ವಿಷಯಕ್ಕೆ ಹೋಗು

ಸದಾಚಾರದಲ್ಲಿ ನಡೆವವನ ಶಿವನಲ್ಲಿ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಸದಾಚಾರದಲ್ಲಿ ನಡೆವವನ ಶಿವನಲ್ಲಿ ಭಕ್ತಿಯಾಗಿಪ್ಪವನ ಶಿವಲಾಂಛನವ ಕಂಡಲ್ಲಿ ವಂದನೆಗೈವುತಿಪ್ಪವನ ಲಿಂಗ ಜಂಗಮವ ಒಂದೇ ಭಾವದಲ್ಲಿ ಕಂಡು ಭೃತ್ಯಾಚಾರ ಸದಾಚಾರಯುಕ್ತನಾಗಿರಬಲ್ಲರೆ ಭಕ್ತನ ಸ್ಥಲವಿದೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.