ಸಂಸಾರವ ಬಿಟ್ಟೆನೆಂದು, ನಿರಾಶಾಪದವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಂಸಾರವ ಬಿಟ್ಟೆನೆಂದು
ನಿರಾಶಾಪದವ ಮಾಡಿ
ತಲೆಯ ಬೋಳಿಸಿಕೊಂಡು
ಕುದಿದು ಕೋಟಲೆಗೊಂಡು
ಮನೆ ಮನೆ ತಪ್ಪದೆ ಭಿಕ್ಷವ ಬೇಡಿ
ಉಂಡು
ಎದ್ದು ಹೋಗಿ ತತ್ವವ ಬೋಧಿಸಿ
ಉದರವ ಹೊರೆವಂದು ಮುನ್ನವಿಲ್ಲ ಮರುಳಾ ? ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ
ಮುಕ್ತಿಯುಂಟೆ ಮರುಳಾ ? ಜಂಗಮದಂಗವು ನಿರ್ಗಮನಿ
ಭಕ್ತಪ್ರಿಯ ನಮ್ಮ ಗುಹೇಶ್ವರಲಿಂಗದಲ್ಲಿ ಜಂಗಮದ ನಡೆಯಿಲ್ಲ ಕಾಣಾ
ಎಲೆ ಮರುಳಾ.