ಸಿರಿಯ ಸೀರೆಯನುಟ್ಟು ಐವರು ತರುಣಿಯರು ಉರಿಯ ಪುರುಷನ ನೆರೆಯ ಹೋಗಿ ಸಿರಿಯ ಸೀರೆಯ ತೆಗೆಯದೆ ನಾಚಿದರು ನೋಡಾ. ಸಿರಿಯ ಸೀರೆಯನಳಿದು ಉರಿಯ ಪುರುಷನ ನೆರೆಯಲು ಅದು ಪರಮ ಶಿವಯೋಗವಾಯಿತ್ತು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.