ಸರ್ವಾಂಗವನು ಲಿಂಗನಿಷೆ*ಯಿಂದ ಘಟ್ಟಿಗೊಳಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸರ್ವಾಂಗವನು ಲಿಂಗನಿಷೆ*ಯಿಂದ ಘಟ್ಟಿಗೊಳಿಸಿ ಮನವ ಉನ್ಮನಿಯಾವಸ್ಥೆಯನೆಯ್ದಿಸಿ ಶತಪತ್ರದಲ್ಲಿ ಸೈತಿಟ್ಟು ಲಿಂಗಕ್ಕೆ ಅರ್ಪಿಸಿದ ನೈವೇದ್ಯದ ಲಿಂಗ ನೆನಹಿನಲ್ಲಿಯೆ ಸ್ವೀಕರಿಸುವುದು ಅಂಗಾರ್ಪಿತವ ವಿಸರ್ಜಿಸುವುದಯ್ಯ. ತಟ್ಟುವ ಮುಟ್ಟುವ ಸೋಂಕುವ ವರ್ಮವನರಿದು ಲಿಂಗಮುಖಕ್ಕೆ ನಿವೇದಿಸಿ ಲಿಂಗಪ್ರಸಾದವ ಸ್ವೀಕರಿಸುತಿರಬಲ್ಲರೆ ಪ್ರಸಾದಿಸ್ಥಳವಿದೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.