ಸದಸ್ಯ:Aishukandur

ವಿಕಿಸೋರ್ಸ್ದಿಂದ

ನನ್ನ ಹೆಸರು ‍ಐಶ್ವ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‍ರ್ಯ.ಕೆ.ಎಸ್. ನನ್ನ ಜನ್ಮಸ್ಥಳ ಚಿನ್ನದ ಗಣಿ ಎನಿಸಿಕೊಂಡಿರುವ ಕೋಲಾರ ಜಿಲ್ಲೆಯ ಮುಳಬಾಗಿಲು. ನಾನು ೧೦ ಸೆಪ್ಟೆಂಬರ್ ೧೯೯೭ ರಂದು ಜನಿಸಿದೆ. ನನ್ನ ಪ್ರಾಥಮಿಕ ಶಿಕ್ಷಣವನ್ನು ಲೂರ್ದು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿದೆ. ನನ್ನ ಹಿರಿಯ ವಿದ್ಯಾಭ್ಯಾಸವನ್ನು ಸೈಂಟ್.ಆನ್ಸ್ ಹಿರಿಯ ಶಾಲೆಯ್ಲ್ಲಿ ಮುಗಿಸಿದೆ. ನಂತರ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ನಡೆಸಿದೆ. ಪ್ರಸ್ತುತ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು ಎರಡನೇ ಅರ್ಧವಾರ್ಷಿಕ ವ್ಯಾಸಾಂಗಾವಧಿಯನ್ನು ಬಿಕಾಂ ಬಿ ವಿಭಾಗದಲ್ಲಿ ನಡೆಸುತ್ತಿದ್ದೇನೆ. ನನ್ನ ಹವ್ಯಾಸಗಳೆಂದರೆ ಪುಕ್ಕಚಂಡಾಟ(ಬ್ಯಾಡ್ಮಿಂಟನ್), ಕ್ಯಾರಮ್, ತೋಟಗಾರಿಕೆ, ವ್ಯಾಯಾಮ, ಅಡುಗೆ ಮಾಡುವುದು, ಭರತನಾಟ್ಯ ಹಾಗೂ ಸಂಗೀತ. ಇವೆಲ್ಲಕ್ಕಿಂತಲು ತುಂಬ ಇಷ್ಟವಾದ ಹವ್ಯಾಸವೆಂದರೆ ಪ್ರವಾಸಗಳಿಗೆ ಹೋಗುವುದು. ಇದುವರೆಗೆ ಭಾರತದ ಹಲವಾರು ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದ್ದೇನೆ. ಜೈಪೂರ್, ಅಹಮದಾಬಾದ್, ಬದ್ರಿನಾಥ್, ಕೆದಾರನಾಥ್, ಯಮುನೋತ್ರಿ, ಗಂಗೋತ್ರಿ, ನ್ಯೂ ಡೆಲ್ಲಿ, ಕಾಶಿ, ಗಯ, ಭುವನೆಶ್ವರ, ಪುಣೆ, ಶಿರಿಡಿ, ಹೈದರಬಾದ್, ವಿಶಾಕಪಟ್ನ, ತಿರುವನಂತಪುರ, ಚೆನ್ನೈ, ಕೊಚ್ಚಿನ್, ಕನ್ಯಾಕುಮಾರಿ, ಊಟಿ, ಕೊಡೈಕನಲ್, ಧರ್ಮಸ್ಥಳ, ಮಂಗಳೂರು, ಮೈಸೂರು, ಶ್ರವಣಬೆಳಗೊಳ, ವೇಲಾಂಗಿಣಿ, ಮದುರೈ, ಅಲಹಾಬಾದ್, ಆಗ್ರಾ, ಎಲ್ಲೋರ, ಮಹಬಲೇಶ್ವರ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಇದಲ್ಲದೆ ಭಾರತದ ನೆರೆಯ ದೇಶವಾದ ನೇಪಾಳಕ್ಕೆ ಹೋಗಿದ್ದೇನೆ. ಅಲ್ಲಿ ನೇಪಾಳದ ರಾಜಧಾನಿಯಾದ ಕಾಟಮಂಡು, ಮನೋಕಾಮ್ನ, ಭಕ್ತಿಪುರ್ ಮುಂತಾದ ಸ್ಥಳಗಳಿಗೆ ಹೋಗಿದ್ದೇನೆ. ಮೌಂಟ್ ಎವರೆಸ್ಟ್, ಮೌಂಟ್ ಕಾಂಚನಜುಂಗ, ಮೌಂಟ್ ಅನ್ನಪೂರ್ಣ, ಮೌಂಟ್ ದೌಲಗಿರಿ, ಮೌಂಟ್ ಗೌರಿಶಂಕರ್ ಮುಂತಾದ ಪರ್ವತಗಳನ್ನು ಕಂಡಿದ್ದೇನೆ. ನಾನು ಚಿಕ್ಕಂದಿನಿಂದಲೇ ಬಹಳ ಚುರುಕಾಗಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಒಂದು ಸಲ ಮೊದಲನೆಯ ಸ್ಥಾನ ಹಾಗೂ ಎರಡು ಸಲ ಎರಡನೇ ಸ್ಥಾನ ಗಳಿಸಿದ್ದೇನೆ. ಅಡುಗೆ ಸ್ಪರ್ಧೆಯಲ್ಲಿ ಎರಡು ಬಾರಿ ಎರಡನೇ ಸ್ಥಾನ ಸ್ವೀಕರಿಸಿದ್ದೇನೆ. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎರಡನೇ ಸ್ಥಾನ, ಕನ್ನಡ ಚರ್ಚಾಸ್ಪರ್ಧೆಯಲ್ಲಿ ಮೂರನೇ ಸ್ಥಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ವಿದ್ಯಾಭ್ಯಾಸದಲ್ಲೂ ನನಗೆ ಅಷ್ಟೇ ಆಸಕ್ತಿ. ಅಲ್ಲಿಯೂ ಹಲವಾರು ಬಹುಮಾನಗಳನ್ನು ಸ್ವೀಕರಿಸಿದ್ದೇನೆ. ಏಳನೇ ತರಗತಿಯಲ್ಲಿ ನಮ್ಮ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆಗ ಅಂದಿನ ತಹಸೀಲದಾರರಾದ ಜಯಮಹದೇವ್ ರವರು ನನಗೆ ಬಹುಮಾನ ವಿತರಿಸಿದರು. ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಆರನೇ ಸ್ಥಾನ ಗಳಿಸಿದೆ.