ಸಪ್ತಧಾತುಗಳಿಂದ ಬಳಸಲ್ಪಟ್ಟ ಈ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಪ್ತಧಾತುಗಳಿಂದ
ಬಳಸಲ್ಪಟ್ಟ

ಶರೀರವೆ
ಶಿವನ
ಪಟ್ಟಣವೆಂದು
ಹೇಳಲ್ಪಟ್ಟಿತ್ತು.

ಪಿಂಡವೆಂಬ
ಪಟ್ಟಣದಲ್ಲಿ
ಸೂಕ್ಷ್ಮವಾದಂಥಧಾರಾಕಾಶದಿಂದ
ಮನೋಹರವಾಗಿದ್ದ
ಹೃದಯಕಮಲವೆ
ಅಂತಃಪುರವು.
ಅಲ್ಲಿ
ನಿತ್ಯಪರಿಪೂರ್ಣತ್ವದಿಂದ
ಸಿದ್ಧನಾಗಿ
ಸಚ್ಚಿದಾನಂದವೇ
ಕುರುಹಾಗುಳ್ಳ
ಪರಮಶಿವನು
ಜಲದಲ್ಲಿ
ತೋರುತ್ತಿರ್ದ
ಆಕಾಶದೋಪಾದಿಯಲ್ಲಿ
ಪ್ರತ್ಯಕ್ಷವಾಗಿ
ಪ್ರಕಾಶವೇ
ಸ್ವರೂಪವಾಗುಳ್ಳಾತನಾಗಿ
ಇರುತಿರ್ದನು.

ಜಲಮಧ್ಯದಲ್ಲಿಯ
ಆಕಾಶ
ಬಿಂಬದಲ್ಲಿರುತಿರ್ದ
ಘಟಾಕಾಶದೋಪಾದಿಯಲ್ಲಿ
[ಅ]ಖಂಡಿತನಾಗಿರ್ದ
ಚಿದ್ರೂಪನಾದ
ಶಿವನನು
ಭಾವಿಸುವುದಯ್ಯ
ಶ್ರೀ
ಚೆನ್ನಮಲ್ಲಿಕಾರ್ಜುನದೇವಾ.