ಸಮತೆ ಎಂಬ ಕಂಥೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಮತೆ ಎಂಬ ಕಂಥೆ ತೊಟ್ಟು
ಸುಬುದ್ಧಿ ಎಂಬ ಟೊಪ್ಪರವನಿಕ್ಕಿ
ವಿಷಯವೆಂಬ ಹಾವುಗೆಯ ಮೆಟ್ಟಿ
ತಮಂಧವೆಂಬ ಕುಳಿಯ ಬೀಳದೆ
ಕ್ರೋಧವೆಂಬ ಕೊರಡ ಎಡಹದೆ
ಮದವೆಂಬ ಚೇಳ ಮೆಟ್ಟದೆ ಗುಹೇಶ್ವರನ ಶರಣ ಬಂದೆನು
ಭಕ್ತಿಭಿಕ್ಷವನಿಕ್ಕೈ ಸಂಗನಬಸವಣ್ಣಾ.