ವಿಷಯಕ್ಕೆ ಹೋಗು

ಸಾರಾಯ ಪದಾರ್ಥವನಾರಯ್ಯಾ ಅರಿವರು

ವಿಕಿಸೋರ್ಸ್ದಿಂದ


ಲೇಖಕರು: ChennaBasavanna
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya


ಸಾರಾಯ ಪದಾರ್ಥವನಾರಯ್ಯಾ ಅರಿವರು ? ಆರರಿಂದ ಬೇರೆ ತೋರಲಿಲ್ಲೆನಿಸಿತ್ತು. ಹೆಸರೆನಿಸಿಕೊಂಬಡೆ ಹೆಸರು ಮುನ್ನಿಲ್ಲ
ಹೆಸರೆಲ್ಲವೂ ಪರಿಣಮಿಸಲಾಯಿತ್ತು. ಕಂಡೆನೆಂದಡೆ ಕಾಣಲಾಯಿತ್ತು
ಕಂಡು ನುಡಿಸುವಂಥದಲ್ಲ
ಕಂಡಾತ ಕಲಿಕೆಯೊಳಗಿಲ್ಲದಂತಿಪ್ಪ
ಕಾರ್ಯವಿಲ್ಲದ ಕಾರಣಕರ್ತ. ಆರರಿಂದತ್ತ ತಾನಿಲ್ಲೆಂದೆನಿಸಿಕೊಂಡ ಕೂಡಲಚೆನ್ನಸಂಗಯ್ಯಾ
ಆ ಮಹಾಲಿಂಗದ ಅನುಭಾವ ಶರಣಫಲದ ಸಂಬಂಧವ ಮೀರಿತ್ತು.