ವಿಷಯಕ್ಕೆ ಹೋಗು

ಸತಿಯರ ನರಮಾಂಸವೆಂಬ ಮಾಂಸದ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಸತಿಯರ ನರಮಾಂಸವೆಂಬ ಮಾಂಸದ ಪುತ್ಥಳಿಯ ನಿಚ್ಚನಿಚ್ಚ ಕಡಿದುಕೊಂಡು ತಿಂಬ ನಾಯಿಗಳಿಗೆ ಎಲ್ಲಿಯದೊ ವ್ರತಶೀಲಸಂಬಂಧ ? ಅವರ ಅಧರ ಸೇವನೆಯೆ ಮಧುಮಾಂಸ
ಅವರ ಉದರ ಸೇವನೆಯೆ ಸುರೆಮಾಂಸ ಕಾಮವೆ ಕಬ್ಬಲಿಗ
ಕ್ರೋಧವೆ ಹೊಲೆಯ
ಲೋಭವೆ ಕಳ್ಳ
ಮೋಹವೆ ಬಲೆಗಾರ
ಮದವೆ ಮಾದಿಗ
ಮತ್ಸರವೆ ಸುರಾಪಾನಿ_ ಇಂತೀ ಷಡ್ವಿಧ ಭವಿಯ
ತಮ್ಮೆದೆಯೊಳಗೆ ಇಂಬಿಟ್ಟುಕೊಂಡು `ಭವಿಪಾಕ ಪರಪಾಕ' ಎಂಬ ಪಂಚಮಹಾಪಾತಕರ
ಮೆಚ್ಚುವನೆ ಕೂಡಲಚೆನ್ನಸಂಗಮದೇವ ?