ಸಾಕುಮಾಡದು ಶಿವಶಿವಾ, ಭವಬಂಧನಂಗಳ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಾಕುಮಾಡದು ಭವಬಂಧನಂಗಳ
ನೂಕಿಬಿಡದು ಸಕಲಸಂಸಾರವ
ಬೇಕೆಂದೆಳಸುವುದು ವಿಷಯಭೋಗಕ್ಕೆ
ಶಿವಶಿವಾ
ಈ ಕಾಕುಮನಕ್ಕೆ ಏನುಮಾಡಲಿ ? ಹರಹರಾ
ಈ ಕಳ್ಳಮನಕ್ಕೆ ಎಂತುಮಾಡಲಿ ? ಅಖಂಡೇಶ್ವರಾ
ನಿಮ್ಮ ಕೃಪಾವಲೋಕನದಿಂದ ನೋಡಿ ಪಾಲಿಪುದಯ್ಯ ಎನ್ನ
ನಿಮ್ಮ ಧರ್ಮ ನಿಮ್ಮ ಧರ್ಮ.