ಸಂಗದಿಂದಾಯಿತ್ತು ತನು, ಆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂಗದಿಂದಾಯಿತ್ತು ತನು
ಆ ತನುವಿನಿಂದಾಯಿತ್ತು ಮರವೆ
ಆ ಮರವೆಯಿಂದಾಯಿತ್ತು ನೋಡಾ `ನೀ' `ನಾ' ಎಂಬುದು. ನೀನೆಂಬ ಬಹಿರಂಗವಂತಿರಲಿ
ನಾನೆಂಬ ಅಂತರಂಗವಂತಿರಲಿ_ ಈ ಉಭಯ ಭಾವವಲ್ಲದೆ
ನಿನ್ನಿಂದ ನಿನ್ನನರಿದಹೆನೆಂಬುದು ವಿಪರೀತಭಾವ ! ಈ ಅರಿವು ಮರವೆಯಾಟದ ಭ್ರಾಂತು ಬಿಡದು. ಗುಹೇಶ್ವರಲಿಂಗವು ನಿನ್ನಲ್ಲಿ ನಿಂದ ಪರಿ ಎಂತು ಹೇಳಾ ಸಂಗನಬಸವಣ್ಣಾ ?