ವಿಷಯಕ್ಕೆ ಹೋಗು

ಸಂಕಲ್ಪ ವಿಕಲ್ಪವೆಂಬುದಿಲ್ಲ, ವಿಕಲ್ಪ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಸಂಕಲ್ಪ ವಿಕಲ್ಪವೆಂಬುದಿಲ್ಲ
ವಿಕಲ್ಪ ಸಂಕಲ್ಪವೆಂಬುದಿಲ್ಲ. ಭಾವ ಅಭಾವವೆಂಬುದಿಲ್ಲ
ಅಭಾವ ಭಾವವೆಂಬುದಿಲ್ಲ. ಪದಾರ್ಥ ಪ್ರಸಾದವೆಂಬುದಿಲ್ಲ
ಪ್ರಸಾದ ಪದಾರ್ಥವೆಂಬುದಿಲ್ಲ. ಅದೇನು ಕಾರಣ ? ನಿಃಪದಾರ್ಥ ನಿಃಪ್ರಸಾದ ಕೂಡಲಚೆನ್ನಸಂಗಯ್ಯಾ. ಗುರುಲಿಂಗವಾರೋಗಣೆಯ ಮಾಡಿದ ಕಾರಣ.