ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಾವಿಲ್ಲದ
ಕೇಡಿಲ್ಲದ
ರೂಹಿಲ್ಲದ
ಚೆಲುವಂಗೆ
ನಾನೊಲಿದೆ.
ಎಡೆಯಿಲ್ಲದ
ಕಡೆಯಿಲ್ಲದ
ತೆರಹಿಲ್ಲದ
ಕುರುಹಿಲ್ಲದ
ಚೆಲುವಂಗೆ
ನಾನೊಲಿದೆ
ಎಲೆ
ಅವ್ವಗಳಿರಾ
?
ಭವವಿಲ್ಲದ
ಭಯವಿಲ್ಲದ
ನಿರ್ಭಯ
ಚೆಲುವಂಗೊಲಿದೆ
ನಾನು.
ಸೀಮೆಯಿಲ್ಲದ
ನಿಸ್ಸೀಮಂಗೊಲಿದೆ
ನಾನು.
ಚೆನ್ನಮಲ್ಲಿಕಾರ್ಜುನನೆಂಬ
ಗಂಡಂಗೆ
ಮಿಗೆ
ಮಿಗೆ
ಒಲಿದೆ
ಎಲೆ
ಅವ್ವಗಳಿರಾ.