ಸಕಲ ಗುರು
ಸಕಲ ನಿಃಕಲ ಜಂಗಮ
ನಿಃಕಲ ಲಿಂಗ ಇಂತೀ ತ್ರಿವಿಧಲಿಂಗಕ್ಕೆ ಮಾಡುವ ಭಕ್ತಿಯ ಕ್ರಮವೆಂತೆಂದೆಡೆ: ಲಿಂಗವು ಜಂಗಮವು ಗುರುವಿನಲ್ಲಿ ಉಂಟೆಂದು ತನು ಮನ ಧನವ ಸವೆದು ಮಾಡುವುದು ಗುರುಭಕ್ತಿ. ಗುರುವು ಜಂಗಮವು ಲಿಂಗದಲ್ಲಿ ಉಂಟೆಂದು ಮನ ಧನ ತನು ಮುಟ್ಟಿ ಮಾಡುವುದು ಲಿಂಗಭಕ್ತಿ. ಗುರುವು ಲಿಂಗವು ಜಂಗಮದಲ್ಲಿ ಉಂಟೆಂದು ಧನ ಮನ ತನುವ ಸವೆದು ಮಾಡುವುದು ಜಂಗಮಭಕ್ತಿ. ಈ ತ್ರಿವಿಧಲಿಂಗಕ್ಕೆ ತ್ರಿವಿಧ ಪ್ರಕಾರದಲ್ಲಿ ಮಾಡಿ ಕೂಡಿ ವಿರಾಜಿಸುವಾತನೆ ಶಿವಭಕ್ತನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.