ಸದಸ್ಯ:Drgoraguddi09
ಗೋಚರ
ವಿಚಾರಗೋಷ್ಠಿ ಶಿಕ್ಷಣ ವರ್ತಮಾನದ ತಲ್ಲಣಗಳು ಡಾ. ಗರುರಾಜ ಕರಜಗಿ
"ಹಿಂದೆ ಜ್ಞಾನವನ್ನು, ಬದಿಕಿನ ಮೂಲ ಆಶಯಗಳನ್ನು ಜೀವನದಲ್ಲಿ ಅಳವಡಿಸುವ ಸಾಧನವಾಗಿದ್ದ ಶಕ್ಷಣ ಇಂದು ಭವಷ್ಯದಲ್ಲಿ ಹಣಕಾಸಿನ ಭದ್ರತೆಯನ್ನು ನೀಡುವ ರಹದಾರಿಯಾಗಿ ನಿಂತಿದೆ. ಇಂಥ ಶಿಕ್ಷಣದ ವಿಕಾರ ಶಿಶುಗಳೇ ಇಂದು ಕಾಣುವ ಅನಾಚಾರ. ಅತ್ಯಾಚಾರ ಮತ್ತು ಭ್ರಷ್ಟಾಚಾರ"
ಭೂತಕಾಲದಲ್ಲಿ ಭವಿಷ್ಯವನ್ನು ಆಳವಾಗಿ ಚಿಂತಿಸಿ, ಆದ ಪಲ್ಲಟಗಳನ್ನು ಅಲೋಚಿಸಿ ದೂರದರ್ಶಿತ್ವದ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ವಿಫಲವಾದದ್ದಕ್ಕೆ ವರ್ತಮಾನದ ತಲ್ಲಣಗಳು ಕಾಡುತ್ತವೆ. ವರ್ತಮಾನವೆಂಬುವುದು ಭೂತದ ಕನಸು ಹಾಗೂ ಭವಿಷ್ಯದ ಒಡೆದ ಮೊಟ್ಟೆ. ಅದು ಪಕ್ವವಾಗಿದ್ದರೆ. ಗರ್ಭಪಾತ. ಈ ಗರ್ಭಪಾತದಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಮತ್ತೊಂದು ಗರ್ಭದ ಸಂಪೂರ್ಣ ಫಲಿತಕ್ಕೆ ಅದೆಷ್ಟು ಕಾಲ ಕಾಯಬೇಕೋ? ಮಹಾ ದಾರ್ಶನಿಕರನೇಕರು ಹೇಳಿರುವಂತೆ ಮಾನವ ಸಮಾಜದ ಕೇಂದ್ರವೇ ಶಿಕ್ಷಣ. ಸಾರ್ಥಕ ಶಿಕ್ಷಣದ ಸುತ್ತ ಸಮಾಜದ ವೃಂದಾವನ ಕಟ್ಟಬೇಕು ಆ ಶಿಕ್ಷಣದ ಮುಖಾಮುಖೀಯಾಗಿದ್ದರೆ, ಸ್ವಾರ್ಥ ಪ್ರೇರಿತವಾಗಿದ್ದರೆ, ಮ್ಐ ಲ್ಯ ಗಳಲ್ಲಿ ನಂಬಿಕೆ ಇಲ್ಲದಿದ್ದ ವ್ಯಕ್ತಿಗಳನ್ನು ಸೃಷ್ಟಿಸುವುದಾದರೆ. ಇಡೀ ಸಮಾಜದ ವೃಂದಾವನವಾಗದೆ ಗೋರಿಯಾಗಿರುತ್ತದೆ, ತನ್ನನ್ನು ತಾನೇ ಕೋಂದುಕೊಳ್ಳುವ ಆಯುಧವಾಗುತ್ತದೆ. ಈ ಕ್ರಿಯೆಗೆ ಇತಿಹಾಸ ಮತ್ತೊಂದು ಮಜಲಿಗೆ ನಾವಿಂದು ಮುಖಾಮುಖಿಯಾಗಿ ತಲ್ಲಣಗಳನ್ನು ನೋಡುತ್ತ ನಿಂತಿದ್ದೇವೆ. ಈ ತಲ್ಲಣಗಳ ವೃಕ್ಷಕ್ಕೆ ಮೂಲ ಕಾರಣವೆನೆಂದರೆ ನಮಗೆ ಯಾವ ಶಿಕ್ಷಣ ಬೇಕೆಂಬುವುದೇ ತಿಳೀಯಲಿಲ್ಲ. ಹಿಂದೆ ಜ್ಞಾನವನ್ನು, ಬದುಕಿನ ಮೂಲ ಆಶಯಗಳನ್ನು ಜೀವನದಲ್ಲಿ ಅಳವಡಿಸುವ ಸಾಧನವಾಗಿದ್ದ ಶಿಕ್ಷಣ ಇಂದು ಭವಿಷ್ಯದಲ್ಲಿ ಹಣಕಾಸಿನ ಭದ್ರತೆಯನ್ನು ನೀಡುವ ರಹದಾರಿಯಾಗಿ ನಿಂತಿದೆ. ನ್ಔಕರಿಗಾಗಿಯೇ, ಹೆಚ್ಚು ಹಣ ಸಂಪಾದನೆಗೆಂದೇ ಕಲಿತ ಶಿಕ್ಷಣ ಬದುಕಿನ ಚಿರಂತನ ಮ ಲ್ಯ ಗಳಿಗೆ ಒತ್ತಾಸೆಯಾಗಿ ನಿಲ್ಲುವುದು ಅಪ್ರಸ್ತುತವಾದಂತೆ, ಅಮುಖ್ಯವಾದಂತೆ ತೋರುತ್ತದೆ. ಹೃದಯ ಕೇಂದ್ರಿತವಾದ ಶಿಕ್ಷಣ ಸ್ವಾರ್ಥವನ್ನು ವೃದ್ಧಿಸುತ್ತದೆ. ಇಂಥ ಶಿಕ್ಷಣದ ವಿಕಾರ ಶೀಊಗಳೇ ಇಂದು ಕಾಣೂವ ಅನಾಚಾರ, ಅತ್ಯಾಚಾರ ಮತ್ತು ಭ್ರಷ್ಟಾಚಾರಗಳು. ನನಗಿರುವ ಸಮಯದ ಮಿತಿಯಲ್ಲಿ ವಿಶೇಷವಾಗಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಕ್ಷಣದಲ್ಲಿ ಕಾಣುವ ತಲ್ಲಣಗಳ ಬಗ್ಗೆ ಹೇಳಬಯಸುತ್ತೇನೆ. ಸಮಾಜದಲ್ಲಿರುವ ಜಾತಿ ವ್ಯವಸ್ಥೆಯ ಅನಾಹುತ ಸಾಲದೆಂಬಂತೆ ಶಿಕ್ಷಣದಲ್ಲಿ ಒಂದು ರೀತಿಯ ಜಾತಿ ವ್ಯವಸ್ಥೆ ನಿಂತಿದೆ. ನಮ್ಮ ದೇಶದಲ್ಲಿ ಎಕರೂಪದ ಶಿಕ್ಷಣ ಸಾಧ್ಯವಾಗದೇ ಸುಮಾರು ಐದು ವಿಭಿನ್ನ ಪಠ್ಯಕ್ರಮ, ಸಿ.ಬಿ.ಎಸ್.ಇ., ಐ.ಸಿ.ಎಸ್ ಇ. ಹಾಗೂ ಐ.ವಿ ಎಂಬ ಐದು ಮುಖ್ಯ ಪಠ್ಯಕ್ರಮಗಳು ಜಾರಿಯಲ್ಲಿವೆ. ಮೊದಲು ರಾಜ್ಯದ ಬಹುತೇಕ ಎಲ್ಲೇಡೆ ಒಂದೇ ಪಠ್ಯಕ್ರಮವಿತ್ತು. ಯಾವ ಶಾಲೆಯಲ್ಲಿ ಮಗು ಕಲಿತರೂ ಅದನ್ನೇ ಕಲಿಯಬೇಕಿತ್ತು. ಮಾತೃಭಾಷೆಯ ಮೂಲಕವೇ ಕಲಿಯುವುದು ಅನಿವಾರ್ಯವೂ ಅಪೇಕ್ಷಣೀಯವೂ ಆಗಿತ್ತು. ನಂತರ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಯಾದ ಮೇಲೆ ಅವುಗಳ ನಿರ್ವಹಣೆಗೆ ಸಿ.ಬಿ.ಎಸ್.ಇ. ಕೂಡ ಹೆಚ್ಚು ಆಕರ್ಷಕವಾಗತೊಡಗಿತ್ತು. ಎಂಭತ್ತರ ದಶಕದಲ್ಲಿ ಬಿರುಗಾಳಿಯಂತೆ ನುಗ್ಗಿತ್ತು. ಇಂಗ್ಲಿಷ್ ಜ್ಞಾನದಿಂದ ಮಾತ್ರ ದೊಡ್ಡ ನ್ಔಕರಿ, ಹೆಚ್ಚು ಸಂಬಳ ಎನ್ನುವ ಅರ್ಧ ಸತ್ಯ ಮತ್ತು ಅರ್ಧ ಭ್ರಮೆ ಪಾಲಕರನ್ನು ಆವರಿಸಿಕೊಂಡಿತು. ಅದಕ್ಕೆ ಸರಿಯಾಗಿ ಸರ್ಕಾರ ತನ್ನ ಎಂದಿನ ಬೇಜವಾಬ್ದಾರಿಯಿಂದ ಈ ವ್ಯವಸ್ಥಯನ್ನು ಬದಲಿಸಲು ಪ್ರಯತ್ನಿಸದೇ ಅದರಲ್ಲೇ ಶಾಮೀಲಾಗಿ ಹೋಯಿತು. ಯಾಕೆಂದರೆ. ಸರ್ಕಾರದ ಲಗಾಮನ್ನು ಕ್ಐಯಲ್ಲಿ ಹಿಡಿದ ಅನೇಕ ರಾಜಕಾರಣಿಗಳು ಅಂದೂ, ಇಂದೂ,ನಡೆಸುತ್ತಿರುವುದು. ಆಕರ್ಷಕವಾದ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನೇ ಮನಸ್ಸಿನಲ್ಲಿ ಇಂಗ್ಲಿಷ್ ಮಾಧ್ಯಮದ ಪ್ರೀತಿಯನ್ನು ತುಂಬಿಕೊಂಡು, ಆದರೆ ಮತಗಳ ಮೇಲೆ ಕಣ್ಣಿಟ್ಟು ಸರ್ಕಾರ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿ ನೀಡುವುದಿಲ್ಲವೆಂದು ಸಾರಿದಾಗಲೇ ಹುಟ್ಟಿಕೊಂಡದ್ದು ಅನಧಿಕೃತ ಶಾಲೆಗಳ ಪರಂಪರೆ. ಕನ್ನಡ ಮಾಧ್ಯಮಕ್ಕೆಂದು ಪರವಾನಗಿ ಪಡೆದು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ನಡೆಸುವುದು ಮಾಮುಲಾಯಿತು. ಯಾಕೆಂದರೆ ಜನರಿಗೆ ಇಂಗ್ಲಿಷ್ ಮಾಧ್ಯಮದ ಶಾಲೇಗಳನ್ನು