ಸದಸ್ಯ:Manishchrist

ವಿಕಿಸೋರ್ಸ್ದಿಂದ

ಪವಿತ್ರವಾದ ಈ ಕನ್ನಡನಾಡಿನ ಗದಗ ಜಿಲ್ಲೆಯಲ್ಲಿ ೧೯೯೯ ರಲ್ಲಿ ಜನಿಸಿದ ನನ್ನ ಹೆಸರು ಮಹದೇವಪ್ಪ. ನನ್ನ ತಾಯಿ ಮೇಘಾ ಹಾಗೂ ತಂದೆ ಮಹಾಲಿಂಗಪ್ಪ. ನನ್ನ ವಿದ್ಯಾಭ್ಯಾಸವನ್ನು ನಾನು ಗದಗ್ ನಗರದ ಸೈನ್ಟ್ ಜಾನ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಿದೆ. ಮುಂದಿನ ಶಿಕ್ಷಣವನ್ನು ಶಿರಹಟ್ಟಿಯ ಸಿ.ಸಿ.ನ್ ಮತ್ತು ಬ್ಯಾಡಗಿಯ ಎಮ್.ಡಿ.ಎಚ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮುಗಿಸಿದೆ. ಮುಂದೆ ಗದಗದ ಸರಕಾರಿ ಪದವಿ ಪೂರ್ವ ವ್ಯಾಸಂಗ ಮುಗಿಸಿ ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆಯುತ್ತಿದ್ದೇನೆ.

          ಈ ಹದಿನೆಂಟು ವರ್ಷದ ಪ್ರವಾಸವು ನನಗೆ ಅನೇಕ ಏಳು-ಬೀಳುಗಳನ್ನು, ಸೋಲು-ಗೆಲುವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಅತ್ಯಂತ ಚೆನ್ನಾಗಿ ಕಲಿಸಿಕೊಟ್ಟಿದೆ. ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎಂಬಂತೆ ನನ್ನ ತಾಯಿಯೇ ನನ್ನ ಪ್ರಾಥಮಿಕ ಗುರು. ನನ್ನನ್ನು ಜಗತ್ತಿನ ಅತ್ಯುನ್ನತ ಸ್ಥಾನದಲ್ಲಿ ಕಾಣಬೇಕೆಂಬುದು ಅವಳ ಆಸೆಯಾಗಿದ್ದುದರಿಂದ ನನಗೆ ಅತ್ಯಂತ ಒಳ್ಳೆಯ ಸಂಸ್ಕಾರವನ್ನೂ, ಶಿಕ್ಷಣವನ್ನೂ ನೀಡುವಲ್ಲಿ ಅತ್ಯಂತ ಶ್ರಮ ಪಡುತ್ತಿದ್ದಾಳೆ. ಅತ್ಯಂತ ಬಡತನದ ಪರಿಸ್ಥಿತಿಯಲ್ಲಿಯೂ ನನಗೆ ಏನೂ ಕಡಿಮೆಯಾಗದಂತೆ ನನ್ನನ್ನು ಸಾಕುತ್ತಿದ್ದಾಳೆ. ಅಂತಹ ತಾಯಿಯನ್ನು ಪಡೆದದ್ದು ನಿಜವಾಗಿಯೂ ನನ್ನ ಪುಣ್ಯವೇ ಸರಿ.
          ಇನ್ನು ನನ್ನ ಅತ್ಯಂತ ನೆಚ್ಛಿನ ವಿಷಯವೆಂದರೆ ಗಣಿತಶಾಸ್ತ್ರ. ನಿಜ ಹೇಳಬೇಕೆಂದರೆ ನನಗೆ ಎಂಟನೇ ತರಗತಿಗೆ ಬರುವವರೆಗೂ ಅತ್ಯಂತ ಕಡಿಮೆ ಅಂಕ ಬರುತ್ತಿದ್ದುದು ಗಣಿತದಲ್ಲಿಯೇ!!! ಆದರೆ ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಮೇಲೆ ನಿಧಾನವಾಗಿ ಆಸಕ್ತಿ ಹುಟ್ಟಲು ಆರಂಭವಾಯಿತು. ಆ ಆಸಕ್ತಿ ನನ್ನನ್ನು ಎಷ್ಟೊಂದು ಆವರಿಸಿತೆಂದರೆ ನನಗೆ ಪ್ರತಿದಿನ ಮೂರು ಘಂಟೆಗಳ ಕಾಲ ಅದರಲ್ಲಿ ಮುಳುಗದೆ ಹೋದರೆ ನಿದ್ರೆಯೇ ಬರುತ್ತಿರಲಿಲ್ಲ. ನಂತರದ ಎಲ್ಲ ಪರೀಕ್ಶೆಗಳಲ್ಲಿಯೂ ನೂರಕ್ಕೆ ನೂರು ಅಂಕಗಳನ್ನು ಗಳಿಸಲು ಪ್ರಾರಂಭಿಸಿದ ನನಗೆ ಇದ್ದ ಆಸಕ್ತಿ ಇಮ್ಮಡಿಗೊಳ್ಳುತ್ತಲೇ ಹೋಯಿತು. ಪರಿಣಾಮವಾಗಿ ನಾನು ನನ್ನ ಮುಂದಿನ ಅಭ್ಯಾಸವನ್ನು ಅದೇ ವಿಷಯದಲ್ಲಿಯೇ ಮುಂದುವರೆಸಲು ನಿರ್ಧರಿಸಿದೆ. ನನ್ನ ಪದವಿ ಪೂರ್ವ ವ್ಯಾಸಂಗವನ್ನು ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಸಿದೆ.
          ನನ್ನ ಇಷ್ಟು ವರ್ಷದ ವಿದ್ಯಾರ್ಥಿ ಜೀವನದಲ್ಲಿ ಮರೆಯಲಾಗದ ದಿನಗಳೆಂದರೆ, ನಾನು ನನ್ನ ದ್ವಿತೀಯ ಪಿ.ಯು.ಸಿ ತರಬೇತಿಗಾಗಿ ಧಾರವಾಡದ ಹಂಚಿನಮನಿ ತರಬೇತಿ ಕೇಂದ್ರದಲ್ಲಿ ಕಳೆದ ಮೂರು ತಿಂಗಳುಗಳು. ಈ ಮೂರು ತಿಂಗಳುಗಳಲ್ಲಿ ನನ್ನ ಜೀವನದ ಅನೇಕ ತಿರುವುಗಳು, ಮಹತ್ವದ ಘಟ್ಟಗಳು ಅಡಗಿವೆ. ಸ್ನೇಹಿತರೊಂದಿಗೆ ಬೆರೆಯದೇ ಇದ್ದ ನಾನು ನಿಧಾನವಾಗಿ ನನ್ನ ಜೀವನದಲ್ಲಿ ಅವರ ಪಾತ್ರವನ್ನು ಅರಿತೆ. ಎಲ್ಲರೊಡನೆ ಬೆರೆಯಲು ಪ್ರಾರಂಭಿಸಿದೆ. ಮೇಲೆ ಹೇಳಿದಂತೆ ನಾನು ಈ ಕಾಲವನ್ನು ಪ್ರಮುಖ ಕಾಲವೆಂದು ಪರಿಗಣಿಸಲು ಮತ್ತೊಂದು ಪ್ರಮುಖ ಕಾರಣವೆಂದರೆ ನನ್ನ ಮತ್ತು ನನ್ನ ಪ್ರಾಣ ಸ್ನೇಹಿತನ ಮೊದಲ ಭೇಟಿಯಾದದ್ದು ಈ ಮೂರು ತಿಂಗಳ ಮೊದಲ ದಿನ. ತುಂಬಾ ಜಗಳವಾಡುತ್ತಿದ್ದ ನಮ್ಮ ಸಂಬಧವು ಈ ಮೂರು ತಿಂಗಳಲ್ಲಿ ಎಷ್ಟೊಂದು ಗಟ್ಟಿಯಾಯಿತೆಂದರೆ, ಆ ಮೂರು ತಿಂಗಳುಗಳನ್ನು ಕಳೆಯುವುದೇ ಕಷ್ಟವೆಂದುಕೊಂಡಿದ್ದ ನನಗೆ ದಿನಗಳುರುಳಿದ್ದೇ ತಿಳಿಯಲಿಲ್ಲ. ಕೊನೆಯ ದಿನ ಇಬ್ಬರೂ ನಮ್ಮ ನಮ್ಮ ಊರಿಗೆ ತೆರಳುವಾಗ ಕಣ್ಣೀರುಗಳನ್ನು ಅಡಗಿಸಿಕೊಂಡು ಒಬ್ಬರನ್ನೊಬ್ಬರು ಬಿಟ್ಟು ತೆರಳಿದ ದೃಶ್ಯ ಇನ್ನೂ ಕೂಡ ಕಣ್ಣ ಮುಂದೆ ಹಾಗೆಯೇ ಉಳಿದಿದೆ. ದೂರವಾಣಿಯ ಕೃಪೆಯಿಂದ ಹೇಗೋ ನಮ್ಮ ದಿನಗಳನ್ನು ಕಳೆಯುತ್ತಿದ್ದೇವೆ. ಇನ್ನೆಷ್ಟು ದಿನಗಳನ್ನು ಹೀಗೆಯೇ ಕಳೆಯಬೇಕೋ ಗೊತ್ತಿಲ್ಲ!!!
Christ University


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Manishchrist
ಸದಸ್ಯರ ಚರ್ಚೆಪುಟ: