ಸಪ್ತದ್ವೀಪದ ಮಧ್ಯದಲ್ಲಿ ಇಪ್ಪತ್ತೆ ೈದು ಕೊನೆಯ ವೃಕ್ಷವ ಕಂಡೆನಯ್ಯ. ಎಂಟರಾದಿಯಲ್ಲಿ ನಿಂದು ಏಳರ ನೀರನಲ್ಲಿ ಬೆಳೆದು ಆರರ ಭ್ರಮೆಯಲ್ಲಿ ಮುಳುಗಿ ಮೂಡುತ್ತಿಹುದು. ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಯ್ಯ. ಎಲೆ ಹೂವು ಫಲವು ಹಲವಾಗಿಪ್ಪುದಯ್ಯ. ಸಪ್ತದ್ವೀಪವೂ ಅಲ್ಲ; ಇಪ್ಪತ್ತೆ ೈದು ಕೊನೆಯೂ ಅಲ್ಲ; ಎಂಟಲ್ಲ
ಏಳಲ್ಲ
ಆರರ ಭ್ರಮೆಯಲ್ಲ; ಹತ್ತರ ಹಾದಿಯಲ್ಲಿ ಹರಿದು ಹಬ್ಬಿ ಕೊಬ್ಬುವುದಿಲ್ಲ; ಎಲೆ ಹೂವು ಫಲವು ಹಲವಾಗಿ ತೋರುವ ತೋರಿಕೆ ತಾನಲ್ಲವೆಂದು ನಡುವಣ ವೃಕ್ಷದ ನೆಲೆಯ ನಿರ್ಣಯವ ತಿಳಿದಾತನಲ್ಲದೆ ಸಲೆ ಶಿವಶರಣನಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.