ಸತಿ ಎಂಬುದು ಮಾಟ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸತಿ ಎಂಬುದು ಮಾಟ
ಪತಿಯೆಂಬುದು ಮಾಟ
ತನುವೆಂಬುದು ಮಾಯೆ
ಮನವೆಂಬುದು ಮಾಯೆ
ಸುಖವೆಂಬುದು ಮಾಯೆ
ಚೆನ್ನಮಲ್ಲಿಕಾರ್ಜುನನೆನಗೆ ಕೈಹಿಡಿದ ಗಂಡನಲ್ಲದೆ ಮಿಕ್ಕಿನವರೆಲ್ಲರೂ ಮೂಗಿಲ್ಲದ ಬಣ್ಣದ ಬೊಂಬೆಗಳು ಕಾಣಯ್ಯಾ.