ಸಂಸಾರವೆಂಬ ಶರಿಧಿ ಅಡ್ಡಗಟ್ಟಲು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂಸಾರವೆಂಬ ಶರಿಧಿ ಅಡ್ಡಗಟ್ಟಲು
ಅನುವನರಿದವಂಗೆ ಅಂಗವೆ ಹಡಗು
ಮನವೆ ಕೂಕಂಬಿಕಾರ. ಜ್ಞಾನ_ಸುಜ್ಞಾನವೆಂಬ ಗಾಳಿ ತೀಡಲು
ಸುಲಕ್ಷಣದಿಂದ ಸಂಚರಿಸುತ್ತಿರಲು ಬರ್ಪವು ಮೀನು
ಮೊಸಳೆ
ಅಷ್ಟಗಿರಿ
_ಜತನ. ಮೊತ್ತದ ಸಂಚಾರದ ಹಡಗು ತಾಗುತ್ತಿದೆ
ಎಚ್ಚತ್ತಿರು
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ ಮೈಮರೆಯದೆ. ಕತ್ತಲೆ ದೆಸೆ ಅತ್ತಲೆ ಪೋಗು; ಉತ್ತರನಕ್ಷತ್ರದ ಪ್ರಭೆಯಿದೆ ! ಸೆಟ್ಟಿ ಜತನ ! ಪಟ್ಟಣವಿದೆ
_ಗುಹೇಶ್ವರಾ.