ಸಕಲವೇದಶಾಸ್ತ್ರಾಗಮ ಜನಿಸಿದುವಯ್ಯ. ಪುರಾಣಂಗಳೆಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಕಲವೇದಶಾಸ್ತ್ರಾಗಮ
ಪುರಾಣಂಗಳೆಲ್ಲ
ಶಿವಮಂತ್ರದಲ್ಲಿ
ಜನಿಸಿದುವಯ್ಯ.
ಸಕಲತತ್ವಶಕ್ತಿಮೂರ್ತಿಗಳೆಲ್ಲ
ಶಿವಮಂತ್ರದಲ್ಲಿ
ಜನಿಸಿದುವಯ್ಯ.
ಸಕಲಭುವನ
ಬ್ರಹ್ಮಾಂಡ
ಸಚರಾಚರಂಗಳೆಲ್ಲ
ಶಿವಮಂತ್ರದಲ್ಲಿಯೇ
ಜನಿಸಿದುವಯ್ಯ.
ವೃಕ್ಷಬೀಜನ್ಯಾಯದಂತೆ
ಸಕಲವಿಸ್ತಾರವನೊಳಗೊಂಡಿರ್ಪ
ಪರಮ
ಶಿವಮಂತ್ರವ
ನೆನೆನೆನೆದು
ಎನ್ನ
ಮನದ
ಮುಂದಣ
ಮರವೆಯ
ಹರಿದು
ಭವಸಾಗರವ
ದಾಂಟಿದೆನಯ್ಯ
ಅಖಂಡೇಶ್ವರಾ.