ಶ್ರೋತ್ರಾದಿ ಜ್ಞಾನೇಂದ್ರಿಯಂಗಳು, ಇವಕ್ಕೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಶ್ರೋತ್ರಾದಿ ಜ್ಞಾನೇಂದ್ರಿಯಂಗಳು
ಇವಕ್ಕೆ ವಿವರ: ಶ್ರೋತ್ರವು ಸ್ವರ ಶಬ್ದ ನಾದಂಗಳುಂ ಬಲ್ಲುದು
ನೇತ್ರಂಗಳು ಸಪ್ತವರ್ಣಂಗಳಂ ಕಂಡು ಸುಖಿಸುವುವು[ಸಬಲ್ಲವು]
ಘ್ರಾಣವು ಗಂಧ ದುರ್ಗಂಧಂಗಳಂ ಬಲ್ಲುದು
ಜಿಹ್ವೆ ಮಧುರ ಆಮ್ಲ ತಿಕ್ತ ಕಟು ಕಷಾಯವಂ ಬಲ್ಲುದು
ತ್ವಕ್ಕು ಸ್ಪರ್ಶವ ಮೃದು ಕಠಿಣ ಶೀತೋಷ್ಣವಂ ಬಲ್ಲುದು
ಇಂತೀ ಜ್ಞಾನೇಂದ್ರಿಯಂಗಳ ಸಂಚಲನವರಿದು ನಿಜ ಉಳಿಯ ಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.