ಸದಸ್ಯ:Rakshanda HM

ವಿಕಿಸೋರ್ಸ್ದಿಂದ

ಕರ್ನಾಟಕ ರಾಜ್ಯದ ದಾವಣಗೆರೆ ನಗರದ ನಿವಾಸಿಯಾದ ನಾನು ರಕ್ಷಂದ.ಎಚ್.ಎಂ. ನನ್ನ ಜನ್ಮ ದಿನಾಂಕ ಜನವರಿ ೭, ೧೯೯೭. ನನ್ನ ತಂದೆ ಉಮೇಶ.ಎಚ್.ಎಂ, ಕೈಗಾರಿಕೋದ್ಯಮಿ. ನನ್ನ ತಾಯಿ ಪ್ರೇಮ.ಎಚ್.ಎಂ, ಗೃಹಿಣಿ. ನಾನು ಪ್ರಾಥಮಿಕ ಶಿಕ್ಷಣವನ್ನು ೧ನೇ ತರಗತಿಯಿಂದ ೧೦ನೇ ತರಗತಿಯವರೆಗೇ ದಾವಣಗೆರೆ ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ, ೧೦ನೇ ತರಗತಿಯಲ್ಲಿ ಸಿ.ಬಿ.ಎಸ್.ಸಿಯಲ್ಲಿ ಶೇಕಡ ೯೫% ರಷ್ಟು ಗಳಿಸಿ ತೇರ್ಗಡೆ ಹೊಂದಿದ್ದೇನೆ. ಪ್ರಥಮ ಪಿ.ಯು.ಸಿ ಯನ್ನು ನೂತನ ಪದವಿ ಪೂರ್ವ ಕಾಲೇಜಿನಲ್ಲಿ ೨೦೧೪ ರಲ್ಲಿ ಶೇಕಡ ೯೧% ಅಂಕಗಳನ್ನು ಪಡೆದು ಹಾಗು ದ್ವಿತೀಯ ಪಿ.ಯು.ಸಿ ಯನ್ನು ಶ್ರೀ ವೈಷ್ನವಿ ಚೇತನ ವಿದ್ಯಾಸಂಸ್ಥೆಯಲ್ಲಿ ೨೦೧೫ರಲ್ಲಿ ೯೩% ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರುವೆನು. ಪ್ರಸ್ತುತ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ(ಪಿ.ಎಂ.ಇ) ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು ಸಂಗೀತವನ್ನು ಆಲಿಸುವುದು, ಬಾಡ್ಮಿಂಟನ್ ಆಟ ಆಡುವುದು. ಶಾಸ್ತ್ರೀಯ ನೃತ್ಯವಾದ ಭರತನಾಟ್ಯವನ್ನು ಸತತ ೧೨ ವರುಷಗಳಿಂದ ಅಭ್ಯಸಿಸುತ್ತಿದ್ದೇನೆ. ಜೊತೆ ಜೊತೆಗೆ ಶಾಸ್ರ್ತೀಯ ಸಂಗೀತ, ಸುಗಮ ಸಂಗೀತವನ್ನು ಅಭ್ಯಸಿಸಿದ್ದೇನೆ.

     ಭರತನಾಟ್ಯದ ಜೂನಿಯರ್ ವಿಭಾಗದಲ್ಲಿ ಶೇಕಡ ೮೯%ರಷ್ಟು ಅಂಕಗಳನ್ನು ಗಳಿಸಿ ಮತ್ತು ಸೀನಿಯರ್ ವಿಭಾಗದಲ್ಲಿ ಶೇಕಡ ೮೨%ರಷ್ಟು ಅಂಕಗಳನ್ನು ಪಡೆದು ತೇಗಡೆ ಹೊಂದಿರುವೆನು. ಕರ್ನಾಟಕದಾದ್ಯಂತ ಏಕ ವ್ಯಕ್ತಿ ಹಾಗು ಸಾಮೂಹಿಕ ನೃತ್ಯ ಪ್ರದರ್ಶನಗಳನ್ನು ನೀಡಿರುವೆನು. ನನ್ನ ಮೊಟ್ಟ ಮೊದಲನೇ ಪ್ರದರ್ಶನ ಚಿರಂತನ ಸಂಸ್ಥೆಯ ವಾಷಿಕೋತ್ಸವದಲ್ಲಿ(೦೭.೦೫.೨೦೦೩). ನನ್ನ ಪ್ರಮುಖ ನೃತ್ಯ ಪ್ರದರ್ಶನಗಳು-ಬೆಳಗಾವಿಯಲ್ಲಿ ೧೧.೦೩.೨೦೧೧ ಜರುಗಿದ ವಿಶ್ವಕನ್ನಡ ಸಮ್ಮೇಳನ, ಕಾಸರಗೋಡುವಿನಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನ, ವಿಶ್ವ ವಿಖ್ಯಾತ ಮೈಸೂರು ದಸರ-೨೦೦೯, ಹಲವಾರು. ಜೆಲ್ಸ್ ಅಬಾಕಸ್ ಸಂಸ್ಥೆ ನೀಡುವ "ಎಕ್ಸಲೆನ್ಸಿ ಪ್ರಶಸ್ತಿ", ಬಾಲಭವನ ಬೆಂಗಳೂರು ನೀಡುವ "ಕಲಾಶ್ರೀ ಪ್ರಶಸ್ತಿ", "ಶ್ರೀ ಜಯದೇವ ಪ್ರತಿಭಾವಂತ ವಿದ್ಯಾರ್ಥಿನಿ ಪ್ರಶಸ್ತಿ-೨೦೧೪", "ಅಸಾಧಾರಣ ಪ್ರತಿಭೆ-೨೦೧೨" ಗಳಿಗೆ ಭಾಜನಳಾಗಿದ್ದೇನೆ. ಪ್ರಖ್ಯಾತ "ಕಸ್ತೂರಿ" ಕನ್ನಡ ವಾಹಿನಿಯ "ಕಾಮನಬಿಲ್ಲು"  ಕಾರ್ಯಕ್ರಮದಲ್ಲಿ ಸಂದರ್ಶನ ಹಾಗು ನೃತ್ಯ ಪ್ರದರ್ಶನ(೧೯.೧೦.೨೦೦೭), ದಾವಣಗೆರೆ ನಗರದ ಕೇಬಲ್ ನೆಟ್ವರ್ಕನ ಸೃಷ್ಠಿ ವಾಹಿನಿಯ "ಬೆಳೆಯುವ ಸಿರಿ" ಕಾರ್ಯಕ್ರಮದಲ್ಲಿ ಸಂದರ್ಶನ ಹಾಗು ನೃತ್ಯ ಪ್ರದರ್ಶನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ವಲಯ ಮಟ್ಟಕ್ಕೆ ತೇರ್ಗಡೆ, ಬೆಂಗಳೂರಿನ ಪ್ರಸಿದ್ಧ  ಇಸ್ಕಾನ ಮಂದಿರ ವತಿಯಿಂದ ನಡೆದ "ಹೆರಿಟೇಜ್ ಫ಼ೆಸ್ಟಿವಲ್" ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಶ್ರೀ ಶಂಕರ ವಾಹಿನಿಯವರು ಆಯೋಜಿಸಿದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದವುಗಳು.ಇದಲ್ಲದೆ ಭಾರತದ ಎಲಾ ರಾಜ್ಯಗಳ ಜಾನಪದ ನೃತ್ಯ ಶೈಲಿಗಳನ್ನು ತರಬೇತಿ ಪಡೆದಿದ್ದೇನೆ. ಇದಲ್ಲದೆ ದಾವಣಗೆರೆಯ ಅಮೃತ ವಿದ್ಯಾಲಯಂ ಶಾಲೆಯ ಶಿಕ್ಷಕ ಹಾಗೂ ಆಡಳಿತ ವರ್ಗದವರು ಏರ್ಪಡಿಸಿದ "ಅಮಲ ಭಾರತ ಸ್ವಚ್ಚತಾ ಆಂದೋಲನ"ದಲ್ಲಿ ಪಲ್ಗೊಂಡಿದ್ದೆನು. 
    ನನ್ನ ಒಲವು ವಿಜ್ನಾನದ ಕಡೆಗೆ ಆಗಿದ್ದರಿಂದ, ನಾನು ಕರ್ನಾಟಕದ ಹೆಸರಾಂತ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ನನ್ನ ಗುರಿ. ಸಮಾಜಕ್ಕೆ ಹಾಗು ದೇಶಕ್ಕೆ ನನ್ನಿಂದಾಗುವ ಒಳಿತನ್ನು ಮಾಡಬೇಕು, ಬಡವರಿಗೆ ಅವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವುದು ನನ್ನ ಆಕಾಂಕ್ಷೆ. ನಮ್ಮ ದೇಶದ ಉತ್ತಮ ಪ್ರಜೆಯಾಗುವುದು ನನ್ನ ಧ್ಯೇಯ.


This user is a member of WikiProject Education in India

ಉಪಪುಟಗಳು[ಸಂಪಾದಿಸಿ]

In this ಸದಸ್ಯspace:

ಸದಸ್ಯ:
Rakshanda HM
ಸದಸ್ಯರ ಚರ್ಚೆಪುಟ: