ಸಂಚಲಗುಣವಳಿದು ಪಂಚಮಹಾಪಾತಕಂಗಳು ಶ್ರೀ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂಚಲಗುಣವಳಿದು ಶ್ರೀ ವಿಭೂತಿಯ ಪಂಚಸ್ಥಾನದಲ್ಲಿ ಪಂಚಬ್ರಹ್ಮಮಂತ್ರದಿಂದೆ ಧರಿಸಲು
ಪಂಚಮಹಾಪಾತಕಂಗಳು ಪಲ್ಲಟವಪ್ಪುವು ನೋಡಾ. ಸರ್ವಾಂಗವನು ಧೂಳನವ ಮಾಡಲು ಸರ್ವವ್ಯಾಧಿಗಳು ಪರಿಹರವಪ್ಪುವು ನೋಡಾ. ಇದು ಕಾರಣ ಇಂತಪ್ಪ ಶ್ರೀ ವಿಭೂತಿಯ ಲಲಾಟಾದಿ ಮೂವತ್ತೆರಡು ಸ್ಥಾನಗಳಲ್ಲಿ ಧರಿಸಿ
ನಿತ್ಯ ಲಿಂಗಾರ್ಚನೆಯ ಮಾಡುವಾತ ಸತ್ಯಶಿವನಲ್ಲದೆ ಬೇರಲ್ಲವಯ್ಯ ಅಖಂಡೇಶ್ವರಾ.