ಸಿರಿವಂತ ಶಿಷ್ಯಂಗೆ ಗುರು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಸಿರಿವಂತ ಶಿಷ್ಯಂಗೆ ಗುರು ದರಿದ್ರನಾದರೆ ಅಭಿಮಾನದಿಂದ ಅವಿಶ್ವಾಸವ ಮಾಡುವ ನರಕಿಯನೆನ್ನತ್ತ ತೋರದಿರಯ್ಯಾ. ಜಂಗಮವೆ ಲಿಂಗ
ಲಿಂಗವೆ ಜಂಗಮವೆಂದ ಬಳಿಕ ಅಲ್ಲಿ ಸು[ಖಿ]ಸಾಮಾನ್ಯವೆಂಬ ಪಾಪಿಯ ಮುಖವನೆನ್ನತ್ತ ತೋರದಿರಯ್ಯಾ. ರೂಪಾನ್ವಿತಂ ಕುರೂಪಂ ವಾ ಮಲಿನಂ ಮಲಿನಾಂಬರಂ ಯೋಗೀಂದ್ರಮನಿಶಂ ಕಾಯಮಿತ್ಯಾದೀನ್ನ ವಿಚಾರಯೇತ್ ಎಂಬ ವಚನವ ನಂಬಿದೆನಯ್ಯಾ
ಕೂಡಲಚೆನ್ನಸಂಗಾ ನಿಮ್ಮಾಣೆ.