ವಿಷಯಕ್ಕೆ ಹೋಗು

ಸಮರತಿ ಸಮಸಂಧಾನದ ಸಂಗಸುಖವು

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಸಮರತಿ ಸಮಸಂಧಾನದ ಸಂಗಸುಖವು ನಿನ್ನಿಂದಲೆನಗೆ ಸಾಧ್ಯವಾಯಿತ್ತಲ್ಲದೆ
ಎನಗೆ ತೋರಿದಪರಾರು ಹೇಳಾ ಲಿಂಗೈಕ್ಯದ ಹೊಲಬ ಕೂಡಲಸಂಗಮದೇವರ ಶರಣ ಪ್ರಭುದೇವರಲ್ಲಿ ನೀನೆನ್ನನಿರಿಸದನ್ನಕ್ಕರ
ನಾನು ಬಲ್ಲನೆ ಹೇಳಾ.