ಸಾಯುವರ ಸತ್ತವರು ಹೊತ್ತರು ತಲೆಯಿಲ್ಲದವರತ್ತರು ಕೈಯಿಲ್ಲದವರು ಹಿಡಿದರು ಕಾಲಿಲ್ಲದವರು ಕೊಂಡೊಯ್ದರು ಕಣ್ಣಿಲ್ಲದವರು ಕಂಡರು ಕಿವಿಯಿಲ್ಲದವರು ಕೇಳಿದರು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣರು ಸರ್ವಾಂಗಲಿಂಗಿಗಳು !