Library-logo-blue-outline.png
View-refresh.svg
Transclusion_Status_Detection_Tool

ಸಂಸಾರವ ನಿರ್ವಾಣವ ಮಾಡಿ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಸಂಸಾರವ ನಿರ್ವಾಣವ ಮಾಡಿ
ಮನವ ವಜ್ರತುರಗವ ಮಾಡಿ
ಜೀವವ ರಾವುತನ ಮಾಡಿ
ಮೇಲಕ್ಕೆ ಉಪ್ಪರಿಸಲೀಯದೆ
ಮುಂದಕ್ಕೆ ಮುಗ್ಗರಿಸಲೀಯದೆ ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ
ಮೋಹರವಾಗಿದ್ದ ದಳದ ಮೇಲೆ
ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲರಿಯದೆ
ಧವಳಬಣ್ಣದ ಕೆಸರುಗಲ್ಲ ಮೆಟ್ಟಿ ತೊತ್ತಳದುಳಿವುತ್ತಲು ಇದಾರಯ್ಯಾ. ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನಸೆಟ್ಟಿ ಈ ಥಳಥಳನೆ ಹೊಳೆವ ಪ್ರಜ್ವಲಿತವ ಕಾಣದೆ ಹಳಹಳನೆ ಹಳಸುತ್ತೈದಾರೆ ಅಯ್ಯಾ. ಆಧಾರಸ್ಥಾನದ ಇಂಗಳವನಿಕ್ಕಿ ವಾಯು ಪವನದಿಂದ ನಿಲಿಸಲು
ಆ ಅಗ್ನಿಯ ಸೆಕೆ ಹೋಗಿ ಬ್ರಹ್ಮರಂಧ್ರವ ಮುಟ್ಟಲು
ಅಲ್ಲಿರ್ದ ಅಮೃತದ ಕೊಡನೊಡೆದು ಕೆಳಗಣ ಹೃದಯಸ್ಥಾನದ ಮೇಲೆ ಬೀಳಲ್ಕೆ
ಮರಸಿದ ಮಾಣಿಕ್ಯದ ಬೆಳಗು ಕಾಣಬಹುದು. ಇದನಾರಯ್ಯಾ ಬಲ್ಲರು :ಹಮ್ಮಳಿದ ಶರಣರ ಮೇಲೆ ? ಇಹಪರವ ಬಲ್ಲ ಶರಣ
ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ. ಒಡಲ ಬಿಟ್ಟ ಶರಣನಲ್ಲದೆ ಉಳಿದ ಪ್ರಾಣಘಾತಕ ಪಾತಕರಿವರೆತ್ತಲು
ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಬಸವಣ್ಣಂಗಲ್ಲದೆ ?