ಸಕಲ ಗಣಂಗಳು ತಮ್ಮ ವಚನಾನುಭಾವವೆಂಬ ಪರಮಾಮೃತವನು ಎನ್ನ ಕರ್ಣವೆಂಬ ಕುರುಹ ಕಟ್ಟಿ ಎರಕವೆರೆಯಲು
ಅದು ಮನದಲ್ಲಿ ಮೂರ್ತಿಯಾಗಿ ಒಳಗೆ ಪ್ರಾಣಲಿಂಗವಾಯಿತ್ತು ; ಹೊರಗೆ ಇಷ್ಟಲಿಂಗವಾಯಿತ್ತು. ಎನ್ನೊಳಹೊರಗೆ ಭರಿತವಾದ ಅಖಂಡೇಶ್ವರನೆಂಬ ಪರಶಿವನು ನುಡಿಸಿದಂತೆ ನುಡಿದೆನಲ್ಲದೆ ಎನ್ನ ಮನಕ್ಕೆಬಂದಂತೆ ನುಡಿಯಲಿಲ್ಲ ಕೇಳಿರೆ.