಾಗಿ ತಿಳಿಯದಿರದು. ಪ್ರಪಂಚದಲ್ಲಿದ್ದು ಪರಮಾರ್ಥವನ್ನು ಸಾಧಿಸಬೇಕೆಂಬ ಮುಖ್ಯ ಧೈಯವನ್ನರುಹಿ, ಅದನ್ನು ಪಡೆಯಲು ಎಲ್ಲ ಸದ್ಗುಣಗಳು ಹೇಗೆ ಅವಶ್ಯವಾದವುಗಳೆಂಬುದನ್ನು ಅದರಲ್ಲಿ ಕಾಣಿಸಲಾಗಿದೆ. ಜ್ಞಾನ (Wisdom ), ಶ್ರದ್ಧೆ ( Faith ), ಸಮತೆ (Justice) ಇವುಗಳಲ್ಲಿಯ ಸದ್ಗುಣವೊಂದನ್ನು ಮೂಲವಿಟ್ಟು ಕೊಂಡು, ಅದರಿಂದ ಉಳಿದ ಸದ್ಗುಣಗಳನ್ನು ಹೊರಡಿಸುವದು ಕೆಲ ಪಾಶ್ಚಾತ್ಯ ನೀತಿಶಾಸ್ತ್ರಜ್ಞರು ಪ್ರಚುರ ಗೊಳಿಸಿದ ಪದ್ಧತಿಯು, ಇದೇ ಮೇರೆಗೆ ಭಕ್ತಿಯಿಂದ ಎಲ್ಲ ಸದ್ಗುಣಗಳು ದೊರೆಯುವವು ಎಂಬುದು ಈ ಗ್ರಂಥದ ಅಂತರ್ಗತ ಸಿದ್ಧಾಂತ. ಪದಗಳ ರಹಸ್ಯ ಶ್ರೀ ನಿಂಬರಗಿ ಮಹಾರಾಜರವರು ರಚಿಸಿದ ಹತ್ತು ಪದಗಳನ್ನು ಇಲ್ಲಿ ಮುದ್ರಿಸಲಾಗಿದೆ. ಅವನ್ನು ಶ್ರೀ ಮಹಾರಾಜರವರೇ ರಚಿಸಿರುವರು ಎಂಬುದ ರಲ್ಲಿ ಸಂದೇಹವಿಲ್ಲ. ಬೇರೆ ಕೆಲವು ಪದಗಳೂ ಅವರ ಅಂಕಿತವನ್ನು ಈ ಭಾವೂಸಾಹೇಬ ಮಹಾರಾಜರವರು ಗುರು-ಲಿಂಗ-ಜಂಗಮ ಎಂಬ ಹೆಸರನ್ನು ಒಳಗೊಂಡಿವೆ ನಿಜ. ಆದರೆ ಅವುಗಳಲ್ಲಿಯ ಕೆಲಭಾಗವು ಬೇರೆ ಕವಿಗಳ ಕೃತಿಯನ್ನು ಹೋಲುವದರಿಂದ ಅವೆಲ್ಲ ಮಹಾರಾಜರವೇ ಎಂದು ನಿಶ್ಚಿತವಾಗಿ ಹೇಳಲು ಬರುವಂತಿಲ್ಲ. ಆದುದರಿಂದ ಅವನ್ನೆಲ್ಲ ಇಲ್ಲಿ ಸೇರಿಸಲಾಗಿಲ್ಲ. ಇಲ್ಲಿ ಸೇರಿಸಲಾದ ಕೆಲ ಪದಗಳು ಅವರ ಜೀವನಕ್ಕೆ ಸಂಬಂಧಿಸಿದವುಗಳು. ಆ ಸಂಬಂಧವನ್ನೂ ಪದಗಳ ರಹಸ್ಯವನ್ನೂ ಮುಂದೆ ಕಾಣಿಸಲಾಗಿದೆ. ಪದ ೧ :-ಸದ್ಗುರುಗಳ ಚರಣಕಮಲದಲ್ಲಿ ಶೃಂಗನಾಗಿರಯ್ಯ ! ನರಜನ್ಮ ಸ್ಥಿರವಿಲ್ಲ. ಅದಕ್ಕಾಗಿ ಸಾಧುಗಳ ಸಂಗದಿಂದ ಪರತತ್ವವನ್ನು ತಿಳಿದುಕೊಳ್ಳು. ಮೌನವನ್ನು ಬಲಿಸಿ ನಾಸಾಗ್ರದಲ್ಲಿ ದೃಷ್ಟಿಯನ್ನು ನಿಲಿಸಿ, ಜ್ಞಾನಜ್ಯೋತಿಯಲ್ಲಿ ನಲಿನಲಿದಾಡಯ್ಯ ಆನಂದದಿಂದ! ಮುಪ್ಪಿನಮುನಿ ಗಳ ವಚನಗಳನ್ನು ಅಂತರಂಗದಲ್ಲಿರಿಸಿ ಶ್ರೀಕಾಡಸಿದ್ಧನೆಡೆಗೆ ಹೋಗಿ ಆತನಿಗೆ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸಯ್ಯ ! ( ಈ ಪದದಲ್ಲಿಯ ( ಮುಪ್ಪಿನ ಮುನಿ' ಎಂಬುದು ಶ್ರೀಮಹಾರಾಜರನ ಸದ್ಗುರುಗಳ ಹೆಸರಿರುವ ಸಂಭವವಿದೆ. ಬೇರಾವ ಪದದಲ್ಲಿಯೂ ಅವರು ತಮ್ಮ ಸದ್ಗುರುಗಳ ಹೆಸರನ್ನು ಉಲ್ಲೇಖಿಸಿಲ್ಲ. ) - ಪದ ೨ ( ಶ್ರೀ ಮಹಾರಾಜರವರು, ಒಮ್ಮೆ ಬಾವಿಯೊಂದರಲ್ಲಿ ಸ್ನಾನ ಮಾಡಿ, ಮೇಲೆ ಬರುತ್ತಿರಲು, ಮೇಲಿನಿಂದ ಒಂದು ದೊಡ್ಡ ನಾಗರಹಾವು ಮೊತ್ಕರಿ ಸುತ್ತ ಆವರೆಡೆಗೆ ಬರುತ್ತಿರುವದನ್ನು ಅವರು ಕಂಡರು. ಮತ್ತು ಭಗವಂತನ ನಾಮ ವನ್ನು ಸ್ಮರಿಸಿದೊಡನೆ ಅದು ಇಲ್ಲದಂತಾಯಿತು ಎಂಬ ಸಂಗತಿಯನ್ನು ಈ ಮೊದಲು ಅರುಹಲಾಗಿದೆಯಷ್ಟೇ ! ಆ ಪ್ರಸಂಗದಲ್ಲಿ ಮಹಾರಾಜರವರು ಈ ಪದವನ್ನು ರಚಿಸಿರುವರು. ಅದರ ರಹಸ್ಯವು ಕೆಳಗಿನಂತೆ :-) ಸದ್ಗುರುಗಳು ಅನುಗ್ರಹಿಸಿದ ನಾಮವೇ ನಮ್ಮನ್ನು ಕಾಯುವದು. ನಾಮದ ಬಲವೇ ನಿಜವಾದ ಬಲವು ಪ್ರಹ್ಲಾದ, ದೌಪದಿ, ಗಜೇಂದ್ರ, ಧ್ರುವ, ಇತ್ಯಾದಿ ಭಕ್ತರನ್ನು ನಾಮವೇ ಕಾಯ್ದಿರುವದು. ಶ್ರೀಗುರು-ಲಿಂಗ- ಜಂಗಮರು ದಯಪಾಲಿಸಿದ ಈ ಘನಪುಣ್ಯನಾಮವೇ ಭವದ ಬಂಧನವನ್ನು ಬಿಡಿಸುವದು. 7 3:0 ಪ್ರಸ್ತಾವನೆ ಪದ ೩ :- ( ಕನಕನೆಂಬ ಜೇಡರ ಸಾಧುವು ಶ್ರೀಮಹಾರಾಜರವರನ್ನು ಅವಮಾನಗೊಳಿಸಿದ ಸಂಗತಿಯನ್ನು ಈ ಮೊದಲು ಹೇಳಿರುವೆನಷ್ಟೆ. ಆಗ ಈ ಸದದ ಮುಖಾಂತರವಾಗಿ ಮಹಾರಾಜರವರು ಪರಮಾತ್ಮನನ್ನು ಪ್ರಾರ್ಥಿಸಿದರು. ಇದರಲ್ಲಿ ನಿಂಬರಗಿ, ಭೀಮ, ಗುರು, ಲಿಂಗ-ಜಂಗಮ, ಇವು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರ ಸಾರವು ಕೆಳಗಿನಂತೆ :- ಶ್ರೀಬಲಭೀಮನೇ ! ನಾನು ಯಾವ ಬಗೆಯ ಅಪರಾಧವನ್ನು ಮಾಡ ದಿರಲು, ಈತನು ಬಿರುನುಡಿಗಳಿಂದ ನನ್ನನ್ನು ನೋಯಿಸಿದುದೇಕೆ ? ಶಬ್ದ ಶಸ್ತ್ರದಿಂದ ಹೊಡೆದುದೇಕೆ ? ಸ್ವಾಮಿ ! ದಾಸರ ದಾಸ ನಾನು ! ಸೋಸಿ ನ್ಯಾಯವ ಮಾಡು ಕರುಣದಿ ಎನ್ನನು ಕಾಯು. ನಿನ್ನ ಬಿರುದನ್ನು ನಿಜಗೊಳಿಸು. ಕರುಣಾಕರನೇ ! ಕಲ್ಲನ್ನು ಮರೆಗೊಳ್ಳದೆ, ಅದನ್ನೊಡೆದು ನರಸಿಂಹನಂತೆ ಪ್ರಕಟನಾಗು ! ಅಲ್ಲಮ ಪ್ರಭುವೇ ! ನಾನು ನಿನ್ನ ಸನ್ನಿಧಿ ಯಲ್ಲಿರುವೆ. ಶ್ರೀಗುರು-ಲಿಂಗ-ಜಂಗಮರ ಚಿನ್ಮಯ ಸ್ವರೂಪನಾದ ಭೀಮ ಯನೇ ನನ್ನ ತನು-ಮನ-ಧನಗಳನ್ನು ನಿನ್ನ ಚರಣಗಳಿಗೆ ಅರ್ಪಿಸಿರುವೆ ಯ್ಯ ನಾನು ! ಪದ ೪ : ಈ ವರೆಗೆ ನಾಲ್ಕು ವೇದಗಳೂ, ಸಕಲ ಶಾಸ್ತ್ರಗಳೂ, ದೇವದೇವತೆಗಳೂ, ವ್ರತವೈಕಲ್ಯಗಳೂ, ಇತ್ಯಾದಿಗಳು ಬೇರೆ ಬೇರೆ ಎಂದು ಭಾವಿಸುತ್ತಿದ್ದೆ. ಆದರೆ ಸಾರ್ವಭೌಮರಾದ ಸದ್ಗುರುಗಳ ಕೃಪಾಪ್ರಸಾದದಿಂದ ನನಗೆ ಎಲ್ಲೆಡೆಗೆ ಐಕ್ಯವೆ ಕಂಗೊಳಿಸತೊಡಗಿದೆ. ಆದುದರಿಂದ ವ್ರತಗಳೆಲ್ಲ ನಾನೇ ಆಗಿರುವೆ, ಶ್ರೀಗುರು-ಲಿಂಗ-ಜಂಗಮನೂ-ನೀನೂ ನಾನೇ ಆಗಿರುವೆ. ( ಎಲ್ಲ ಧರ್ಮಗಳ ಮೂಲ ತತ್ವವು ಒಂದೇ ಇರುವದೆಂಬದು ಈ ಪದದಲ್ಲಿಯ ಮುಖ್ಯ ಗರ್ಭಿತ ಸಿದ್ಧಾಂತವು. ) ಪದ ೫ : ಎಲೈ ದೇವನೇ ! ಎನ್ನ ಮನಸ್ಸಿನ ಕೊಂಕನ್ನು ಸರಿ ಪಡಿಸಯ್ಯ ! ಬೆಳಿಗ್ಗೆ ಎದ್ದೊಡನೆ ಅದು ಹೆರವರ ಧನವನ್ನು ಅಪಹರಿಸ ಬಯಸುವದು, ಸಜ್ಜನರನ್ನು ನಿಂದಿಸುವದು, ಬಲ್ಲವರನ್ನು ಮೆಚ್ಚಿಸುವದು, ಬಡವರನ್ನು ನೋಯಿಸುವದು. ಯಮನ ಹೆದರಿಕೆಯಿಂದ ಅದು ಒಮ್ಮೊಮ್ಮೆ ವೈರಾಗ್ಯ ತಾಳಿ ಕಾಶಿಯಾತ್ರೆಗೆ ಹೊರಡುವದು. ಆದರೆ ದಾರಿಯಲ್ಲಿಯೇ ಈ ಭಾವೂಸಾಹೇಬ ಮಹಾರಾಜರವರು ವೇಶ್ಯಗೆ ಮೆಚ್ಚಿ, ನಿಮ್ಮನ್ನು ಮರೆಯುವದು. ಈ ಮೇರೆಗೆ ಅದು ಸದ್ಗುರುಗಳ ಚರಣವ ನಂಬದೆ, ಅಡವಿಬಿದ್ದು ಅತ್ತಿತ್ತ ಅಲೆಯುವದು. ಇಂಥ ಮನಸ್ಸಿನ ಮಂಗತನವನ್ನು ಮಾಣಿಸಯ್ಯ ಪ್ರಭುವೆ ! ಪದ ೬ :- ಎಲ್ಲವನ್ನು ನೆರವೇರಿಸುವನು ಶಿವನೇ ಇರುತಿರುವಲ್ಲಿ ಚಿಂತಿಸುವದೇಕಯ್ಯ ? ಉದಕದಲ್ಲಿ ಉತ್ಪತ್ತಿಯನ್ನು ಮಾಡಿದವರಾರು ? ಒಡಲಲ್ಲಿಯ ಶಿಶುವನ್ನು ಸಲಹಿದವರಾರು? ಹಿಂದೆ ನಿನ್ನನ್ನು ಕಾಯ್ದವರಾರು? ಮುಂಗೆ ನಿನ್ನನ್ನು ಕೊಲ್ಲುವವರಾರು ? ಅಂದಿಗೂ, ಇಂದಿಗೂ ಎಂದೆಂದಿಗೂ ಇರುವವ ಶಿವನೇ ಅಲ್ಲವೆ? ಅಂಬರವನ್ನು ಅಂತರದಲ್ಲಿರಿಸಿದವರಾರು ? ರವಿಶಶಿಗಳನ್ನು ತಮ್ಮ ತಮ್ಮ ದಾರಿಯಲ್ಲಿ ನಡೆಯಿಸುವರಾರು ? ಗುರು - ಲಿಂಗ-ಜಂಗಮನಾದ ಸರ್ವೇಶ ಶಿವನೇ ಅಲ್ಲವೆ ? ಇಂಥ ಶಿವನಿರುವಾಗ ಚಿಂತಿಯದೇತಕಯ್ಯ ? ಪದ ೭ : ಅಂತರಂಗವು ಒಂದು ಬಿರುಸಾದ ಕಲ್ಲು. ಅದನ್ನು ಮೃದುಗೊಳಿಸುವ ಕಲೆಯನ್ನು ಬಲ್ಲವರಿಂದ ಅರಿತುಕೊಳ್ಳಯ್ಯ ! ಅಂದರೆ ಅದೇ ಕಲ್ಲುಸಕ್ಕರೆಗಿಂತ ಸವಿಯಾಗಬಹುದು. ಅದು ಮಿದುವಾದೊಡನೆ, ನಿನಗೆ ನಾಮಾಮೃತವು ದೊರೆತು, ಅಂತರಂಗದಲ್ಲಿ ಜ್ಞಾನಜ್ಯೋತಿಯು ತುಂಬಿಕೊಳ್ಳುವದು ಈ ಕಲ್ಲನ್ನೊಡೆಯದೆ, ಇದರಲ್ಲಿಯ ಪರಬ್ರಹ್ಮರೂಪಿ ಯಾದ ಪರುಷ ಕೈವಶವಾಗುವದೆಂತು ? ಇದನ್ನು ಒಡೆದೆಯೆ ಅಲ್ಲಮ ಪ್ರಭುವು ದಿವ್ಯ ಸೆಲೆಯನ್ನು ತೆಗೆದನು. ಮತ್ತು ನೀರು ನೀರನ್ನು ಕೂಡಲು ಆತನಲ್ಲಿಯ ಭೇದಭಾವವು ಅಳಿಯಿತು. ಈ ಕಲ್ಲು ಒಂದು ಕಲ್ಪವೃಕ್ಷವೇ ಸರಿ. ಹೀಗಿರು ಅದು ಬಯಸಿದ ಫಲಗಳನ್ನು ಕೊಟ್ಟರೆ ಆಶ್ಚರ್ಯವೇನು ? ಬೆಲ್ಲದಲ್ಲಿ ಸವಿಯು ಕೂಡಿಕೊಳ್ಳುವಂತೆ, ಗುರು-ಲಿಂಗ-ಜಂಗಮನಲ್ಲಿ ಎಂದಿಗೂ ಅಗಲದಂತೆ ಕೂಡಿಕೊಳ್ಳಯ್ಯ ನೀನು! ಪದ ೮ : ನೀನೆನ್ನ ಸರಿಯವನಿರುವಾಗ, ನಾನು ಬಡವನು ಪರದೇಶಿಯು ಆಗುವದೆಂತು ? ನಿನಗೆ ಕ್ಷಯವಿಲ್ಲ, ಎನಗೆ ಭಯವಿಲ್ಲ. ಎನ್ನೊಡೆಯನೇ ! ನೀನು ಎನ್ನ ನಿಜರೂಪವೇ ಇರುವಿ. ಎನ್ನ ಒಡಲಿಗೆ ಹಾಕುವ ತಾಯಿತಂದೆ, ಬಂಧುಬಳಗ ಎಲ್ಲವೂ ನೀನೇ ಅಯ್ಯ ! ನನಗೆ ಪ್ರಸ್ತಾವನೆ ನಿನ್ನಂಥ ದೊರೆಯಿರುವಾಗ ನಾನು ಬಯಸಿದ್ದು ದೊರೆಯುವದರಲ್ಲಿ ಏನಾಶ್ಚರ್ಯ ? ಹಿಂದೆ ಮುಂದೆ, ಎಡಕ್ಕೆ ಬಲಕ್ಕೆ, ನಿಂತು ನೀನು ಎನ್ನನ್ನು ಕಾಯುತ್ತಿರುವಿ. ಈ ನಿನ್ನ ಕುರುಹನ್ನು ಕಂಡವರಿಗೆ, ಇಲ್ಲಿಯ ಗುಣವಂತರೆಲ್ಲ ಮಾಡುವದೇನನ್ನು? ಪದ ೯ : ( ಈ ಪದದಲ್ಲಿ ಪರಮಾರ್ಥದ ಅನುಭಾವವನ್ನು ಉತ್ತಮ ವಾದ ಪಾಯಸಕ್ಕೆ ಹೋಲಿಸಿ, ಪರಂಪರಿತ ರೂಪಕದಿಂದ ಇಡಿ ಪರಮಾರ್ಥವನ್ನೆಯ ಬಣ್ಣಿಸಲಾಗಿದೆ. ಸಾರವು ಕೆಳಗಿನಂತೆ. ನೆಲ್ಲು ಕುಟ್ಟುಣು ಬಾರಮ್ಮ ಇಬ್ಬರು ಕೂಡಿ. ಹನ್ನೆರಡು ಹದಿನಾರು ನಲ್ಲೆಯರು ಕೂಡಿಕೊಂಡು, ನಿಲ್ಲದೆ ನೆಲ್ಲು ಕುಟ್ಟುಣು ಬಾರಮ್ಮಾ! ಹೊಕ್ಕಳದ ಒಳ್ಳ ದಲ್ಲಿ, ಪ್ರಾಣದ ಒನಕೆಯಿಂದ, ಹೆರಿ ಹಾಕೋಣ. ವಿವೇಕದ ಅಕ್ಕಿಯನ್ನು ಹಸನುಮಾಡಿ, ಜ್ಞಾನದೃಷ್ಟಿಯಿಂದ ಅದರಲ್ಲಿಯ ಹರಳುಗಳನ್ನು ತೆಗೆಯಮ್ಮ, ವಾಸನಾತ್ರಯದ ಮೂರು ಕಲ್ಲುಗಳನ್ನು ಹೂಡಿ ಒಲೆಯನ್ನು ಮಾಡಿ, ಅದರ ಮೇಲೆ ಪ್ರಾರಬ್ಧದ ಗಡಿಗೆಯನ್ನು ಇಡು. ಅದರ ಕೆಳಗೆ ಕಾಮಕ್ರೋಧಗಳೆಂಬ ಕಟ್ಟಿಗೆಗಳಿಂದ ಉರಿಯ ಮಾಡು ಹೊಗೆಯು ಕಟ್ಟಬಾರದೆಂದು ಒಳಹೊರಗೆ ಪ್ರಪಂಚ-ಪರಮಾರ್ಥಗಳೆರಡನ್ನು ನೋಡು. ಈ ಪಾಯಸವು ಕುದಿಯುವ ಸಮಯದಲ್ಲಿ, ಮೊದಲು ಅದಕ್ಕೆ ಮದದ ಉಕ್ಕು ಬರುವದು. ಧೈರ್ಯದ ಹುಟ್ಟಿನಿಂದ ಅದನ್ನು ಒಳಗೆಯೆ ಕರಗಿಸಿ ಬಿಡು. ಅಂದರೆ ಪ್ರಾರಬ್ಧ-ಯೋಗದಿಂದ ನಿನಗೆ ಪರಮಾನ್ನ ಪಾಯಸವು ದೊರೆಯಬಹುದು. ಸದ್ಗುರುಗಳಿಂದ ಕೂಡಿಕೊಂಡು ನೀನದನ್ನು ಸ್ವಾನಂದದ ಎಡೆಯಲ್ಲಿ ಸವಿಯಯ್ಯಾ ! ಪದ ೧೦ :- ಅಂದು, ಇಂದು, ಎಂದೆಂದೂ, ನಾನು ನಿಮ್ಮನ್ನಗಲಿ ಇಲ್ಲ ಸ್ವಾಮಿ ! ನೀನು ನಿರಾಕಾರನಾದರೆ, ನಾನು ನಿರ್ವಿಕಾರನು. ನೀನು ಪಂಚವದನನಾದರೆ, ನಾನು ನಿನ್ನ ಪಾದಸೇವಕನು. ನೀನು ಜಗಭರಿತನಾದರೆ, ನಾನು ಜಗದೊಳಗಿರುವವನು. ನೀನು ಪ್ರಣವಸ್ವರೂಪಿಯಾದರೆ, ನಾನು ಪ್ರಣವವನ್ನು ಸ್ಮರಿಸುವವನು ಈ ರೀತಿ ನಾನು ನಿನ್ನ ಸಂಗದಲ್ಲಿ ಸದೈವ ಇರುವದರಿಂದ, ನೀನು ಗುರು-ಲಿಂಗ-ಜಂಗಮನಾದರೆ, ನಾನೂ ನೀನೇ ಆಗಿರುವೆನಯ್ಯ ! ಬೋಧ ಸುದೆ EN ( ಬಿಂದು ೧ ) ಅಥ - - ಸಿದ್ಧಗಿರಿಯ ಶ್ರೀಕಾಡಸಿದ್ದೇಶನಿಂ ಪರಮಾರ್ಥ-ಸಾಧನವ ತಾವು ಪಡೆದು ಸಮರ್ಥರು ಮುಂದೆ ಸಂಸಾರ ಸಾಗಿಸುತ ಸಾಧನದಿ ' ಯೋಗ' ವನ್ನು ಸಾಧಿಸಿದರು. ನಿಂಬರಗಿಯಲ್ಲವರು ತುಂಬ ಮರೆಯಲಿ ಬಾಳಿ ಕಾಡಿನಲಿ ಸಾಧನವ ನಡೆಸುತಿಹರು. ತುಂಬಿ ಹೃದಯವ ವಿಪುಲ ದಿವ್ಯ ಆನಂದದಿಂ ನಂಬಿದವರಿಗೆಯವನು ಉಣಿಸುತಿಹರು. ಹಿರಿ ಗುರುಗಳೀ ತೆರದಿ ವರಭಕುತಿ ಬೆಳೆಸುತಿರೆ ಜನಕೆ ಬೋಧದ ಸುಧೆಯ ಸಲಿಸುತಿಹರು, ಸಿರಿ ಮುಖದಿ ಹೊರಹೊರಟ ಸಹಜ ಕಿರಿನುಡಿಗಳಿಂ ಭಕುತರಿಗೆ ನಡೆನುಡಿಯ ಕಲಿಸುತಿಹರು, ಅ೦ತರ೦ಗದಲಾರ ನಿಂತಿರುವ ಭಗವಂತ ಅವರ ನುಡಿ ಅವನ ನುಡಿಯಿರುತಲಿಹುದು. ಇಂತು ಸಂತರ ಮುಖದಿ, ಸುರಿದ ದೇವರ ನುಡಿಯು ಪರಮಾರ್ಥಸಾರವನು ಬೀರುತಿಹುದು, 11011 11 9 11 || a || || 8 || ಬೋಧ-ಸುಧೆ ಚೆನ್ನ ವಚನಗಳಂತೆ, ಪ್ರತಿನಿತ್ಯ ನಡೆವವನು ದಿವ್ಯ ದರುಶನಗಳನು ಕಾಣುತಿಹನು. ತನ್ನ ರೂಪವ ಕಂಡು, ಆತ್ಮ-ಸುಖವನ್ನುಂಡು ಸಾಯುಜ್ಯ ಸಂಪದವನುಣ್ಣುತಿಹನು ಗುರುವಚನಗಳ ನಿತ್ಯ ಕೇಳಿ, ತೇಜವ ತಾಳಿ, ಬಾಳಿ ಬೆಳಗಿದ ಮಹಿಮ ಧನ್ಯನಹನು. ವರವಚನಗಳ ಸಾರ ಹೀರಿ, ಬರಹದಿ ಬೀರಿ, ಜನಕೆ ಬೆಳಕನು ತೋರಿ ಹರಸಿರುವನು. ಧನ್ಯ ರಘುನಾಥಾರ್ಯ ! ಅವರ ಬರಹದ ಕಾರ್ಯ! ಗುರು-ಬೋಧವಲ್ಲಿ ಒಡಮೂಡಿಯಿಹುದು, ಧನ್ಯ 1 ಶ್ರೀಗುರುವರ್ಯ ! ಧನ್ಯವರ ಚಾತುರ್ಯ ಬರಹ-ಬೆಟ್ಟದಿ ಸುಧೆಯ ಸಲೆ ಕಂಡುದು ಅವರು ತೋರಿದ ಸುಧೆಯ ಅವರೇ ತೋರಿದ ತೆರದಿ ಹರಿಸಿರುವೆ ಪದ್ಯಗಳ ಸಾಲ್ಗಳಲ್ಲಿ || 89 || || 2 || || 2 || ದೇವ-ಭಕುತಿಯ ರಸವ “ ಬೋಧ-ಸುಧೆಯಿಂ ' ಪಡೆದು ಭಕುತ ಹೃದಯಗಳೆಲ್ಲ ಮರಳರಳಲಿ ! ಇಂತು ಗುರುವರರ ಹಿರಿನುಡಿಯ ಕೇಳಿರಯ್ಯ ವರವಚನದೊಲು ನಿತ್ಯ ಬಾಳಿರಯ್ಯ | ಭಕುತಿ ಭಾವದಿ ಹೃದಯ ತುಂಬಿರಯ್ಯ ಆತ್ಮ ದೇವನ ಕೃಪೆಯ ಕೊಂಬಿರಯ್ಯ - ( 1 ರಾನಡೆ ರಾಮರಾಯರು. || es || ( ಬಿಂದು ೨) ನಡತೆಯ ಮೂಲತತ್ವವು ೧. ಉತ್ತಮ ನರದೇಹ ನರಜನ್ಮ ಹಿರಿಯದೆ ! ಮರಮರಳಿ ದೊರೆಯದೆ !! ಆತ್ಮದರುಶನವ ದಯಪಾಲಿಸುವದು. ತರತರದ ಯೋನಿಗಳ ತಿರುತಿರುಗಿ ಬಂದಾಗ ನಡತೆಯಾ ಬಲದಿಯದು ದೊರೆಯುತಿಹುದು || ೧ | ಹಿಂದಿನಾ ಜನ್ಮದಲಿ ನಿಂದ್ಯ ಕರ್ಮವನೆಸಗಿ ಅವರ ಕಟುಫಲವುಂಡು ನೊಂದೆಯಯ್ಯಾ ! ಇಂದಾದರೂ ಮರಳಿ 1 ಗುಣಗಣಗಳನೆ ಬಯಸಿ ಅವನಲ್ಲಗಳೆಯದಿರು ಸುಮ್ಮನಯ್ಯ ! ೨. ಜೀವಿಯ ನಾಲ್ಕು ಸ್ಥಿತಿಗತಿಗಳು ಎಲ್ಲ ಜೀವಿಗಳಲ್ಲಿ ಬಾಲ್ಯ-ಯೌವನ-ಪ್ರೌಢ- ತನ-ಮುಪ್ಪು, ಈ ನಾಲ್ಕು ಸ್ಥಿತಿಗಳಿಹವು. ಎಲ್ಲರಿಗೆ ಭ್ರಮೆ-ಭೂಲಿ-ಬಯಕೆ-ಕಸಿವಿಸಿಗಳೆಂ- ಬೀ ತರದ ನಾಲ್ಕು ಆ ಕೀಳಗತಿಗಳಿಹವು, 1 ವಿಷಯಗಳು, ಒಡವೆಗಳು, 2 ಕೀಳು ಭಾವಗಳು, 11911 ಬೋಧ ಸುಧೆ ಬಾಲ್ಯದಲಿ ಮರವಿನಿಂ ತನ್ನ ಅನ್ಯರದನ್ನು ಒಳಿತು ಕೆಡಕುಗಳನ್ನು ಮನುಜ ಬಗೆಯ, ಎಲ್ಲರೊಲು 1 ಈರಾರು ವರುಷ ಮೀರುವ ಮುನ್ನ ಮದುವೆಯಾ ಭ್ರಮೆಯನುಳಿದೇನನರಿಯ, ಮುಂಜಿ ಯವನ ಬರಲು ಮುದದಿ ಮದನೆಯು ಮುಗಿಯ ನಲ್ಲ ನಲ್ಲೆಯೆಳೊಡನೆ ಬಾಳುತಿಹನು, ಅಂದು ನಲ್ಲೆಯ ನೆಚ್ಚು ಹೆಚ್ಚಾಗಿ ' ಹೆಚ್ಚಲು ಅವಳ ಭೂಲಿಯಲವನು ಬೀಳುತಿಹನು, 2 11 8 11 ಸತಿಯ ಮಾತನು ಮುರಿಯ, ಅದುವೆ ಹಿತವೆಂದರಿವ, ಸತಿಯು ನುಡಿದಂತವನು ನಡೆಯುತಿಹನು ಸತಿಯ ಮೋಹದಿ ಪಿತರ, ಅತಿಯಾಗಿ ಗತಿಗೆಡಿಸಿ, ಪಾಪ! 3 ಸೊಗವನ್ನೆನಿತು ಪಡೆಯುತಿಹನು ? || ೬ !! ಪ್ರೌಢತನದಲ್ಲವಗೆ ಸುತರ ಪಡೆಯುವ ಬಯಕೆ ನಡತೆಯಾ ಬಲದಿಯದು ಫಲಿಸುತಿಹುದು, ಗಾಢ ಮರವದು ಮುಂದೆ ಪಾಪ ಪುಣ್ಯವ ಮರಸಿ ಹಲವು ತೆರದಲಿಯವನ ಛಲಿಸುತಿಹುದು. ಮುಂದೆ ಮುಪ್ಪಿನ ಸಮಯ ತಪ್ಪದಲೆ ಬಂದೊದಗೆ ಯಮನ ಹೆದರಿಕೆಯಿಂದ ಬೆದರುತಿಹನು, ಹಿಂದೆ ಮಕ್ಕಳ ಗತಿಯೆದೆಂತಪ್ಪುದೈಯೆನುತ ಅವರ ಸುಖಕಾಗಿಯತಿ ಕೊರಗುತಿಹನು, || 2 ||
- ಎರಡು ಆರು - ಹನ್ನೆರಡು 2 ಹುಚ್ಚನಂತೆ. 3 ಸುಖವನ್ನು, ನಡತೆಯ ಮೂಲ ತತ್ವವು.
ಮುಪ್ಪಿನಲಿ ಮೋಹ ಮೋಹರಿಸಿ ಮಾನವನನ್ನು ಸ್ವಾರ್ಥದಾ ಹಿರಿಗರವು ಕುಣಿಸುತಿಹುದು. ತಪ್ಪು ಸಂಸಾರದಲಿ ಬೆಪ್ಪನೊಲು ಮುಳುಗಿಸುತ, ನಿಂದೆ ಕಂದರದಲ್ಲಿ ದಣಿಸುತಿಹುದು ಅದಕಾಗಿಯೇ ಸಮಯದಲ್ಲಿ ಎಲ್ಲರು ನಿತ್ಯ ಎಚ್ಚರದಿ ಸಚ್ಚರಿತರಾಗಬೇಕು 3 ಮುದದಿ ನಾಮವ ಪಿಡಿದು, ಆತ್ಮದೇವನ ಪಡೆದು, ಚೌರ್ಯಾಂಶಿ-ಕಾಟವನು ದಾಟಬೇಕು ೩. ನಡತೆಯ ಬಲವೂ ದೇವರ ಬಲವೂ, ಮನುಜರೆದೆಯಲಿ ದೇವ ವಣಜಲು ತಾನಿರುವ ಅವರ ಭಾವವ ತೂಗಿ ನೋಡುತ್ತಿರುವ. ಜನರ ನಡೆನುಡಿಗಳನ್ನು ಒಡನೆ ಪರಕಿಸಿಯದಕೆ ಸಲುವ ಫಲವನು ತಾನು ನೀಡುತಿರುವ ತನ್ನ ನಡತೆಯೆ ತನ್ನ ಕಾಯ್ದ ಕೆಳೆ ಎಳ್ಳಿನಿತು ಯಾರನೆಂದಿಗು ನೀನು ನಂಬಬೇಡ. ತನ್ನ ನಡತೆಯ ತೊರೆದು, ಅನ್ಯರೆಡೆಯಲ್ಲಿ ಸಾರೆ ಅವರ ಆಸರ ದೊರೆಯದೆಂದು ನೋಡಾ ತನ್ನ ನಡತೆಯು ಕೆಡಲು, ವಿವಿಧ ನೋವುಗಳೊದಗೆ ಜನರು ದೇವರನಂದು ನಿಂದಿಸುವರು. ಮುನ್ನ ಸರಿಯಲ್ಲವಿದು ಅವಕೆ ಕಾರಣ ನಡತೆ ಯೆಂಬ 4ಅನುಭವದರಿವ ನಂದಿಸುವರು 38 || 6 || || 00 || 1100 | 110911 || ೧೩ || 1 ಬೆಳೆದು. 2 ದೊಡ್ಡ ಪಿಶಾಚ, 3 ಎಂಬತ್ತು ನಾಲ್ಕು ಲಕ್ಷ ಯೋನಿ. 4 ಅನುಭವ-ಜ್ಞಾನವನ್ನು ಅಲ್ಲಗಳೆಯುವರು. ಬೋಧ- ಸುಧೆ ತನ್ನ ನಡೆಯಲು ಎಲ್ಲವೊದಗುವದು ಇದು ದಿಟವು. ಒಳಿತು ನಡೆಯಿಂದೆಂದೂ ಕೆಡಕಾಗದು. ತನ್ನ ನಡೆ ಕೆಡಕು ಇರುತಿರೆ ಕೆಡಕು ತಾ ಬಿಡದು ಇದನರಿತು ಒಳಿತನ್ನೇ ಮಾಡುತಿಹುದು ತನಗೆ ಒದಗುವ ಬೇನೆ ಕೆಡಕು ನಡತೆಯ ಫಲವು. ಮುಳ್ಳು ನೆಡುವುದು ಕೂಡ ಅದರ ಕುರುಹು. ತನಗೆ ಸರಿ ನಡೆಯ ಬರೆ ಬೇನೆ ಬೇಸರ ಸರಿದು ಯಾವ ಬಾಧೆಗಳೆಂದೂ ಬಾರದಿಹವು ನಡತೆಯಾ ಬಲಕೆ ಮಿಗಿಲಾದ ಬಲವೊಂದಿಲ್ಲ. ದೇವ ಬಲವೂ ಅದಕೆ ಸಾಟಿಯಲ್ಲ. ನಡತೆಯನೆ ಕೂಡಿಹವು ಒಳಿತು ಕೆಡಕುಗಳೆಲ್ಲ ಅದನುಳಿದು ಬೇರೆ ಬಲ ಇಲ್ಲವಲ್ಲ ನಡತೆ ಒಳಿತಿರುತಿರಲು ಹರಿಹರ-ಬ್ರಹ್ಮರು ಕೆಡಕು ಮಾಡಲು ಬಯಸೆ ಕೆಡಕಾಗದು. ನಡತೆ ಕೆಡಕಾಗಿರಲು ಮೂದೇವರೂ ಕೂಡಿ ಒಳಿತು ಮಾಡಲು ಬಯಸೆ ಒಳಿತಾಗದು. ನಾವು ಮಾಡಿದ ಕರ್ಮ ಬಲವಂತವಾಗಿರಲು ದೇವ ನಮಗೇನನ್ನೂ ಮಾಡನಯ್ಯ ! ನಾವು ಒಳಡೆ ನಡೆಯೆ ದೇವ ನಮ್ಮವನೆ ಸರಿ ! ಅರಿತು ತಪ್ಪದೆ ನಡೆಯ ಜಪ್ಪಿ ಸಯ್ಯ. 1 ಸಮಾನ. 2 ಕಾಪಾಡು. || 80 || ॥ ೧೫ | 110211 || 02 || ನಡತೆಯ ಮೂಲ ತತ್ವವು. ೪, ಬೀಜದಂತೆ ಬೆಳೆ, ಒಳಿತು ಕೆಡಕುಗಳೆಲ್ಲ ತನ್ನ ಕೈಯಲ್ಲಿಹವು ಬಿತ್ತಿದಾ ಬೀಜದೊಲು ಬೆಳೆಯು ಬಹುದು ಒಳಿತು ಬಿತ್ತಲು ಒಳಿತು ಬೆಳೆಯುವದು ಕಂಡಿತವು. ಕೆಡಕು ಬಿತ್ತಲು ಕೆಡಕು ಬೆಳೆಯುತಿಹುದು. 1106|| ಕಹಿಜೀರಿಗೆಯ ಬಿತ್ತಿದರೆಯದುವೆ ಬೆಳೆಯುವದು ಗೋದಿ ಬಿತ್ತಲು ಗೋದಿ ಬೆಳೆಯುತಿಹುದು. ಕಹಿಜೀರಿಗೆಯ ಬಿತ್ತಿ ಗೋದಿ ಬೆಳೆಬಯಸಿದರೆ ಗೋದಿಯಾ ಬೆಳೆಯಂತು ಮೊಳೆಯುತಿಹುದು?|| ೨೦ || ೫. ಧ್ವನಿಯಂತೆ ಪ್ರತಿಧ್ವನಿ ನಾವು ಮಾಡಿದುದನ್ನೆ ಪರರೆಮಗೆ ಮಾಡುವರು. ಪ್ರೀತಿಸದವರು ಸಹ ಪ್ರೀತಿಸುವರು ನಾವು ಸಿಟ್ಟನು ಮಾಡೆ ಅವರು ಸಿಟ್ಟಾಗುವರು. ಬಡಿವಾರಕದನೆಯವರೆಸೆಯುತಿಹರು ಮಾನವನು ತೋರೆಯವರಿಂದಲೂ ನನ್ನ ಣೆಯು ಅಪಮಾನದಿಂದದುವೆ ಏಳುತಿಹುದು. ಹೀನ ಕಪಟದಿ ಕಪಟ, ಅನ್ಯಾಯದಿಂದದುವೆ ಬಾತೆಯೊಲು ಖರ್ಚುತ ಬೀಳುತಿಹುದು ಸಂತಸವ ನೀಡಿದರೆ ಸಂತಸವು ದೊರೆಯುವದು ಸಂತಾಪದಿಂದುವೆ ಬರುತಲಿಹುದು, ನಿಂತಿರುವನೆಲ್ಲರಲಿ-ಯೋರ್ವನಾತುಮ ತಾನು ಮಾಡಿದೊಲು ಫಲವನವ ತರುತಲಿಹುದು || ೨೨ || || ೨೩ || 2
- )
ಬೋಧ- ಸುಧೆ ದುರುಗಿಬೇನೆಯು ಬಂದು ಬಹುಜನಗಳನು ಕೊಂದು ' ಪರಲೋಕಕನರನದು ಒಯ್ಯುತಿಹುದು ದುರುಗಿದೇವರ ದಿವ್ಯ ಕೈಯೊಳಿಹ ಕುಡುಗೋಲು ಬಯಸೆಯವನದರಿಂದ ಕೊಯ್ಯುತಿಹುದು, ದೇವನಿರದಿರೆಯೆಂತು ಕುಡುಗೋಲು ಕೊಯ್ಯುವುದು? ಎಲ್ಲ ಈಶನ ವಶದಲ್ಲಿರುತಲಿಹುದು ದೇವನೊಲಿಯಲು ದುರುಗಿ ತಾನೇನು ಮಾಡುವಳು ಅದಕೆ ದೇವನನು ಒಲಿಸುತಿಹುದು. ೬. ಹೆಜ್ಜೆ ಹೆಜ್ಜೆಗೆ ನಡತೆಯ ಪರೀಕ್ಷಣ. ಡಿಗಡಿಗೆ ನಡತೆಯನ್ನು ಪರಕಿಸುತ್ತಿರಬೇಕು, ಅದರ ಕುಂದುಗಳನ್ನು ಅರಿಯಬೇಕು. ಒಡಲಿನಲಿ ಮುಳ್ಳು ನೆಡಲದರ ಕಾರಣವನ್ನು ಒಡನೆ ಕಂಡದನು ನಡೆ ತಿದ್ದಬೇಕು. ೭, ನುಡಿಯಂತೆ ನಡೆ. ನಡೆ ನುಡಿ ಇದೇ ಜನ್ಮ ಕಡಿ 'ಯೆಂದು ಸಾರುವರು. ನಡೆಯು ಒಳ ಡತೆ, ನುಡಿ ಗುರುವಿನಾಜ್ಞೆ, ನಡೆಯೆ ಹಿಂದಿಂದಿನಾ ಸಿದ್ಧರಾಣತಿಯಂತೆ 1 ಆಜ್ಞೆ. || ೨೪ || | ೨೬ | ಕಡೆಯದಾಗಲು ಬಹುದು ಜನುಮ ಕಾಣೆ, || ೨೭ || ನಡತೆಯ ಮೂಲ ತತ್ವವು. ೮. ನೀನೇ ಶಿವನು ಇರುವಿ. ತಮಗೆ ಸಂಕಟ ಬರಲು ಜನರು ದೇವರ ನೆನೆದು ಆದರದೊಳೀತೆರದಿ ಬೇಡುತಿಹರು. “ ನಮಗೆ ಒಳಿತನು ಮಾಡು ಶಿವನೆ ! ನಿನ್ನುಳಿದಾರ- ಕೈಯಲೇನಿಲ್ಲ' ೦ದು ಆಡುತಿಹರು. ಇದರ ಹೋಲಬನು ಅರಿಯೆ - ನೀನೆ ಶಿವನಿರುತಿರುವಿ, ನೀನು ಬಗೆದಂತೆಲ್ಲ ಸಾಗುತಿಹುದು. ಅದಕೆ ಒಳಿತನು ನೀನೆ ಸಲ್ಲಿಸೆಮಗೆ' ನ್ನು ತಲಿ ಮುದದಿ ತನ್ನನು ತಾನು ಪ್ರಾರ್ಥಿಸುವದು. ಇ೦ತು ನಡತೆಯಾ ಮೂಲ ಬಲ ತಿಳಿಯಿರಯ್ಯ ಅಡಿಗಡಿಗೆ ನಡೆನುಡಿಯ ತೊಳೆಯಿರಯ್ಯ | ನಿಮ್ಮ ಹಗೆ-ಕೆರೆ ನೀವೆ ಕೇಳಿರಯ್ಯ ! ಆತ್ಮ ದೇವನ ನುತಿಸಿ ಬಾಳಿರಯ್ಯ ! 1 ರಹಸ್ಯ, || ೨೮ || || ೨೯ || F || 20 || ( ಬಿಂದು ೩ ) ದು ರ್ಗುಣ - ತ್ಯಾಗ - ೯, ಹೆಣ್ಣು, ಹೊನ್ನು, ಮಣ್ಣು, ಹೆಣ್ಣು ಹೆಂಗಸು ಕಾಣೋ ಹೊನ್ನೆಂದರದು ಧನವು, ಮಣ್ಣು ಹೊಲಮನೆಯೆಂದು ಅರಿಯಬೇಕು. ಚೆನ್ನ ಗುಣಗಳನಿವನು ದೇವ ದಯಪಾಲಿಸುವ ಅವನಿತ್ತುದನು ಪಡೆದು ತಣಿಯಬೇಕು. ತನ್ನ ಗುಣವನ್ನು ಹಳಿದು ಪರರ ಗುಣವನು ಬಯಸಿ ನೋಡದಿಹು ದೈಯದನು ಬೇಡದಿಹುದು, ತನ್ನ ಮನ ಮೈಲಿಗೆಯು, ಕಣ್ಣು ಸುಣ್ಣಾ ಗುವವು. ಪರರ ಗುಣ ನರಕವೆಂದೆಣಿಸುತಿಹುದು ಗುಣ-ವೈರಿಗಳಿಗೆಂದು ಮಣಿದು ನಡೆಯಲು ಬೇಡ. ಸಲಿಗೆಯಿಂದಲಿ ಸುಲಿಗೆಯಾಗುತಿಹುದು. ಮನದ ಬಯಕೆಯು ತಡೆಯಲರಿಯದಂತಾಗಿರಲು ಮನದಾತ್ಮನೆಡೆ ಮರಳಿ ಸಾಗುತಿಹುದು ೧೦ ಪರಸ್ತ್ರೀ ಸಂಗದಿಂದ ಅಘೋರ ನರಕಪ್ರಾಪ್ತಿ. ಪರನಾರಿಯರ ಸಂಗ ಮರಣ ಬ೦ದರು ಬೇಡ ಧನ-ಮಾನ-ಬುದ್ಧಿ-ಬಾಳುಗಳು ಹಾಳು, ನರಸಾಪದಿಂದೆನುಗೆ ಸಂಸಾರದಲ್ಲಿ ತಾಪ. ಪರಲೋಕದಲಿ ಘೋರ ನರಕ ಕೇಳು 1 ಅದನ್ನು, 2 ಆಳುವನ, ಈಶ, 110⠀ 11911 112 11 ದುರ್ಗುಣ- ತ್ಯಾಗ. ಜಾರ ಭೂಮಿಗೆ ಭಾರ, ಕೂಳಿಗೆಲ್ಲಕೆ ಕಾಳ ಇವನ ಭಾರವ ಭೂಮಿ ಹೊರಲರಿಯಳು. ಸಾರಮಾತಿದು. ಪರರ ನಾರಿ ತನ್ನ ಯ ತಾಯಿ ಅರಿತಿದನು ಸಂತಸದಿಯಲ್ಲಿ ಬಾಳು. ೧೧ ಸಿಟ್ಟು ಹೊಲೆಯ ಸಿಟ್ಟೆ೦ಬ ಹೊಲೆಯನನು ಮುಟ್ಟಬೇಡೈ ನೀನು ಸಿಟ್ಟ ನೆಡೆಯಲಿ ವ್ಯಸನ ಕಟ್ಟಿರುವದು. ಸಿಟ್ಟಿನಿಂದಲಿ ನಿತ್ಯ ಕಿರಿಕಿರಿಯು ಇರುವಲ್ಲಿ 1ಕಡುಬಗೆಯ ಬಡತನವು ಇಟ್ಟಿರುವದು. ಕೋಪಿಗಳನಾರೆಂದು ಸಾರಕ್ಕೆ ಸೇರರೆ! ಬರಿಯ ತೆಗಳಿಕೆಯವಕೆ ದೊರೆಯುತಿಹುದು. ಕೋಪವನ್ನ ದಕಾಗಿ ಬುದ್ಧಿಯಿಂದಲಿ ಬಿಡುತ 11 33 11 ಮನಕೆ ನೀನು ತವನು ಮುರಿಯುತಿಹುದು || ೭ || ಚಿಕ್ಕ ಮಕ್ಕಳಿಗೆಲ್ಲ ಚೊಕ್ಕ ಬುದ್ದಿಯು ಬರಲು ಸಿಟ್ಟು ಮಾಡಿದರೆಯದು ನೆಟ್ಟಗಿಹುದು, ಚಿಕ್ಕವರ ತಪ್ಪುಗಳವೆಂಥವಿದ್ದರೂ ಕೂಡ ಬಯ್ಯ ಬೇಕಲ್ಲದಲೆ ಬಡಿಯದಿಹುದು. ೧೨, ಬಡಿವಾರದ ಪರಿಣಾಮ ಬುಡವಿಲ್ಲ ಬಡಿವಾರ ಬಲು ಕೀಳಿಹುದು ನೋಡು, ಅದರನಾಹುತಗಳಿಗೆ ಎಣೆಯು ಇಲ್ಲ. 1 ಅತಿಯಾದ. ಬೋಧ-ಸುಧೆ ಬಡಿವಾರ ಬಂದಲ್ಲಿ ಬಡಿತಹೊಡೆತನೆ ಬಹಳ ಹಾಳು ನಾಲಿಗೆಗೆಂದು ದಣಿವು ಇಲ್ಲ. ಗರುವದಿಂದವರು ಹಿರಿಕಿರಿಯರನ್ನ ರಿಯರೈ! ಉಪಕಾರಿಗಳ ಗುರುತು ಹಿಡಿಯದಿಹರು. ಪರರೊಡನೆಯಂತಾಡಬೇಕೆಂದು ನೋಡದ || || ಹಿಟ್ಟು-ಹುಡಿಯನು ಸಮನೆ ಮಾಡುತಿಹರು || ೧೦ || ಗರುವದಾ ಕಟುಫಲವ ಸರುವರುಣಬೇಕಯ್ಯ, ತನ್ನ ನಡೆಯಲು ಪರರು ನಡೆಯುತಿಹರು, ಗರುವಿಗಳನಾರೆಂದೂ ಮಾತನಾಡಿಸರಯ್ಯ ಹಳೆಕೆರವಿನೊಲು ಬೀಳುಗಳೆಯುತಿಹರು. ಬಡಿವಾರ ಬಂದೊಡನೆ ಬಹುಕಾಲ ಬಾಳ, ಜ್ಞಾನ -ಧನ-ಸಂತಾನವಳಿಯುತಿಹುದು. ಒಡೆಯನಿಗೆ ಬಡಿವಾರ ಬರೆಯೊಡೆತನಕೆ ಕೇಡು ಬಡವನಿಗೆ ಬರೆ ಬಿಕ್ಕೆ ಕೂಡ ಸಿಗದು. ಇಂತು ಗುಣಗಳ ತೆರದಿ ನಿತ್ಯ ನಿರ್ಗುಣದಲ್ಲಿ ಗರುವ ಬರೆಯನುಭಾವ ಜರಿಯುತಿಹುದು. ಅಂತು ಕಳಕೊಳಲು ಎಳಸುವ ಮಾನವರು ತಾವು ಬಡಿವಾರದಿಂ ಬಹಳ ಮೆರೆಯಬಹುದು, ಬಡಿವಾರ ಬರೆ ಬಲ್ಲಿದರ ವಿನಯವನು ಕಂಡು ಅದರ ಅಂಕುರವನ್ನು ಮುರಿಯಬೇಕು. ಒಡೆಯ ದೇವನು ತನಗೆ ನೀಡಿದೊಡನೆಯ ಕೊಂಡು ಮರೆಯಲವುಗಳನುಂಡು ತಣಿಯಬೇಕು. || 00 || 116011 110211 11081 ದುರ್ಗುಣ- ತ್ಯಾಗ. ೧೩. ಕುದಿಯುವವನಿಗೆ ಕೂಳಿಲ್ಲ ಪರರ ಸಂತತಿ-ಸಂಪದಧಿಕಾರಗಳ ಕಂಡು ಸೈರಿಸದೆ ಮರುಗದಿರು ಕುದಿಯಬೇಡ್ಕ, ಮರುಗುವಗೆ ಮಕ್ಕಳವು ಕುದಿಯುವವನಿಗೆ ಕೂಳು ದೊರೆಯದೆಂಬುದನರಿತು ಮರುಗಬೇಡ. ಪರರಿಂಗೆ ಕೇಡಾಗಲೆಂದು ಮನದಲಿ ಬಯಸೆ ತನಗೆ ಕಂಡಿತದಿ ಕೆಡಕಾಗುತಿಹುದು, ಸರುವಗಳು ಆತುಮನು ಓರ್ವನಿರುವದರಿಂದ ೧೩ 11088 11 ಒಳಿತು ಬಯಸಲು ಒಳಿತು ಒದಗುತಿಹುದು. 1 o ೧೪ ದಂಭ ಒಳಗೆ ವಿಷಯದ ನೆನವು ಹೊರಗೆ ಆತ್ಮನ ನೆನವು ದಂಭವನ್ನ ತೆರದಿ ತೋರದಿಹುದು ಒಳಗಿರುವ ಆತುಮನದೆಲ್ಲವನ್ನರಿಯುತಿಹ. ಅವನ ವಂಚಿಸಲೆಂದ ಸಾರದಿಹುದು. ೧೫, ಕಪಟವು ಕೆಟ್ಟದು ಕಪಟದಿಂದಲಿ ಕೇಡು ವಿಪುಲವಪ್ಪುದು ನೋಡು, ಕಪಟವನ್ನೆ೦ದೆ೦ದಿಗೆಸಗಬೇಡ. ಕಪಟದಿಂದಲಿ ಕೆಲಸವೆಂದೂ ಕೈಗೂಡದದು. 1 ಬಾಣ. ನಂಬಿದವರಿಗೆ 1ಅ೦ಬನೆಸೆಯ ಬೇಡ. 110211 ೧೪ ಬೋಧ ಸುಧೆ ಕಪಟದಿಂ ತಾಂ ಪರರ ಸಂಪದನನಪಹರಿಸ ತನ್ನ ಕೈಯದು ಮೊದಲು ದಗ್ಧಹುದು. ಕಪಟ-ಕೆಂಡವ ಕಂಡ ಕೈಯು ಹೊಲವನು ಬಿತ್ತೆ, ಬೀಜವದು ಮೊಳೆಯದಲೆ ಬೆಳೆಯು ಬರದು. || ೧೯ || ಪರರ ಧನವನು ನಾನ ಅಪಹರಿಪ ಸಮಯದಲ್ಲಿ ಅದುವೆ ಸರಿಯೆಂದೆನಗೆ ತೋರುತಿಹುದು, ಸರಿಯೆ ಹಿಂದಿನ ಪುಣ್ಯ ಒಂದೆಯರವಳಿಗೆಯಲಿ ಬಂದ ತೆರದಲ್ಲಿಯದು ತೆರಳುತಿಹುದು ೧೬. ಮೋಹದ ಬಲೆ. ಮಡದಿ ಮಕ್ಕಳ ಮಾಯೆ ಮೋಹದಲ್ಲಿ ಕೆಡಹುವದು. ಅತಿ ಮಾಯೆ ಮಗುಗಳಿಗೆ ಮಾರಿಯಹುದು. ಉಡಲುಣಲು ಕಡುಕೊರತೆ ಬೀಳದೊಲು ತಾಬಾಳಿ ಅವರ ಮೋಹದ ಬಲೆಯ ಸೇರದಿಹುದು. ಮಾಯೆಯೊಡನಾಗಾಗ ಬಿಡದೆ ಹೋರಾಡುತಲಿ ಅದರ ಬಂಧಗಳನ್ನು ಕಡಿಯಬೇಕು, ಮಾಯೆ ಮೂಡಿದ ಒಡನೆ ಮನಕೆ ಬೀಯನ್ನು ತಲಿ ಅದರ ಹೋಮವು ನಿತ್ಯ ನಡೆಯಬೇಕು. ೧೭ ಅನ್ಯಾಯದ ಅನಾಹುತ, ನ್ಯಾಯದಿಂದಲಿ ಹಾನಿ, ಅನ್ಯಾಯದಿಂದ ಹಿತ, ಇ೦ತೆಮಗೆ ಕೆಲಕಾಲ ಕಾಣುತಿಹುದು. 1 ಸುಡುವದು. || 90 || 11 06 || || 99 || ದುರ್ಗುಣ, ತ್ಯಾಗ. ಶ್ರೇಯವಿದರಲಿಯಿಲ್ಲ. ಅದಕೆ ನ್ಯಾಯವನೆಂದೂ ಬಿಡದೆ ಒಳಡೆಯನ್ನು ಮಾಣದಿಹುದು. ನಡತೆಯೇ ಕೆಡದಿರಲು, ಅ೦ತರಂಗವನರಿತು ಕಾಣ ಹಾನಿಯನಾತ್ಮ ತುಂಬಿಕೊಡುವ ನಡತೆ ಕಿಡೆ, ಕಾಣ್ಣ ಹಿರಿಹಾನಿಯನೆ ತಾ ನೀಡಿ ತಾಳದಾ ತಳಮಳವ ತುಂಬಿಬಿಡುವ. ಕಾಣ ಹಾನಿಯು ಸಲ್ಲುವುದು ಕಾಣ್ಣ ಹಾನಿಯನು ತಾಳು ಬಾಳುವದಿನಿತು ಸಾಧ್ಯವಿಲ್ಲ. ತುಂಬ ತಾಳಲು ಬಹುದು ಪರರ ಹೆಡತವನೆಲ್ಲ ಆತುಮನದನು ತಾಳಬಾರದಲ್ಲ. ೧೮. ಪಾಪಕ್ಕೆ ತಕ್ಕ ಶಿಕ್ಷೆ. ತಿಳಿದು ಪಾಪವನೆಂದೂ ಮಾಡದಿರು, ಹೇಸುತಿರು. ತಿಳಿಯದಾದುದಕ ತಿಳಿಯದಲೆ ಹಾನಿ ತಿಳಿದು ಪಾಪವನೆಸಗೆ ತಕ್ಕ ಶಿಕ್ಷೆಯ ಕೊಡಲು ದಕ್ಷನಿರುತಿಹನಿಲ್ಲಿ ನ್ಯಾಯದಾನಿ. ಹೊಲದಲಿರುತಿಹ ಸವತಿಕಾಯನೆ೦ದನು ಕದಿಯ ಬೈವರಿಲ್ಲವೆ ಬಹಳ ಬಡಿಯುತಿಹರು. ಬಲದಿ ಮನೆಯೊಡೆಯ ಸಂಕೋಲೆಗಳ ಸತ್ಕಾರ 633 || ೨೩ || || 20 || ಕೊಲೆಗೆ ದೊರೆವುದು ಗಲ್ಲು, ಕರಿಯನೀರು, || ೨೭ || 1 ಬಿಡಬಾರದು. ೧೬ ಬೋಧ- ಸುಧೆ ೧೯, ಶಿಕ್ಷೆಯ ಮೂರು ಬಗೆಗಳು ನೀತಿ ತೊರೆಯಲು ವಿವಿಧ ಪಾಪಗಳು ಜರಗುವವು. ಅವಕೆ ದೊರೆವುದು ತಾಪ ಮೂರು ತೆರದ, ರೀತಿಯನು ನೋಡಿಯ ಜಾತಿಯನು ಮಾಡಿಹರು ಅಧಿ ಭೂತ-ಅಧ್ಯಾತ್ಮ-ಅಧಿದೈವದ. ಪರರು ಹೊಡೆತವ ಹೊಡೆದು, ಪಶುಪಕ್ಷಿಗಳು ಕಡಿದು, ಭೂತಗಳು-ಅರಸ್ಥಾಳು ಜಡಿದು ಬಡಿದು, ನರದೇಹಕುಂಟಾದ ಹಿರಿಯ ನವದು ತಾನೆ ಅಧಿಭೂತ-ಅಂಕಿತವ ಪಡೆಯುತಿಹುದು ತರತರದ ಬೇನೆ ಬೇಸರದಿಂದ ಮೈಮನಕೆ ತಗಲುತಿಹ ತಾಪ ಅಧ್ಯಾತ್ಮ ವಿಹುದು ಮರಣ ಹರಣವ ಸೆಳೆಯ ಅಧಿದೈವ ತಾಪವದು, ಬಗೆದಿದನು ಪಾಪವನು ಮಾಡದಿಹುದು. ೨೦. ಕದ್ದು ಕೆಲಸ ಬೇಡ ಎಂಥ ಕೆಲಸವನೆಂದೂ ಕದ್ದು ಮಾಡಲು ಬೇಡ. ಪರರ ಹೆದರಿಕೆಯಿಲ್ಲದಂತೆ ನೋಡು. ಸ್ವಂತ ಕೆಲಸಗಳನ್ನು ಕದ್ದು ಮಾಡಲುಬಹುದು. ಸಾಧನವ ಮಾತ್ರ ಮರೆಯಲ್ಲಿ ಮಾಡು. 1 ಪ್ರಾಣ || ೨೮ || || 20 || 11 2011 ದುರ್ಗುಣ ತ್ಯಾಗ, ೨೧. ಆಲಸ್ಯವು ಮುಖ್ಯ ಶತ್ರು. ಹೊಲಸು ಅಲಸಿಕೆಯನ್ನು ನಿಲಿಸಿಗೊಡದಿರು ನೀನು. ಶೀಲಕುಲಗಳನೆಯದು ಅಳಿಸುತಿಹುದು. ಒಲಿದ ಆಶ್ರಿತರನ್ನು ಕೊಲುವುದೆಯದರ ಧರ್ಮ ಅದರ ಗಾಳಿಗೆ ಕೂಡ ನಿಲ್ಲದಿಹುದು, ತನ್ನ ಇಹದರ್ಥಗಳ ಕೆಡಿಸುನಂದದಲ್ಲಿಯದು ಪರಮ ಅರ್ಥವ ಕೂಡ ಕೊಲ್ಲುತಿಹುದು. ಚೆನ್ನ ನಾಮವ ನೆನೆಯ ಕುಳಿತ ಸಮಯಕೆ ಬಂದು ನಿದ್ರೆರೂಪವ ತಾಳಿ ನಿಲ್ಲುತಿಹುದು, ಬಂದೊಡನೆ ತಾನವನು ಜರಿಯುತಲಿ ಮುರಿಯುತಲಿ ನಾನುವನು ಎಡೆಬಿಡದೆ ನೆನೆಯುತಿಹುದು. ಅ೦ದದಿ೦ದಲಿಯಿಂತು ಕೆಲಕಾಲ ನಡೆಯುತಿರೆ ಬಂದದಾರಿಯಲೆಯದು ಪೋಗುತಿಹುದು. ತಮ್ಮ ಕೆಲಸದಲೆಂದು ಅಲಸಿಕೆಯು ನೆಲಸುವದೋ ಆ ಚಣದಿಯದನಲ್ಲಿ ಹಣಿಯುತಿಹುದು. ಒಮ್ಮೆ ಗಟ್ಟಿಗನಾಗಿ ಜಟ್ಟಿಯೊಲು ಹೋರಿದೊಡೆ ಛಲದ 072 || 2 9 || 112211 || ೩೪ || ಬಲದಿಯದು ಮಣಿಯುತಿಹುದು || ೩೫ || ೨೨ ಚಿಂತೆಯ ಬೆಳೆ. ಹಾಳು ಚಿಂತೆಯ ಬೆಳೆಯು ಬಲುಬೇಗ ಬೆಳೆಯುವದು ಮೊಳೆತೊಡನೆ ಮೊಳಕೆಯನ್ನು ಮುರಿಯಬೇಕು, 1 ಕ್ಷಣ. 2 ದೃಢನಿಶ್ಚಯ. ೧೮ ಬೋಧ- ಸುಧೆ ಕೇಳು ! ಚಿಂತೆಯೆ ಮುಪ್ಪು ಸಂತೋಷ ಯೌವನವು ಆರಿತಿದರ ಅಂಕುರವನಳಿಸಬೇಕು. ನರನು ಜನನದಿ ತನ್ನ ಹರಣ ಹಾರುವವರೆಗೆ ಚಿಂತೆಯಾ ಸಂತೆಯಲಿ ನಿಂತೆ ಇಹನು. ಮರುಳ ಚಿಂತೆಯು ಮರಳಿ ಚಿಂತೆಯನೆ ಬೆಳೆಸುವದು ದೇವ ಮಾಡುವಹಾಗೆ ಮಾಡುತಿಹನು, ತನ್ನ ಒಡವೆಗಳನ್ನು ಕಾಯುತಿರು, ಕಳೆಯದಿರು ಕಳೆದ ದಕಾಗಿ ಹಳಹಳಿಸಬೇಡಾ, ತನ್ನ ಹಿರಿಕಂಟಕವು ಅಳಿಯಿತಿದರಿಂದೆನುತ ಸಂತತದಿ ಸಂತಸದಲಿಹುದು ನೋಡಾ. ಮುಗಿಲಿಗೆಯ ಮುಗಿಲು ಮುಟ್ಟಿಹುದು, ಎಲ್ಲಿದ್ದರೂ ಅದರ ಸೀಮೆಯಲಿಹುದು ಕಳೆದುದೆಲ್ಲ. ಜಗದಿ ನಡತೆಯ ಕಾಯ್ದರಲ್ಲೇನೂ ಹೋಗದದು ಕೊಡುವ ದೇವರಿಗೇನೂ ಕಡಿಮೆಯಿಲ್ಲ. ೨೩. ನಿರ್ಗುಣದ ಚಿಂತೆ. ೧ ೩೬ || ಗುಣದ ಚಿಂತೆಯ ತೊರೆದು, ನಿರ್ಗುಣದ ಚಿ೦ತೆಯನ್ನು ಸಾಧಕರು ಆದರದಿ ಮಾಡುತಿಹುದು, ಚಿನುಮಯಾತುಮನೆಂತು ಕಾಣಿಪನು? ನಾನಸುಧೆ ಸುರಿಯುವುದದೆಂತಿದನು ಚಿ೦ತಿಸುವದು. ತಾನು ಆತ್ಮನ ಚಿಂತೆ ಎಡೆಬಿಡದೆ ಮಾಡಿದರೆ ತನ್ನ ಚಿಂತೆಯನಾತ್ಮ ಬಿಡಿಸುತಿಹನು. || 22 || 11 2011 112511 || 90 || ದುರ್ಗುಣ- ತ್ಯಾಗ. ಹಾನಿಂದೊದಗದೊಲು ಕೊರತೆಯದು ಬೀಳದೊಲು ತನ್ನ ಸಂಸಾರವನು ನಡೆಸುತಿಹನು. ಚಿಂತೆಯ೦ಕುರವಳಿಸಿ ಮನವ ತೊಳಿಯಲು ತಾನೆ ಗುರುಕರುಣದಿಂ ದೊರೆತ ನಾನು ಶರಣು, ಇಂತು ನಾನುವ ತಾವು ಸಂತತವು ನೆನೆಯ ತಿರೆ ಚಿಂತೆಯಳಿವುದು. ದೇವನೊಲಿಯುತಿಹನು, ಇಂತು ಮೂರು ಗುಣಗಳ ಜಾಲ ಹರಿಯರಯ್ಯ ! ಆರು ಅರಿಗಳ ಬಲವ ಮುರಿಯಿರಯ್ಯಾ !! ಅಲಸು-ಚಿಂತೆಗಳನ್ನು ತೊರಿಯಿರಯ್ಯ! ಆತ್ಮದೇವನ ಕರುಣ ಕರೆಯಿರಯ್ಯ!! CE 118011 || 3 - || || ೪೩ || ( ಬಿಂದು ೪ ) ಸದ್ದು ಣ- ಸ೦ಪಾದ ನ ೨೪ ವಿವೇಕ ದುಷ್ಟ ದುರ್ಮಣಗಳನು ನಷ್ಟಗೊಳಿಸಲು ಬೇಗ ವರ ವಿವೇಕವೆ ಹಿರಿಯ ಕತ್ತಿಯಿಹುದು ಸ್ಪಷ್ಟ ಮಾತಿದು ತಾನೆ. ಇಷ್ಟೆ ಫಲ ದೊರೆವುದಕೆ ಅದನುಳಿದದೇನನ್ನೂ ಮಾಡಬಹುದು. ಮುಂದಿನವರೆಡವಿಯುರುಳಿದುದನ್ನು ತಾ ಕಂಡು ಹೆಚ್ಚಿನೆಚ್ಚರದಿಂದ ನಡೆಯಬೇಕು. ಮುಂದೆ ನೋಟ ನೆಟ್ಟು ಆತುಮನ ನೆನವಿಟ್ಟು ಸಂತಸದಿ ವೈರಿಗಳ ಜಡಿಯಬೇಕು. ೨೫. ಚಲೋ ಬುದ್ಧಿಯು. ತನ್ನ ಕಾಯ್ದುದು ಕೊಲ್ಲುವುದು ಬುದ್ಧಿಯಲ್ಲುಂಟು. ಒಳಿತು ಕಾಯುದು, ಕೆಡಕು ಕೊಲ್ಲುತಿಹುದು. ಚೆನ್ನ ಆತ್ಮನ ನಿತ್ಯ ನೆನೆವ ಬುದ್ಧಿಯು ಒಳಿತು ಅವನುಳಿದು ಚಿ೦ತಿ ಪುದೇ ಕೆಡಕು ಇಹುದು. ಧನ ಜನಾದಿಗಳ ಬಲವೆನಿತು ಇದ್ದರೂ ತನಗೆ ಬುದ್ಧಿಯನ್ನುಳಿದಾರೋ ಕಾಯರವರು. ತನಗದನೆ ನೀಡೆಂದು ಆತ್ಮದೇವನಿಗೆಂದೂ ಎದೆಯು ಕರೆಗುವ ತೆರದಿ ಪ್ರಾರ್ಥಿಸುತಿರು. ||0| 11 & 11 11 2 11 ಸದ್ಗುಣ- ಸಂಪಾದನ. ೨೬, ಇಂದ್ರಿಯ-ನಿಗ್ರಹ ಎಲ್ಲರಲ್ಲಿಹ ಜ್ಞಾನಕರ್ಮೇಂದ್ರಿಯಂಗಳವು ವಿಕಲ ಮಾಡುತಲಿಹವು ಸಕಲರನ್ನು, ಎಲ್ಲವರ ಬಯಕೆಗಳನಳಿಸಿ ಮಾತನು ಮುರಿದು ವಶದಲಿಡುತಿರು ನಿತ್ಯ ಅವುಗಳನ್ನು ಆತುಮನ ಸೇವೆಯಲಿ ಸವೆಯಿಸಿದರೆಲ್ಲವನು ಪ್ರತಿಯೊಂದು ವಶವಲಿಯೆ ನಿಲ್ಲುತಿಹುದು. ಈ ತೆರದಿ ವಶಪಡಿಸಿದವರು ಸಿದ್ಧರು ನೋಡು ಅಂಥವರಿಗೀ ಜನುಮ ಸಲ್ಲುತಿಹುದು. ೨೭ ಪ್ರಥಮ ಕಾಮನನ್ನೆ ಕೊಲ್ಲಬೇಕು ಕಾಮ ಕ್ರೋಧಂಗಳವ, ಮದ ಮತ್ಸರಂಗಳವು ದಂಭಹಂಕಾರಗಳು ನರರೊಳಿಹವು. ನೇಮದಿಂದಾತ್ಮನನು ಬಲವಾಗಿ ಬಂಧಿಸುತ ಭವದ ತಿರುಗಣಿಯಲ್ಲಿ ತಿರುಗಿಸುವವು. ಘನ ವಿಕಾರಗಳನ್ನು ಹರಿಯಗೊಡದಿರು ನೀನು ಅದಕೆ ಕಾಮನ ಮೊದಲು ಗೆಲ್ಲಬೇಕು ೨೧ 118 11 || 2 11 ಮನದಿ ಬಯಕೆಯು ಮೊಳೆಯೆ, ' ಎನಗಣೇತಕೆ ಬೇಕು?? ಈ ವಿವೇಕದಿಯದನು ಕೊಲ್ಲಬೇಕು ಕಾಮವಳಿದರೆ ಮುಂದೆ ಕ್ರೋಧ ಬರಲರಿಯ ಬಯಸಿದುದು ದೊರೆಯದಿರೆ ಕೋಪ ಬಹುದು. li 11 ಕಾಮನನೆ ತೊರೆಯುತಿರೆ, ಕ್ರೋಧ ಮೆರೆಯುವದೆಂತು? ಅಳಿದರಿವು ಇನ್ನಾವುದಳಿಯಬಹುದು ? 115 11 110011 || 00 || ಬೋಧ ಸುಧೆ ಮನವು ವಿಷಯವ ಬಯಸೆ, ಮೈಯ ವಶದಲ್ಲಿರಿಸು. ಮನದೊಡನೆಯದನೆಂದೂ ಕಳುಹಬೇಡ, ಮನವದನು ತೊರೆಯದಿರೆ, ಬುದ್ಧಿಯಿಂ ಬೋಧಿಸುತ ತೊರೆವನಕ ಸಾಧನವ ಮರೆಯಬೇಡ, ಲಾಭ ಸಾಧಕರಿವರ ಬಾಧೆಗೊಳಗಾಗದಲೆ ನಿರ್ವಿಕಾರತೆಯಿಂದ ಬೆಳೆಯಬೇಕು. ಲೋಭ-ಪ್ರಭದಿ ಭವದ ಬಾಧೆಯಲಿ ಬೀಳದಲೆ ಆತ್ಮಪ್ರಭೆಯಿಂದವರು ಹೊಳೆಯಬೇಕು, ೨೮. ಜಡ ಹಾಕಬಾರದು. ಯಾರ ಮೇಲೆಯು ಯಾವ ಬಗೆಯ ಭಾರವು ಬೇಡ. ತನ್ನ ಮೇಲದು ಮರಳಿ ಬೀಳ್ಳುದಲ್ಲ ! ಭಾರ ಹೇರಿದ ತೆರದಿ ಭಾರ ಬೀಳ್ವುದು ದಿಟವು. ನಿತ್ಯ ತತ್ವವ' ಇದಕ್ಕೆ ಚ್ಯುತಿಯು ಇಲ್ಲ. ೨೯. ಕೈ ಕೆಳಗೆ ಬೇಡ. ತನ್ನ ಕೈಯನು ಕಳಗೆ ಮಾಡಿ ಅನ್ಯರದನ್ನು ಎಂದೆಂದಿಗೂ ನೀನು ಕೊಳ್ಳಬೇಡ ತನ್ನ ಕೈ ಯದು ಕೆಡುಗು. ತನಗಿನಿಸು ಸಾಲದದು. ಅದಕೆ ಕೈ ಮೇಲಾಡದಿರಲು ಬೇಡ. ಖುಲ್ಲ ವೈದಿಕ-ಜಂಗಮರು ಎಲ್ಲರನು ಬೇಡಿ ಕಾಡಿ ಕೈಯನ್ನು ಕೆಡಿಸಿಕೊಳ್ಳುತಿಹರು. ಇಲ್ಲ ಕೆಲಸಕೆ ಗೆಲವು, ಐಸಿರಿಯ ಸಿರಿಯೊಲವು. ಪರರ ದಾನವನದಕೆ ಕೊಳ್ಳದಲಿರು. 11021 1180 11 ಸದ್ಗುಣ- ಸಂಪಾದನ 20 ತಾಳ್ಮೆ ಪರರು ಬೈಯುವ ತೆರದಲೇನನ್ನು ಕೈಯದಿರು.. ಅನ್ಯಾಯದಿಂ ಜೈಯೆ ಬೈಯಬೇಡ. ಹೆರರು ಅನ್ಯಾಯದಿಂ ಬಡಿಯುತಿರೆ ಬಡಿಯದಿರು ತನ್ನ ಒಲವನು ಅಳಿಯಗೊಡಲು ಬೇಡ. ಅನ್ಯಾಯ ಮಾಡಿದವ, ವಿಷವ ತಿಂದಿರುತಿರುವ, ಏರಿಯದು ಒಡನೆಯುವ ತೀರುತಿಹನು ಅನ್ಯರನು ಅನ್ಯಾಯದಿಂದ ನೋಯಿಸಲೀಶ ಅದನೆ ತನ್ನ ಮೇಲೆ ಕಾರುತಿಹನು. ಹಿರಿಯ-ಬಲಿಗಳು ಬೈಯೆ, ಬೈಸಿಕೊಳು, ಸೈಸಿಕೊಳು. ಕಿಯ ಕಾರಣವಿಲ್ಲೆ ಬೈಯೆ, ತಾಳು ಮರವಿನಿಂ ತಪ್ಪಿದರೆ ಪರರು ಬೈಗಳ ಸುರಿಯೆ ಬುದ್ಧಿ ಕಲಿಸಲು ಬಂದನೆಂದು ಕೇಳು ಬೈದು ಕಲಿಸುವರನ್ನು ತೆಗಳದಿರು ಹೊಗಳುತಿರು ಅವರ ಉಪಕೃತಿಯನ್ನು ನೆನೆಯಬೇಕು, ಬೈದು ಹೇಳನು ಹಿತವ, ನಗುತ ಹೇಳ್ವೆನು ಕೆಡಕ ನೆಸಗುತಿಹನೆಂಬುದನ್ನು ಅರಿಯಬೇಕು. ತನಗೆ ತಾಳ್ಮೆಯ ಫಲವು ಒಮ್ಮೆಲೆ ಬರುತಿಹುದು. ಶಾಂತಿ ಸುಖವದು ವಿಪುಲ ಲಭಿಸುತಿಹುದು
- ಎನಿತು ತಾಳುವಿ ಅನಿತು ಬಾಳು' ನೆಂಬುದನರಿತು
ತಾಳಿಯ ಬಹುಕಾಲ ಬಾಳುತಿಹುದು, 92 11 se o 11 110 110211 1100 || ೨೪ ಬೋಧ-ಸುಧೆ ತಾಪವನು ತಾಳ್ಮೆಯಿಂ ತಾಳ್ವುದೇ ಹಿರಿತಪವು. ತಾಪವಾದುದನೆಲ್ಲ ತಾಳಬೇಕು. ಕೋಪದಿಂ ಶಾಂತಿಯನು ಲೋಪಗೊಳಿಸದೆ ತಾನು ಶಾಂತ ಸಂತರ ತೆರದಿ ಬಾಳಬೇಕು. ಪರರ ಭಾರವನೆಲ್ಲ ಬಗೆಯಿಂದ ತಾಳುತಿರೆ ತನಗೆ ಮಿತಿಮೀರಿದಾ ಹಿತವು ಬಹುದು. ಪರರ ದುಃಖವನಿನಿತು ಸಹಿಸೆ ತನಗೊದಗುತಿಹ ಅಮಿತ ದುಃಖವು ದೂರ ಸರಿಯಬಹುದು. ತಾಳುವುದೆಯೇ ತೆರದಿ ಲಾಭವಹ ವ್ಯಾಪಾರ ಕಿರಿ ಬೆಲೆಗೆ ಹಿರಿಯೊಡನೆ ಪಡೆಯಬೇಕು, ತಾಳ್ಮೆ ಬೆಲೆಯನು ನಿಮ್ಮ ಆತ್ಮನಿಗೆ ಸಲ್ಲಿಸುತ ಶಾಂತಿ-ಸರಕನು ತಾನು ಕೊಳ್ಳಬೇಕು S ೩೧. ಮನಸ್ಸನ್ನು ನೋಯಿಸಬಾರದು ಯಾರ ಮನಸನ್ನಾವ ತೆರದಿ ನೋಯಿಸದಲಿರು ಯಾರನಲಿಸಲು ಬಳಲಿಸಲು ಬೇಡ, ಭಾರಿ ಪೀಡೆಯ ನೀಡದಾರನೂ ಕಾಡದಿರು. ಯಾರ ಬಯಕೆಯನೆಂದೂ ಅಳಿಸಬೇಡ. ಮಾತನಿತ್ತುದರಿಂದ ಸೋತ ಮನುಜಗೆ ತಾನೆ ಯಾತರಲ್ಲಿ ಹಾನಿಯತಿಯಾಗುತಿಹುದೊ ಆ ತೆರೆದ ಮಾತಿನಿಂದಾತನನು ಬಿಡಿಸುತಲಿ ಸಂತಸವನವಗೆ ತಾ ನೀಡುತಿಹುದು || 93 || ॥ ೨೨ | ಸದ್ಗುಣ. ಸಂಪಾದನ. ಹೊಲಮನೆಯ ಕೆಲಸಕಿದ ಕೂಲಿಯಾಳುಗಳಂಗೆ ಕಡಿಮೆ ಕೂಲಿಯನೆಂದೂ ಕೊಡಲು ಬೇಡ. ಹೊಲಸ ಮೋಸದಿ ನಿನ್ನ ಕೆಲಸವನು ಮುಗಿಸುತಲಿ ಯಾರ ಹಳಹಳಿಯನ್ನು ಪಡೆಯ ಬೇಡ. ತನ್ನ ಮನೆಯನು ನಿಲಿಸೆ ಅನ್ಯರಾ ನೆಲವನ್ನು ಸಾಧಿಸುತ ಬಾಧೆಯನ್ನು ಕೊಡಲು ಬೇಡ ಮಣ್ಣು - ಕಲ್ಲುಗಳನ್ನು ಕಟಿಗೆ ಇಟ್ಟಿಗೆಗಳನ್ನು ಬೆಲೆಯನೀಯದೆಯೆಂದೂ ಕೊಳಲು ಬೇಡ ಹಳಹಳಿಯ ನೀಡಿ ನಿಲ್ಲಿಸಿದ ಮನೆಯಲ್ಲಿ ತಾನು ಇರುವನಕ ಹಳಹಳಿಯು ಬಿಡುವದಿಲ್ಲ. ಒಳಿತು ಸಂತಸ ನೀಡಿ ಮನೆಯ ನಿಲ್ಲಿಸೆಯಲ್ಲಿ ಅದುವೆ ತನಗಿರುವನಕ ದೊರೆವುದಲ್ಲ ! ೨೬, ಸತ್ಯ-ಅಸತ್ಯ ಸತ್ಯವನು ನುಡಿಯುತಿರ ಸತ್ವವನು ನುಡಿಯದಿರು, ಸತ್ಯದಿಂದೆಮ್ಮ ನುಡಿ ಸತ್ಯವಹುದು. ನಿತ್ಯದಲ-ಸತ್ಯವನು ನುಡಿಯೆಯಮ್ಮಯ ನುಡಿಯು ಸಂತತವ ಸತ್ಯವೇ ಆಗುತಿಹುದು. ತನ್ನ ಮೇಲೆಂಥ ಸಂಕಟ ಬಂದರೂ ಕೂದ ಸುಳ್ಳನೆಂದಿಗೂ ನೀನು ಹೇಳಬೇಡ. ತನ್ನ ಸುಳ್ಳದನು ತಳ್ಳುವ ತೆರದಿ ತೋರಿದರೂ || 92 || 1195 ತನ್ನ ಮೇಲೆಯೆ ಹೊರಳುತಿಹುದು ನೋಡಾ || ೨೯ || ೨೫ ಬೋಧ- ಸುಧೆ ಸತ್ಯ ನುಡಿವುದರಿಂದ ಮನೆಮಾರು ಜನಧನವು ಎಲ್ಲವಳಿದರೂ ಕೂಡ ನಡೆಯಬಹುದು. ನಿತ್ಯ ದೇವನೆ ತನಗೆಯೆಲ್ಲ ನೀಡಲು ಬಲ್ಲ ಅವನದೆಯ ಕೊನೆಯನಕ ತಡೆಯಬಹುದು. || ೩೦ || ಸಟೆಯಾಡಿ ಬಾಳುವಾ ಹಾಳು ಬಾಳುವೆಗಿಂತ ದಿಟವಾಡಿ ಕರೆಯುವದು ಮರಣವನ್ನು, " ಘಟವು ಅಳಿದರೂ ಕೂಡ ಸಟೆಯನಾಡದವಂಗೆ ದೇವ ನೆರವನು ನೀಡಿ ಪೊರೆಯುತಿಹನು. ಆದರಿದರಲಿ ಕೂಡ ತೂಕವಿರಬೇಕಯ್ಯ, ತೂಕ ತಪ್ಪಿದರೆಯತಿ ಶೋಕವಯ್ಯ! ಸೋದರ ವಿವೇಕವನು ಆದರದಿ ಕೇಳುತಲಿ || 20 || ಲೋಕಹಿತವನು ನೋಡಿ ನುಡಿವುದಯ್ಯ, || ೩೨ || ಪರರ ಹಿತ ಜರಗುತಿರೆ, ತನಗಹಿತವೊದಗಿದರೆ ಸುಳ್ಳನೊಮ್ಮೊಮ್ಮೆ ತಾನುಸುರಬಹುದು. ಪರರು ಹರಣಕ್ಕೆ ಶರಣು ಎನುವ ಸಮಯದಿ ತಾನು ಸುಳ್ಳನುಸುರಿಯ ಆದನು ಉಳಿಸುತಿಹುದು. || ೩೩ | ಪಾರ್ವನೋರ್ವನದೊಮ್ಮೆ, ಭಾರ್ಯೆಯನು ಬಡಿಯುತಿರೆ ಒಡನೆ ಹರಣವನವಳು ಬಿಡುತಲಿಹಳು, ಸಾರ್ಧು ಕಂದುದರಿಂದ, ಹಿರಿ ಕಬೀರರು ಅದನು ಸಾಕ್ಷಿಕೊಡಲವರ ಕರೆದಿಹರು ಕೇಳು
- ಇಂದು ಸತ್ಯವನುಸುರೆ, ಪಾರ್ವ ಸಾಯ್ತುದು ಸತ್ಯ.
ಸುಳ್ಳನಾಡಲು ಸಾಧುತನಕೆ ಕೇಡು'. || ೩೪ || ಸದ್ಗುಣ- ಸಂಪಾದನ ಎಂದು ಸಂದೇಹದಲಿ, ಆತುಮನ ನೆನೆಯುತಲಿ ನ್ಯಾಯನಿಲಯಕೆ ನಡೆದರವರು ನೋಡು. ಅಂದು ಆತುಮನೆಡೆಗೆ ನಿಲಲು ಮುಖವನು ತಿರುವಿ. ಮುರುಳನಿವನೆಂದು, ಸರಿ ನಿಲ್ಲಿಸಿದರು.
- ಅ೦ದೂದಗಿದುವದೇನು' ಎಂದು ಕೇಳಲು ಅವರು
ಇಂತು ಮಾಗುತ್ತರವ ಸಲ್ಲಿಸಿದರು 02 11 22 11
- ಜೀಖನೇ ನಾಲಾ ತೋ ನಹಿ ಬೋಲತಾ ಭಾಯಿ,
ಬೋಲನೇ ವಾಲಾ ತೋ ದೇಬಾ ನಹಿ. ಸಾಕು ಮರುಳನ ಮಾತು, ಸಾಕ್ಷಿಯಿಲ್ಲದರಿಂದ ಶಿಕ್ಷೆಯಿಲ್ಲಿ' ನೆ, ಉಳಿದ ಬಡವ ಪಾಯಿ, - 11221 ಅನ್ಯರತೆರದಿ ಮುನ್ನ ಕಾಯಲು ತಾನು ಸುಳ್ಳನಾಡಿದರೊಮ್ಮೆ ಸಲ್ಲಬಹುದು. ತನ್ನ ಅರ್ಥವನುಳಿಸೆ, ತನ್ನ ಹಿತವನ್ನು ಗಳಿಸ ಸುಳ್ಳನಾಡುವದೆಂದೂ ಸಲ್ಲದಿಹುದು. ೩೩. ಹಿರಿಯರ ಸೇವೆ. ತಂದೆತಾಯ್ದಳು ಕಂದ, ಮುಪ್ಪಿನಲಿ ತಾ ಬಂದು ಸಲುಹಬೇಕೆಂದವನ ಬೆಳೆಸುತಿಹ ಅಂದು ಬಾಯುತ್ತನ್ನು ಕಂದನಿಗೆ ನೀಡು ತ ಜೋಕೆಯಿ೦ದಲ್ಲಿ ಸಾಕಿ ನಲಿಸುತಿಹರು ಮೀರದವರಾಣಿತಿಯ ಮುರಿಯದಲೆಯವರ ಮನ || ೩೮ || || ೩೯ || ಸೇವೆಯಿಂದವರ ತಾಲಿಸುತಿಹುದು, ಬೋಧ ಸುಧೆ ಮೀರಿ ನಲಿದೊಲಿದವರು, ನೂರು ಹರಕೆಯ ಸುರಿಯ ಅಮಿತ ಐಸಿರಿಯಲ್ಲಿ ನಲಿಯುತಿಹುದು. ಹಿರಿಯರಾಣತಿಯಲ್ಲಿ ಚರಿಪ ಕಿರಿಯನು ತಾನು ಅವರ ಸೇವೆಯ ಸತತ ಮಾಳ್ವ ನರನು ಪರಮ ಸಂತತಿ-ಸಂಪಪಾಯು-ಬಲ-ಕೀರುತಿಯ ಬಿಡದೆ ಅಡಿಗಡಿಗವನು ಪಡೆಯುತಿಹನು ತನ್ನ ಮೇಲೆಲ್ಲರೊಲವನು ಕರೆಯುತಿರಲೆಂದು ಎಳಸುವವ : ಕರಣಿ' ಯನು ಕರೆಯಬೇಕು ತನ್ನ ಕರಣಿಯ ಹೊರತು, ಕರಗದಂತಃಕರಣ ಅದನುಳಿದು ಒಲವೆನಿತು ದೊರೆಯಬೇಕು ? ಪರರ ಕೆಲಸವ ತಾನು, ಪರಮ ತತ್ಪರತೆಯಿಂ ಅವರು ಹೇಳುವ ಮುನ್ನ ಮುಗಿಸುತಿಹುದು, ಪರರ ಕೈಯಿಂ ತಾನು ನಿರುತದಿಂ ತೆಗೆದದನು ಅಧಿಕ ಕುಶಲತೆಯಿಂದ ಸಾಗಿಸುವದು. ಉಚ್ಚ ಕೆಲಸವನುಳಿದು ನೀಚ ಕೆಲಸವನೆಸಗೆ ಅಂತರಂಗವು ಬೇಗ ಅರಳುತಿಹುದು. ನೀಚ ಕೆಲಸಗಳಲ್ಲಿ ನಾಚದವ ತಾ ವಿರಲ. ಒಲವಿಗಾಗದರೆಡೆಗೆ ಹೊರಳುತಿಹುದು. ಇಂತು ಮೈಮನದಿಂದ ಅಂತಮಿತ ಧನದಿಂದ ಅನುವರಿತು ಕರಣಿಯನು ಮಾಡುತಿಹುದು. | 40 | || 30 || || ೪೨ || || 03 || ಅಂತರಂಗವು ಒಲಿಯೆ, ಇರುವ ಮಮತೆಯು ಬಲಿಯ, ನಲಿವು ಕಡಲಲಿ ಅಲೆದು ಆಡುತಿಹುದು, ಸದ್ಗುಣ. ಸಂಪಾದನ. ೩೪, ತನ್ನಂತೆ ಪರರನ್ನು ನೋಡೋಣ ತನ್ನಂತೆಯನ್ಯರನು ಕಾಣುತಿಹುದ್ದೆ ನೀನು, ಅವರ ನಲಿನಿಂ ನೀನು ನಲಿಯಬೇಕು. ರಾ ನೋವುಗಳು ತನ್ನವೆಂದೆಯೇ ತಿಳಿದು ಅವರ ನೋವಿಂ ನೀನು ನನೆಯಬೇಕು. ಅನ್ಯರಾ ತನ್ನ ಹೊಲಗಳನೆಲ್ಲ ಅನ್ಯ ಮೇಯಿಸುತಿರಲು ತನ್ನ ಮನಸದು ತಾನೆ ನೋಯದಿಹುದೇ ? ಅನ್ಯರಾ ಹೊಲಗಳನ್ನು ಅಂತೆ ಮೇಯಿಸೆ ತಾನು ಅವರ ಮನಸಿಗೆ ನೋವು ಒದಗದಿಹುದೇ ? ತನ್ನ ಮಗುಗಳ ತೆರದಿ, ಅನ್ಯ ಮಗುಗಳನೆಣಿಸು, ಅವಕ್ಕೂ ಮೇಲ್ಪಗೆದರೂ ಸಾಗಬಹುದು. ತನ್ನ ವರ ಮೇಲ೦ದು ದೇವನೋಲವನು ಕರೆವ ದೇವನೊಲವಿಗೆ ಮೇಲದಾವುದಿಹುದು ? ತನ್ನಲ್ಲಿ ವಿಷಮತೆಯ ವಿಷವು ಬರದೊಲು ನೋಡು ಅದರಿಂದ ತನ್ನೊಡನೆ ನಾಣುತಿಹುದು. ತನ್ನ ಅನ್ಯರರೆಲ್ಲ ಒಂದೆಯೆಂದೆಯೇ ಬಗೆದು ಎಲ್ಲರನು ಸಮನಾಗಿ ಕಾಣುತಿಹುದು. ೩೫, ಪರೋಪಕಾರ, ತನ್ನ ಕೈಲಾದನಿತು ಸನ್ನು ತುಪಕೃತಿಯನ್ನು ಸತ್ಪಾತ್ರದಾನವನು ಮಾಡಬೇಕು, ತನ್ನೆಡೆಗೆ ಬಿಸಿಲಿನಲಿ ಹಸಿದು ಬರೆಯತಿಥಿಗಳು ಸನ್ಮಾನದಿಂದ ನೀಡಬೇಕು 19211 11 32 il || ೪೮ || || ೪೯ | 11 8 0 || ೩೦ ಬೋಧ ಸುಧೆ ಜಳ್ಳು ಕೀರುತಿಗಾಗಿ ಒಳ್ಳೆ ಸಾಲವ ಹಿರಿದು ತಳ್ಳಿಯನ್ಯರ ಹಾಳು ಕೊಳ್ಳದಲ್ಲಿ. ಕಳ್ಳತನದಿಂ ಧನವ ಸುಳ್ಳಿನಿಂದಲಿ ಗಳಿಸಿ ಪೊಳ್ಳು ದಾನವ ನೀಡೆ ಸಲ್ಲದಲ್ಲ ! ಶಿಷ್ಟರು ಪಕೃತಿಯನ್ನು ಕಷ್ಟದಲಿ ಬೀಳದಲೆ ಸಹಜ ಕೈಲಾದಷ್ಟು ಬೆಳೆಸಬೇಕು. ಕಷ್ಟವನು ಕಳೆಯಲಿಕೆ ನಷ್ಟ ದೇಹವ ದುಡಿಸಿ ಅಮರ ಕೀರುತಿಯನ್ನು ಗಳಿಸಬೇಕು. ೩೬. ದಯೆಯ ಸ್ವರೂಪ. ದಯೆವಿರಲಿಯೆಲ್ಲ ಪ್ರಾಣಿಗಳಲ್ಲಿ, ಎಲ್ಲೆಲ್ಲಿ ನಿಷ್ಠುರತೆ ನಿರ್ದಯತೆ ಬೇಡವಯ್ಯ ! 118011 1188511 ದಯೆಯೆ ಧರ್ಮದ ಮೂಲ, ದಯೆಯೆ ಕರ್ಮಕೆ ಸುಫಲ ದಯೆಯಿಲ್ಲದಿಹ ಧರ್ಮದಾವುದಯ್ಯ ? ಎಲ್ಲರಲ್ಲಾ ತುಮನು ನಿಲ್ವ ನೋರ್ವನೆ ತಾನು ಅನ್ಯ ರಲ್ಲಿಹನಾತ್ಮ ತನ್ನೊಳಿಹನು, ಎಲ್ಲರಿಗೆ ತೋರ್ದದಯೆ ಆತ್ಮನನೆ ತಲುಪುವುದು ತನ್ನ ಆತ್ಮನು ತನಗೆ ದಯೆದೋರನು. ತನ್ನವರ ಮೇಲೆ ದಯೆದೋರಿಯನ್ಯರ ಮೇಲೆ ನಿತ್ಯ ಜನ ನಿರ್ದಯೆರದಾಗುತಿಹರು. ತನ್ನ ದನಗಳ ಪರರ ಹೊಲದಲ್ಲಿ ಮೇಯಿಸುತ 11 33 2 11 || ೫೪ || ದನಕೆ ದಯೆ ಹೋಲಕದಯರುತಿಹರು. || ೫೫ || 1 ನಿರ್ದಯತನ. ಸದ್ಗುಣ- ಸಂಪಾದನ ಚೆನ್ನ ಹಕ್ಕಿಯ ಕೊಂದು ತನ್ನ ನಾಯಿಗೆ ನೀಡಿ ನಾಯಿಯನ್ನೊಲವಿನಿಂ ಪೊರೆಯುತಿಹರು. ತನ್ನ ನಾಯಿಗೆ ದಯೆಯ, ಹಕ್ಕಿಗೆಯೇ ನಿರ್ದಯೆಯ ತೋರಿ ಪಾಪದ ಪಥದಿ ಸಾರುತಿಹರು. ಎಲ್ಲರೊಂದೆಡೆ ನೆರೆದು ಉಣಲು ಕುಳಿತಿರುವಲ್ಲಿ ಭೇದ ಭಾವವ ತಳೆದು ನೀಡುತಿಹರು. ಸಲ್ಲದೀ ನಡತೆಯಿಂ, ಹುಲ್ಲು ಮಾನವರೆಲ್ಲ ತಮ್ಮವರಿಗಪಾಯವನೆ ಮಾಡುತಿಹರು. ಇಂದು ಬರಬಂದುದರಿಂದ-ಮಿತ ಬಡಜನರು ಅನ್ನವಿಲ್ಲದೆ ಬಳಲಿ ಸಾಯ್ತರಲ್ಲ! ಇಂಥನಾಹುತಗಳವು ಜನರ ನಿರ್ದಯೆಯ ಫಲ ಇದರೊಳ್ಳಿನಿತು ಸಂದೇಹವಿಲ್ಲ. ೩೭. ದೇವರು ಕೊಟ್ಟಿದ್ದರಲ್ಲಿ ಸಮಾಧಾನ 11 352 11 ೧ ೫೭ ೧ || 88 pc || ಹೊಟ್ಟೆ ಯನು ಕೊಟ್ಟವನು ರೊಟ್ಟಿಯನ್ನು ಕೊಡುತಿಹನು ದೇವನಿದಕೆಂದಿಗೂ ತಪ್ಪನಯ್ಯ! ಕೊಟ್ಟು ದನ ಕೊಂಡುಂಡು ಬಿಟ್ಟು ದ ಬಳಿಸಿಕೊಂಡು ಪರರದರೆ ಬಯಕೆಯೆನು ತಪ್ಪಿಸಯ್ಯ. ಅಲ್ಲಗಳೆದಿದ್ದುದನು, ಇಲ್ಲದನಪೇಕ್ಷಿಸಲು ಇರುವದಳಿದಿರದುದೂ ದೊರೆಯದಯ್ಯ! ತೈಲ ತುಪ್ಪಗಳೆರಡು, ಬೈಲಾಗಿ ಕೈಯಲ್ಲಿ ಧೂಪದಾರತಿಯೊಂದೆ ಬರುವದಯ್ಯ. 1 ನಡೆಯುತಿಹರು. 1185711 11 2011 ೩೨ ಬೋಧ- ಸುಧೆ ೩೮ ದೇವರು ಕೊಟ್ಟ ಉದ್ಯೋಗ ಮೇಲುವೊಕ್ಕಲುತನವು, ಮಧ್ಯಮ ವ್ಯಾಪಾರ ಕೀಳು ಚಾಕರಿಯೆ೦ದು ಬಗೆಯುತಿಹರು, ಕೇಳು! ಇವುಗಳನೆಮಗೆ, ದೇವ ದಯಪಾಲಿಸಿಹ ಒಲವಿನಿಂದವುಗಳನ್ನು ಮಾಡುತಲಿರು. ಅನ್ಯರುದ್ಯನು ಬಯಸಿ, ತನ್ನ ದನು ಧಿಕ್ಕರಿಸಿ ಅದನು ಬೇಗಾರಿಯಿಂ' ಸಾಗಿಸಿರಲು, ತನ್ನಾತ್ಮ ಮುನಿಯುವನು ಚೆನ್ನಾಗಿ ಹಣಿಯುವನು. ಯತ್ನಿಸವನನು ನಿತ್ಯ ಸಂತೈಸಲು. ೩೯, ಉದ್ಯೋಗ ಮಾಡುವ ರೀತಿ, ರಟ್ಟೆ ಯನ್ನೆ ಯೆ ಮುರಿದು, ತೊಟ್ಟೆಯನ್ನು ಣ್ಣು ತಿರು, ಕುಳಿತು ಸಾಲವ ಸೆಳೆದು ಅಳಿಯಬೇಡ ! ಬಿಟ್ಟು ಅಲಸಿಕೆಯನ್ನು ಕೊಟ್ಟು ಮನವನು ನೀನು ದುಡಿದು ಪಡೆಯದುದನ್ನು ಬಳಸಬೇಡ ನಂಬಿ ತನ್ನದೆಯೆಂದು ಭಿನ್ನ ಭಾವವನುಳಿದು ಬಂದ ಚಾಕರಿಯನ್ನು ಮಾಡು ನೀನು ಸಂಬಳವನಿತ್ತನಗೆ ತುಂಬ ಸಂತಸ ನೀಡಿ 112011 112211 ಉಂಬುವನೆ ಸೊಗವನ್ನು ಹೊಂದುತಿಹನು. || ೬೪ || ಕೀಳು ಕೆಲಸಗಳಲ್ಲಿ ಮೇಲು ಸೊಗ ಸಿಗುವಂತೆ ಮೇಲು ಕೆಲಸದಲಿಯದು ದೊರೆಯದಯ್ಯ! ಕೀಳು ಮೇಲೆನ್ನದಲೆ ನಿಯತ ಕರ್ಮವನೆಸಗಿ ಜನರು ತೆಗಳದ ತೆರದಿಯಿರುವದಯ್ಯ! 1, ಬಿಟ್ಟಿ ಯಿಂದ. 112811 ಸದ್ಗುಣ. ಸಂಪಾದನ ದುಡಿಮಡಿಸಿ ದೇಹವನ್ನು ದಣಿಯಿಸುತ್ತಿರು ಅದನು ತಣಿವನದಕೆಂದೆಂದಿಗುಣಿಸ ಬೇಡಾ. ದುಡಿಯುತಿರು ಆಳಾಗಿ, ಉಣುತಲಿರು ಅರಸಾಗಿ ಬೆಳೆವ ಬಗೆಯಿದುವೆಯೆಂದೆಣಿಸು ನೋಡಾ, || ೬೬ ನಿಷ್ಠೆಯಿಲ್ಲದ ಕೆಲಸ, ನಷ್ಟವಪ್ಪುದು ಸ್ಪಷ್ಟ ನಿಷ್ಠೆಯೇ ಎಲ್ಲೆಲ್ಲಿ ಇಷ್ಟವಿಹುದು. ನಿಷ್ಠೆ ನಿಷ್ಠೆಗಳಲ್ಲಿ, ಆತ್ಮನಿಷ್ಠೆಯ ಶ್ರೇಷ್ಠ ಆತ್ಮಗೆಯೆ ತನುಮನವನರ್ಪಿಸುವದು. ೪೦. ತೂಕದಿಂದ ನಡೆಯೋಣ. ತಾನು ಗಳಿಸುವದೆನಿತು, ಮೇಣು ಬಳಿಸುವದೆನಿತು ? ದಕ್ಷನಾಗಿಯೇ ನಿತ್ಯ ಲಕ್ಷಿಸಯ್ಯ ತಾನು ಒಂದಡಿಯಿಡಲು, ದಾನವನು ಕೊಡುತಿರಲು ವರವಿವೇಕವ ನಿತ್ಯ ರಕ್ಷಿಸಯ್ಯ. ೪೧. ಪ್ರಪಂಚದಲ್ಲಿ ಪರಮಾರ್ಥ. ಸಿರಿಯ ಸಂಸಾರದಲಿ ಮರೆಯದಾತುಮನ ನೆನೆ ಬರಿಯ ಸಂಸಾರವನು ಜರೆವುದಯ್ಯ, ಹಿರಿಯ ಸತ್ವವ ಪಿಡಿದು, ಪರಮ ಆರ್ಥವ ಪಡೆದು ಸಂಸಾರ-ಸಂಗವನು ಹರಿವುದಯ್ಯ. ಪರಮಾರ್ಥ-ಸಾಧನವೇ ಪರಮ ಮಾನವ ಧರ್ಮ ಅದನ್ನು ಗಮನಿಸಿಯೆಲ್ಲ ಮಾಡಬೇಕು, ಪರಮಾರ್ಥಕನುಕೂಲ-ನಿರುವುದನು-ಇರುವನಿತು ಮಾಡುತಾತ್ಮನ ನೆನೆದು ಕೂರಬೇಕು. 112211 | ೬೮ || 112511 112011 28 ಬೋಧ-ಸುಧೆ ೪೨ ಪರಮಾರ್ಥದಲ್ಲಿ ಮುಳುಗಿರಬೇಕು. ಇಂತು ಸಂಸಾರವನು ಸಂತಸದಿ ಮಾಡುತಲಿ ಮುಂದೆ ಮುಕ್ಕಳಿಗದನು ಒಪ್ಪಿಸಯ್ಯ. ಚಿಂತಿಸದೆಯದನೆಂದೂ ಆತ್ಮನನೆ ಚಿಂತಿಸುತ ಆತನಲಿ ಬೆರೆತು ಭವ ತಪ್ಪಿಸಯ್ಯ, ೪೩. ಹೊರಕಾಳಗದಿಂದ ದುಃಖಪ್ರಾಪ್ತಿಯ ಜನರು ರಾಜರಕೂಡ ಆಜಿಯಲಿ ಕಾದುತಿರೆ ಗೆಲಲು ರಾಜ್ಯವನವರು ಆಳುತಿಹರು. ಎನಿತು ಸುಖವನಿತು ದುಃಖವನುು ತಲಿಯಿರಲು ದುಃಖವಿಲ್ಲದ ಸುಖವ ಕಾಣದಿಹರು. || 20 || || 2.9 11 ಮುಂದೆ ಸಂಪದವಿರಲು, ಸಂತತಿಯು ಅಳಿಯುವದು. ಸಂತತಿಯು ಇರೆ ಸಂಪದಳಿಯುತಿಹುದು. ಒ೦ದಿರಲು ಒಂದಿಲ್ಲದಂತಾಗಿಯವರಲ್ಲಿ ಸುಖದುಃಖ ಸಮನಾಗಿಯುಳಿಯುತಿಹುದು. || ೭೩ | ರಣದಿ ಸೋಲಲು ಮರಣ ಬರೆ ನರಕ ಸೇರುವರು ಗೆಲಲು ಕೆಲದಿನ ರಾಜ್ಯವಾಳುತಿಹರು. ದಣಿದು ಮುಂದವರು ಮರಳಲ್ಲಿಗೆಯೆ ಸಾರುವರು. 1ಇರ್ತರದಿ ನರಕದಲೇ ಬೀಳುತಿಹರು. || 20 || 1 ಎರಡೂ ಬಗೆಯಾಗಿ, 24 ಬೋಧ ಸುಧೆ ಒಳಕಾಳಗದಿ ಗೆದ್ದು, ಒಳಿತು ರಾಜ್ಯವ ಗಳಿಗೆ ಅಲ್ಲಿ ಬಹ ಇಹಸುಖಕೆಯಳತೆಯಿಲ್ಲ. ಗೆಲಲು ಇಲ್ಲಿಯ ಸುಖವು, ಸೋಲಲಲ್ಲಿಯ ಸುಖವು ಈ ರಣದ ಮರಣದಲೆ ಮುಕುತಿಯಲ್ಲ ! ಗೆದ್ದರಿದರಲಿ ಇಹದ ರಾಜ್ಯದೊಡನೆಯೆ ಮುಕುತಿ ಬಿದ್ದರೆ ಬರಿ ಮುಕುತಿ ದೊರೆಯುತಿಹುದು. ಯುದ್ಧವನ್ನೀತೆರದಿ ಬುದ್ಧಿಯಿಂದಲಿ ಮಾಡಿ ಭುಕ್ತಿ-ಮುಕ್ತಿಯ ಸುಖವ ದೊರಕಿಸುವಮ ಇಂತು ಸತ್ತ ಪ್ರೇಮಗಳನ್ನು ಗಳಿಸಿರಯ್ಯ ನಿತ್ಯ ಶಮೆದಮೆಗಳನು ಬೆಳೆಸಿರಯ | ಸದಸದ್ವಿವೇಕವನು ಬಲಿಸಿರಯ್ಯ ಆತ್ಮ ದೇವನ ಸತತ ಒಲಿಸಿರದ || 2 11 || ೮೧ || ( ಬಿಂದು ೫ ) ಪರ ಮಾರ್ಥ- ಮಾರ್ಗವು ೪೬ ಸಂಸಾರದಲ್ಲಿ ಸುಖವಿಲ್ಲ. ಸಿರಿಯ ಸಂಸಾರವದು, ಸಲಿಲ ಮೇಲಿನ ಗುಳ್ಳೆ ಎಂದದಂತಾಗುವದು ತಿಳಿಯದಿಹುದು. ಹಿರಿಯ ಆತ್ಮನನುಳಿದು ಸಿರಿಸುಖವು ಸಿಗದಲ್ಲಿ ಮೃಗಜಲದಿ ನೆಲ್ಲು ತಾ ಬೆಳೆಯದಿಹುದು. ಸೊಗದ ಸಂಸಾರವದು, ಅಗಸೆ ಹಗೆಯಂತಿಹುದು. ಅದರ ನೆಲೆಯೊಂದಿಗೂ ಸಿಲುಕದಲ್ಲ. ಸೊಗವಿಲ್ಲಿ ದೊರೆಯದಲೆ, ದುಗುಡವೇ ಬರುತಿಹುದು. 1ಅಳಲ ಕಡಲಿನ ದಡವು ನಿಲುಕದಲ್ಲ. ೪೭, ಮನಸ್ಸಿಗೆ ಬೋಧ ಎಲೆ ಮನವೆ ! ಹಿಂದೆ ನೀ, ನಿಂದ್ಯ ಯೋನಿಗಳಲ್ಲಿ ಹಾಳು ಬಾಳನು ಬಾಳಿ ದಣಿದಿ ದಣಿದಿ ! ಚೆಲುವ ಆತುಮನನ್ನು ಒಲವಿನಿಂದರಿಯದಲೆ ಮನಬಂದ ತೆರದಿ ನೀ ಕುಣಿದಿ ಕುಣಿದಿ. ಅಶನ-ವ್ಯಸನಗಳಿಲ್ಲಿ, ನಿದ್ರೆಯಲಸಿಕೆಯಲ್ಲಿ ಮಡದಿಯೆಡೆಯಲಿ ಕಾಲ ಕಳದಿ ಕಳೆದಿ ಹೇಸಿ ನಡೆಯಿಂ ಧನದ ರಾಶಿಗಳ ಮೇಳವಿಸಿ ಜನನ ಮರಣಗಳನ್ನು ತಳೆದಿ ತಳೆದಿ 1 ದುಃಖ. 110 11 11911 || 2 11 || | ೩೮ ಇನ್ನಾದರಾರಯು ' ಬೋಧ-ಸುಧೆ 1 ಗುಣಗಳೊಡನೆಯ ಕಾದು ಹಿರಿಗುರುಗಳಿಗೆ ಹೋಗು ಶರಣು ಶರಣು, ಚನ್ನ ನಡೆ ಉಳಿಸಿಕೊಳು, ಆತ್ಮನನು ಒಲಿಸಿಕೊಳು ಭವದ ತಿರುಗಣಿಗೆನ್ನು ಶರಣು ಶರಣು! * ೪೮. ಸದ್ಗುರುಗಳ ಪ್ರಾಪ್ತಿ. 2 ಗುಪ್ತರೂಪದೊಳೇಕನಾದ ಸದ್ಗುರು ದೊರೆತು ನಾಮ ಲಭಿಸುವದೇನು ಸುಲಭವಲ್ಲ ಸುಪ್ತ ಜನಗಳಿಗಿದರ ಅರಿವು-ಪರಿವೆಗಳಿಲ್ಲ. ಸೈರ ವಿಹರಿಸಿ ಭವದಿ ಬೀಳ್ಳರಲ್ಲ. ಎಲ್ಲ ಜನ ನಡೆವ ತೆರೆ, ತಾನಿಲ್ಲಿ ನಡೆಯದಲೆ, ಸದ್ದು ರವಿನಾಜ್ಞೆಯಲಿ ನಿಲ್ಲುತಿಹುದು. ಚಲ್ವ ಧ್ಯಾನವ ಮಾಡಿ, ದಿವ್ಯ ಜ್ಯೋತಿಯ ನೋಡಿ ಜನ್ಮ ಸಾರ್ಥಕಮಾಡಿಕೊಳ್ಳುತಿಹುದು. ೪೯ ಕೈಯಿಂದ ಕೆಲಸ ಮನಸ್ಸಿನಿಂದ ಧ್ಯಾನ. ಗುರುವಿನೊಲುಮೆಯ ಗಳಿಸಿ, ಕರದಿ ಕೆಲಸವ ನಡಿಸಿ ಮನದಿ ನಾಮವ ನಿತ್ಯ ನೆನೆಯಬೇಕು. 11 88 11 11211 || 2 11
- ಕರಸೇಽಕಾಮ ಕರೋ, ಹರಿ ಧ್ಯಾನ ಧರೋ,
ಸರ್ವ ಸಮಯಮೆ ದಮಕಿ ಖಬರ ರಾಖ್,' || ೮ || 1 ವಿವೇಕ ಮಾಡಿ, ಪರಮಾರ್ಥ-ಮಾರ್ಗವು ಹಾಳು ಸಂಸಾರದಲಿ, ಕೂಲಿಯವನೊಲು ಬಾಳು ಕಲಿಯನು ಕಂಡವನು ದುಡಿಯುತಿಹನು, ಕೇಳು ! ತನ್ನ ನರಿಗೆಯೆ, ಅನ್ನ ರಿವೆಗಳು ದೊರೆಯೆ ಕೈಯಲಿಹ ಕೆಲಸ ಮುಗಿಸಯ್ಯ ನೀನು, ಸರುವ ಕಾಲದಲಾತ್ಮ-ಧ್ಯಾನದಲಿಯಿರುತಲಿರು. ದೇಹವೊಂದನೆ ದುಡಿಸಿ ಸವೆಯಿಸಯ್ಯ. ನರವಿವೇಕದಿ ತನ್ನ ಭಾವವನು ಜೀವವನು ಆತ್ಮನಲ್ಲಿಯೆಯಿರಿಸಿ ಬೆರೆಯಿಸಯ್ಯ. 28 || || 1100 || ೫೦ ಸಂಸಾರದಲ್ಲಿ ಉದಾಸ ಪರಮಾರ್ಥದಲ್ಲಿ ಉಲ್ಲಾಸ. ವೃತ್ತಿಯಲಿ, ಸಂಸಾರದಲ್ಲಿ, ಧನಮನೆಗಳಲ್ಲಿ ತಾನುದಾಸೀನನಾಗಿರುತಲಿಹುದು. ಚಿತ್ತದಲಿ ವೃತ್ತಿಯಿದು, ಪರರ ಸೊತ್ತೆಂದರಿದು ಕೊರತೆಯದರಲ್ಲಿ ಬೀಳದೊಲು ಬಾಳ್ವುದು. || ೧೧ || ವರನಿವೃತ್ತಿಯಲಿನ್ನು, ಪರಮಾರ್ಥದಲಿ ನೀನು ನಿತ್ಯ ವುಲ್ಲಾಸದಿಂದಿರಲು ಬೇಕು. ಪರಮಾರ್ಥ ಪಡೆಯುವದೇ ಹಿರಿಕೆಲಸವೆಂದೆಣಿಸಿ, ಕೈ ಕೆಲಸದಲಿ ನಾಮ ನೆನೆಯಬೇಕು, ೫೧. ಮರವನ್ನು ಬಿಟ್ಟು ಅರವಿನಲ್ಲಿ ಇರೋಣ. ಅರಿವು ಆತ್ಮನ ಸ್ಮರಣಿ, ಮರವವನ ವಿಸ್ಮರಣಿ ಅರಿವ ಸಾಧ್ಯವ ಸಾಧ್ಯಗೊಳಿಸುತಿಹುದು. ಮರವು ಒಳಿತನು ಕೆಡಿಸಿ, ಬಯಕೆ ಬಗೆಗಳನಳಿಸಿ ಹೇಳ ಕೇಳು ದನಲ್ಲಗಳೆಯುತಿಹುದು. || 09 || 110211 80 ಬೋಧ-ಸುಧೆ ಆತ್ಮ-ಸ್ಮರಣಿಯ ಸತತ, ಮಾಡುತಿರೆ ನೋಡುತಿರೆ ಸ್ವಸ್ಥತೆಯದಲ್ಲೆಡೆಗೆ ದೊರೆವುದಲ್ಲ ! ಆತ್ಮರೂಪವೆ ಸ್ವತ್ವ, ಅಲ್ಲಿ ಸ್ಥಿರತನ ಸ್ಥ-ತ್ವ ಸ್ವಾತ್ಮನಲ್ಲಿ ಸ್ಥಿರಮತಿಯು ಸ್ವಸ್ಥನಲ್ಲ ! ಮರವನೆಲ್ಲವ ಕಡಿದು, ಅರಿವನ್ನ ತಾ ಹಿಡಿದು ನಿರ್ಗುಣದಿ ನಿಲ್ವಂಗೆ ಶಾಂತಿ ಬಹುದು, ಅರಗಳಿಗೆಯೆನೂ ಕೂಡ ವ್ಯರ್ಥ ಕಳೆಯಲು ಬೇಡ ನಿತ್ಯ ಧ್ಯಾನದಿ ನಿರತನಿರುತಲಿಹುದು ಸತ್ಯವಾದರ್ಥವೆಯೆ, ನಿತ್ಯ ನಿಜರೂಪವದು ಅದರ ವಿರಹಿತವೆಲ್ಲ ವ್ಯರ್ಥವಲ್ಲ! ಸತ್ಯವನು ಸ್ಮರಿಸದ, ವರಿಸಿಯಾದರಿಸದಲೆ, ನೋಡದಲೆ ಮಾಳ್ವುದಕೆ ಫಲವೆಯಿಲ್ಲ. ೫೨. ಸತ್ಸಂಗದ ವ್ಯಾಖ್ಯೆಯು ಸತ್ಸಂಗವೆಂದರದು ಸಜ್ಜನರ ಸಂಗ, ತನಗಿಂತ ವರಗುಣದವರ ಸಂಗವು. ಸದ್ಗುರುಗಳಿ, ನಾಮದ ನೆನವು ಸತ್ಸಂಗ, ಉಸಿರಲದನುಸುರುವದು ಸತ್ಸಂಗವು. ನಿಚ್ಚ ಸದ್ವಸ್ತುವಿನ ಅನುಭಾವ ಸತ್ಸಂಗ ; ಇದರ ಅನುಸಂಧಾನವದನೆಯಿಹುದು. ಅಚ್ಯುತನ ಸಂಗದಿಂದಚ್ಯುತನು ತಾನಾಗಿ ಸಚ್ಚರಿತನಾಗಿ ಪಾರಾಗುತಿಹುದು. || 08 || 11 02 11 || 02 || | ೧೮ || ಪರಮಾರ್ಥ, ಮಾರ್ಗವು 882. ಹಗಲು ರಾತ್ರಿ ಕೂಡಿಯೇ ಆತ್ಮಧ್ಯಾನ ಹಿರಿಯ ಸದ್ದು ರುರಾಯನೊಲಿದು ನೀಡಿದ ನಾಮ ಕುಂತನಿಂತಾಗೆಲ್ಲ ನೆನೆಯುತಿಹುದು. ಸಿರಿಯಾತುಮನ ಬೆಳಕು, ಬೆಳೆದು ಹೊಳೆದೊಡೆಯದನು ಚೆನ್ನಾಗಿ ಕಣ್ಣಿನಿಂ ಕಾಣುತಿಹುದು, ಹಾಳ್ವಿಕಾರಗಳಲ್ಲಿ ಕೀಳನವು ಸಿಲುಕಿದರೆ ಮರಮರಳಿ ನಾಮವನೆ ನೆನೆಯಬೇಕು. ಬಾಳ್ವೆಯಲಿ ನಾಮವೇ ನೇಮದಿಂ ಕಾಯುವುದು ನೆನವಿನಲಿಯದಕಾಗಿ ಮುಳುಗಬೇಕು. ನರಜನ್ಮದಲಿ ಆತ್ಮಧ್ಯಾನವೇ ಪರಧರ್ಮ ಅದನುಳಿದು ಆಯುವನ್ನು ಕಳೆಯದಿಹುದು, ವರಧ್ಯಾನದಲಿ ತಾನು, ಹಗಲುಯಿರುಳಗಳನ್ನು ಮೂರ್ ಗಂಟೆಯಾದರೂ ಕಳೆಯುತಿಹುದು || ತನ್ನ ಸಾಧನವನ್ನು ಮುನ್ನ ಬೇಸರಿಸದಲೆ ಸತತ ಮರೆಯಲಿ ನಿಂತು ನಡೆಸುತಿಹುದು, ಅನ್ಯರರಿಯದ ತೆರದಿ, ಚಿನ್ಮಯನ ಚಿಂತಿಸುತ ಗುಟ್ಟನಾರಿಗದೆಂದೂ ತಿಳಿಸದಿಹುದು. ೫೪, ದೇಹಸ್ವಭಾವ ಬಿಟ್ಟು ಸಾಧನೆ ಮಾಡಬೇಕು. ಬೆಲೆಗೆ ಬೀಸುವರೆಲ್ಲ ಬಲು ಬೇಗ ಬೆಳಗಿನಲಿ ಬಿಡಬರದ ಬಲುಮೆಯಿಂದೇಳುತಿಹರು, ತಿಳಿದಿಂತು ಮೈಮನವ, ಕೇಳದಲೆಯೇಳುತಲಿ ಅವುಗಳನ್ನು ಸಾಧನದಿ ಸವಿಸುತಲಿರು. 3. || 08 || || 50 || || 28 || 30 ಬೋಧ- ಸುಧೆ ದೇಹವೊಲ್ಲೆನ್ನು ವುದು, ಕಲ್ಲಿನೊಲುವೊರಗುವದು ಭವಕೆ ಬರುವದೆಯದರ ಭಾವವಿಹುದು. ದೇಹಭಾವನ ತೊರೆದು, ಅದರ ಮಾತನು ಮುರಿದು ಸಾಧನದಿ ಸಾರ್ಥಕತೆ ಪಡೆಯುತಿಹುದು. ೫೫. ಕಲ್ಪನೆಯ ತ್ಯಾಗ. ಕದು ಸಾಧನದಿ ನೀನು, ಬಿದು ಕಲ್ಪನೆಗಳನ್ನು ಬಂದರವನಲ್ಲಿಯೇ ಮುರಿಯುತಿಹುದು, ಕೂಡುವ ಕೊಳ್ಳುವ ಕಾಯ್ದ ಕೊಲ್ವನಾತುಮು ತಾನೆ ಅವನಿಗೆ ಕಲ್ಪನೆಯು ಕೈಗೂಡದು. ಸರ್ವ ದೇವರು ಬಗೆದ ತೆರದಿ ಜರುಗಲಿಯೆಂದು ಕಲ್ಪನೆಯ ಬೀಜವನೆಯಳಿಸುತಿಹುದು, ನಿರ್ವಿಕಲ್ಪನ ಸರ್ವಕಾಲದಲಿ ಕಲ್ಪಿಸಲು ಕಲ್ಪನೆಯು ತಾನೆಯೇ ಅಳಿಯುತಿಹುದು. ೫೬, ಆತ್ಮನು ಮನುಷ್ಯನನ್ನು ಪರೀಕ್ಷಿಸುತ್ತಾನೆ. ಹುಡುಗರನು ಪರಿಕಿಸಲು, ಒಡವೆಯೊಂದನು ಕೊಟ್ಟು ಒಡನೆ ಹಿರಿಯರು ಅದನು ಬೇಡುತಿಹರು. ಕೊಡಲದನು ಒಪ್ಪಿದರೆ, ಅವರು ಸಂತಸಪಟ್ಟು ತೆಗೆದುಕೊಳದಲೆ ಮರಳಿ ನೀಡುತಿಹರು. . 11 92 11 1192. || 1 ಭೋರೆಂದು ಅಳುತಿಹುದು. ಪರಮಾರ್ಥ ಮಾರ್ಗವು ಈ ತೆರದಿಯಾ ತುಮನು, ಪರಕಿಸಲುಯೆಲ್ಲರನು ತೆರೆತೆರದಯೆಡರುಗಳನೊಡ್ಡುತಿಹನು. ಆತುನಗೆ ಸೇರುವುದು, ಗುಣಗಳರ್ಪಣ ತಾನೆ ಅದನೊಪ್ಪಿಸಲು, ಅಂತ ನೋಡದಿಹನು. ಗುಣವನೆಂದೊಂದಾಗಿ ಅಳಿಸುತಳಿಸುತ ಸಾಗಿ ಸಾಧನಕೆಯೆಲ್ಲರನು ನಿಲಿಸುತಿಹನು, ಗುಣಗಳನ್ನು ತಾ ಕೊಂದು, ಸೇವೆ ಸಲ್ಲಿಸಲಂದು ನಲಿದಯೆಲ್ಲರ ಮೇಲೆಯೊಲಿಯುತಿಹನು. ೫೭, ಕಡಕ್ಕೆ ಕಡ, ಬಿತ್ತಿದ್ದ ಕೆ ಬೆಳೆ. ತಾನು ಸಲ್ಲಿಸಿದನ್ನೆ, ತನಗಾತ್ಮ ಸಲ್ಲಿಸುವ ಏನನ್ನೂ ಮರಳಿಸದೆ ಮಾಣನವನು. ತಾನಿತ್ತ ಕಡಕೆ ಕಡ, ತಾಬಿತ್ತಿದೊಲು ಬೆಳೆಯ ನಾಟದೊಲು ಆಟವನ್ನು ಕಾಣಿಸುವನು: ಆತ್ಮನೆಲ್ಲವ ತಾನು, ತೂಗಿ ಸಾಗಿಸುತಿಹನು. ವಿಷಮತೆಗೆಯಾತನಲ್ಲಿಯೆಡೆಯೆಯಿಲ್ಲ, ಆತ್ಮ ಪ್ರೀತಿಗೆ ಪ್ರೀತಿ, ಉಪಚಾರಕುಪಚಾರ ಬಿಟ್ಟ ನಿಷ್ಟುರಕದನೆ ಕೊಡುವನಲ್ಲ. ೫೮, ಆತ್ಮನ ಸೇವೆ, ಇದೇ ಮುಖ್ಯ ಧರ್ಮ. ತನ್ನಲಿಹ ಆತ್ಮನನು, ಸೇವಿಸಲು ನಿಲ್ಲುತಿರು, ಅವನ ಆಜ್ಞೆಯನುಳಿದು ನಡೆಯ ಬೇಡ, ತನ್ನ ಮನಸಿನ ಮಾತನೆಂದಿಗೂ ಕೇಳದಿರು, ಅದು ಹೇಳಿದನು ಕೇಳಿ ಕುಣಿಯಬೇಡ. || ೨೮ || || 20 || || 20 || || 89 || ಪರಮಾರ್ಥ- ಮಾರ್ಗವು ೫೯. ಎಲ್ಲ ಕೆಲಸಗಳಲ್ಲಿ ಆತ್ಮನನ್ನೆಯ ಮುಂದೆ ಮಾಡಬೇಕು. ನಿತ್ಯ ಧ್ಯಾನವನೇಕ ಚಿತ್ತದಿಂದಲಿ ಮಾಡಿ ಕಂಡ ಬೆಳಕೆಯೆ ಸತ್ಯ ಆತ್ಮನಿಹನು. ನಿತ್ಯ ಕೆಲಿಸದಲೆಲ್ಲ, ಆತ್ಮನನೆಯೆದುರಿರಿಸೆ, ಅದಕವನು ಗೆಲವನ್ನು ಕೊಡುತಲಿಹನು ಒಂದು ಕೆಲಸದಲವನು, ಅಡ್ಡ ಬಂದರೆಯದನು ಮಾಡದಿರು, ಮಾಡಿದರೆ ಗೆಲವು ಬರದು, ಮುಂದಿರುವ ಆತುಮನು, ಇನಿರೆಯಾಗುತಿರೆ ಅಡ್ಡಿಯೆಂದರಿತದನು ಬಿಡುತಲಿಹುದು, ಯಾವ ಕೆಲಸಗಳನ್ನು, ಭಾವದಿಂ ಮಾಡುತಿರೆ ಆತ್ಮರಾಯನ ಕುರುಹು ಕಾ೦ಬುದಲ್ಲ ! ದೇವ ಬಗೆದಂತೆಯದು, ಆಗುವದು ಕ೦ಡಿತವು ಇಲ್ಲಾವ ಬಗೆಯ ಸಂದೇಹವಿಲ್ಲ ೬೦. ಆತ್ಮನ ಅನುಭಾವ. ತನ್ನ ಸಂಸಾರವನು, ಆತ್ಮನಿಗೆಯೊಪ್ಪಿಸುತ ಅವನ ಧ್ಯಾನದಿನಿರತನಿರಲು ಬೇಕು. ತನ್ನ ದೆಲ್ಲವು ನಿತ್ಯ, ಆತ್ಮನನೆ ನೆಮ್ಮಿಹುದು. ಅವನುಳಿದದೇನಯ್ಯ ಜರುಗಬೇಕು ? || ೩೮ | 12511 || ೪೦ || 80 || ಅದಕೆಯವನನ್ನು ಸತತ ಸಾಧನದಿಯೊಲಿಸಿಕೊಳು ಅವನ ಬೆಳಕನೆ ಕಾಣುತಿರುವುದಯ್ಯ! ಅದನೆ ಕಾಣುತ, ಜಾಣತನದಿ ಬಾಳುತಲಿರಲು ದೇವ ಕಂಗಳನು ಕೊಟ್ಟಿರುವನಯ್ಯ, || 09 || " ಬೋಧ-ಸುಧೆ ಬಹಳ ಕಾರೆ, ಕೊಂಚ ಕಂಡರ ನಡೆಯುವದು ( ಕುರುಹು ಕಂಡರೆ ಭವಕೆ ಮರಳದಿರುವಿ
- ದೇಖೆ ಖಸ್ ಖಸ್ ಮುರಿದ, ನರೆ – ಬಸ್ ಬಸ್ 'ಎಂದು
ಮಹಮ್ಮದೀಯರ ವಚನ ಕೇಳಿಯಿರುವಿ. ಫ್ಯಾರೆ ಅಚ್ಛೇರ ಅಥವಾ ಪಾವಶೇರ ವಾ ಧಡಾ ಜಿತುಕೆ ಲಾಗೇಲ ತಿತುಕೆ ಜೋಡಾ' ಎಂದು ಸಿರಿ ತುಕಾರಾಮರೀ ಹಿರಿನುಡಿಯನುಸುರಿದರು || ೪೩ ೧ ಎಲ್ಲ ನುಡಿಗಳ ಹೊಲಬುಯಿಹುದು ಒಂದು || ೪೪ || ಕುರುಹು ಕಂಡರೆ ಮುಂದೆ ಇಹದ ವೈಭವವನ್ನು ಸಂತತಿಯ ಸಂಪದವ ವಿಪುಲ ಪಡೆದು ನಿರುತದಲ್ಲಿ ತೆರೆತೆರೆದ, ಭೋಗಗಳನುು ತಲಿ ಪರಮ ಸುಖದಲಿಯವರು ಬಾಳುತಿಹುದು, ಆತ್ಮ-ಬೆಳಕನು ಬೆಳಸಿ, ನಿತ್ಯದನು ಕಾಣುತಲಿ ಅಮಿತ ಸಂತಸದಿಂದ ಯುಕ್ತರಿಹರು ಆತ್ಮನನು ಹೊರತಂದು, ಆತ್ಮರೂಪವ ಕಂಡು ಆತ್ಮನಲ್ಲಿ ಬೆರೆತಿಲ್ಲಿ ಮುಕ್ತರಿದರು. ಇಂತು ಗುರುವಿನಿಂ ವರನಾಮ ಕಲಿಯಿರಯ್ಯ ಒಲವಿನಿಂ ನೆನೆದದನು ನಲಿಯಿರಯ್ಯ ! ಆತ್ಮ ಬೆಳಕನು ಕಂಡು ಕುಣಿಯಿರಯ್ಯ ಆತ್ಮ ದೇವನ ಬೆರೆತು ತಣಿಯಿರಯ್ಯ ! 11821 ೧ ೪೬ | ( ಬಿಂದು ೬) - ( ಬೋಧಸುಧೆ' ಯಿಮ ದಿವ್ಯ ಅಮೃತ-ನಿರ್ರರವಯ್ಯ ಅವರ ಜೀವನವನದು ಕರೆಯುತಿಹುದು. ಸುಧೆಯ ಸೆಲೆಯಿಂ ಹರಿದ ಅಮೃತರಸ-ಸಂಪದವು ಅಮಿತ ಸುಖವನು ಸತತ ಸುರಿಯುತಿಹುದು || 0 |1 ಇಂತು ಹಿರಿಗುರುವರರ ( ಬೋಧ-ಸುಧೆಯನು' ಸವಿದು ಜನನ ಮರಣದ ದುಗುಡ ಅಳಿಸಬೇಕು ಸಂತತಾತ್ಮನ ನೆನೆದು ಅವನ ಬೆಳಕಲಿ ನಲಿದು ಮ: ಕುತಿಯಾನಂದನನು ಗಳಿಸಬೇಕು. , ಬೋಧ-ಸುಧೆಯನು ಸತತ ಆದರದಿ ಸೇವಿಸಲು ತನ್ನ ಉದ್ದಾರವದು ಆಗದಿರದು, ಸಾಧಿಸಲು ಆತ್ಮನನು, ಬೋಧಿಸಲು - ಸುಧೆಯನ್ನು ' ಎಲ್ಲರುದ್ಧಾರವೂ ಜರಗುತಿಹುದು. ಇಂತು.
- ಕೇಳಿ ಬೋಧದ ಸುಧೆ' ಯ ಬೆಳೆಯಿರಯ್ಯ
ಬಾಳಿ ಬೆಳಕಿನ ಬಾಳು ಹೊಳೆಯಿರಯ್ಯ ! ಹೇಳಿ ಬಾಳುವ ಬಗೆಯ ತಿಳಿಸಿರಯ್ಯ ಆತ್ಮ ದೇವನ ಭಕುತಿ ಬೆಳಿಸಿರಯ್ಯ ! ' 11 9 11 11 2 || 9 | ( ಅನುಬಂಧ ೧) ಶ್ರೀಯವರ ಪದಗಳು C ಗುರುಚರಣ ಕಮಲದಲಿ ಶೃಂಗನಾಗೊ S S ನೀ || ಪ || ಸ್ಥಿರವಿಲ್ಲ ಸಂಸಾರ ನರಜನ್ಮದೊಳು ಬಂದು | ಪರತತ್ವ ತಿಳಿದು ಸಾ- ಧುರ ಸಂಗಿಯಾಗೋ ನೀ ಮೌನ ಹಿಡಿದು ಮುದ್ರೆ ಬಲಿದು ಜ್ಞಾನಜ್ಯೋತಿಯೊಳಗೆ ನಲಿದು ಸ್ವಾನುಭವಾಮೃತ ಸವಿದು ನಿಃಸಂಗನಾ ನೀ ಮುಪ್ಪಿನ ಮುನಿಯ ಪಿಡಿದ ವಚನ ಕಪ್ಪುಗೊರಳ ಕಾಡಸಿದ್ಧ | ನಿದ್ದೆಯೆಡೆಗೆ ಹೋಗಿ SS ಸಾಷ್ಟಾಂಗನಾಗೋ 112 11 ನೀ 11 a 11 ಶ್ರೀಯವರ ಪದಗಳು 85 ಓಂ ನಾನು ಕಾಯ್ದುದು ನಾನದ ಬಲವು ಪ್ರಹ್ಲಾದನ ಕಾಯ್ದೆ೦ಥ ಪಾವನ ನಾಮ ಅಜಾಮಿಳಗೆ ಬಲ ಅಚ್ಯುತ ನಾಮ | ಸುರರನ್ನು ಸಂತೋಷಬಡಿಸಿದ ನಾನ ದೌಪದಿಯಭಿಮಾನ ಕಾಯ್ದ೦ಥ ನಾನ ಪಕ್ಷಿಯ ಪುತ್ರನ ರಕ್ಷಿಸಿದ ನಾನ ಪಾರ್ಥನ ಪಂಥವ ಗೆಲಿಸಿದ ನಾನು | ಪರಾಶರಾದಿಗಳಿಗೆ ಒದಗಿದ ನಾನು ಪನ್ನಗಶಯನನ ಪರಿಪೂರ್ಣ ನಾಮ ಕರಿರಾಜನ ಕಾಯಂಥಾ ಕರುಣದ ನಾಮ ಕಂದನ ಕಕುಲಾತಿ ಕೇಳಿದ ನಾನು ಭವದ ಬಂಧನ ಬಿಡಿಸಿದ ನಾನ ಗುರುಲಿಂಗಜಂಗಮನ ಘನ ಪುಣ್ಯ ನಾಮ || ಪ || || 9 || || a || ೫೦ ಬೋಧ ಸುಧೆ 2 - ನೋಯಿಸಿ ನುಡಿದನ್ಯಾಕೆ | ಶ್ರೀಬಲಭೀಮಾ ನೋಯಿಸಿ ನುಡಿದನು 1 ದೋಷೆಮಾಡಿದೆನೇನೋ I | ಪ | | ಕೇಶಹರಿಸೋ ಎನ್ನ | ಭಾಸಿ ಸಾಲಿಪ ದೇವಾ || ಅ. ಪ. ದಾಸನ ದಾಸ ನಾನು ) ಕೇಶವ ಸ್ವಾಮಿ | ಕರುಣದಿ ಕಾಯೋ ಎನ್ನನು || ಏನುಯಿಲ್ಲದೆ ಯಾಕೆ ಎನ್ನ | ಶಬ್ದ ಶಸ್ತ್ರದಿಂದ ಹೊಡೆದ | ಸೋಸಿ ನ್ಯಾಯವ ಮಾಡೋ ವಾಸುದೇವ ನೀನು || ೧ || ಕಲ್ಲನು ಮರೆಗೊಂಡೆಯಾ | ಕರುಣಾಕರಾ ! ಬೀದನ ಎಲ್ಲಿಟ್ಟಿಯ್ಯಾ || ಅಲ್ಲಮ ಪ್ರಭು ನಿಮ್ಮ ಸನ್ನಿಧವಿರುವೇನು | ಕಲ್ಲುವೊಡೆದು ನರಸಿಂಹಾ ಕಡೆಗೆ ಬಾರೋ ಕರೆಯೊಳು ಧನ್ಯವಾದ | ನಿಂಬರಗಿ ಗ್ರಾಮ | ವಾಸುಳ್ಳ ಭೀಮ ನೀನು || ಗುರುಲಿಂಗಜಂಗಮ | ಚಿನ್ಮಯ ರೂಪನೆ ! ತನುಮನಧನ ನಿಮ್ಮ ಚರಣ ಕರ್ಪಿತೋ ದೇವಾ || 2 || ಶ್ರೀಯವರ ಪದಗಳು ಈ ಸು ದಿನ ಈ ನಾಲ್ಕು ವೇದ | ಬ್ಯಾರೆ ಬ್ಯಾರೆ ಭಾವಿಸುತ್ತಿದ್ದೆ || ಪ || ಸದ್ದು ರು-ವರರಿಂದೆ ತಿಳಿದು | ಸಕಲಶಾಸ್ತ್ರಗಳು ಒಂದೆಂಬುತಿದ್ದೆ || ಅ ಪ || ಗಿರಿಜೆ ಗಂಗಾ ರುದ್ರ ಹರಿಗಳ ವ್ರತಗಳ ಬ್ಯಾರೆ ಮಾಡುತಲಿದ್ದೆ | ಸಾರ್ವಭೌಮರಿ೦ದ ತಿಳಿದು ಸಕಲ ವ್ರತಗಳು ನಾನಾಗಿದ್ದೆ ಸಪ್ತ ಸ್ವರ್ಗ ಉರ್ವಿ ಪಾತಾಳ ಸುರಚರಗಣ ಬ್ಯಾರೆ ತೋರುತಲಿದ್ದೆ | ಸರ್ವಶಾಂತರಿಂದ ತಿಳಿದು ಗುರುಲಿಂಗಜಂಗಮ ನಾನಾಗಿದ್ದೆ ||0|| || 9 || 380 859 ಬೋಧ. ಸುಧೆ - ಮನಸಿನ ಮುರಗಿಯ ತಿದ್ದಿಸೋ ದೇವಾ || ಪ || ಪ್ರಾತಃಕಾಲಕ ಎದ್ದು ಪರದ್ರವ್ಯ ಅಪಹಾರ ಸಾಧುರ ನಿಂದೆಯನಾಡುವದು | ಸಾಧಿಸಿ ಯಮನವರು ಎಳೆದೊಯ್ಯುವಾಗ ಸತ್ತ ಸತ್ತೇನಂತ ಮರಗುತಲ್ಯಾದ ಯತಿವೇಷವ ತಾಳಿ ದೇಶಭ್ರಷ್ಟನಾಗಿ 1101 ಕಾಶಿಯ ಕ್ಷೇತ್ರಕ್ಕೆ ಹೊಂಟಿತು ಮನಸು | ಕಾಶಿಯ ದಾರಿಯೊಳು ವೇಶಿಯೆಗೆ ಮೆಚ್ಚಿ ಕೇಶವ ನಿಮ್ಮನು ಮರೆಯಿತು ಮನಸು || ೨ || ಬಲ್ಲವಗೆ ಆರ್ಜವ ಮಾಡುತಲ್ಯಾದ ಬಡವರಿಗೆ ನೋಯಿಸಿ ನುಡಿಯುತಲ್ಯಾದ ಗುರುಲಿಂಗಜಂಗಮ ಚರಣವ ನಂಬದೆ ಅಡವಿಯಲ್ಲಿ ಚರಿಸಾಡುತದ ಶ್ರೀಯವರ ಪದಗಳು ಚಿಂತ್ಯಾಕ ಮಾಡತಿ ಶಿವತಾನಿದ್ದಾನೇಳು ಪ್ರಾಣಿ || ಪ || ಉದಕದಲ್ಲಿ ಉತ್ಪತ್ತಿ ಮಾಡುವರಾರು ಹೊಟ್ಯಾನ ಶಿಶುವನು ಸಲಹುವಾರು | ಸಾಕಿ ನಿನ್ನ ಜೋಕಿ ಮಾಡಿದವನೆ ಇದ್ದಾ ನೇಳು ಪ್ರಾಣಿ ಹಿಂದೆ ನಿನ್ನ ಸಲಹಿದರಾರು . ಮುಂದೆ ನಿನ್ನ ಕೊಲ್ಲುವರಾರು | ಎ೦ದಿಗಿ೦ದಿಗೆ೦ದಿಗಾದರು ಶಿವನೆ ಇದ್ದಾ ನೇಳು ಪ್ರಾಣಿ ಅಂತರದಿ ಅಂಬರ ಇಟ್ಟವರಾರು ರವಿಶಶಿ ಮಾರ್ಗದಿ ನಡಿಸುವರಾರು | ಗುರುಲಿಂಗಜಂಗಮ ಸರ್ವಶ ಶಿವನೆ ಇದ್ದಾ ನೇಳು ಪ್ರಾಣಿ 11011 11 9 11 || a || 884 ಬೋಧ ಸುಧೆ 2― ಕಲ್ಲು ಮೆತ್ತಗೆ ಮಾಡಿಕೊಳ್ಳ ಬಲ್ಲವನ ಕೇಳಿ || ಪ | ಕಲ್ಲು ಮೆತ್ತಗೆ ಮಾಡಿಕೊಳ್ಳೋ | ಕಲ್ಲುಸಕ್ಕರೆಗಿಂತ ಸವಿಯೋ । ಸಾರೆ ಅಮೃತ ಸುರಿದು ನೀನು | ಜ್ಞಾನಜ್ಯೋತಿ ತುಂಬಿಕೊಳ್ಳೋ || ಅ ಪ. || ಕಲ್ಲಿನೊಳಗೆ ಪರುಷ ಕಾಣಣ್ಣಾ - ಪರಬ್ರಹ್ಮನರಿಯದೆ | ಕೈಯ ಒಳಗೆ ಬಂದೀತು ಹ್ಯಾ೦ಗಣ್ಣಾ || ಕಲ್ಲುಕುಟ್ಟಿಗ ಅಲ್ಲಮಪ್ರಭು । ಶಿಲೆಯ ಒಡೆದು ಸೆಲೆಯ ತೆಗೆದ 1 ನೀರು ನೀರು ಕೂಡಿದ ಬಳಿಕ | ಭೇದಭಾವಗಳ್ಳಾಕ ಬೇಕು || 0 || ಕಲ್ಲು ಕಲ್ಪವೃಕ್ಷ ಕಾಣಣ್ಣಾ | ಬೇಡಿದ ಫಲಗಳ 1 ಕೊಡುವ ಬೀದ ಉಂಟು ಕಾಣಣ್ಣಾ ಗುರುಲಿಂಗಜಂಗಮ ಚರಣ | ಹೊ೦ದಿಗೂ ಎಂದಿಗಗಲದೆ ! ಬೆಲ್ಲ ಸವಿಯ ಕಡಿದಂತೆ | ಕೂಡಿಕೊಳ್ಳೋ ನೀನು ಇಲ್ಲೆ || 9 || ಶ್ರೀಯವರ ಪದಗಳು S - ನಾ ಹ್ಯಾಂಗ ಬಡವ | ನಾ ಹ್ಯಾಂಗ ಪರದೇಶಿ | ನೀ ಎನ್ನ ಸರಿಯವಿರಲು ॥ ಪ | ನಿನಗೆ ಕ್ಷಯವಿಲ್ಲ ! ಎನಗೆ ಭಯವಿಲ್ಲ | ಭಪ್ಪರೆ ಎನ್ನೊಡೆಯಾ ! ನಿಜರೂಪ ನೀನು || ಅ. ಪ. || ಒಡಹುಟ್ಟಿದವ ನೀನು | ಒಡಲಿಗೆ ಹಾಕುವವ ನೀನು | ಹಡೆದ ತಾಯಿತಂದೆ ಬಳಗ ನೀನು || ಇಂತಪ್ಪ ದೊರೆ ನೀನು | ಎನಗೆ ಇರುತಿರಲಾಗಿ 1 ಬಯಸಿದ್ದು ದೊರಕುವದು ಆಶ್ಚರ್ಯವೇನು || 0 || ಮುಂದೆ ನೋಡಲು ನೀನು 1 ಹಿಂದೆ ನೋಡಲು ನೀನು || ಎಡಬಲ ಕಾಯುವಂಥ ಕರ್ತಾ ನೀನು || ಗುರುಲಿಂಗಜಂಗಮನ | ಗುರುತು ಕಂಡವರಿಗೆ | ಗುಣವಂತರಿವರೆಲ್ಲ ಮಾಡುವರೇನು 11 6 11 ಬೋಧ ಸುಧೆ - T ನೆಲ್ಲು ಕುಟ್ಟುಣು ಬಾರಮ್ಮ | ಇಬ್ಬರೂ ಕೂಡಿ || ಪ || ನೆಲ್ಲು ಕುಟ್ಟುಣು ಬಾರೆ | ನಿಲ್ಲದೆ ಬೆನ್ನು ಹತ್ತಿ | ಹನ್ನೆರಡು ಹದಿನಾರು : ನಲ್ಲೆ ಯರು ಕೂಡಿಕೊಂಡು ತನುವೆಂಬ ಒಳ್ಳೆ ಮಾಡಿ | ಪ್ರಣವವೆಂಬ | ಒನಕೀಲೆ ಹೆರಿಯ ಹಾಕಿ || ವಿವೇಕವೆಂಬ ಅಕ್ಕಿ ಹಸನಮಾಡಿ | ಹಳ್ಳ ತಗೀಯಮ್ಮ ಜ್ಞಾನದೃಷ್ಟಿಲೆ ನೋಡಿ ವಾಸನತ್ರಯಗಳೆಂಬ | ಒಲೆಗುಂಡು ಮಾಡಿ | ಪ್ರಾರಬ್ಧ ಗಡಿಗೆ ಹೇರಿ | ಕಾಮ ಕ್ರೋಧವೆಂಬ ಕಟಿಗೆ ಉರೀ ಮಾಡಿ | ಪ್ರಪಂಚ ಪರಮಾರ್ಥ ಒಳಹೊರಗೆ ನೋಡಿ ಕುದಿಯುವ ಸಮಯದಲ್ಲಿ 1 ಮದದ ಉಕ್ಕು ! ಮೀರಿ ಬರುತಲದವಾ || ಸತ್ವ ಧೀರ ಎಂಬ ಹುಟ್ಟಲೆ ಹೊಡೆದು | ನೆಟ್ಟಗೆ ಅಡಿಗೆಯ ಧಿಟ್ಟಾಗಿ ಮಾಡಮ್ಮಾ ಪರಮಾನ್ನ ಪಾಯಸವು | ಪ್ರಾರಬ್ಧ ದಿ ಪ್ರಾಪ್ತವಾದಿತು ಏಳಮ್ಮಾ || ಗುರುಲಿಂಗಜಂಗಮ ಬೀಗರು ಕೂಡಿಕೊಂಡು | || ಅ. ಪ. || |0|| || G || 11 & 11 ಸ್ವಾನಂದ ಎಡಿಮಾಡಿ ಸವಿಯ ನೋಡಮ್ಮಾ || ೪ || ಶ್ರೀಯವರ ಪದಗಳು - 00 - ಅಂದಿಲ್ಲಾ ಸ್ವಾಮಿ ಇಂದಿಲ್ಲ ॥ ಪ || ಎಂದಿಗಾದರು ನಿಮ್ಮನ್ನಗಲಿ ನಾ ಇಲ್ಲ || ಅ. ಪ. || ನಿರ್ಬೈಲನು ನೀನು । ನಿರ್ವಿಕಾರನು ನಾನು | ಸಗುಣರೂಪ ನೀನು | ಶರಣು ಮಾಡುವೆ ನಾನು ಪಂಚವದನ ನೀನು | ಪಾದ ನಂಬಿದೆ ನಾನು || ಜಗಭರಿತನು ನೀನು | ಜಗದ ಒಳಗೆ ನಾನು ಪ್ರಣವ-ರೂಪ ನೀನು | ಪಠಿಸಿ ನೋಡುವೆ ನಾನು || ಗುರುಲಿಂಗಜಂಗಮ ನೀನೆ | ನಾನು ನೀನೆ ಇಹನು 1011 || 9 || 312 ಬೋಧ- ಸುಧೆ ಮಂಗಳಂ! ಮಂಗಳಂ ಮಂಗಳಂ | ತುಂಗ ಹಿರಿಯೋಗಿಗೆ | ಮಂಗಳಾತ್ಮಗೆ ಪರಮ- 1 ಆತ್ಮ-ಸುಖ-ಭೋಗಿಗೆ ಮೇಲು ಕರುಣದಿ ಮಿಂದು | ಶೀಲ ಮಡಿಯನು ಧರಿಸಿ | ನಾಮ-ಸುಮಗಳನಿರಿಸಿ | ಪ್ರೇಮದಾರತಿ ಬೆಳಗಿ ವಿಮಲ ಹೃದಯದಲಿಂದು | ಅಮಲ ಭಾವವ ತುಂಬಿ | ಧ್ಯಾನ ಬತ್ತಿಯನುರಿದು | ಜ್ಞಾನ-ಜ್ಯೋತಿಯ ಬೆಳಗಿ ಹೊನ್ನ ಹಿರಿಕಮಲದಲಿ | ರನ್ನರಾಶಿಯ ತುಂಬಿ | ಚೆನ್ನ ತಾರಕವರರ | ಉನ್ನತದ ಕಳೆ ಬೆಳಗಿ 1 11011 || 9 || 11 & 11 ಭವ್ಯ ಅಂಬರದಂತೆ | ತುಂಬಿ ನಿಲ್ವನ ಕಂಡು | ದಿವ್ಯ ಮರ ಸಿಡಲಿನ S | ನವ್ಯ ವಾದ್ಯದಿ ಬೆಳಗಿ || 8 || ಇಂತು ಬೆಳಗಲು ಬಯಸಿ | ನಿಂತ - ಮನೋಹರ ' ನಿಂಗೆ ಸಂತಸವ ಸಲ್ಲಿಸಲ- 1 ನಂತ ಮೂರ್ತಿಗೆ ಬೆಳಗಿ || 88 || Printed at Shri Ganpati S. Press Sangli by S. N. Deshpande M.A., B. Sc., and published by K. D. Sangoram, B.A., LL, B. pleader, Athni.