ಸಗುಣನಲ್ಲ ನೋಡಾ ನಿರ್ಗುಣನಲ್ಲ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಗುಣನಲ್ಲ
ನಿರ್ಗುಣನಲ್ಲ
ನೋಡಾ
ಲಿಂಗೈಕ್ಯನು.
ಸಾಕಾರನಲ್ಲ
ನಿರಾಕಾರನಲ್ಲ
ನೋಡಾ
ಲಿಂಗೈಕ್ಯನು.
ಶೂನ್ಯನಲ್ಲ
ನಿಃಶೂನ್ಯನಲ್ಲ
ನೋಡಾ
ಲಿಂಗೈಕ್ಯನು.
ಜ್ಞಾನಿಯಲ್ಲ
ಅಜ್ಞಾನಿಯಲ್ಲ
ನೋಡಾ
ಲಿಂಗೈಕ್ಯನು.
ಕಾಮಿಯಲ್ಲ
ನಿಃಕಾಮಿಯಲ್ಲ
ನೋಡಾ
ಲಿಂಗೈಕ್ಯನು.
ದ್ವೈತಿಯಲ್ಲ
ಅದ್ವೈತಿಯಲ್ಲ
ನೋಡಾ
ಲಿಂಗೈಕ್ಯನು.
ಕರ್ತೃವಲ್ಲ
ಭೃತ್ಯನಲ್ಲ
ನೋಡಾ
ಲಿಂಗೈಕ್ಯನು.
ಇಂತು

ತೆರದಲ್ಲಿ
ತೋರುವ
ತೋರಿಕೆಗಳೆಲ್ಲವು
ತಾನೆಯಾಗಿ
ಇಹಪರದ
ಗತಿಗೆಡಿಸಿ
ಪರಿಪೂರ್ಣಬ್ರಹ್ಮದಲ್ಲಿ
ತನ್ನ
ಕುರುಹಡಗಿ
ನಿರ್ವಯಲಾಗಿರ್ಪ
ನಿಜಲಿಂಗೈಕ್ಯನ
ಏನೆಂದು
ಉಪಮಿಸಬಹುದಯ್ಯಾ
ಅಖಂಡೇಶ್ವರಾ
?