ವಿಷಯಕ್ಕೆ ಹೋಗು

ಸಹಸ್ರದಳದಲ್ಲಿ ಸಚ್ಚಿದಾನಂದ ನಿತ್ಯ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಸಹಸ್ರದಳದಲ್ಲಿ ಸಚ್ಚಿದಾನಂದ ನಿತ್ಯ ಪರಿಪೂರ್ಣ ಸರ್ವಜ್ಞನು ಅನಂತಕೋಟಿ ಸೋಮ ಸೂರ್ಯರ ಬೆಳಗು ನೋಡಾ. ಸಾವಿರದೈವತ್ತೆರಡುಯೆಸಳಿನಲ್ಲಿ ತಾನಾಗಿ ತೊಳಗಿ ಬೆಳಗುವ ಏಕಮೇವಾದ್ವಿತೀಯನ ಪ್ರಸಾದದುದಯ ನೋಡಾ. ಆ ಪರಮ ಪ್ರಸಾದಗ್ರಾಹಕನಾಗಿ ಶುದ್ಧ ಶಿವಯೋಗಿಯಾದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.