ಸತ್ತ ಹೆಣನ ಹೊತ್ತವರೆಲ್ಲಾ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸತ್ತ ಹೆಣನ ಹೊತ್ತವರೆಲ್ಲಾ ಅಚ್ಚುಗಗೊಂಡರಲ್ಲಾ. ಹೊತ್ತವರೆಲ್ಲಾ ಸತ್ತುದ ಕಂಡು ಮೂರ್ಛೆವೋದರಲ್ಲಾ. ಸುತ್ತಿಬಂದಿದ್ದವರೆಲ್ಲಾ ಹೋಗಿ ಅದ ಮುಟ್ಟಲಮ್ಮರು ನೋಡಾ ! ಮುಟ್ಟದ ಮುನ್ನ ಮೂವರ ಕೆಡಿಸಿತ್ತು. ಸತ್ತ ಪರಿಯ ನೋಡಾ ! ಅದು ಕಾಡಿನಲ್ಲಿ ಉರಿಯದು
ಕಿಚ್ಚಿನಲ್ಲಿ ಬೇಯದು. ಸತ್ತ ಪರಿಯ ನೋಡಾ ! ಕೂಡಲಚೆನ್ನಸಂಗನೆಂಬ ಚಿಂತೆ ಸತ್ತಿತಲ್ಲಾ.