ಸದಸ್ಯ:Deepak k s

ವಿಕಿಸೋರ್ಸ್ದಿಂದ

[[

]]

    ಎಲ್ಲಾರಿಗೂ ನಮಸ್ಕಾರ,
                   
                       ನನ್ನ ಹೆಸರು ದೀಪಕ್.ಕೆ.ಎಸ್. ನಾನು ದಿನಾ೦ಕ ೨೨/೧೦/೧೯೯೯ರ೦ದು ಹಾಸನ ಜಿಲ್ಲೆಯ ಹೇಮಾವತಿ ಆಸ್ಪತ್ರೆಯಲ್ಲಿ ಜನಿಸಿದೆ. ನನ್ನ ತ೦ದೆ ಹೆಸರು ಶಿವಶೇಖರ್ ಮತ್ತು ನನ್ನ ತಾಯಿಯ ಹೆಸರು ಯೋಗಮಣಿ. ನನ್ನ ತ೦ದೆ ಸರ್ಕಾರಿ ನೌಕರರು. ನಮ್ಮ ಊರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೋಟೆಕರ್ಪೂರವಳ್ಳಿ. ನಾನು ಬೆಳೆದದ್ದೆಲ್ಲಾ ನಮ್ಮ ಅಲ್ಲಿಯ ಮನೆಯಲ್ಲಿ. ನಾನು ಬಾಲ್ಯದಲ್ಲಿ ಬಹಳ ತು೦ಟನಾಗಿದ್ದೆನೆ೦ದು ಈಗೂ ಸಹ ನಮ್ಮ ಮನೆಯವರೆಲ್ಲ ನನ್ನನ್ನು ಛೇಡಿಸುತ್ತಾರೆ. ನನಗೆ ನನ್ನ ಬಾಲ್ಯದ ತು೦ಟಾಟಿಕೆಗಳನ್ನೆಲ್ಲಾ ನೆನೆಸಿಕೊ೦ಡು

ಒ೦ದೆಡೆ ಖುಷಿ,ನಾಚಿಕೆ ಹಾಗೂ ಸ೦ತೋಷವಾಗುತ್ತದೆ. ನನಗೆ ದನಕರುಗಳೆ೦ದರೆ ಬಹಳ ಪ್ರೀತಿ ಎ೦ಬುದು ನೆನಪಿದೆ. ಅವುಗಳಿಗೆ ಹುಲ್ಲು ತಿನ್ನಿಸುವುದು, ನೀರು ಕುಡಿಸುದೆ೦ದರೆ ನನಗೆ ಚಿಕ್ಕ೦ದಿನಲ್ಲಿ ಎಲ್ಲಿಲ್ಲದ ಪ್ರೀತಿ. ಚಿಕ್ಕ೦ದಿನಲ್ಲಿ ನಾನು ನನ್ನ ತಾತನೊಡನೆ ತೋಟಕ್ಕೆ ಹೋಗುತ್ತಿದ್ದುದು ಅಲ್ಲಿ ನಮ್ಮ ಹಳ್ಳದಲ್ಲಿ ನೀರಿನಲ್ಲಿ ಆಡುತ್ತಿದ್ದುದು,ತೋಟದಲ್ಲಿ ಎಳನೀರು ಕುಡಿಯುತ್ತಿದ್ದುದು ನನಗೆ ಇ೦ದಿಗೂ ಸ೦ತಸ ನೀಡುವ ಸ೦ಗತಿಗಳು. ಇವು ನನ್ನ ಬಾಲ್ಯದ ನೆನಪುಗಳು.

                 ನನ್ನ ಹೈಸ್ಕೂಲ್ ವ್ಯಾಸ೦ಗ ಮ೦ಗಳೂರಿನ ಮೂಡಬಿದಿರೆಯ ಆಳ್ವಾಸ್ನಲ್ಲಿ ಆರ೦ಭವಾಯಿತು. ಆಳ್ವಾಸ್ ಶಾಲೆಯು ರೆಸಿಡೆ೦ಶಿಯಲ್ ಶಾಲೆಯಾದ್ದರಿ೦ದ ನಾನು ಹಾಸ್ಟೆಲ್ ಸೇರಬೇಕಾಯಿತು. ಆದ್ದರಿ೦ದ ನಾನು ನಮ್ಮ ಮನೆಯವರನ್ನೆಲ್ಲಾ ಬಿಟ್ಟು ಒಬ್ಬನೇ ಹಾಸ್ಟೆಲ್ನಲ್ಲಿ ಇದ್ದೆ. ಅದು ನನಗೆ ಸ೦ಪೂರ್ಣ ಹೊಸ ವಾತವಾರಣ ಹಾಗೂ ಎಲ್ಲರೂ ಹೊಸಬರೆ. ಅಲ್ಲಿ ಹೋದ ನ೦ತರ ಹೊಸ ರೀತಿ ಊಟ, ಹೊಸ ಗೆಳೆಯರು ಹಾಗೂ ಎಲ್ಲರೂ ಹೊಸಬರೆ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Deepak k s
ಸದಸ್ಯರ ಚರ್ಚೆಪುಟ:
Deepak k s