ಸಹಜ ಸಂಬಂಧಾಚಾರದ ನಿರ್ಣಯವನಿಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಸಹಜ ಸಂಬಂಧಾಚಾರದ ನಿರ್ಣಯವನಿಲ್ಲಿ ಹೇಳಿಹೆ ಕೇಳಿರಯ್ಯಾ: ಪ್ರತ್ಯಕ್ಷವಾಗಿ ಜಂಗಮವೆ ಭಕ್ತನ ಮಠಕ್ಕೆ ಬಿಜಯಂಗೈಯೆ ನೂರು ಮಂದಿಯಲ್ಲಿ ಮೂರು ಮಂದಿ ಇರ್ಪರೆಂಬಂತೆ
ಆ ಜಂಗಮದಲ್ಲಿ ಗುರು ಲಿಂಗಗಳುಂಟೆಂದು ತಿಳಿದು ತ್ರಿವಿಧ ಪಾದೋದಕವನಲ್ಲಿ ಪಡೆವುದು_ ಇದೇ ಸದಾಚಾರ. ಆ ಜಂಗಮವಿಲ್ಲದೆ ಗುರು ಒರ್ವನೆ ಬಿಜಯಂಗೈಯೆ
ಆ ಗುರುವಿನಲ್ಲಿ ವಿಧಿಗನುಗುಣವಾಗಿ ಜಂಗಮವನನುಸಂಧಾನಿಸಿ ಗುರುವಿನಲ್ಲಿ ಲಿಂಗವು ಸಹಜವಾಗಿರ್ಪುದರಿಂದ ಅಲ್ಲಿ ತ್ರಿವಿಧೋದಕವ ಪಡೆವುದು_ಇದೊಂದು ಸಹಜಸಂಬಂಧವು. ಗುರುಜಂಗಮರಿರ್ವರೂ ಸಮಯಕ್ಕೊದಗದಿರ್ಪಲ್ಲಿ ಆ ಗುರುಜಂಗಮವ ತನ್ನ ಇಷ್ಟಲಿಂಗದಲ್ಲಿ ಕ್ರಮವರಿತು ಅನುಸಂಧಾನಿಸಿ ಅಲ್ಲಿ ತ್ರಿವಿಧೋದಕವ ಪಡೆವುದು_ ಇದೊಂದು ಕೇವಲ ಸಂಬಂಧವು. ಇಂತೀ ಸಹಜಸಂಬಂಧದ ಭೇದವನರಿದು
ಅರಿದಂತಾಚರಿಸಿ ನಮ್ಮ ಶರಣರು ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಸುಖಿಗಳಾದರು.