ಸೀಮೆ ನೇಮಂಗಳ ಹೊದ್ದದ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಸೀಮೆ ನೇಮಂಗಳ ಹೊದ್ದದ ನಿಜವೀರಶೈವದೀಕ್ಷೆಯನು ಗುರು ತನ್ನ ಶಿಷ್ಯಂಗಿತ್ತು
ಮತ್ತೆ ಆ ಶಿಷ್ಯನ ನೇಮಸ್ಥನ ಮಾಡಿದಲ್ಲಿ
ಆ ನಿಜದೀಕ್ಷೆಗೆಟ್ಟು ಆ ಗುರುಶಿಷ್ಯರಿರ್ವರೂ ಪತಿತರಾಗಿ ಶ್ವಾನಯೋನಿಯಲ್ಲಿ ಶತಸಹಸ್ರವೇಳೆ ಬಂದು
ನರಕವಿಪ್ಪತ್ತೆಂಟುಕೋಟಿಯನೈದುವರು. ಅದೆಂತೆಂದಡೆ: ನೇಮಸ್ಥಂ ಚನ ದೀಕ್ಷಯಾದೀ ಶ್ವಾನಜನ್ಮಸು ಜಾಯತೇ ಅಷ್ಟವಿಂಶತಿಕೋಟ್ಯಸ್ತು ನರಕಂ ಯಾಂತಿ ಧ್ರುವಂ ಎಂದುದಾಗಿ
ನಿಜಗೆಟ್ಟು ಪತಿತರಾಗಿ ನರಕಕ್ಕಿಳಿವ ಪಾತಕರನೆನಗೆ ತೋರದಿರಾ ಕೂಡಲಚೆನ್ನಸಂಗಯ್ಯಾ.