ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು
ಹೊಸ ಲೇಖನವನ್ನು ಪ್ರಾರಂಭ ಮಾಡುವ ಮುನ್ನ ಆ ವಿಷಯದ ಬಗ್ಗೆ ಈಗಾಗಲೇ ವಿಕಿಸೋರ್ಸಿದಲ್ಲಿ ಲೇಖನ ಇಲ್ಲವೆಂಬುದನ್ನು ಖಾತರಿ ಪಡಿಸಿಕೊಳ್ಳಿ. ವಿಕಿಸೋರ್ಸಿನ ಸರ್ಚ್ (ನಿಮ್ಮ್ ಎಡಕ್ಕಿರುವ ಮೆನು, ಸೈಡ್ ಬಾರ್ ನೋಡಿ) ವ್ಯವಸ್ಥೆ ಬಳಸಿ ನೀವು ಪ್ರಾರಂಭಿಸಬೇಕೆಂದಿರುವ ಲೇಖನ ವಿಷಯವನ್ನು ಹುಡುಕಿ ನೋಡಿ.
ಸರ್ಚ್ ಮಾಡುವಾಗ ನೆನಪಿಟ್ಟುಕೊಳ್ಳಬೇಕಾದ ವಿಷಯಗಳು
[ಸಂಪಾದಿಸಿ]ಸರ್ಚ್ ಮಾಡುವಾಗ ತೀರ ಕನ್ನಡವಲ್ಲದ ಶಬ್ದಗಳ ಎಲ್ಲ ಬಳಕೆಗಳನ್ನೂ ಸರ್ಚ್ ಮಾಡಿ ನೋಡಿ. ಉದಾಹರಣೆಗೆ ನಾಗಾಲ್ಯಾಂಡ್ ಮತ್ತು ನಾಗಲ್ಯಾಂಡ್.
ಹೊಸ ಲೇಖನವನ್ನು ಪ್ರಾರಂಭಿಸುವುದು
[ಸಂಪಾದಿಸಿ]'ಹುಡುಕು' (search) ಬಾಕ್ಸ್ ಒಳಗೆ ನೀವು ಪ್ರಾರಂಭಿಸಬೇಕೆಂದಿರುವ ಲೇಖನದ ಹೆಸರನ್ನು ಟೈಪ್ ಮಾಡಿ 'ಹೋಗು' (Go) ಬಟನ್ ಅನ್ನು ಒತ್ತಿ. ಈಗಾಗಲೇ ಆ ಲೇಖನ ಇದ್ದರೆ, ನಿಮ್ಮನ್ನು ಆ ಲೇಖನಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದಲ್ಲಿ, "There is no page titled "<<ಲೇಖನದ ಹೆಸರು>>". You can create this page." ಎಂಬ ಸಂದೇಶ ಬರುತ್ತದೆ. ಸಂದೇಶದೊಂದಿಗೆ ಬಂದಿರುವ ಕೆಂಪಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ, ಹೊಸ ಲೇಖನವನ್ನು ಪ್ರಾರಂಭಿಸುವ ಪುಟಕ್ಕೆ ಹೋಗಬಹುದು.
ಗಮನಿಸಿ:
- ಚಲನಚಿತ್ರ ಸಾಹಿತ್ಯದ ಲೇಖನ ಬರೆಯುವಾಗ ಲೇಖನದ ಹೆಸರು ಈ ಮಾದರಿಯಲ್ಲಿರಲಿ: <<ಚಲನಚಿತ್ರದ ಹೆಸರು>> - <<ಹಾಡಿನ ಮೊದಲ ಪದಗಳು>>
ಉದಾ: ಚಲಿಸುವ ಮೋಡಗಳು - ಜೇನಿನ ಹೊಳೆಯೊ ಹಾಲಿನ ಮಳೆಯೋ ಅಥವಾ ಚಲಿಸುವ ಮೋಡಗಳು - ಜೇನಿನ ಹೊಳೆಯೊ
- ಯಾವುದೇ ಸಾಹಿತ್ಯದ ಪುಟ ಪ್ರಾರಂಭಿಸಿದರೂ, ಅದನ್ನು ಆಯಾ ವರ್ಗಕ್ಕೆ ಸೇರಿಸುವುದನ್ನು ಮರೆಯಬೇಡಿ (ಉದಾ: ಭಕ್ತಿಗೀತೆಗಳು, ಭಾವಗೀತೆಗಳು, ನಾಡಗೀತೆಗಳು, ಶಿಶುಸಾಹಿತ್ಯ, ಚಲನಚಿತ್ರ ಸಾಹಿತ್ಯ ಇತ್ಯಾದಿ).
ಎಲ್ಲಾ ವರ್ಗಗಳ ಪಟ್ಟಿಗೆ ಈ ಪುಟ ನೋಡಿ: Special:Categories