ಸದಸ್ಯ:Kavitha Lakshminarayana

ವಿಕಿಸೋರ್ಸ್ದಿಂದ

ನನ್ನ ಹೆಸರು ಕವಿತಾ'ಎಲ್' ನಮ್ಮ ತ೦ದೆ ಲಕ್ಶ್ಮಿನಾರಾಯಣ ತಾಯಿ ಸರಸ್ವತಿ. ನನ್ನ ತ೦ದೆ ಒ೦ದು ಆಸ್ಪತ್ರೆಲ್ಲಿ ಬಟ್ಟೆ ಹೊಗಿಯೊ ಕೆಲಸ ಮಾಡುತ್ತಿದ್ದಾರೆ, ತಾಯಿ ಕ್ರೆಸ್ಟ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ.ನಾನು ಹುಟ್ಟಿದ್ದು ಆ೦ಧ್ರಾ ಪ್ರದೇಶದ ಚಿತ್ತೂರು ಜಿಲ್ಲೆ.ನನ್ನ ಬಾಲ್ಯ ನಮ್ಮ ಅಜ್ಜಿ ತಾತರ ಜೊತೇಲ್ಲಿ ಕಳೆಯಿತು.ಅಲ್ಲೇ ಎಲ್ಲರ ಜೊತೆ ನನ್ನ ಬಾಲ್ಯ ಕಳೆಯಿತು. ನ೦ತರ ಅಪ್ಪಾ ಅಮ್ಮಾ ಹಾಗು ಅಣ್ಣಾ ಬೆಂಗಳೂರಿನಲ್ಲಿ ಸ್ಥಿರವಾದ್ದರಿಂದ ನಾನು ಅವರ ಜೊತೆ ಬೆಂಗಳೂರಿನಲ್ಲಿ ಇದ್ದೇನೆ. ನನ್ನ ಬಾಲ್ಯದ ದಿನಗಳು ನನ್ನ ಕುಟುಂಬದ ಜೊತೆಗೆ, ಬಾಲ್ಯ ಮಿತ್ರರ ಜೊತೆಗೆ ಕಳೆಯಿತು.ನಂತರ ನಾನು ಒದಿದ್ಧು ಕನ್ನಡ ಮಾಧ್ಯಮದ ಫ಼್ರಾನ್ಸಿಸ್ಕನ್ ಶಾಲೇಲಿ ನಾನು ಒ೦ದರಿ೦ದ-ಹತ್ತನೆ ತರಗತಿ ತನಕ ಮುಗಿಸಿದೆ.ನ೦ತರ ಕ್ರೆಸ್ಟ್ ಕಾಲೇಜಿನಲ್ಲಿ ನಾನು ನನ್ನ ಪಿ.ಯು.ಸಿಯನ್ನು ಮುಗಿಸಿದೆ. ನನ್ನ ಶಾಲೆಯ ದಿನಗಳು ತುಂಬಾನೆ ಖುಷಿಯಾಗಿ ಕಳೆಯಿತು.ಇನ್ನು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆ, ಅದರಲ್ಲಿ ಅನೇಕ ಬಹುಮತಿಗಳನ್ನು ಗಳಿಸಿದೆ.ನಮ್ಮ ಶಾಲೆಯ ವಾರ್ಷಿಕೋತ್ಸವದ ದಿನಕ್ಕೆ ನಾವು ಬ್ಯಾಂಡ್ ಗೆ ಎಲ್ಲಾರು ಸೇರಿ ಅಭ್ಯಾಸ ಮಾಡೋದು, ಇನ್ನು ಗುರುಗಲ ದಿನಾ‍ಚರಣೆ, ಮಕ್ಕಳ ದಿನಾಚರಣೆ ನಮಗೆ ತುಂಬಾನೆ ಖುಷಿ ಕೊಡುತಿತ್ತು.ರಜೆ ದಿವಸಗಳಲ್ಲಿ ಸ್ಪೆಷಲ್ ಕ್ಲಾಸ್ ಅದು ಸಂಜೆತನಕ, ಅದುನ್ನ ಮುಗಿಸಿಕೊಂಡು ಮನೆಗೆ ಹೋಗಿ ಮತ್ತೇ ನೈಟ್ ಕ್ಲಾಸಿಗೆ ಬರೋದು ಕ್ಲಾಸಿನಲ್ಲಿ ಗಲಾಟೆ ಮಾಡಿದ್ರೆ ಟೀಚರ್ ಬಯ್ಯೋದು, ಪ್ರಾರ್ಥನೆ ಹಾಡುಗಳನ್ನು ಹಾಡೋದು, ಕ್ಲಾಸಿನ ಲೀಡರ್ ಆಗಿ ಕೆಲಸ ಮಾಡೊದು, ಟೀಚರ್ ಜೊತೆ ಹರಟೆ ಹೊಡಿಯೋದು ಇವೆಲ್ಲ ಮರೆಯಲಾಗದ ನೆನಪುಗಳು. ಈಗ ನಾನು ಬಿ.ಕಾಮ್ ಮಾಡುತ್ತಿದ್ದೆನೆ. ನನ್ನ ಹವ್ಯಾಸಗಳೆಂದರೆ ಹಾಡು ಕೇಳೋದು, ಇತರರಿಗೆ ಸಹಾಯ ಮಾಡೋದು,ಸ್ನೇಹಿತರ ಜೊತೆ ಹರಟೆ ಹೊಡಿಯೋದು, ಮಕ್ಕಳ ಜೊತೆ ಆಟ ಆಡೋದು,ಕಾಲೇಜಿನಲ್ಲಿ ಸ್ನೇಹಿತರ ಜೊತೆಗೆ ಸುತ್ತಾಡೋದು,ದೂರದರ್ಶನದಲ್ಲಿ ಚಲನ ಚಿತ್ರ, ಸೀರಿಯಲ್ಸ್ ನೋಡೋದು. ಇನ್ನು ನನ್ನ ವ್ಯಕ್ತಿತ್ವದ ಬಗ್ಗೆ ಹೇಳೋದಾದ್ರೆ ನಾನು ತುಂಬಾ ಹಟ ಹಿಡಿಯುವವಳು,ದೇವರ ಭಕ್ತಿ ಕಡಿಮೆ, ಯಾರ ಜೊತೆಗೂ ಜಾಸ್ತಿ ಸೇರೋಕ್ಕೆ ಸ್ವಲ್ಪ ಸಂಕೋಚ,ತಾಳ್ಮೆ ಕಡಿಮೆ, ಆತುರ ಜಾಸ್ತಿ,ಯಾರು ಹೇಳಿದ್ರು ಮಾತು ಕೇಳೋದಿಲ್ಲ.ನನ್ನ ಆಸಕ್ತಿ ಎಂದರೆ ನನಗೆ ಸಾಕು ಪ್ರಾಣಿಗಳೆಂದರೆ ತುಂಬಾ ಆಸಕ್ತಿ, ಅಡಿಗೆ ಕಲಿಬೇಕೆಂದರೆ ಆಸಕ್ತಿ, ಹೊಸ ಹೊಸ ವಸ್ತುಗಳನ್ನು ಖರೀದುಸುವಲ್ಲಿ, ಷಾಪಿಂಗ್ ಹೋಗಬೇಕೆಂದರೆ ಆಸಕ್ತಿ.ಇನ್ನು ಈ ವಿಕಿಸೋರ್ಸ್ ನನಗೆ ತು೦ಬಾ ಸಹಾಯ ಮಾಡಿದೆ ಯಾಕೆ೦ದರೆ ನನಗೆ ಕಾಲೇಜ್ ಗೆ ಬರೋತನಕ ಇ ಮಾಧ್ಯಮದ ಬಗ್ಗೆ ನನಗೆ ತಿಳಿದಿರಲಿಲ್ಲ. ಕನ್ನಡ ತರಗತಿನಲ್ಲೆ ನನಗೆ ಇ ವಿಕಿಸೋರ್ಸ್ ನನಗೆ ಪರಿಚಯವಾಗಿದ್ದು.ಇ ಮಧ್ಯಮಾ ನನಗೆ ತು೦ಬಾನೆ ಸಹಾಯಕವಾಗಿದೆ.ಎನಾದ್ರು ಕವಿಗಳ ಬಗೆಗೆ,ಲೇಖಕರ ಕವನ ಸ೦ಕಲನ ಬಗೆಗೆ ಮಾಹಿತಿ ಬೇಕನ್ನುವಾಗ ಇ ಮಾಧ್ಯಮ ನನಗೆ ಸಹಾಯಕಾರಿಯಾಗಿತ್ತು.ಮು೦ದಕ್ಕು ಇ ಮಾಧ್ಯಮ ನನಗೆ ಸಹಾಯವಾಗುವುದು ಎ೦ದು ಭಾವಿಸುತ್ತೇನೆ.ಈ ವಿಕಿಸೋರ್ಸ್ ಕನ್ನಡ ಬರವಣಿಗೆಗೆ ಹಾಗೂ ವಿಧ್ಯಾರ್ಥಿಯರಿಗೆ ಅವರು ಮಾಡಿದ ಪುಟದ ರಚನೆಯನ್ನು ಎಲ್ಲರಿಗೂ ಪರಿಚಯಿಸುವರು.ಈಗಿನ ಕಾಲದಲ್ಲಿ ಕನ್ನಡ ಎ೦ಬುದು ಮರೆಯಗುತ್ತಿದ್ದೆ ಯಾಕೆ೦ದರೆ ಈಗಿನ ಕಾಲದ ಪ್ರಜೆಗಳು ಹೆಚ್ಚು ಇ೦ಗ್ಲಿಷ್ ಭಾಷೆಗೆ ಪ್ರಾಧ್ಯಾನತೆ ನೀಡುತ್ತಿದ್ದಾರೆ ಆದ್ದರಿ೦ದ ನಮ್ಮ ಕನ್ನಡ ಎನ್ನುವುದು ಮರೆಯಾಗುತ್ತಿದ್ದೆ. ಆದರೆ ಇ ವಿಕಿಸೋರ್ಸ್ ವಿಧ್ಯಾರ್ಥಿಯರ ಸಹಾಯದಿ೦ದ ಕನ್ನಡ ಭಾಷೆ ಉಳಿದುಕೊ೦ಡಿದೆ.ಕೊನೆಗೆ ಕನ್ನಡ ಭಾಷೆ ಎ೦ಬುದು ಮು೦ದಿನ ಪೀಳಿಗೆಗೆ ಉಳಿಯುವುದೊ ಇಲ್ಲವೊ ಎ೦ಬ ಪರಿಸ್ಥಿತ್ತಿ ಉ೦ಟಾಗಿದೆ.ನನಗೆ ಆಸಕ್ತಿ ಇರುವ ಅನೇಕ ವಿಷಯಗಳನ್ನು ನಾನು ಇ ವಿಕಿಸೋರ್ಸ್ ಮಾಧ್ಯಮದ ಜೊತೆಗೆ ಹಂಚಿಕೊಳ್ಳುತ್ತೇನೆ.