ವಿಷಯಕ್ಕೆ ಹೋಗು

ಸದ್ರೂಪವೇ ಸಂಗನಬಸವಣ್ಣ ನೋಡ.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಸದ್ರೂಪವೇ ಸಂಗನಬಸವಣ್ಣ ನೋಡ. ಚಿದ್ರೂಪವೇ ಚೆನ್ನಬಸವಣ್ಣ ನೋಡ. ಆನಂದ ಸ್ವರೂಪವೇ ಪ್ರಭುದೇವರು ನೋಡ. ಇದು ಕಾರಣ
ಸದ್ರೂಪವಾದ ಸಂಗನ ಬಸವಣ್ಣನೇ ಗುರು; ಚಿದ್ರೂಪವಾದ ಚೆನ್ನಬಸವಣ್ಣನೇ ಲಿಂಗ; ಆನಂದಸ್ವರೂಪವಾದ ಪ್ರಭುದೇವರೇ ಜಂಗಮವು ನೋಡ. ನಿತ್ಯ ನಿರಂಜನ ಪರತತ್ವ ತಾನೆ ಮೂರು ತೆರನಾಯಿತ್ತು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.