ಸತ್ಕ್ರಿಯಾಸಮ್ಯಗ್‍ಜ್ಞಾನಸಂಪನ್ನರಪ್ಪ ಶಿವಯೋಗಿಗಳೆಡೆಯಾಡಿದ ನೆಲವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸತ್ಕ್ರಿಯಾಸಮ್ಯಗ್‍ಜ್ಞಾನಸಂಪನ್ನರಪ್ಪ
ಶಿವಯೋಗಿಗಳೆಡೆಯಾಡಿದ
ನೆಲವೆ
ಸುಕ್ಷೇತ್ರವಯ್ಯಾ
ಅವರಡಿಯಿಟ್ಟ
ಜಲವೆ
ಶುಭತೀರ್ಥವಯ್ಯಾ.
ಸಕಲತೀರ್ಥಕ್ಷೇತ್ರವೆಲ್ಲ
ಶಿವಯೋಗಿಯ
ಶ್ರೀಪಾದದಲ್ಲಿ
ಅಡಗಿಪ್ಪವಯ್ಯಾ.
ಜ್ಞಾನಯೋಗಪರಾಣಾಂ
ತು
ಪಾದಪ್ರಕ್ಷಾಲಿತಂ
ಜಲಂ
ಭಾವಶುದ್ಧ್ಯರ್ಥಮಜ್ಞಾನಾಂ
ತತ್ತೀರ್ಥಂ
ಮುನಿಪುಂಗವ
ಎಂದುದಾಗಿ
ಶಿವಯೋಗಿಯ
ಪಾದೋದಕವ
ಸೇವಿಸಿ
ನಮ್ಮ
ಶರಣರೆಲ್ಲ
ಪರಮುಕ್ತರಾದರಯ್ಯಾ
ಕೂಡಲಚೆನ್ನಸಂಗಮದೇವಾ.