ಸಹಭಾಜನ ಸಹಭೋಜನವೆಂದೆಂಬರು. ಭಾಜನವಾವುದು ಭೋಜನವಾವುದು ಎಂದರಿಯರು. ಭಾಜನವೆ ಅಂಗ ಭೋಜನವೆ ಲಿಂಗ ! ಭಾಜನಸಹಿತ ಭೋಜನಮಾಡುವ ಹಿರಿಯರು ಭಾಜನವನಿರಿಸಿ ಹೋದಡೆ ಅದೆ ಭಂಗ_ಗುಹೇಶ್ವರಾ