ಸಕಲ-ನಿಷ್ಕಲ, ರೂಪು-ನಿರೂಪು ಮಾಯಾ-ನಿರ್ಮಾಯ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಕಲ-ನಿಷ್ಕಲ
ರೂಪು-ನಿರೂಪು ಮಾಯಾ-ನಿರ್ಮಾಯ
ಕಾರಣ-ಅಕಾರಣ
ದೇಹ-ನಿರ್ದೇಹದಲ್ಲಿ ಅವಧಾನಿಯಾಗಿ
ಸವಾಯ-ನಿರ್ವಾಯ. ಸಂಕಲ್ಪ-ವಿಕಲ್ಪ
ಸಂಯೋಗ-ವಿಯೋಗ
ಪುಣ್ಯ-ಪಾಪ
ಧರ್ಮ-ಅಧರ್ಮಂಗಳೆಂಬ ಕಾಲ-ವೇಳೆಯಿಂದ ನಿರತನಾಗಿ
ಇಂತೀ ದ್ವಯ ಸಂಪಾದನೆಗಳ ಸಂಪಾದಿಸದೆ ಕೂಡಲಚೆನ್ನಸಂಗಯ್ಯನ ಶರಣರ ಕಾರುಣ್ಯಮಂ ಪಡೆವುದು