ಸದಸ್ಯ:Niharika P Kaushik

ವಿಕಿಸೋರ್ಸ್ದಿಂದ

ಮೇಘದೂತಮ್

ಮೇಘದೂತಮ್ ಅಥವಾ ಮೇಘಸಂದೇಶಮ್ ಕಾಳಿದಾಸನಿಂದ ಬರೆಯಲ್ಪಟ್ಟಿರುವ ಒಂದು ಸಂಸ್ಕೃತ ಖಂಡಕಾವ್ಯ. ೧೧೧ ಶ್ಲೋಕಗಳನ್ನು ಒಳಗೊಂಡಿರುವ ಈ ಕಾವ್ಯವು ಕರ್ತವ್ಯಲೋಪವೆಸಗಿದ್ದಕ್ಕಾಗಿ ಬಹಿಷ್ಕೃತಗೊಂಡು ಮಧ್ಯ ಭಾರತದಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದ ಯಕ್ಷನೊಬ್ಬನು ಕೈಲಾಸ ಪರ್ವತದ ಅಲಕಾವತಿಯಲ್ಲಿರುವ ತನ್ನ ಪ್ರಿಯತಮೆಗೆ ಮೋಡಗಳ ಮೂಲಕ ಸಂದೇಶ ಕಳಿಸುವ ವರ್ಣನೆಯನ್ನು ಒಳಗೊಂಡಿದೆ.

ಕಾಳಿದಾಸರು ಸಂಸ್ಕೃತದ ಪ್ರಮುಖವಾದ ಹಾಗು ಬಹಳ ಪ್ರಸಿದ್ಧವಾದ ಕವಿಗಳಲ್ಲಿ ಒಬ್ಬರು. ಅವರು ಭಾರತದ ಪುರಾಣದ ಬಗ್ಗೆ ಕುರಿತು ಹಲವಾರು ನಾಟಕಗಳು ಮತ್ತು ಕಾವ್ಯಗಳನ್ನು ರಚಿಸಿದ್ದಾರೆ. ಸಂಸ್ಕ್ರತ ಸಾಹಿತ್ಯದಲ್ಲಿರುವ ಮೇಘದೂತಮ್ ಕಾವ್ಯದಲ್ಲಿ, ಕಾಳಿದಾಸರ ಕಾವ್ಯಾತ್ಮಕ ಕಲ್ಪನೆಯು, ಸಂದೇಶ ಕಾವ್ಯಗಳ ಬರಹಕ್ಕೆ ಕಾರಣವಾಯಿತು. ಹಂಸ ಸಂದೇಶ ಎಂಬ ಕಾವ್ಯವು ಇದಕ್ಕೆ ಉದಾಹರಣೆಯಾಗಿದೆ. ಈ ಕಾವ್ಯದಲ್ಲಿ ಶ್ರೀ ರಾಮನು ಒಂದು ಹಂಸದ ಮೂಲಕ ಸೀತೆಗೆ ತನ್ನ ಸಂದೇಶವನ್ನು ಕಳೆಸುತ್ತಾನೆ. ೧೮೧೩ರಲ್ಲಿ, ಈ ಕಾವ್ಯವನ್ನು ಆಂಗ್ಲ ಭಾಷೆಗೆ ಭಾಷಾಂತರಿಸಲಾಯಿತು.

ಮೇಘದೂತದಲ್ಲಿ ಅಥವ ಮೇಘಸಂದೇಶಲ್ಲಿ ಎರಡು ಪ್ರಮುಖ ಭಾಗಗಳಿವೆ. ಪೂರ್ವಮೇಘ ಹಾಗು ಉತ್ತರಮೇಘ.ಒ೦ದು ಭಾಗ ಮೋಡದ ಪ್ರಯಾಣವನ್ನು ತಿಳಿಸಿದರೇ, ಇನ್ನೊ೦ದು ಭಾಗ ಮೋಡವು ಯಕ್ಷನ ಹೆ೦ಡತಿಗೆ ನೀಡುವ ಸ೦ದೇಶವನ್ನು ವಿವರಿಸುತ್ತದೆ.

ಮೇಘದೂತದ ಕಾವ್ಯದ ಪ್ರಕಾರˌ ಖಜಾಂಚಿಯಾದ ಕುಬೇರ ದೇವನಿಗೆ ಹಲವಾರು ಯಕ್ಷರು ಸೇವೆ ಸಲ್ಲಿಸುತ್ತಿದ್ದರು.ಅದರಲ್ಲಿ ಒಬ್ಬ ಯಕ್ಷನು ಅವನ ಕರ್ತವ್ಯಗಳನ್ನು ಮರೆತು, ಅವನ ಹೆಂಡತಿಯ ಪ್ರೀತಿಯಲ್ಲಿ ಮುಳುಗಿ ಮೈಮರೆಯುತ್ತಾನೆ. ಇದನ್ನು ಕಂಡ ಕುಬೇರ ದೇವನು ತನ್ನ ಕರ್ತವ್ಯಗಳನ್ನು ಯಕ್ಷನು ಪಾಲಿಸುತ್ತಲ್ಲವೆಂದು ಕೊಪಗೊಂಡು ಅವನಿಗೆ ಶಾಪವೊಂದನ್ನು ನೀಡುತ್ತಾನೆ. ಕುಬೇರನ ಶಾಪದಿಂದಾಗಿ, ಯಕ್ಷನು ಭೂಲೊಕದ ಕಾಡಿನಲ್ಲಿ ವಾಸಿಸಬೇಕಾಗುತ್ತದೆ. ಅಸಹಾಯಕನಾದ ಯಕ್ಷನು ಅವನ ಹೆಂಡತಿಯ ನೆನಪಲ್ಲೇ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಒಂದು ದಿನˌ ಯಕ್ಷನು ಅವನ ಹೆಂಡತಿಯನ್ನು ನೆನಪಿಸಿಕೊಂಡು ಕೊರಗುತ್ತಿದ್ದಾಗˌ ಭೂಲೋಕದಲ್ಲಿ ಮಳೆ ಬರಲು ಆರಂಭವಾಯಿತು. ಯಕ್ಷನು ಹಾದು ಹೋಗುತ್ತಿದ್ದ ಮೋಡದ ಬಳಿ ತನ್ನ ಪತ್ನಿಗೆ ಸಂದೇಶವನ್ನು ಮುಟ್ಟಿಸಿˌ ಅದರ ನಂತರ ಕೈಲಾಸ ಪರ್ವತದ ಮೇಲೆ ಸೊರಗಬೇಕೆಂದು ಕೋರಿಕೊಳ್ಳುತ್ತಾನೆ. ಆ ಮೋಡವು ಹಿಡಿಯಬಕಾಗಿದ್ದ ದಾರಿಯ ವರ್ಣನೆಯನ್ನು ಕಾಳಿದಾಸರು ಅತ್ಯುತ್ತಮವಾಗಿ ವಿವರಿಸಿದ್ದಾರೆ. ಮೋಡವು ಹಿಡಿಯುವ ದಾರಿಯ ಬಗ್ಗೆ ಹಾಗು ಯಕ್ಷನ ಪತ್ನಿಗೆ ಸಂದೇಶವನ್ನು ತಿಳಿಸುವುದರ ಬಗ್ಗೆ ಈ ಕಾವ್ಯ ರೂಪುಗೊಂಡಿದೆ.

ಈ ಕಾವ್ಯ ಪ್ರಪ್ರತಮ ಭಾರಿಗೆ, ೧೮೧೩ರಲ್ಲಿ ಆಂಗ್ಲ ಭಾಷೆಗೆ ಹೊರೇಸ್ ವಿಲ್ಸಂನ್ ಅವರು ಅನುವಾದಿಸಿದರು. ೧೯೬೯ರಲ್ಲಿ 'ಮಂದಕ್ರಂತ ಮೀಟರ್' ಎಂದು ಬಂಗಾಲಿ ಭಾಷೆಗೆ ಅನುವಾದ ಮಾಡಲಾಯಿತು. ಈ ಖಂಡ ಕಾವ್ಯವು ೧೮೧೩ರಿಂದ ಹಲವಾರು ಭಾರಿ ಆವೃತ್ತಗೊಂಡಿದೆ.

ಉಲ್ಲೇಖಗಳು: ೧) https://en.wikipedia.org/wiki/Meghad%C5%ABta


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Niharika P Kaushik
ಸದಸ್ಯರ ಚರ್ಚೆಪುಟ:
Niharika P Kaushik