ವಿಷಯಕ್ಕೆ ಹೋಗು

ಸದಸ್ಯ:Ruben joushuva

ವಿಕಿಸೋರ್ಸ್ದಿಂದ
 ಮಾನವನಿಗೆ ಹುಟ್ಟು ಸಾವುಗಳು ಸಹಜ.ಆದರೆ ಹುಟ್ಟಿದ ಮೇಲೆ ಅವನ ಜೀವನ ಸೊಗಸಾಗಿರಬೇಕು ಎಲ್ಲರೂ ಮೆಚ್ಚುವಂತಿರಬೇಕು.ಆಗ ಹುಟ್ಟಿದ್ದು ಸಾರ್ಥಕ.
          ನನ್ನ ಹೆಸರು ರೂಬೆನ್.ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮೊದಲನೇ ವಷ‍ದ ಬಿ.ಕಾಂ,ವಿದ್ಯಾರ್ಥಿ.ನನ್ನ ತಂದೆಯ ಹೆಸರು ಚಿನ್ನರಾಜ ಜೋಶುವ,ತಾಯಿ ಸುಮತಿ,ಇವರ ಮುದ್ದಿನ ಮಗನಾಗಿ ದಿನಾಂಕ ೨೯-೧೨-೧೯೯೬ರಂದು ಜನಿಸಿದೆ.ನನಗೆ ಒಬ್ಬ ಅಕ್ಕ,ಅವರ ಹೆಸರು ರೂಬಿ,ಪದವಿಧರೆ.
         
           ನನ್ನ ತಂದೆ ಖಾಸಗಿ ಕಂಪನಿ ಒಂದರಲ್ಲಿ ಟೆಂಪೋ ಚಾಲಕರು.ತಾಯಿ ಗೃಹಿಣಿ.ತಂದೆ ತಾಯಿಗಳು ಸುಸಂಸ್ಕೃತರು,ಬಾಲ್ಯದಲ್ಲಿ ನಾನು ತುಂಬಾ ತುಂಟನಾಗಿದ್ದೆ.ಆದ್ದರಿಂದ ತಂದೆತಾಯಿಗಳಿಂದ ನಾನು ಬಹಳ ಸಾರಿ ಶಿಕ್ಷೆಗೆ ಒಳಗಾಗಿದ್ದಂತು ಮರೆಯಲಾಗದು.ನಾನು ಪ್ರಾಥಮಿಕ ಶಾಲೆಯನ್ನು ಬೆಂಗಳೂರಿನ ಶ್ರೀನಿವಾಸ ನಗರ ಇಟ್ಟುಮಡುಗುವಿನಲ್ಲಿರುವ ವೆಬ್ ಸ್ಟರ್ಸ್ ಪ್ರೌಢಶಾಲೆಯಲ್ಲಿ ಮುಗಿಸಿದೆ.ಆಗ ನನಗೆ ತುಂಬಾ ಜನ ಸ್ನೇಹಿತರು ನನ್ನ ನೆಚ್ಚಿನ ತರಗತಿ ಶಿಕ್ಷಕರೊಂದಿಗೆ ನನ್ನ ಒಂದು ಗ್ರೂಪ್ ಫೋಟೊ ಈಗಲೂ ನನ್ನ ಬಳಿ ಇದೆ.
         
           ನನಗೆ ಪುಸ್ತಕ ಓದುವ ಹವ್ಯಾಸ ಇದೆ.ಕನ್ನಡದ ಕತೆಗಳೆಂದರೆ ನನಗೆ ತುಂಬಾ ಇಷ್ಟ,ಅವುಗಳಲ್ಲಿ "ಅರೇಬಿಯನ್ ನೈಟ್ಸ್ ಕಥೆಗಳು" "ತೆನಾಲಿರಾಮಕೃಷ್ಣ ಕಥೆಗಳು".ಕೆಲವೊಂದು ರಹಸ್ಯಗಳನ್ನು ತಿಳಿಸುವ ಕಥೆಗಳಿಂದ ಓದುವ ಆಸಕ್ತಿಯನ್ನು ಬೆಳೆಸಿಕೊಂಡೆ.ಮತ್ತು ಜ್ಙಾನವನ್ನು ಬೆಳೆಸಿಕೊಂಡೆ.ಓದುವ ಹವ್ಯಾಸ ಹೆಚ್ಚಾಯಿತು.
          
           ನಾನು ಹತ್ತನೇ ತರಗತಿಯನ್ನು ಮುಗಿಸಿ ನನ್ನ ಸ್ನೇಹಿತರ ಇಚ್ಚೆಯಂತೆ ಡಿಪ್ಲಮೋ ಸೇರಿಕೊಂಡೆ.ಆದರೆ ಸರಿಯಾಗಿ ಕ್ಲಾಸಿಗೆ ಹೋಗದ ಕಾರಣ ಪ್ರಥಮ ವರ್ಷದಲ್ಲಿ ಫೆಲಾದೆ.ಇದರಿಂದ ಬೇಸರಗೊಂಡು,ತಂದೆತಾಯಿಯರ ಮಾತಿನಂತೆ ಪಿಯುಸಿ ಕಾಮಸ್ ಸೇರಿದೆ.ಚೆನ್ನಾಗಿ ಓದಿ ಉತ್ತಮ ಅಂಕಗಳಿಂದ ಪಾಸಾದೆ.ತಂದೆತಾಯಿಗಳ ಮಾತನ್ನು ಕೇಳದೆ ಒಂದು ವಷ‍ವನ್ನು ಹಾಳುಮಾಡಿಕೊಂಡಿದ್ದು ನನಗೆ ತುಂಬಲಾರದ ನೋವನ್ನುಂಟು ಮಾಡಿದೆ.ಆದರೆ ಈಗ ಓಳ್ಳೆಯ ಕಾಲೇಜಿನಲ್ಲಿ ನನಗೆ ಸೀಟು ಸಿಕ್ಕಿದ್ದು ಅದನ್ನೆಲ್ಲಾ ಮರೆಯಿಸಿದೆ.
         
           ಈಗ ನಾನು ಓದುತ್ತಿರುವ ಕಾಲೇಜು ತುಂಬಾ ಸೊಗಸಾಗಿದೆ.ಉತ್ತಮ ಕ್ಯಾಂಪಸ್,ಓಳ್ಳೆಯ ವಾತಾವರಣ,ಉತ್ತಮ ಪ್ರಾಧ್ಯಾಪಕರು,ಉತ್ತಮವಾದ ಕಟ್ಟುನಿಟ್ಟಿನ ವ್ಯವಸ್ಥೆ,ಪರೀಕ್ಷೆ ವ್ಯವಸ್ಥೆ ಕೂಡಾ ತುಂಬಾ ಆಸಕ್ತಿದಾಯಕವಾಗಿದೆ.ಇಂತಹ ಕಾಲೇಜಿನಲ್ಲಿ ನನಗೆ ಸೀಟು ಸಿಕ್ಕಿದ್ದು ನನ್ನ ಅದೃಷ್ಟ.ಏಕೆಂದರೆ ನಾನು ಮುಂದೆ ಎಂ.ಬಿ.ಎ ಓದಬೇಕೆಂದು ನನ್ನ ಹಂಬಲ.ಅದಕ್ಕೆ ಪೂರಕವಾದ ಶಿಕ್ಷಣ ಈಗ ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ದೊರೆಯುತ್ತಿರುವುದು ನನ್ನ ಅದೃಷ್ಟವೆಂದೇ ಹೇಳಬಹುದು.
          
           ಜೀವನದಲ್ಲಿ ಸಾಧನೆ ಮುಖ್ಯ.ಆದರೆ ಸಾಧಿಸುವ ಛಲ ನಮ್ಮಲ್ಲಿರಬೇಕು,ಅಂದಾಗ ಮಾತ್ರ ನಾವು ನಮ್ಮ ಗುರಿಯನ್ನು ಮುಟ್ಟಬಹುದು.ನನಗೆ ದೊರೆಯುತ್ತಿರುವ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಸಾಧಿಸುವ ನನ್ನ ಪ್ರಯತ್ನದಲ್ಲಿ ಗುರುಹಿರಿಯರ ಮತ್ತು ದೇವರ ಕೃಪೆ ಆಶೀವಾದವಿರಲಿ ಎಂಬುದೇ ನನ್ನ ಪ್ರಾರ್ಥನೆ.