ಸಮತೆ ಸನ್ಮತದಿಂದ ನಿಜಗುಣಕಾರಣದಿಂದ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಸಮತೆ ಸನ್ಮತದಿಂದ ನಿಜಗುಣಕಾರಣದಿಂದ ಸತ್ವರಜಸ್ತಮದ ಕ್ರೋಧ ಉಳಿಯದನ್ನಕ್ಕರ ಅನುಭಾವವೆಲ್ಲಿಯದೊ ಆತ್ಮಸ್ತುತಿ
ಪರನಿಂದೆ
ಅಸಹ್ಯ
ಅನೃತ
[ಕು]ತರ್ಕ ಉಡುಗದನ್ನಕ್ಕರ ಅನುಭಾವವೆಲ್ಲಿಯದೊ ಅರಿಷಡ್ವರ್ಗ ದಶವಾಯುಗಳ ವಿಕಳ ಅಪಾನ ಬಿಡದನ್ನಕ್ಕರ ಅನುಭಾವವೆಲ್ಲಿಯದೊ ಮದ ಮತ್ಸರ ವೈತಾಳ ಸಂವಾದವಲ್ಲದೆ ಅನುಭಾವವೆಲ್ಲಿಯದೊ ಸಮತೆ
ಸಜ್ಜನಿಕೆ
ಸಮಯಾಚಾರದ ನಿಜಪದವು ದುರಾಚಾರಿಗಳಿಗಳವಡುವುದೆ ನಮ್ಮ ಕೂಡಲಸಂಗನ ಶರಣರಿಗಲ್ಲದೆ ಅನುಭಾವವೆಲ್ಲರಿಗೆಲ್ಲಿಯದೊ