ಸಹಸ್ರದಳ ಮಂಡಲತ್ರಯ. ಕಮಲಮಧ್ಯದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಹಸ್ರದಳ
ಕಮಲಮಧ್ಯದಲ್ಲಿ
ಪಂಚಪತ್ರ.

ಪಂಚಪತ್ರದ
ಮಧ್ಯದಲ್ಲಿ
ಮಂಡಲತ್ರಯ.

ಮಂಡಲತ್ರಯ
ಮಧ್ಯದಲ್ಲಿ
ಪ್ರಣವಪೀಠ.

ಪ್ರಣವಪೀಠದ
ಮೇಲೆ
ಮೂರ್ತಿಗೊಂಡು
ಬೆಳಗುವ
ನಿಮ್ಮ
ದಿವ್ಯ
ಮೂರ್ತಿಯ
ಕಂಡು
ಹರುಷಿತನಾದೆನಯ್ಯಾ
ಅಖಂಡೇಶ್ವರಾ.